LATEST NEWS
ಮೂರನೇ ದಿನದಾಟಕ್ಕೆ ಮಳೆ ಅಡ್ಡಿ: ಫಾಲೋಆನ್ ಭೀತಿಯಿಂದ ಪಾರಾದ ಟೀಂ ಇಂಡಿಯಾ
Published
7 hours agoon
By
NEWS DESK3ಮಂಗಳೂರು/ಮೆಲ್ಬೋರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ದದ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟಕ್ಕೆ ಮಳೆ ಅಡ್ಡಿಯಾಗಿತ್ತು. ಆದರೆ ಸ್ವಲ್ಪ ಸಮಯದ ನಂತರ ಮಳೆಯ ಅಬ್ಬರ ಕಡಿಮೆಯಾಗಿ ಪಂದ್ಯ ಮುಂದುವರೆದಿದೆ.
7 ವಿಕೆಟ್ ಕಳೆದುಕೊಂಡು 326 ರನ್ ಗಳಿಸಿದ್ದಾಗ ಮಳೆ ಸುರಿಯಿತು. ಹೀಗಾಗಿ ಬೇಗನೇ ಚಹಾ ವಿರಾಮ ನೀಡಲಾಯಿತು.
ಮೊದಲ ಇನ್ನಿಂಗ್ಸ್ ನಲ್ಲಿ ಆರಂಭಿಕ ಹಿನ್ನಡೆ ಗಳಿಸಿದ್ದ ಭಾರತಕ್ಕೆ ಈಗ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಆಸರೆಯಾಗಿದ್ದಾರೆ.
ಟೆಸ್ಟ್ ಜೀವನದ ಮೊದಲ ಅರ್ಧಶತಕ ಸಿಡಿಸಿದ ರೆಡ್ಡಿ, ಪುಷ್ಪಾ ಶೈಲಿಯಲ್ಲಿ ರೆಡ್ಡಿ ಸಂಭ್ರಮಾಚರಣೆ ನಡೆಸಿದರು. ನಿತೀಶ್ ಕುಮಾರ್ ರೆಡ್ಡಿ 171 ಎಸೆತಗಳಲ್ಲಿ 103 ರನ್ ಗಳಿಸುವ ಮೂಲಕ ಟೆಸ್ಟ್ ನಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದರು. ತಾಳ್ಮೆಯ ಆಟವಾಡುತ್ತಿದ್ದ ಸುಂದರ್ 162 ಎಸೆತಗಳಲ್ಲಿ 50 ರನ್ ಗಳಿಸಿ, ಸ್ಪೀನ್ನರ್ ಲಯನ್ ರವರಿಗೆ ವಿಕೆಟ್ ಒಪ್ಪಿಸಿದರು .
ಉಭಯ ಆಟಗಾರರು ಆಸ್ಟ್ರೇಲಿಯಾದ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಹೊಸ ಚೆಂಡಿನಲ್ಲಿ ಪ್ರಬುದ್ದವಾಗಿ ಆಡಿದರು. ರೆಡ್ಡಿ ಮನಮೋಹಕ ಹೊಡೆತಗಳ ಮೂಲಕ ರಂಜಿಸಿದರು.
ಇದನ್ನೂ ಓದಿ: ವಿಂಡೀಸ್ ವಿರುದ್ಧ ಏಕದಿನ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಭಾರತೀಯ ಮಹಿಳಾ ತಂಡ
ಎರಡನೇ ದಿನದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದ್ದ ಭಾರತದ ಬ್ಯಾಟರ್ ಗಳು ಮೂರನೇ ದಿನವೂ ವೈಫಲ್ಯ ಅನುಭವಿಸಿದರು. ಉತ್ತಮ ಹೊಡೆತಗಳ ಮೂಲಕ ಭರವಸೆ ಮೂಡಿಸಿದ್ದ ರಿಷಭ್ ಪಂತ್ ಬೋಲ್ಯಾಂಡ್ ಎಸೆತದಲ್ಲಿ ಲಯನ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ರಿಷಭ್ 28 ರನ್ ಗಳಿಸಿ ನಿರ್ಗಮಿಸಿದರೆ, ರವೀಂದ್ರ ಜಡೇಜಾ 17 ರನ್ ಗಳಿಸಿದ್ದಾಗ ಲಯನ್ ಎಸೆತದಲ್ಲಿ ಎಲ್ ಬಿ ಬಲೆಗೆ ಬಿದ್ದರು.
