Connect with us

LATEST NEWS

ರಾಜೇಶ್ ಕುಂದರ್ ಆತ್ಮಹತ್ಯೆ ಪ್ರಕರಣ: 2 ಆಡಿಯೋ ವೈರಲ್‌-ತೀವ್ರ ತನಿಖೆ

Published

on

ಉಡುಪಿ: ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್‌ಕಾನ್‌ಸ್ಟೆಬಲ್ ರಾಜೇಶ್ ಕುಂದರ್ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಗುತ್ತಿದ್ದು,

ಡೆತ್‌ ನೋಟ್‌ ಬಳಿಕ ಇದೀಗ ಆತ್ಮಹತ್ಯೆಗೈದ ರಾಜೇಶ್ ಕುಂದರ್ ಸಾವಿಗೆ ಇಲಾಖಾ ದೌರ್ಜನ್ಯವೇ ಕಾರಣ ಎನ್ನಲಾಗುತ್ತಿದೆ.

ಇದಕ್ಕೆ ಪುರಾವೆ ಎಂಬಂತೆ ರಾಜೇಶ್‌ ಕುಂದರ್‌ ಮಾತನಾಡಿದರೆನ್ನಲಾದ 2 ಆಡಿಯೋ ವೈರಲ್‌ ಆಗಿದೆ.


ಮೊದಲ ಆಡಿಯೋದಲ್ಲಿ ಹಿಜಾಬ್ ಗಲಾಟೆ ಸಂದರ್ಭ ರಾಜೇಶ್ ಕುಂದರ್ ಗಂಗೊಳ್ಳಿ ಠಾಣೆಗೆ ಕ್ಷಿಪ್ರ ದಾಳಿ ಪಡೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು.

ಅವರ ಕೈಕೆಳಗೆ ಅಶ್ಪಕ್ ಮತ್ತು ಉಮೇಶ್ ಎಂಬವರು ನಿಯೋಜಿತರಾಗಿದ್ದರು.

ಆದರೆ ಅವರು ಹೇಳದೆ-ಕೇಳದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಬಗ್ಗೆ ರಾಜೇಶ್ ಕುಂದರ್ ಅವರು ಡಿಎಆರ್ ಹೆಡ್ ಕ್ವಾರ್ಟರ್‌ಗೆ ಕರೆ ಮಾಡಿ ದೂರು ನೀಡಿದ್ದಾರೆ.

ಎರಡನೇ ಆಡಿಯೋದಲ್ಲಿ ದೂರು ನೀಡಿದ್ದಕ್ಕೆ ಮೇಲೆ ಅಶ್ಪಕ್ ಮತ್ತು ಉಮೇಶ್ ಅವರು ರಾಜೇಶ್ ಕುಂದರ್ ಮೇಲೆ ಹಲ್ಲೆ ನಡೆಸಿ ಶರ್ಟ್ ಹರಿದು ಹಾಕಿದ್ದರು.

ಅವರಿಂದ ತಪ್ಪಿಸಿಕೊಂಡು ವಾಹನ ಇಲ್ಲದೆ ಬರಿ ಮೈಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಡಿಎಆರ್‌ ಡಿವೈಎಸ್ಪಿ ಮತ್ತು ಗಂಗೊಳ್ಳಿ ಎಸ್ಐಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿ ಬಳಿ ಗೋಗರೆಯುತ್ತಾರೆ.

ಜೊತೆಗೆ ಈ ಕಾಲ್‌ ಅನ್ನು ರೆಕಾರ್ಡ್‌ ಮಾಡುತ್ತಿದ್ದೇನೆ ಎನ್ನುವ ಅವರು ತನಗೆ ಸಹಾಯ ಮಾಡದಿದ್ದರೆ ಇನ್ಸಿಡೆಂಟ್‌ (ಆತ್ಮಹತ್ಯೆ) ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಸುತ್ತಾರೆ.

ಹೊಡೆದಾಟದಲ್ಲಿ ತಪ್ಪು ಮಾಡದೇ ಸಸ್ಪೆಂಡ್‌ ಆಗಿದ್ದಕ್ಕೆ ಬೇಸರ
ಜಗಳದ ಹಿನ್ನೆಲೆಯಲ್ಲಿ ರಾಜೇಶ್ ಕುಂದರ್ ಸಹಿತ ಇಬ್ಬರನ್ನು ಅಮಾನತು ಮಾಡಲಾಗಿತ್ತು.

