Connect with us

LATEST NEWS

‘ಕಾಂತಾರ’ದ ಬಗ್ಗೆ ರಶ್ಮಿಕಾಗೆ ಅಸಡ್ಡೆ ಯಾಕೆ-ಸಿನಿಮಾ ಎಂಟ್ರಿಗೆ ಮೊದಲ ಚಾನ್ಸ್ ಕೊಟ್ಟ ರಿಷಬ್‌ನನ್ನೇ ಮರೆತುಬಿಟ್ಲಾ ಮಂದಣ್ಣ..!

Published

on

ಮುಂಬೈ: ಏರ್‌ಪೋರ್ಟ್‌ನಿಂದ ಹೊರಬರುತ್ತಿದ್ದಂತೆ ನಟಿ ರಶ್ಮಿಕಾ ಮಂದಣ್ಣನಿಗೆ ಪಾಪರಾಜಿಗಳು ‘ಕಾಂತಾರ ಸಿನಿಮಾ ನೋಡಿದ್ರಾ’ ಎಂಬ ಪ್ರಶ್ನೆಗೆ ‘ಇನ್ನೂ ಇಲ್ಲ ಟೈಂ ಸಿಕ್ಕಿಲ್ಲ ನೋಡ್ಬೇಕು’ ಎಂದು ಪ್ರತಿಕ್ರಿಯಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನಟಿಯ ಉತ್ತರಕ್ಕೆ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ.


ವಿಮಾನ ನಿಲ್ದಾಣದಲ್ಲಿ ನಟಿ ರಶ್ಮಿಕಾ ಮಂದಣ್ಣ ಪಾಪರಾಜಿಗಳು ಕೇಳುವ ಪ್ರಶ್ನೆಗೆ ಉತ್ತರಿಸಿ ಕ್ಯಾಮರಾಕ್ಕೆ ಫೋಸ್ ಕೊಡುತ್ತಾರೆ. ಈ ವೇಳೆ ಓರ್ವ ಕನ್ನಡದಲ್ಲೇ ‘ಕಾಂತಾರ ಮೂವಿ ನೋಡಿಲ್ವ ಇನ್ನು’? ಎಂದು ಕೇಳಿದಾಗ ಪ್ರತಿಕ್ರಿಯಿಸಿ ‘ಓ ಕನ್ನಡ ಈಗ ಕನ್ನಡ ಮಾತಾಡುತ್ತೀರಾ ನೀವು.

ನನಗೆ ಸಿನಿಮಾ ನೋಡಬೇಕೆಂಬ ಆಸೆ ಇದೆ. ಶೀಘ್ರವೇ ನೋಡುತ್ತೇನೆ. ಟೈಮಿಲ್ಲ’ ಎಂದು ಉತ್ತರಿಸಿದ್ದಾರೆ.

ಇವರ ನೀರಸ ಪ್ರತಿಕ್ರಿಯೆಗೆ ಇದೀಗ ವ್ಯಾಪಕವಾಗಿ ಆಕ್ರೋಶ ಕೇಳಿಬರುತ್ತಿದೆ.

LATEST NEWS

ಖತರ್ನಾಕ್ ಕಳ್ಳನನ್ನು ಬಂಧಿಸಿದ ಕೋಟ ಪೊಲೀಸರು; ‘ನನ್ನ ಬಗ್ಗೆ ಮಾಹಿತಿ ಬೇಕಾದ್ರೆ ಯೂಟ್ಯೂಬ್ ನೋಡಿ’ ಎಂದ ಖದೀಮ!

Published

on

ಕೋಟ : ಈತ ಅಂತಿಂಥ ಕಳ್ಳನಲ್ಲ..ಖತರ್ನಾಕ್ ಕಳ್ಳ! ಇತ್ತೀಚೆಗೆ ಕೇರಳದಿಂದ ಭಾರೀ ಮೊತ್ತದ ಚಿನ್ನಾಭರಣವನ್ನು ಕಳ್ಳತನ ಮಾಡಿ ಬಿಹಾರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಉಡುಪಿ ಜಿಲ್ಲೆಯ ಕೋಟ ಪೊಲೀಸರ ಅತಿಥಿಯಾಗಿದ್ದಾನೆ. ಬಿಹಾರ ಮೂಲದ ಮಹಮ್ಮದ್ ಇರ್ಫಾನ್‌ ಬಂಧಿತ ಆರೋಪಿ. ಬ್ರಹ್ಮಾವರ ತಾಲೂಕು ಕೋಟ ಮೂರ್ಕೈನಲ್ಲಿ ಶನಿವಾರ ರಾತ್ರಿ ಕೋಟ ಪೊಲೀಸರು ನಡೆಸಿದ ಕಾರ್ಯಾಚರಣೆ ಸಂದರ್ಭ ಈತ ಬಲೆಗೆ ಬಿದ್ದಿದ್ದಾನೆ. ವಿಚಾರಣೆ ವೇಳೆ ಈತನ ಕರಾಮತ್ತು ಕೇಳಿ ಪೊಲೀಸರೇ ಶಾಕ್ ಗೊಳಗಾಗಿದ್ದಾರೆ.


