Connect with us

    DAKSHINA KANNADA

    ಮಳೆಗಾಲದ ಸವಾಲು ಎದುರಿಸಲು ಮೆಸ್ಕಾಂನಿಂದ ವಿಶೇಷ ಕಾರ್ಯಪಡೆ; 800 ಸಿಬ್ಬಂದಿ, 53 ವಾಹನಗಳ ನಿಯೋಜನೆ

    Published

    on

    ಮ೦ಗಳೂರು: ವಿದ್ಯುತ್‌ ಪೂರೈಕೆಗೆ ಸ೦ಬ೦ಧಿಸಿದ೦ತೆ ಮಳೆಗಾಲದ ಸ೦ಭಾವ್ಯ ಸವಾಲುಗಳನ್ನು ಎದುರಿಸಲು ಮೆಸ್ಕಾ೦ ಸನ್ನದ್ದವಾಗಿದ್ದು, ಸುಗಮ ಮತ್ತು ಸುಲಲಿತ ಸೇವೆಗೆ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಂಗಳೂರು ವಿದ್ಯಚ್ಛಕ್ತಿ ಸಬರಾಜು ಕಂಪನಿ (ಮೆಸ್ಕಾಂ) ವ್ಯವಸ್ಥಾಪಕ ನಿದೇ೯ಶಕರಾದ ಡಿ.ಪದ್ಮಾವತಿ ಅವರು ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ, ವಿಭಾಗವಾರು ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಮೆಸ್ಕಾ೦ ವ್ಯಾಪ್ತಿಯ 4 ಜಿಲ್ಲೆಗಳಿಗೆ ಒಟ್ಟು 800 ಮ೦ದಿಯನ್ನೊಳಗೊಂಡ ವಿಶೇಷ ಕಾಯ೯ಪಡೆ ರಚಿಸಲಾಗಿದೆ. ತುರ್ತು ಸಂದರ್ಭದಲ್ಲಿ ಬಳಸಲು ಒಟ್ಟು 53 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.

    ವಿದ್ಯುತ್‌ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ, ಸರಬರಾಜು ಮಾಗ೯ದಲ್ಲಿ ಅಪಾಯ, ಅವಘಡಗಳಾದಲ್ಲಿ ಸ೦ಪಕಿ೯ಸಬೇಕಾದ ದೂರವಾಣಿ ಸ೦ಖ್ಯೆಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದಲ್ಲದೆ ಮೆಸ್ಕಾ೦ ಸಹಾಯವಾಣಿ 1912 ಅನ್ನು ಕೂಡಾ ಸ೦ಪಕಿ೯ಸಬಹುದಾಗಿದೆ ಎ೦ದು ತಿಳಿಸಿದ್ದಾರೆ.

    ವಿದ್ಯುತ್‌ ಸ೦ಪಕ೯ ಹಾಗೂ ಸರಬರಾಜು ವ್ಯವಸ್ಥೆ, ನಿರ್ವಹಣೆಯಲ್ಲಿರುವ ಲೋಪಗಳನ್ನು ಗುರುತಿಸಿ ತ್ವರಿತವಾಗಿ ದುರಸ್ತಿಗೊಳಿಸಲು ಕ್ರಮವಹಿಸುವ೦ತೆ ಮೆಸ್ಕಾ೦ ಎಲ್ಲಾ ಮುಖ್ಯ ಇಂಜಿನಿಯರ್‌ (ವಿ), ಅಧೀಕ್ಷಕ ಇಂಜಿನಿಯರ್‌ರವರುಗಳು, ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ವಿದ್ಯುತ್‌ ಸರಬರಾಜು ವ್ಯವಸ್ಥೆಗೆ ಅಚಡಣೆಯಾಗುವ ಮತ್ತು ಅಪಾಯಕಾರಿಯಾಗಿರುವ ಮರ/ಕೊಂಬೆಗಳನ್ನು ಕತ್ತರಿಸುವ ಕೆಲಸ ಈಗಾಗಲೇ ಮಾಡಲಾಗಿದೆ.ಮಳೆಗಾಲದ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ವಿದ್ಯುತ್‌ ಕ೦ಬಗಳು, ತ೦ತಿಗಳು, ಪರಿವತ೯ಕಗಳು ಸೇರಿದ೦ತೆ ಸಲಕರಣೆಗಳನ್ನು ಮೆಸ್ಕಾ೦ನ ಎಲ್ಲಾ ವಿಭಾಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ ಎ೦ದು ಅವರು ವಿವರಿಸಿದ್ದಾರೆ.

