ಮುಂಬೈ : ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್, ಇತ್ತೀಚೆಗೆ ಎದೆ ನೊವಿನಿಂದ ಆಸ್ಪತ್ರೆಗೆ ದಾಖಲಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿ ರಾಖಿ ಸಾವಂತ್ಗೆಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಅಭಿಮಾನಿಗಳು ಹೇಳಿದ್ದರು. ಇದೀಗ ರಾಖಿ ಸಾವಂತ್ ಮಾಜಿ ಪತಿ ರಿತೇಶ್ ರಾಜ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ರಾಖಿಗೆ ಏನಾಯಿತು?
ಶೂಟಿಂಗ್ ವಿಚಾರದಲ್ಲಿ ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ ರಾಖಿ ಸಾವಂತ್ಗೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ರಸ್ತೆಯಲ್ಲೇ ಇದ್ದ ಒಂದು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಆಕೆಯ ಕಂಡಿಷನ್ ಕ್ರಿಟಿಕಲ್ ಇದೆ ಎಂದು ರಿತೇಶ್ ಹೇಳಿದ್ದಾರೆ. ರಾಖಿ ಸಾವಂತ್ಗೆ ಹೃದಯ ಸಂಬಂಧಿ ಎಲ್ಲಾ ಪರೀಕ್ಷೆಗಳನ್ನು ಮಾಡಲಾಗಿದ್ದು, ಇದೀಗ ಆಂಜಿಯೋಪ್ಲಾಸ್ಟಿ ಮಾಡಲಾಗುತ್ತಿದೆ. ಇದರ ಜೊತೆಗೆ ರಾಖಿಗೆ ಗರ್ಭಕೋಶದ ಕ್ಯಾನ್ಸರ್ ಕೂಡಾ ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಆಸ್ಪತ್ರೆಯ ವೈದ್ಯರು ಹೃದಯಾಘಾತದ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಅದೇ ರೀತಿ ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಖಚಿತವಾಗಿ ಹೇಳಲು ಸಾದ್ಯವಿಲ್ಲ. ಆದ್ರೆ ಆಕೆಯ ಗರ್ಭಕೋಶದಲ್ಲಿ ಗೆಡ್ಡೆ ಕಾಣಿಸಿಕೊಂಡಿದ್ದು ಅದರ ಪರೀಕ್ಷೆಗೆ ಲ್ಯಾಬ್ಗೆ ಕಳುಹಿಸಲಾಗಿದೆ. ಆದ್ರೆ ವೈದ್ಯರು ಇದು ಕ್ಯಾನ್ಸರ್ ಆಗಿರಬಹುದು ಎಂದು ಹೇಳಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ.
ರಾಖಿ ಸಾವಂತ್ಗೆ ಈ ಹಿಂದೆಯೇ ಗರ್ಭಕೋಶದಲ್ಲಿ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದು, ಆಕೆಗೆ ಮಕ್ಕಳಾಗುವುದಿಲ್ಲ ಎಂದು ಹೇಳಿದ್ದರು. ಅವರ ಕುಟುಂಬದಲ್ಲಿಯೂ ತಾಯಿ, ಸಹೋದರಿಗೆ ಕ್ಯಾನ್ಸರ್ ಇತ್ತು ಅನ್ನೋ ಮಾಹಿತಿ ಕೂಡಾ ಇದೆ.
ರಾಖಿ ಸಾವಂತ್ ವಿಚಾರದಲ್ಲಿ ಆಕೆಯ ಮಾಜಿ ಪತಿ ಸರಿಯಾದ ಮಾಹಿತಿ ನೀಡುತ್ತಿಲ್ಲ ಅನ್ನೋ ಅನುಮಾನ ಮಾಧ್ಯಮದವರಲ್ಲಿ ಇದೆ. ವೈದ್ಯರು ಈ ಬಗ್ಗೆ ಯಾವುದೇ ಮಾಹಿತಿ ಮಾಧ್ಯಮದವರಿಗೆ ನೀಡದ ಕಾರಣ ಇವರ ಹೇಳಿಕೆಯಲ್ಲಿ ಅನುಮಾನ ಮೂಡಿದೆ.