ಇದಕ್ಕೂ ಮೊದಲು ರೆಡ್ಡಿ-ಸುಂದರ್ ಜೋಡಿಯು ಭಾರತವನ್ನು ಫಾಲೋಆನ್ ಭೀತಿಯಿಂದ ಪಾರು ಮಾಡಿತು. ಬುಮ್ರಾ ಶೂನ್ಯಕ್ಕೆ ಪ್ಯಾಟ್ ಕಮಿನ್ಸ್ ರವರಿಗೆ ವಿಕೆಟ್ ಒಪ್ಪಿಸಿದರು.
ಇನ್ನೂ ನಿತೀಶ್ ಕುಮಾರ್ ರೆಡ್ಡಿ 176 ಎಸೆತಗಳಲ್ಲಿ 105 ರನ್ ಗಳಿಸಿದ್ದರೆ, ಮೊಹಮ್ಮದ್ ಸಿರಾಜ್ 7 ಎಸೆತಗಳಲ್ಲಿ 2ರನ್ ಗಳಿಸಿದ್ದಾರೆ. ಮಳೆಯು ಮತ್ತೆ ಆರಂಭವಾಗಿದ್ದು, ಭಾರತ 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿದೆ.
DAKSHINA KANNADA
‘ದಿ ಅಕ್ಸಿಡೆಂಟಲ್ PM’ ಸುಳ್ಳಿನ ಕಂತೆ..! ಕ್ಷಮಿಸಿ ಎಂದ ಚಿತ್ರ ನಿರ್ಮಾಪಕ..!
Published
26 minutes agoon
28/12/2024By
NEWS DESK4ಮಂಗಳೂರು : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಬಳಿಕ ‘ದಿ ಅಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನೆಮಾ ವಿಚಾರ ಮುನ್ನಲೆಗೆ ಬಂದಿದೆ. ಚಿತ್ರ ನಿರ್ಮಾಪಕರೇ ಇದೊಂದು ಸುಳ್ಳಿನಿಂದ ತುಂಬಿದ್ದ ಸಿನೆಮಾ ಆಗಿತ್ತು ಅಂತ ಒಪ್ಪಿಕೊಂಡಿದ್ದಾರೆ. ಹಿರಿಯ ಪತ್ರಕರ್ತ ವೀರ್ ಸಾಂಘ್ವಿ ಅವರು ಮಾಡಿದ ಸಂದರ್ಶನದಲ್ಲಿ ಈ ವಿಚಾರವಾಗಿ ನಿರ್ಮಾಪಕ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
2019 ರ ರಾಜಕೀಯ ಸಿನೆಮಾವಾದ ‘ದಿ ಅಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿಂಗ್ ಅವರ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಅವರ ಆತ್ಮಚರಿತ್ರೆ ಆಧರಿಸಿ ನಿರ್ಮಿಸಲಾಗಿತ್ತು. ಆದ್ರೆ “ಇದುವೆರೆಗೆ ಮಾಡಿದ ಕೆಟ್ಟ ಹಿಂದಿ ಚಲನಚಿತ್ರಗಳಲ್ಲಿ ಇದು ಒಂದಾಗಿದೆ” ಹೀಗಂತ ನಿರ್ಮಾಪಕರೇ ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಪತ್ರಕರ್ತ ಸಾಂಘ್ವಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“ಮನಮೋಹನ್ ಸಿಂಗ್ ಅವರ ಬಗ್ಗೆ ಹೇಳಲಾದ ಸುಳ್ಳುಗಳನ್ನು ನೀವು ನೆನಪಿಸಿಕೊಳ್ಳಬೇಕಾದರೆ ನೀವು ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಅನ್ನು ಮತ್ತೆ ನೋಡಬೇಕು. ಇದು ಹಿಂದೆಂದೂ ತಯಾರಾದ ಕೆಟ್ಟ ಹಿಂದಿ ಚಲನಚಿತ್ರಗಳಲ್ಲಿ ಒಂದಾಗಿದ್ದು, ಒಳ್ಳೆಯ ಮನುಷ್ಯನ ಹೆಸರನ್ನು ಹಾಳುಮಾಡಲು ಮಾಧ್ಯಮವನ್ನು ಹೇಗೆ ಬಳಸಲಾಯಿತು ಎಂಬುದಕ್ಕೆ ಉದಾಹರಣೆಯಾಗಿದೆ.” ಅಂತ ಸಾಂಘ್ವಿ X ನಲ್ಲಿ ಬರೆದಿದ್ದಾರೆ.
