ಸಹಾಯದ ಹೆಸರಿನಲ್ಲಿ ಮಹಿಳೆಯ ಅತ್ಯಾಚಾರ :ಎಸ್ ಡಿಪಿ ಐ ಮುಖಂಡನ ವಿರುದ್ಧ ಉಳ್ಳಾಲ ಪೋಲೀಸ್ ಠಾಣೆಯಲ್ಲಿ ಪ್ರಕರಣ..!
ಮಂಗಳೂರು : ಸಹಾಯದ ಹೆಸರಿನಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಎಸ್ ಡಿಪಿ ಐ ಮುಖಂಡನ ವಿರುದ್ಧ ಉಳ್ಳಾಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲದೆ ಈ ಮುಖಂಡನ ವಿರುದ್ಧ ದೂರು ನೀಡಬಾರದೆಂದು ಮಹಿಳೆಗೆ ಬೆದರಿಕೆಯನ್ನೂ ಹಾಕಲಾಗಿದ್ದು, ಈ ಸಂಬಂಧವೂ ಐವರ ಮೇಲೆ ದೂರು ದಾಖಲಿಸಲಾಗಿದೆ.
ಸಂತ್ರಸ್ಥೆ ಮಹಿಳೆಯ ದೂರಿನ ಮೇಲೆ ಉಳ್ಳಾಲ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ಥೆ ಮಹಿಳೆ ಮೂಲತ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದು, ಕಳೆದ 15 ವರ್ಷಗಳ ಹಿಂದೆ ಈಕೆಯನ್ನು ಉಳ್ಳಾಲದ ಮಜೀದ್ ಎನ್ನುವ ವ್ಯಕ್ತಿ ವಿವಾಹವಾಗಿದ್ದರು.
ಬಳಿಕ ಮುಸ್ಲಿಂ ಧರ್ಮಕ್ಲೆ ಮತಾಂತರಗೊಳಿಸಲಾಗಿತ್ತು. ಮೂರು ವರ್ಷಗಳ ಹಿಂದೆ ಈಕೆಯ ಪತಿ ಮಜೀದ್ ಆಕೆಯನ್ನು ತ್ಯಜಿಸಿ ಹೋಗಿದ್ದು, ಈಕೆ ತನ್ನ ಮಕ್ಕಳೊಂದಿಗೆ ಉಳ್ಳಾಲದ ಫ್ಲಾಟ್ ಒಂದರಲ್ಲಿ ನೆಲೆಸಿದ್ದರು.
ಈ ನಡುವೆ ಗಂಡನಿಂದ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸುವ ನೆಪದಲ್ಲಿ ಉಳ್ಳಾಲ ಎಸ್‌ಡಿಪಿಐ ವಲಯಾಧ್ಯಕ್ಷ ಸಿದ್ಧೀಕ್ ಉಳ್ಳಾಲ್ ಎಂಬಾತ ಸಂತ್ರಸ್ಥೆ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಅಲ್ಲದೆ ಆಕೆಯ 13 ವರ್ಷ ಪ್ರಾಯದ ಮಗಳ ಮೇಲೂ ಕೈ ಹಾಕಿದ್ದಾನೆ. ಈ ಸಂಬಂಧ ಪೋಲೀಸ್ ಠಾಣೆಗೆ ದೂರು ನೀಡಲು ಬಂದ ಈಕೆಗೆ ಎಸ್.ಡಿ.ಪಿ.ಐ ನ ನವಾಝ್ ಉಳ್ಳಾಲ್ ಸೇರಿದಂತೆ ಐವರು ಬೆದರಿಕೆಯನ್ನೂ ಹಾಕಿದ್ದಾರೆ.
ಪೋಲೀಸ್ ದೂರು ನೀಡಿದಲ್ಲಿ ಎಸ್.ಡಿ.ಪಿ.ಐ ಹೆಸರು ಹಾಳಾಗುತ್ತದೆ ಎನ್ನುವ ಕಾರಣಕ್ಕಾಗಿ ಈ ಬೆದರಿಕೆಯನ್ನು ಹಾಕಲಾಗಿದೆ.
ಸಂತ್ರಸ್ಥೆ ಮಹಿಳೆ ಉಳ್ಳಾಲದ ಹಜರತ್ ಟಿಪ್ಪು ಸುಲ್ತಾನ್ ಕಾಲೇಜಿನಲ್ಲಿ ಹೆಚ್.ಆರ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಲವ್ ಜಿಹಾದ್ ನ ಪ್ರಕರಣಗಳು ಬೆಳಕಿನಲ್ಲಿರುವಾಗಲೇ ಇದೀಗ ಮತ್ತೊಂದು ಪ್ರಕರಣ ಉಳ್ಳಾಲದಲ್ಲಿ ಪತ್ತೆಯಾಗಿದೆ.