‘ಕೋಟಿ’ ಮೇಲೆ ಕಣ್ಣು:

ಇರ್ಫಾನ್ ಸಾಮಾನ್ಯ ಕಳ್ಳನಲ್ಲ. ಈತನ ವಿರುದ್ಧ 13 ರಾಜ್ಯಗಳಲ್ಲಿ ಹಲವಾರು ಕಳ್ಳತನ ಆರೋಪಗಳಿವೆ. ಇದರ ಜತೆಗೆ ಹಲವಾರು ಕುತೂಹಲಕಾರಿ ವಿಷಯಗಳು ಹೊರಬಿದ್ದಿವೆ. ಈತ ಈಗಾಗಲೇ ಹಲವು ಬಾರಿ ಪೊಲೀಸರ ಅತಿಥಿಯಾಗಿದ್ದು, ಸಿನಿಮಾ ನಟರು, ರಾಜಕಾರಣಿಗಳು, ಗುತ್ತಿಗೆದಾರರು ಸೇರಿದಂತೆ ಅತ್ಯಂತ ಶ್ರೀಮಂತರ ಮನೆಗಳನ್ನೇ ಹೊಂಚುಹಾಕಿ ಕಳ್ಳತನ ಮಾಡುತ್ತಿದ್ದ.

ಒಮ್ಮೆ ಕಣ್ಣಿಟ್ಟರೆ ಸಾಕು! ಎಷ್ಟೇ ದಿನಗಳಾದರೂ ಕಾದು ತನ್ನ ಕೈಚಳಕ ತೋರುತ್ತಿದ್ದ. ಹೆಚ್ಚಿನ ಬಾರಿ ಓರ್ವನೇ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದ ಹಾಗೂ ಪ್ರತಿ ಬಾರಿಯೂ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಗಳನ್ನೇ ಲಪಟಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳಿಗೆ ಶಾಕ್; ಅದರಲ್ಲಿತ್ತು 10 ಅನಕೊಂಡಾ!

‘ನನ್ನ ಬಗ್ಗೆ ಯೂಟ್ಯೂಬ್ ನೋಡಿ’ ಎಂದ ಖದೀಮ :

ಕೋಟ್ಯಂತರ ರೂಪಾಯಿ ಕಳವುಗೈದು ಬಂಧಿಸಲ್ಪಟ್ಟ ಇರ್ಫಾನ್ ವಿಚಾರಣೆಗಿಳಿದ ಪೊಲೀಸರಿಗೆ ಆತನ ಹೇಳಿಕೆ ಅಚ್ಚರಿ ಹುಟ್ಟಿಸಿತ್ತು. ‘ ನನ್ನ ಬಗ್ಗೆ ಮಾಹಿತಿ ಬೇಕಾದರೆ ಯೂಟ್ಯೂಬ್‌ನಲ್ಲಿ ಮಹಮ್ಮದ್ ಇರ್ಫಾನ್ ರೋಬಿನ್‌ಹುಡ್ ಎಂದು ಸರ್ಚ್ ಮಾಡಿ’ ಎಂದಿದ್ದನಂತೆ ಈ ಖದೀಮ. ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿದಾಗ ಈತನ ಬಗ್ಗೆ ಇರುವ ಹತ್ತಾರು ವೀಡಿಯೋಗಳು ಸಿಕ್ಕಿವೆ. ಅದರಲ್ಲಿ ಕಳ್ಳತನ ಹಾಗೂ ಕೋಟ್ಯಂತರ ರೂ. ಮೊತ್ತವನ್ನು ಜನರಿಗೆ ಹಂಚುವ ಕುರಿತು ವಿಚಾರಗಳಿವೆ. ಇವೆಲ್ಲವನ್ನು ನೋಡಿದ ಪೊಲೀಸರಿಗೆ ಶಾಕ್ ಆಗಿದ್ದು ಸುಳ್ಳಲ್ಲ.

Continue Reading

LATEST NEWS

ಅಂಬಾನಿ ಪುತ್ರನ ಮದುವೆ ಎಲ್ಲಿ ನಡೆಯುತ್ತೆ ಗೊತ್ತಾ…!! ಹೇಗಿದೆ ಅದ್ಧೂರಿ ತಯಾರಿ?