ನಿರ್ಮಾಪಕರ ಹೇಳಿಕೆಯನ್ನು ಸಮರ್ಥಿಸಿಕೊಂಡ ಕ್ರಿಯೇಟಿವ್ ಡೈರೆಕ್ಟರ್ ಹನ್ಸಲ್ ಮೆಹ್ತಾ ಕೂಡಾ ಈ ಪೋಸ್ಟ್ ಹಂಚಿಕೊಂಡು 100% ಅಂತ ಸಮರ್ಥಿಸಿಕೊಂಡಿದ್ದಾರೆ. ಮನಮೋಹನ್ ಸಿಂಗ್ ಅವರನ್ನು ಉದ್ದೇಶಿಸಿ ಪೋಸ್ಟ್ ಮಾಡಿದ ಅವರು “ಈ ವಿಚಾರಕ್ಕೆ ಎಲ್ಲರಿಗಿಂತಲೂ ಹೆಚ್ಚಾಗಿ ನಾನು ಅವರಿಗೆ ತಲೆಬಾಗುತ್ತೇನೆ. ಬಲವಂತ ಅಥವಾ ಉದ್ದೇಶ ಏನೇ ಇರಲಿ ತುಂಬಾ ಭಾರವಾದ ಹೃದಯದಿಂದ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಕ್ಷಮಿಸಿ ಸರ್, ಅರ್ಥಶಾಸ್ತ್ರಜ್ಞ, ಹಣಕಾಸು ಮಂತ್ರಿ, ಪ್ರಧಾನ ಮಂತ್ರಿಯಾಗಿ ನಿಮ್ಮ ಸಾಧನೆಗಳ ಜೊತೆಗೆ ನೀವೊಬ್ಬ ಅಪರೂಪದ ಸಂಭಾವಿತ ವ್ಯಕ್ತಿ” ಅಂತ ಬರೆದುಕೊಂಡಿದ್ದಾರೆ. ಮಾಜಿ ಪ್ರಧಾನಿಯ ಅಗಲುವಿಕೆಗೆ ಸಂತಾಪ ಸೂಚಿಸಿ “ರಾಷ್ಟ್ರವು ಅವರಲ್ಲಿ ಕ್ಷಮೆಯಾಚಿಸಬೇಕು”ಎಂದಿದ್ದಾರೆ.