ಅಮಾನತು ಮಾಡಿದ್ದರಿಂದ ಅವಮಾನಿತರಾದ ರಾಜೇಶ್ ತನಗಾದ ನೋವನ್ನ ಡೆತ್ ನೋಟ್ ನಲ್ಲಿ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ ಎನ್ನಲಾಗ್ತಿದೆ.

ಸದ್ಯ ಸಾವಿಗೆ ಪ್ರಚೋದನೆ ನೀಡಿದ ಹಿನ್ನೆಲೆ ಗಂಗೊಳ್ಳಿ ಠಾಣಾ ಎಸ್‌ಐ ಸಹಿತ ಮೂವರು ಪೊಲೀಸರ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಕೇಸು ದಾಖಲು ಮಾಡಲಾಗಿದೆ. ತನಿಖೆ ನಡೆಯುತ್ತಿದೆ.

LATEST NEWS

ಗೆಳತಿಯ ಖಾ*ಸಗಿ ಫೊಟೋ, ವಿಡಿಯೋ ಶೇರ್ ಮಾಡಿ ಆ*ತ್ಮಹ*ತ್ಯೆಗೆ ಶರಣಾದ ಯುವಕ

Published

on

ಮಂಗಳೂರು/ಹುಬ್ಬಳ್ಳಿ: ಯುವಕನೋರ್ವ ಪ್ರೇಯಸಿಯ ಕಾಟದಿಂದ ಬೇಸತ್ತು ಆ*ತ್ಮಹ*ತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ಉಣಕಲ್‌ನಲ್ಲಿ ನಡೆದಿದೆ.

ಸಂದೇಶ್ ಉಣಕಲ್‌ (27) ಮೃ*ತ ವ್ಯಕ್ತಿ ಎಂದು ಗುರುತಿಸಲಾಗಿದೆ. ಶನಿವಾರ ಮನೆಯಿಂದ ನಾ*ಪತ್ತೆಯಾಗಿದ್ದ ಸಂದೇಶ, ಉಣಕಲ್ ಕೆರೆಗೆ ಬಿ*ದ್ದು ಆ*ತ್ಮಹ*ತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮುನ್ನ ತನ್ನ ತಾಯಿಗೆ ವಾಯ್ಸ್ ಮೆಸೇಜ್ ಮಾಡಿ ‘ನನ್ನ ಸಾ*ವಿಗೆ ಸಂಜನಾ(ಪ್ರೇಯಸಿ) ಕಾರಣ’ ಎಂದು ತಿಳಿಸಿದ್ದಾನೆ.

ಮೋಟಾರ್ ಬೈಕ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಸಂದೇಶ್ ಏಕಾಏಕಿ ಶನಿವಾರ ಮನೆಯಿಂದ ನಾ*ಪತ್ತೆಯಾಗಿದ್ದ. ಈ ಕುರಿತು ಕುಟುಂಬಸ್ಥರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಆದರೆ ಇದೀಗ ಸಂದೇಶ ಶ*ವವಾಗಿ ಪ*ತ್ತೆಯಾಗಿದ್ದಾನೆ. ಆ*ತ್ಮಹ*ತ್ಯೆಗೂ ಮುನ್ನ ತನ್ನ ಪ್ರೇಯಸಿಯ ಜೊತೆಗಿನ ಖಾ*ಸಗಿ ವಿಡಿಯೋ, ವಾಟ್ಸಪ್ ಚಾಟ್, ಸಂಭಾಷಣೆ ಮತ್ತು ಫೋಟೋಗಳನ್ನು ತನ್ನ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಇನ್ನು ಮಗನನ್ನು ಕ*ಳೆದುಕೊಂಡ ತಾಯಿಯ ಕೂಗು ಮುಗಿಲು ಮುಟ್ಟಿದೆ.

ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ, ಏಕಾಏಕಿ ಸಂದೇಶ್ ಆ*ತ್ಮಹ*ತ್ಯೆ ಮಾಡಿಕೊಂಡ ಹಿಂದಿನ ನಿಜವದ ಕಾರಣ ತಿಳಿದಿಲ್ಲ. ಈ ಕುರಿತು ಅನುಮಾನಗಳು ಹುಟ್ಟಿಕೊಂಡಿದ್ದು, ಪೊಲೀಸ್‌ ತನಿಖೆಯಲ್ಲಿ ಸಾವಿಗೆ ಕಾರಣ ತಿಳಿದು ಬರಬೇಕಷ್ಟೇ.