Published

on

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಪ್ರೀ ವೆಡ್ಡಿಂಗ್ ಶೂಟ್ ಈಗಾಗಲೇ ಎಲ್ಲರ ನಿಬ್ಬೆರಗಾಗುವಂತೆ ಮಾಡಿತ್ತು. ಮಾರ್ಚ್​ 1 ರಿಂದ 3 ದಿನಗಳ ಕಾಲ ಗುಜರಾತ್​ನ ಜಾಮ್​ನಗರದಲ್ಲಿ ಅದ್ಧೂರಿಯಾಗಿ ಪ್ರಿ-ವೆಡ್ಡಿಂಗ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ambani marriage

ಎಲ್ಲರ ಬಾಯಲ್ಲೂ ಅಂಬಾನಿ ಮದುವೆ ಮುಂಚಿತವಾಗಿ  ನಡೆದ ಕಾರ್ಯಕ್ರಮದ ಗುಣಗಾನ. ಈ ಸಂಭ್ರಮದಲ್ಲಿ ದೇಶ-ವಿದೇಶಗಳಿಂದ ಹಲವಾರು ಬಾಲಿವುಡ್​ ಸೆಲೆಬ್ರಿಟಿಗಳು ಜಾಮ್‌ನಗರಕ್ಕೆ ಬಂದಿದ್ದರು. ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮಕ್ಕೆ ಅಂದಾಜು 1200 ಕೋಟಿಯಷ್ಟು ಖರ್ಚಾಗಿದೆ ಎಂದು ಮೂಲಗಳು ತಿಳಿಸಿದೆ. ಕಾರ್ಯಕ್ರಮದ ಫೊಟೋ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡಾ ಆಗಿತ್ತು.

ಲಂಡನ್​ನಲ್ಲಿ 592 ಕೋಟಿ ಸ್ಟೋಕ್‌ ಪಾರ್ಕ್‌ ಖರೀದಿಸಿದ ಅನಂತ್ ಅಂಬಾನಿ

ಮುಂದೆ ಓದಿ..; ಗಂಡ-ಹೆಂಡತಿ ಬೇರೆ ಬೇರೆ ಮಲಗಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

ಇತ್ತೀಚೆಗಷ್ಟೇ ಮುಖೇಶ್‌ ಅಂಬಾನಿ ಮಗನ ಮದುವೆಗೂ ಮುನ್ನ ಲಂಡನ್​ನಲ್ಲಿ 592 ಕೋಟಿ ಮೌಲ್ಯದ ಸ್ಟೋಕ್‌ ಪಾರ್ಕ್‌ ಎಸ್ಟೇಟ್​ ಖರೀದಿಸಿದ್ದರು. ಜುಲೈ 12ರಂದು ಉದ್ಯಮಿ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮದುವೆ ನಡೆಯಲಿದ್ದು, ಇದೀಗ ಅದೇ ಲಂಡನ್‌ ಸ್ಟೋಕ್‌ ಪಾರ್ಕ್‌ ಎಸ್ಟೇಟ್​ನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭ ಜರುಗಲಿದೆ ಎಂದು ತಿಳಿದು ಬಂದಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೂ ಕೂಡ ಅನೇಕರು ಭಾಗಿ ಆಗುವ ಸಾಧ್ಯತೆ ಇದೆ. ಈಗಾಗಲೇ ಮದುವೆಗೆ ಎಲ್ಲಾ ರೀತಿಯಲ್ಲೂ ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

Continue Reading

bengaluru

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳಿಗೆ ಶಾಕ್; ಅದರಲ್ಲಿತ್ತು 10 ಅನಕೊಂಡಾ!

Published

on

ಬೆಂಗಳೂರು : ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸುತ್ತಿದ್ದ ಕಸ್ಟಮ್ಸ್ ಅಧಿಕಾರಿಗಳು ಶಾಕ್ ಗೆ ಒಳಗಾಗಿದ್ದಾರೆ. ಯಾಕೆಂದರೆ, ಪ್ರಯಾಣಿಕನೊಬ್ಬನ ಬ್ಯಾಗ್ ನಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಅನಕೊಂಡಾ ಪತ್ತೆಯಾಗಿವೆ. ಆತ ಬ್ಯಾಂಕಾಕ್​ನಿಂದ ಅಕ್ರಮವಾಗಿ 10 ಅನಕೊಂಡಾ ಹಾವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಬ್ಯಾಂಕಾಕ್​ನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರ ಲಗೇಜ್​ಗಳನ್ನು ಕಸ್ಟಮ್ಸ್​ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಪ್ರಯಾಣಿಕನೊಬ್ಬನ ಲಗೇಜ್​ ತಪಾಸಣೆ ಮಾಡುವಾಗ 10 ಹಳದಿ ಅನಕೊಂಡ ಪತ್ತೆಯಾಗಿವೆ.

ಕೂಡಲೇ ಅಧಿಕಾರಿಗಳು ಪ್ರಯಾಣಿಕನನ್ನ ವಶಕ್ಕೆ ಪಡೆದಿದ್ದು, ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ಹಳದಿ ಬಣ್ಣ ಆನಕೊಂಡಾ ಹಾವುಗಳನ್ನು ರಕ್ಷಿಸಿ, ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.

ಇದನ್ನೂ ಓದಿ : ಸಾಕುನಾಯಿಯನ್ನು ಹೊತ್ತೊಯ್ದ ಚಿರತೆ..!! ಭಯ ಭೀತರಾದ ಜನತೆ

ವನ್ಯಜೀವಿಗಳ ಕಳ್ಳಸಾಗಣೆ ಮಾಡಿದ ಆರೋಪದಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.

Continue Reading

LATEST NEWS

Trending