ಈ ಪೋಸ್ಟ್ ಸಿನೆಮಾದಲ್ಲಿ ಮನಮೋಹನ್ ಸಿಂಗ್ ಅವರ ಪಾತ್ರ ನಿರ್ವಹಿಸಿದ್ದ ನಟ ಅನುಪಮ್ ಖೇರ್ ಅವರನ್ನು ಕೆರಳಿಸಿದೆ. ಚಲನಚಿತ್ರ ನಿರ್ಮಾಪಕರನ್ನು ‘ಕಪಟಿ’ ಎಂದು ಕರೆದು “ಇದರಲ್ಲಿ ಸಾಂಘ್ವಿ ಕಪಟವಾದಿಯಲ್ಲ. ಸಿನೆಮಾ ಇಷ್ಟ ಪಡದೆ ಇರುವ ಸ್ವಾತಂತ್ರ್ಯ ಅವರಿಗೆ ಇದೆ. ಆದ್ರೆ ಮೆಹ್ತಾ ಅವರು ದಿ ಅಕ್ಸಿಡೆಂಟಲ್ ಪಿಎಂ ಸಿನಿಮಾದ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದರು. ಇಂಗ್ಲೆಂಡಿನಲ್ಲಿ ಚಿತ್ರದ ಸಂಪೂರ್ಣ ಚಿತ್ರೀಕರಣದಲ್ಲಿ ಹಾಜರಿದ್ದರು. ಸಿನೆಮಾಗೆ ಸೃಜನಶೀಲ ಇನ್‌ಪುಟ್ ಕೊಟ್ಟು ಸಂಭಾವನೆ ಪಡೆದುಕೊಂಡಿರಬೇಕು” ಎಂದು ಬರೆದಿದ್ದಾರೆ. ಸಾಂಘ್ವಿ ಅವರ ಅಭಿಪ್ರಾಯವನ್ನು ನಾನು ಒಪ್ಪದೇ ಇದ್ದರೂ ಕಲಾವಿದರು ಇಂತಹ ತಪ್ಪು ಹಾಗೂ ವ್ಯತ್ಯಾಸ ಇರುವ ಕೆಲಸ ಮಾಡಲು ಸಮರ್ಥರು ಅಂತ ಬರೆದುಕೊಂಡಿದ್ದಾರೆ.
ಈ ವಿಚಾರವಾಗಿ ಮೆಹ್ತಾ ಹಾಗೂ ಅನುಪಮ್ ಖೇರ್ ಸಮರ ನಡೆದಿದ್ದು, ಸಾಕಷ್ಟು ಪ್ರತಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಸಿನೆಮಾದಲ್ಲಿ ಅನುಪಮ್ ಖೇರ್ ಮನಮೋಹನ್ ಸಿಂಗ್ ಆಗಿ, ಅಕ್ಷಯ್ ಕುಮಾರ್ ಬಾರು ಅವರ ಪಾತ್ರದಲ್ಲಿ ನಟಿಸಿದ್ದಾರೆ. ಮೆಹ್ತಾ ಅವರು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.
LATEST NEWS
ಮನಮೋಹನ್ ಸಿಂಗ್ ಸ್ಮಾರಕ ಜಟಾಪಟಿ; ಕಾಂಗ್ರೇಸ್ ವಿರುದ್ದ ಪ್ರಣಬ್ ಮುಖರ್ಜಿ ಪುತ್ರಿ ವಾಗ್ದಾಳಿ
Published
2 hours agoon
28/12/2024By
NEWS DESK3ಮಂಗಳೂರು/ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದ್ದು, ಇದರ ನಡುವೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪ್ರತ್ಯೇಕ ಸ್ಮಾರಕ ಕೋರಿ ಪ್ರಧಾನಿ ಮೋದಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ ಬಗ್ಗೆ, ಪ್ರಣಬ್ ಮುಖರ್ಜಿಯವರ ಪುತ್ರಿ ವಾಗ್ದಾಳಿ ನಡೆಸಿದ್ದಾರೆ.