ರಾಖಿ ಸಾವಂತ್ ಆರ್ಥಿಕ ಪರಿಸ್ಥಿತಿ ಕೂಡಾ ಸರಿ ಇಲ್ಲದೆ ಇರುವುದು ಕೂಡಾ ಆಕೆಯ ಈಗಿನ ಈ ಆಸ್ಪತ್ರೆಗೆ ದಾಖಲಾಗಿರುವ ವಿಚಾರಕ್ಕೆ ತಳುಕು ಹಾಕಲಾಗುತ್ತಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಿತೇಶ್, ರಾಖಿ ಈ ಹಿಂದೆ ಹಲವು ಬಾರಿ ಹಲವು ನಾಟಕ ಮಾಡಿರಬಹುದು. ಆದ್ರೆ, ಇದೀಗ ನಿಜವಾಗಿ ಆಕೆ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ಹೇಳಿದ್ದಾರೆ.
ತಾಯಿಯನ್ನು ಕಳೆದುಕೊಂಡಿರುವುದು ಹಾಗೂ ಇತರ ಘಟನೆಗಳು ಆಕೆಯ ಮನಸಿನ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದು, ಇದು ಪ್ರಚಾರಕ್ಕೆ ಆಸ್ಪತ್ರೆಗೆ ದಾಖಲಾಗಿರುವುದಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಮಂಗಳೂರು/ಬೆಂಗಳೂರು: ‘ಕನ್ನಡದ ಬಿಗ್ ಬಾಸ್ ಸೀಸನ್ 11’ರ ರಿಯಾಲಿಟಿ ಶೋ 119ನೇ ದಿನಕ್ಕೆ ಕಾಲಿಡುತ್ತಿದೆ. ಅದರ ನಡುವೆ ವಾರ ವಾರ ಎಲಿಮಿನೇಟ್ ಪ್ರಕ್ರಿಯೆ ತೀವ್ರ ಕೂತುಹಲ ಕೆರಳಿಸಿದೆ. ಈ ವಾರ ಬಿಗ್ ಬಾಸ್ ನಿಂದ ಧರ್ಮ ಕೀರ್ತಿರಾಜ್ ಎಲಿಮೀನೆಟ್ ಆಗಿ ಹೊರಬಂದಿದ್ದಾರೆ.
ಸದಾ ನಗುಮುಖದಲ್ಲೇ ಕಾಣಿಸಿಕೊಳ್ಳುವ ಧರ್ಮ, ಯಾರ ತಂಟೆಗೂ ಹೊಗುತ್ತಿರಲಿಲ್ಲ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಧರ್ಮ ಹಾಗೂ ಅನುಷಾ ಒಟ್ಟಿಗೆ ದೊಡ್ಮನೆ ಸೇರಿದ್ದರು. ಆದರೆ ಧರ್ಮ ಮತ್ತು ಅನುಷಾ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದರು. ಆದರೆ ಅನುಷಾ ಈ ಮೊದಲೇ ಎಲಿಮಿನೇಟ್ ಆಗಿದ್ದರು. ಇದು ಧರ್ಮ ಅವರಿಗೆ ಬೇಸರ ಮೂಡಿಸಿತ್ತು.
ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ಕೊನೆಯ ಹಂತದಲ್ಲಿ ಧರ್ಮ ಹಾಗೂ ಚೈತ್ರಾ ಉಳಿದುಕೊಂಡಿದ್ದರು. ಫೈನಲ್ ಆಗಿ ಧರ್ಮ ಮನೆಯಿಂದ ಹೊರಬಂದರು. ಧರ್ಮ ಬೇಸರದಿಂದಲೇ ಹೊರನಡೆದರು.
ಧರ್ಮ ಸದಾ ಕೂಲ್ ಆಗಿಯೇ ಇರುತ್ತಾರೆ. ಅವರು ಯಾವುದೇ ಕಿತ್ತಾಟಕ್ಕೂ ಹೋಗುತ್ತಿರಲಿಲ್ಲ. ತಾಳ್ಮೆ ಕಳೆದುಕೊಂಡು ಒಂದು ದಿನ ಕೂಗಾಡಿದವರಲ್ಲ. ಇನ್ನೊಂದು ಕಡೆ, ಧರ್ಮ ಎಲ್ಲಿಯೂ ಕೂಡ ಹೈಲೈಟ್ ಆಗುತ್ತಿರಲಿಲ್ಲ. ಇವರಿಗಿಂತ ನಂತರ ವೈಲ್ಡ್ ಕಾರ್ಡ್ ನಲ್ಲಿ ಬಂದ ಹನುಮಂತ, ರಜತ್ ಹಾಗೂ ಶೋಭಾ ಶೆಟ್ಟಿ ಈಗಗಾಲೇ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ.
