ಕನ್ನಡದ ಬಿಗ್ಬಾಸ್ ಈಗ ಐಶಾರಾಮಿ ರೆಸಾರ್ಟ್ ಆಗಿ ಬದಲಾಗಿದೆ. ಬಿಗ್ಬಾಸ್ ಮನೆಯಷ್ಟೇ ಅಲ್ಲದೇ ಸ್ಪರ್ಧಿಗಳು ಕೂಡ ಚೇಂಜ್ ಆಗಿದ್ದಾರೆ. ಒಂದು ತಂಡ ಐಶಾರಾಮಿ ರೆಸಾರ್ಟ್ನಲ್ಲಿ ಕೆಲಸಗಾರರಾಗಿದ್ದರೆ, ಮತ್ತೊಂದು ತಂಡ ಅತಿಥಿಗಳಾಗಿದ್ದಾರೆ.
ಈ ವಾರ ಬಿಗ್ಬಾಸ್ ಮನೆ ಮಂದಿಗೆ ಟಾಸ್ಕ್ವೊಂದನ್ನು ಕೊಟ್ಟಿದ್ದಾರೆ. ಈಗ ಬಿಗ್ಬಾಸ್ ಮನೆ ಸಂಪೂರ್ಣವಾಗಿ ರೆಸಾರ್ಟ್ ರೀತಿಯಲ್ಲೇ ಬದಲಾಗಿದೆ. ನಿನ್ನೆ ರೆಸಾರ್ಟ್ಗೆ ಅತಿಥಿಯಾಗಿ ಬಂದ ಮಂಜಣ್ಣ ಉಗ್ರ ಅವತಾರಾ ತಾಳಿದ್ದರು. ರೆಸಾರ್ಟ್ಗೆ ಬಂದ ಅತಿಥಿಗಳನ್ನು ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್, ರಜತ್ ಹಾಗೂ ಮೋಕ್ಷಿತಾ ಇದ್ದಾರೆ ನೋಡಿಕೊಳ್ಳಬೇಕಿತ್ತು.
ಅತಿಥಿಗಳು ಹೇಳಿದ ಕೆಲಸವನ್ನು ಚಾಚು ತಪ್ಪದೇ ಪಾಲಿಸಬೇಕಿತ್ತು. ಇದೇ ವೇಳೆ ಮ್ಯಾನೇಜರ್ ಮೋಕ್ಷಿತಾಗೆ, ಮಂಜಣ್ಣ ಎಲ್ಲ ಕತ್ತೆ ಮೇಯಿಸೋಕೆ ಬಂದಿದ್ದೀರಾ ಅಂತ ಪ್ರಶ್ನೆ ಮಾಡಿದ್ದರು. ಇದಾದ ಬಳಿಕ ಮೋಕ್ಷಿತಾ ಮೇಲೆ ಮಂಜು, ತಲೆ ತುಂಬಾ ಮಣ್ಣು ತುಂಬಿಕೊಂಡ್ರೆ ಏನೂ ಮಾಡೋದಕ್ಕೆ ಆಗೋದಿಲ್ಲ ಅಂತ ಅವಾಜ್ ಹಾಕಿದ್ರು.
ಇದೀಗ ಬಿಗ್ಬಾಸ್ ಮನೆಯಲ್ಲಿ ಎಲ್ಲವೂ ಅದಲು ಬದಲು ಆಗಿದೆ. ನಿನ್ನೆ ಅತಿಥಿಗಳಾಗಿದ್ದವರು ಇಂದು ಕೆಲಸಗಾರರಾಗಿದ್ದಾರೆ. ನಿನ್ನೆ ಕೆಲಸಗಾರರಾಗಿದ್ದರು ಇಂದು ಅತಿಥಿಗಳಾಗಿದ್ದಾರೆ. ರಜತ್, ತ್ರಿವಿಕ್ರಮ್, ಮೋಕ್ಷಿತಾ, ಭವ್ಯಾ ಗೌಡ, ಧನರಾಜ್ ಇವರ ಅಸಲಿ ಆಟ ಈಗ ಬಿಗ್ಬಾಸ್ ಮನೆಯಲ್ಲಿ ಶುರುವಾಗಿದೆ.
ನಿನ್ನೆ ಕೆಲಸಗಾರರಾಗಿದ್ದ ಈ ತಂಡ ಇಂದು ಅತಿಥಿಗಳಾಗಿದ್ದಾರೆ. ನಿನ್ನೆ ಮಾಡಿದ ಎಲ್ಲ ಕೆಲಸವನ್ನು ತ್ರಿವಿಕ್ರಮ್ ತಂಡ ಚಾಚು ತಪ್ಪದೇ ವಾಪಸ್ ತರುತ್ತಿದೆ. ಅಲ್ಲದೇ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ರಜತ್, ಮೋಕ್ಷಿತಾ ತೊಡೆ ಮೇಲೆ ಕುಳಿತುಕೊಂಡಿದ್ದಾರೆ. ಆಗ ಮೋಕ್ಷಿತಾ ಏಕಾಏಕಿ ಕೋಪಗೊಂಡು ಯಾಕ್ರಿ ಕುಳಿತುಕೊಂಡ್ರಿ ಅಂತ ರೇಗಾಡಿದ್ದಾರೆ. ಸದ್ಯ ಬಿಗ್ಬಾಸ್ ಮನೆಯಲ್ಲಿ 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಮುಂದಿನ ವಾರ ಬಿಗ್ಬಾಸ್ ಮನೆಯಿಂದ ಯಾರು ಆಚೆ ಹೋಗಲಿದ್ದಾರೆ ಅಂತ ಕಾದು ನೋಡಬೇಕಿದೆ.