‘ನನ್ನ ತಂದೆ (ಪ್ರಣಬ್ ಮುಖರ್ಜಿ) ನಿಧನರಾದಾಗ ಕಾಂಗ್ರೆಸ್ ಪಕ್ಷವು ಕಾರ್ಯಾಕಾರಿ ಸಮಿತಿ ಹಾಗೂ ಸಂತಾಪ ಸೂಚಕ ಸಭೆಯನ್ನು ಕರೆಯಲಿಲ್ಲ. ಈ ಬಗ್ಗೆ ಕೇಳಿದಾಗ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು, ರಾಷ್ಟ್ರಪತಿಯಾಗಿದ್ದವರಿಗೆ ನಾವು ಸಭೆ ನಡೆಸುವುದಿಲ್ಲ ಎಂದು ಹೇಳಿದ್ದರು. ನನ್ನ ತಂದೆಯವರು ಕಾಂಗ್ರೆಸ್ ನಲ್ಲಿದ್ದಾಗ ಕೆ.ಆರ್. ನಾರಾಯಣ್ ಅವರು ನಿಧನರಾಗಿದ್ದರು. ಸಂತಾಪ ಸಭೆಯನ್ನು ಖುದ್ದು ನನ್ನ ತಂದೆಯವರೇ ಆಯೋಜನೆ ಮಾಡಿದ್ದರು. ಈ ಎಲ್ಲಾ ಅಂಶಗಳನ್ನು ತಂದೆಯವರು ಬರೆದ ಡೈರಿಗಳಿಂದ ತಿಳಿದುಕೊಂಡಿದ್ದೇನೆ’ ಎಂದು ಶರ್ಮಿಷ್ಠಾ ಮುಖರ್ಜಿ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮಾಜಿ ಪ್ರಧಾನಿಗೆ ಪಾಕ್‌ನಲ್ಲಿ ಕಂಬನಿ..! ಶಾಲೆಗೆ ಮನಮೋಹನ್ ಸಿಂಗ್ ಹೆಸರು..!
ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ನವದೆಹಲಿಯ ನಿಗಮಬೋಧ್ ಘಾಟ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಗೃಹ ಸಚಿವಾಲಯ ಶುಕ್ರವಾರ ತಿಳಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸ್ಮಾರಕ ನಿರ್ಮಿಸುವ ಜಾಗದಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕು ಎಂದು ಪ್ರಧಾನಿ ಮೋದಿಗೆ ಪತ್ರದ ಮೂಲಕ ತಿಳಿಸಿದ್ದರು.
‘ಸ್ಮಾರಕ ನಿರ್ಮಿಸುವ ಜಾಗದಲ್ಲಿಯೇ ಅಂತ್ಯಕ್ರಿಯೆ ನಡೆಸದೇ ದೇಶದ ಮೊದಲ ಸಿಖ್ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗುತ್ತಿದೆ’ ಎಂದು ಕಾಂಗ್ರೆಸ್ ಆರೋಪಿಸಿತ್ತು.
LATEST NEWS
ಕಿಸಾನ್ ಸಮ್ಮಾನ್ ನಿಧಿಯ 19ನೇ ಕಂತು ಸಿಗುವುದಿಲ್ಲ..! ನಿಮ್ಮ ಹೆಸರಿದೆಯಾ ನೋಡಿ..!
Published
3 hours agoon
28/12/2024By
NEWS DESK4ಮಂಗಳೂರು : ರೈತರಿಗೆ ಆರ್ಥಿಕ ಪ್ರಯೋಜನ ನೀಡಲು ಕೇಂದ್ರ ಸರ್ಕಾರ 2019 ರಲ್ಲಿ ಕಿಸಾನ್ ಸಮ್ಮಾನ್ ನಿಧಿ ಆರಂಭಿಸಿ ರೈತರ ಖಾತೆಗೆ ಹಣ ಜಮೆ ಮಾಡುತ್ತಿದೆ. ವಾರ್ಷಿಕವಾಗಿ 6 ಸಾವಿರ ನೀಡುವ ಈ ಯೋಜನೆಯಲ್ಲಿ ತಲಾ 2 ಸಾವಿರದಂತೆ ಮೂರು ಕಂತುಗಳಲ್ಲಿ ಈ ಹಣ ರೈತರ ಖಾತೆಗೆ ಬೀಳುತ್ತಿದೆ. ಆದ್ರೆ, ಈ ಯೋಜನೆಯ ಫಲಾನುಭವಿಗಳ ಲಿಸ್ಟ್‌ನಲ್ಲಿ ಇರುವ ಕೆಲವರು 19 ಕಂತಿನ ಹಣ ಪಾವತಿಯ ವೇಳೆ ಲಿಸ್ಟ್‌ನಿಂದ ಹೊರಬೀಳಲಿದ್ದಾರೆ. ಇದರಿಂದ ಅನೇಕ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನದಿಂದ ವಂಚಿತರಾಗಲಿದ್ದಾರೆ.