Continue Reading

BIG BOSS

ಧನರಾಜ್ ಗೆ ಒಲಿದ ಅದೃಷ್ಟ; ಭವ್ಯಾಗೆ ಆಘಾತ !

Published

on

ಮಂಗಳೂರು : ಸಾಕಷ್ಟು ಟ್ವಿಸ್ಟ್ ಗಳನ್ನು ಕಂಡ ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಈಗ ಫಿನಾಲೆಯ ಹಂತಕ್ಕೆ ತಲುಪುತ್ತಿದೆ. ಇದೇ ಹೊತ್ತಲ್ಲಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು 7 ಮಂದಿ ನಾಮಿನೇಟ್ ಆಗಿದ್ದರು. ಹೀಗಾಗಿ 7 ಸ್ಪರ್ಧಿಗಳ ಎದೆಯಲ್ಲಿ ನಡುಕ ಶುರುವಾಗಿತ್ತು.

ಈ ವಾರದ ನಾಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಕಾಲ ಕಾಲಕ್ಕೆ ಟಾಸ್ಕ್ ನೀಡುತ್ತಿದ್ದರು. ಬಿಗ್ ಬಾಸ್ ಕೊಟ್ಟ ಟಾಸ್ಕ್ ನಲ್ಲಿ ಯಾರು ಗೆಲ್ಲುತ್ತಾರೋ ಅವರು ಈ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಪಾರಾಗಲಿದ್ದಾರೆ ಎಂದು ಘೋಷಿಸಿದ್ದರು.

ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಹೀಗಾಗಿ ಸ್ಪರ್ಧಿಗಳು ಬಿಗ್ ಬಾಸ್ ಕೊಡುವ ಟಾಸ್ಕ್ ಗಳನ್ನು ಕಷ್ಟಪಟ್ಟು ಆಡುತ್ತಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಧನರಾಜ್ ಬಿಗ್ ಬಾಸ್ ಕೊಟ್ಟ ಟಾಸ್ಕ್ ವೊಂದರಲ್ಲಿ ವಿನ್ ಆಗಿದ್ದಾರೆ.

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ನ್ಯೂ ಪೋಸ್ಟ್; ದರ್ಶನ್ ಅಭಿಮಾನಿಗಳಿಗೆ ದಿಲ್‌ಖುಷ್

ಕೊನೆಯ ಟಾಸ್ಕ್ ನಲ್ಲೂ ಗೆದ್ದುಕೊಂಡ ಧನರಾಜ್ ಬಿಗ್ ಬಾಸ್ 100 ಅಂಕಗಳನ್ನು ಕೊಟಿದ್ದರು. ಅದರಲ್ಲೂ ಕೊನೆಗೆ ಧನರಾಜ್ ಪ್ರತಿ ಸ್ಪರ್ಧಿಯ ಅಂಕವನ್ನು ಪಡೆದುಕೊಳ್ಳಬೇಕು ಅಂತ ಹೇಳಿದ್ದರು. ಆಗ ಧನರಾಜ್ ಭವ್ಯಾ ಗೌಡ ಅವರ ಅಂಕವನ್ನು ಪಡೆದುಕೊಂಡಿದ್ದರು. ಇದಾದ ಬೆನ್ನಲ್ಲೇ ಬಿಗ್ ಬಾಸ್ ಈ ವಾರದ ಮಿಡ್ ವೀಕ್ ಎಲಿಮಿನೇಷನ್ ನಿಂದ ಧನರಾಜ್ ಸೇಫ್ ಆಗಿದ್ದೀರಿ ಎಂದು ಘೋಷಣೆ ಮಾಡಿದ್ದಾರೆ.

ಮಿಡ್​​ ವೀಕ್​ ನಾಮಿನೇಷನ್​ ಸೀಟ್​ನಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್​, ಮಂಜಣ್ಣ, ರಜತ್​, ಮೋಕ್ಷಿತಾ ಹಾಗೂ ಗೌತಮಿ ಇದ್ದಾರೆ. ಸ್ಟ್ರಾಂಗ್ 6 ಸ್ಪರ್ಧಿಗಳು ಯಾರು ಬಿಗ್​ಬಾಸ್​ ಮನೆಯಿಂದ ಮಿಡ್​ ವೀಕ್​ ಎಲಿಮಿನೇಟ್​ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.