    ವಿಶೇಷ ಕಾರ್ಯಪಡೆ ಹಾಗೂ ವಾಹನಗಳು

    – ಮಂಗಳೂರು ಜಿಲ್ಲೆಗೆ ಸ೦ಬಂಧಿಸಿದಂತೆ, ಅತ್ತಾವರ- 40 ಮ೦ದಿಯ ಕಾಯ೯ಪಡೆ, 4 ವಾಹನಗಳು; ಕಾವೂರು- 71 ಮ೦ದಿಯ ಕಾರ್ಯಪಡೆ, 6 ವಾಹನಗಳು; ಪುತ್ತೂರು- 95 ಮ೦ದಿಯ ಕಾಯ೯ಪಡೆ,
    5 ವಾಹನಗಳು; ಬಂಟ್ವಾಳ- 113 ಮ೦ದಿಯ ಕಾಯ೯ಪಡೆ, 6 ವಾಹನಗಳು.
    – ಉಡುಪಿ ಜಿಲ್ಲೆಗೆ ಸ೦ಭವಿಸಿದ೦ತೆ ಉಡುಪಿ-65 ಮ೦ದಿಯ ಕಾಯ೯ಪಡೆ,  5 ವಾಹನಗಳು; ಕಾರ್ಕಳ-48 ಮ೦ದಿಯ ಕಾಯ೯ಪಡೆ, 4 ವಾಹನಗಳು; ಕುಂದಾಪುರ- 76 ಮ೦ದಿಯ ಕಾಯ೯ಪಡೆ, 2 ವಾಹನಗಳನ್ನು  ವ್ಯವಸ್ಥೆಗೊಳಿಸಲಾಗಿದೆ.
    – ಶಿವಮೊಗ್ಗಕ್ಕೆ ಜಿಲ್ಲೆಗೆ ಸ೦ಭವಿಸಿದ೦ತೆ, ಶಿವಮೊಗ್ಗ- 42 ಮ೦ದಿಯ ಕಾಯ೯ಪಡೆ, 2 ವಾಹನಗಳು; ಶಿಕಾರಿಪುರ- 21 ಮ೦ದಿಯ ಕಾಯ೯ಪಡೆ,  2 ವಾಹನಗಳು; ಭದ್ರಾವತಿ- 12ಮ೦ದಿಯ ಕಾಯ೯ಪಡೆ,  1  ವಾಹನ, ಸಾಗರ- 67 ಮ೦ದಿಯ ಕಾಯ೯ಪಡೆ,  6 ವಾಹನಗಳನ್ನು  ವ್ಯವಸ್ಥೆಗೊಳಿಸಲಾಗಿದೆ.
    – ಚಿಕ್ಕಮಗಳೂರು ಜಿಲ್ಲೆಗೆ ಸ೦ಭವಿಸಿದ೦ತೆ, ಚಿಕ್ಕಮಗಳೂರು- 80 ಮ೦ದಿಯ ಕಾಯ೯ಪಡೆ,  4 ವಾಹನಗಳು; ಕೊಪ್ಪ- 51 ಮ೦ದಿಯ ಕಾಯ೯ಪಡೆ, 3 ವಾಹನಗಳು; ಕಡೂರು 19 ಮ೦ದಿಯ ಕಾಯ೯ಪಡೆ, ಹಾಗೂ  3 ವಾಹನಗಳನ್ನು  ವ್ಯವಸ್ಥೆಗೊಳಿಸಲಾಗಿದೆ.

    ಮುಂಗಾರು ಪೂರ್ವದ ಗಾಳಿ ಮಳೆಗೆ ಈಗಾಗಲೇ ಮೆಸ್ಕಾ೦ ವ್ಯಾಪ್ತಿಯ ವಿವಿಧೆಡೆ ವಿದ್ಯುತ್‌ ಕ೦ಬಗಳು, ತ೦ತಿಗಳು, ಪರಿವತ೯ಕಗಳು ಸೇರಿದ೦ತೆ ಮೆಸ್ಕಾಂನ ಆಸ್ತಿಗಳಿಗೆ ಹಾನಿ ಸ೦ಭವಿಸಿದ್ದು, ಇವುಗಳನ್ನು ಸರಿಪಡಿಸುವ ಕಾಯ೯ ಸಮರೋಪಾದಿಯಲ್ಲಿ ನಡೆದಿದೆ. ಇದರ ಜತೆ ಜತೆಗೆ ಮುಂಗಾರು ಅವಧಿಯ ಸಂಭಾವ್ಯ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
    – ಡಿ.ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

    DAKSHINA KANNADA

    ಬಂಟ್ವಾಳ :ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಅಪಘಾ*ತ; ಪತ್ನಿ ಸಾ*ವು; ಪತಿ ಗಂಭೀ*ರ

    Published

    on

    ಬಂಟ್ವಾಳ : ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಸಂಭವಿಸಿ ಪತ್ನಿ ಸಾ*ವನ್ನಪ್ಪಿದ್ದು, ಪತಿ ಗಂ*ಭೀರವಾಗಿ ಗಾ*ಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯ ಬಂಟ್ವಾಳದ ತಲಪಾಡಿ ಎಂಬಲ್ಲಿ ನಡೆದಿದೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ ಸಾ*ವನ್ನಪ್ಪಿದ ನವವಿವಾಹಿತೆ. ಘಟನೆಯಿಂದ ಅನಿಶ್ ಕೃಷ್ಣ ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ.

    ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸಿರೋಡಿನ ಕಡೆಯಿಂದ ‌ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ನವದಂಪತಿಯ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಡಿವೈಡರ್ ಮೇಲಿನಿಂದ ಇನ್ನೊಂದು ಬದಿಗೆ ಹಾರಿದೆ. ಬಳಿಕ ಮಂಗಳೂರು ಕಡೆಯಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್‌ಟಿ.ಸಿ ಬಸ್ ಗೆ ಡಿ*ಕ್ಕಿ ಹೊಡೆದಿದೆ.

    ಡಿ*ಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಘಟನೆಯಿಂದ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು.

    ಎರಡು ದಿನದ ಹಿಂದಷ್ಟೇ ಮದುವೆ : 

    ಸೆ.5 ರಂದು ದೇಂತಡ್ಕ ದೇವಸ್ಥಾನದಲ್ಲಿ ಮಾನಸ ಹಾಗೂ ಅನಿಶ್ ಕೃಷ್ಣ  ಮದುವೆ ನಡೆದಿತ್ತು. ಮದುವೆ ಕಾರ್ಯಕ್ರಮದ ವಿಚಾರವಾಗಿ ಇಂದು ಅಲ್ಲಿನ ಕೆಲವೊಂದು ಲೆಕ್ಕಾಚಾರ ಮಾಡಲು ದೇಂತಡ್ಕ ದೇವಸ್ಥಾನಕ್ಕೆ ಬಂದು ವಾಪಸ್ ಮಾವನ ಮನೆಗೆ ಹೋಗುವ ವೇಳೆ ಈ ‌ಘ‌ಟನೆ ನಡೆದಿದೆ ಎನ್ನಲಾಗಿದೆ. ಇಬ್ಬರು ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಮೆಲ್ಕಾರ್ ‌ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು,  ಪ್ರಕರಣ ದಾಖಲಿಸಿಕೊಂಡಿದ್ದಾರೆ

    Continue Reading

    DAKSHINA KANNADA

    ಯಕ್ಷಗಾನ ಕಲಾವಿದ ಕುಪ್ಪೆಪದವು ಉಮೇಶ್ ಸಾಲ್ಯಾನ್ ರಿಗೆ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ

    Published

    on

    ಮಂಗಳೂರು : ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಹಿರಿಯ ಅರ್ಚಕ ದಿ.ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣಾ ಪ್ರಯುಕ್ತ ಕಟೀಲು ಮೇಳದ ಹಿರಿಯ ಯಕ್ಷಗಾನ ವೇಷಧಾರಿ ಕುಪ್ಪೆಪದವು ಉಮೇಶ್ ಸಾಲ್ಯಾನ್ ಅವರಿಗೆ ಈ ವರ್ಷದ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ನೀಡಲಾಗುವುದು.

    ಆಸ್ರಣ್ಣ ಅಭಿಮಾನಿ ಬಳಗ ಕದ್ರಿ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಚಿನ್ನದ ಪದಕದೊಂದಿಗೆ ಕುಪ್ಪೆಪದವು ಉಮೇಶ್ ಸಾಲ್ಯಾನ್ ರವರನ್ನು ಗೌರವಿಸಲಾಗುವುದು.

    ಇದನ್ನೂ ಓದಿ : ಮಂಗಳೂರು: ‘ಜಿಲ್ಲಾದ್ಯಂತ ಎಲೆಕ್ಟ್ರಿಕ್ ಆಟೋ ರಿಕ್ಷಾ ಪರವಾನಗಿ ಹಿಂಪಡೆಯುವುದಿಲ್ಲ’ – ಡಿಸಿ ಮುಗಿಲನ್

    ಕಟೀಲು ಲಕ್ಷ್ಮಿ ನಾರಾಯಣ ಆಸ್ರಣ್ಣ ಮತ್ತು ಬಂಧುಗಳು ಸೆಪ್ಟೆಂಬರ್ 14 ರ ಶನಿವಾರ ಸಂಜೆ ಶ್ರೀ ಗೋಪಾಲಕೃಷ್ಣ ಆಸ್ರ ಣ್ಣ ಸಭಾಭವನದಲ್ಲಿ ಹಮ್ಮಿಕೊಡಿರುವ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಆಸ್ರಣ್ಣ ಅಭಿಮಾನಿ ಬಳಗದ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ನವನೀತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Continue Reading

    DAKSHINA KANNADA

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಸೆ. 12 ರವರೆಗೆ ಕರಾವಳಿಯಲ್ಲಿ ಭಾರೀ ಮಳೆ

    Published

    on

    ಮಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆ, ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಸೆಪ್ಟೆಂಬರ್ 12 ರವರೆಗೆ ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಇಂದು ಮೋಡಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

    Continue Reading

    LATEST NEWS

    Trending