ಧರ್ಮ ಶಾಂತತೆಯ ಸ್ವರೂಪವನ್ನು ಹೊಂದಿರುವ ವ್ಯಕ್ತಿತ್ವ. ಈ ಮೊದಲು ಎಲಿಮಿನೇಟ್ ಆಗಿರುವ ಲಾಯರ್ ಜಗದೀಶ್ ವಿರುದ್ದ ಇಡೀ ಮನೆಯೇ ತಿರುಗಿ ಬಿದ್ದಾಗಲೂ ಧರ್ಮ ಫೈಟ್ ಗೆ ಹೋಗಿರಲಿಲ್ಲ. ಇದು ಅವರ ಮುಗ್ದತೆ ಮತ್ತು ತಾಳ್ಮೆಯ ಸ್ವರೂಪವನ್ನು ತೋರಿಸುತ್ತದೆ.
ಬಿಗ್ ಬಾಸ್ ಮನೆ ಎಂದರೆ ನೆನಪಾಗುವುದೇ ಜಗಳ, ಕೋಪ ಮತ್ತು ಮಾತುಗಾರಿಕೆ. ಎಲ್ಲೋ ಒಂದು ಕಡೆ ಧರ್ಮ ಅವರಿಗೆ ತಮ್ಮ ತಾಳ್ಮೆಯೇ ಮುಳುವಾಗಿ ಎಲಿಮಿನೇಟ್ ಆಗಲು ಕಾರಣವಾಯಿತು ಎಂದು ಹೇಳಬಹುದು.
ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ತಮ್ಮ ಡೇಟಿಂಗ್ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ. ಆದರೆ ಫೋಟೋಗಳು ವೈರಲ್ ಆಗುತ್ತಿವೆ. ಇವರು ಪ್ರೀತಿ ಮಾಡುತ್ತಿರುವ ವಿಚಾರ ರಹಸ್ಯವಾಗಿ ಉಳಿದಿಲ್ಲ. ಈ ಜೋಡಿ ಶೀಘ್ರವೇ ವಿವಾಹವಾಗುವುದಾಗಿ ಸುದ್ಧಿಗಳು ಕೇಳಿ ಬರುತ್ತಿವೆ. ಹೀಗಿರುವಾಗಲೇ ರಶ್ಮಿಕಾ ಮಂದಣ್ಣ ಅವರು ಮದುವೆ ವಿಚಾರ ಮಾತನಾಡಿದ್ದಾರೆ. ವಿಜಯ್ನ ಮದುವೆ ಆಗುತ್ತಿರುವ ವಿಚಾರನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಚೆನ್ನೈನಲ್ಲಿ ಭಾನುವಾರ (ನವೆಂಬರ್ 24) ರಾತ್ರಿ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರಿಗೆ ವೈಯಕ್ತಿಕ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಈ ವೇದಿಕೆ ಮೇಲೆ ಹೋಸ್ಟ್ ಅವರು ರಶ್ಮಿಕಾ ಮಂದಣ್ಣ ಬಳಿ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರಶ್ಮಿಕಾ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.
‘ನೀವು ಸಿನಿಮಾ ಇಂಡಸ್ಟ್ರಿಯನ್ನು ಮದುವೆ ಆಗ್ತೀರಾ ಅಥವಾ ಹೊರಗಿನವರನ್ನು ಮದುವೆ ಆಗ್ತೀರಾ? ನೀವು ಕ್ಲ್ಯಾರಿಟಿ ಕೊಟ್ಟರೆ ನಾವು ಹುಡುಗನ ಹುಡುಕುತ್ತೀರಿ’ ಎಂದು ಹೋಸ್ಟ್ ಹೇಳಿದರು. ‘ಎಲ್ಲರಿಗೂ ಆ ಬಗ್ಗೆ ಗೊತ್ತು’ ಎಂದು ರಶ್ಮಿಕಾ ಹೇಳಿದ್ದಾರೆ. ಈ ಮಾತನ್ನು ಕೇಳಿ ಎಲ್ಲರೂ ಚಿಯರ್ ಮಾಡಿದರು. ‘ನಿಮಗೆ ಯಾವ ಉತ್ತರ ಬೇಕು ಎಂಬುದು ನಂಗೆ ಗೊತ್ತು. ನನಗೆ ಚೆನ್ನಾಗಿ ಗೊತ್ತು’ ಎಂದು ರಶ್ಮಿಕಾ ಹೇಳಿದರು.
ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ. ‘ನಾನು ನನ್ನ ಕೋಸ್ಟಾರ್ ಜೊತೆ ಡೇಟಿಂಗ್ ಮಾಡಿದ್ದೇನೆ. ನಾವು ಒಂದಲ್ಲಾ ಒಂದು ಸಂದರ್ಭದಲ್ಲಿ ಮದುವೆ ಆಗೇ ಆಗುತ್ತೇವೆ’ ಎಂದು ವಿಜಯ್ ಹೇಳಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ‘ಗೀತ ಗೋವಿಂದಂ’ ಸಿನಿಮಾ ಹಾಗೂ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದರು.
ಮಂಗಳೂರು/ ಬೆಂಗಳೂರು : ಭಾರತ ತಂಡದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಕ್ರಿಕೆಟಿಗ ಯಜುವೇಂದ್ರ ಚಹಾಲ್. ಸದ್ಯ ಐಪಿಎಲ್ ಆಟದ ತಯಾರಿಯಲ್ಲಿದ್ದಾರೆ. ಇದೀಗ ಅವರ ಪತ್ನಿ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಪತಿ ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿದ್ದರೆ, ಇತ್ತ ಪತ್ನಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ.
ಆರ್ ಸಿ ಬಿ ತಂಡದಲ್ಲಿ ಹಲವು ವರ್ಷ ಆಡಿದ್ದ ಸ್ಪಿನ್ನರ್ ಚಹಾಲ್ ಬಳಿಕ ರಾಜಸ್ತಾನ್ ರಾಯಲ್ಸ್ ನಲ್ಲಿ ಆಡುತ್ತಿದ್ದರು. ಈ ಬಾರಿ ಹರಾಜಿನಲ್ಲಿ ಯಾರ ತೆಕ್ಕೆಗೆ ಸೇರಲಿದ್ದಾರೆ ಗೊತ್ತಿಲ್ಲ. ಈ ನಡುವೆ ಅವರ ಪತ್ನಿ ಧನಶ್ರೀ ವರ್ಮಾ ತೆಲುಗು ಸಿನಿಮಾವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಧನಶ್ರೀ ತಮ್ಮ ನೃತ್ಯದ ಮೂಲಕ ಈಗಾಗಲೇ ಗಮನ ಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಅವರು, ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ನೃತ್ಯದ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ, ರಿಯಾಲಿಟಿ ಶೋಗಳಲ್ಲೂ ಅವರು ಭಾಗಿಯಾಗಿದ್ದು, ಇದೀಗ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.
ದಿಲ್ ರಾಜು ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಹರ್ಷಿತ್ ರೆಡ್ಡಿ ಮತ್ತು ಹನ್ಸಿತಾ ರೆಡ್ಡಿ ನಿರ್ಮಿಸುತ್ತಿರುವ ಚಿತ್ರದಲ್ಲಿ ಧನಶ್ರೀ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ನಾಯಕಿ ಮಿಂಚುತ್ತಿರೋದು ಖ್ಯಾತ ಡ್ಯಾನ್ಸ್ ಮಾಸ್ಟರ್ ಯಶ್. ಸೀತಾ ಕಪೂರ್ ಹಾಗೂ ಧನಶ್ರೀ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನೃತ್ಯದ ಕುರಿತಾದ ಈ ಚಿತ್ರದ ಹೆಸರು ಆಕಾಶಂ ದಾಟಿ ವಸ್ತಾವಾ. ಶಶಿಕುಮಾರ್ ಮುತ್ತುಲೂರಿ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕೆಲವು ದೃಶ್ಯಗಳು ಮುಂಬೈನಲ್ಲಿ ಚಿತ್ರೀಕರಿಸಲಾಗಿದ್ದು, ಉಳಿದ ಭಾಗದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯಲಿದೆ. ಒಟ್ಟಾರೆ, ತಮ್ಮ ನೆಚ್ಚಿನ ಕ್ರಿಕೆಟಿಗನ ಪತ್ನಿ ಸಿನಿರಂಗಕ್ಕೆ ಎಂಟ್ರಿಕೊಡುತ್ತಿರೋದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರೋದು ಸುಳ್ಳಲ್ಲ.