ಒಂದು ಕಡೆ ಟಾಸ್ಕ್ ಪಾಯಿಂಟ್ ಟೇಬಲ್ ನಲ್ಲಿ ಟಾಪ್ ನಲ್ಲಿದ್ದ ಭವ್ಯಾಗೆ, ಧನರಾಜ್ ಅವರ ನಿರ್ಧಾರ ಶಾಕ್ ಆಗಿತ್ತು.

 

Continue Reading

bengaluru

ಸರಿಗಮ ವಿಜಿ ಹೆಸರಿಗೆ ‘ಸರಿಗಮ’ ಸೇರಿಕೊಳ್ಳಲು ಆ ಒಂದು ನಾಟಕ ಕಾರಣ !

Published

on

ಮಂಗಳೂರು/ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧ*ನ ಹೊಂದಿದ್ದಾರೆ. ಅವರು ಕನ್ನಡ ಸಿನಿಮಾ, ಧಾರವಾಹಿ ಹಾಗೂ ರಂಗಭೂಮಿಯಲ್ಲಿ ನಟಿಸಿದ್ದರು.

ಸರಿಗಮ ವಿಜಿ ಅವರ ಮೂಲ ಹೆಸರು ವಿಜಯ್ ಕುಮಾರ್. ಆದರೆ ಅವರ ಹೆಸರಿನ ಮುಂದೆ ‘ಸರಿಗಮ’ ಸೇರಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಹಲವರಲ್ಲಿ ಇದೆ.

‘ಸರಿಗಮ ವಿಜಿ’ ಎಂದೇ ಕರೆಯಲ್ಪಡುವ ನಟ ವಿಜಯ್ ಕುಮಾರ್ (76) ಅವರು ಬುಧವಾರ (ಜ.15) ನಿಧ*ನರಾದರು. ಅವರಿಗೆ ಇಬ್ಬರು ಪುತ್ರರು ಇದ್ದಾರೆ. ಶ್ವಾಸಕೋಶದ ಸೋಂಕು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ವಾರದ ಹಿಂದೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ 9:45ರ ಸುಮಾರಿಗೆ ಅವರು ನಿಧ*ನ ಹೊಂದಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಇ*ನ್ನಿಲ್ಲ

ಬೆಂಗಳೂರಿನ ವಿಮಾನಪುರದಲ್ಲಿ (ಎಚ್ಎಎಲ್ ಪ್ರದೇಶ) ಜನಿಸಿದ ವಿಜಯ್ ಕುಮಾರ್, ನಾಟಕದ ನಂಟು ಇಟ್ಟುಕೊಂಡು ಸಿನಿಮಾಲೋಕ ಪ್ರವೇಶಿಸಿದವರು. ‘ಬೆಳುವಲದ ಮಡಿಲಲ್ಲಿ’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ನಟನಾಗಿ ಮೊದಲ ಹೆಜ್ಜೆ ಇಟ್ಟ ಅವರು ಎನ್ ಜಿಇಎಫ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ದುಡಿದವರು. ಈ ಅವಧಿಯಲ್ಲೇ ಅವರು ‘ಸಂಸಾರದಲ್ಲಿ ಸರಿಗಮ’ ಎಂಬ ನಾಟಕ ಬರೆದರು.

ಇದು ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ, ಹೈದರಾಬಾದ್, ಚೆನ್ನೈ, ದೆಹಲಿಗಳಲ್ಲಿಯೂ ಆ ನಾಟಕ ಪ್ರದರ್ಶನವಾಗಿತ್ತು. ಸುಮಾರು 1390 ಪ್ರದರ್ಶನಗಳಲ್ಲಿ ‘ಸಂಸಾರದಲ್ಲಿ ಸರಿಗಮ’ ನಾಟಕ ಕಂಡಿತ್ತು. ಇದೇ ಕಾರಣಕ್ಕೆ ವಿಜಿ ಅವರ ಹೆಸರಿನ ಮುಂದೆ ‘ಸರಿಗಮ’ ಸೇರಿಕೊಂಡು ಸರಿಗಮ ವಿಜಿ ಎಂದೇ ಜನಪ್ರಿಯರಾದರು.

ಹಲವು ದಿಗ್ಗಜ ನಟರ ಜೊತೆ ತೆರೆಹಂಚಿಕೊಂಡಿದ್ದ ವಿಜಿ ಅವರು, ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದರು. ಹಲವು ಧಾರವಾಹಿಗಳಲ್ಲೂ ಅವರು ಬಣ್ಣಹಚ್ಚಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು 100ಕ್ಕೂ ಅಧಿಕ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

Continue Reading

LATEST NEWS

Trending

Exit mobile version