2019 ರಲ್ಲಿ ಆರಂಭವಾಗಿರುವ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ಸಣ್ಣ ಪ್ರಮಾಣದ ಆರ್ಥಿಕ ಸಹಕಾರ ನೀಡುತ್ತಿದೆ. ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಆಗುತ್ತಿದ್ದು, ಇದರಿಂದ ಬಡ ರೈತರಿಗೆ ಸಾಕಷ್ಟು ಅನುಕೂಲ ಆಗಿದೆ. 2019 ರಿಂದ ಇಲ್ಲಿವರೆಗೆ 18 ಕಂತುಗಳಲ್ಲಿ ರೈತರು ತಮ್ಮ ಪಾಲಿನ ಹಣವನ್ನು ಪಡೆದುಕೊಂಡಿದ್ದಾರೆ. ಆದ್ರೆ 19 ನೇ ಕಂತಿನ ಹಣ ಎಲ್ಲಾ ರೈತರಿಗೆ ಸಿಗುವುದು ಅನುಮಾನವಾಗಿದೆ.
ಇದನ್ನೂ ಓದಿ : ಶಿವಣ್ಣ ಆಸ್ಪತ್ರೆಯಲ್ಲಿರುವಾಗಲೇ ಬಂತು ನೋವಿನ ಸುದ್ದಿ; ಗೀತಕ್ಕಾ ಭಾವನಾತ್ಮಕ ಪತ್ರ !
ಯಾಕಂದ್ರೆ ಅನೇಕ ರೈತರು ತಮ್ಮ e-KYC ಪೂರ್ಣಗೊಳಿಸಿಲ್ಲ ಹಾಗೂ ತಮ್ಮ ಜಮೀನು ಪರಿಶೀಲನೆಯ ವರದಿ ಕೂಡ ಸಲ್ಲಿಸಿಲ್ಲ. ಇದರಿಂದಾಗಿ ಫಲಾನುಭವಿಗಳ ಪಟ್ಟಿಯಿಂದ ರೈತರ ಹೆಸರನ್ನು ತೆಗೆದು ಹಾಕಲು ಸರ್ಕಾರ ಮುಂದಾಗಿದೆ. ಇಂತಹ ರೈತರನ್ನು ಅನರ್ಹರು ಎಂದು ಪರಿಗಣಿಸಿ ಅವರಿಗೆ ನೀಡಲಾಗುವ ಕಿಸಾನ್ ಸಮ್ಮಾನ್ ನಿಧಿಯನ್ನು ತಡೆ ಹಿಡಿಯಲಾಗುತ್ತದೆ. ಈ ಪಟ್ಟಿಯಲ್ಲಿ ನೀವು ಇದ್ದೀರಾ ಎಂದು ಪರಿಶೀಲಿಸಿಕೊಂಡು ತಕ್ಷಣ e-KYC ಹಾಗೂ ಜಮೀನು ಪರಿಶೀಲನೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ.
LATEST NEWS
ಶಿವಣ್ಣ ಆಸ್ಪತ್ರೆಯಲ್ಲಿರುವಾಗಲೇ ಬಂತು ನೋವಿನ ಸುದ್ದಿ; ಗೀತಾಕ್ಕ ಭಾವನಾತ್ಮಕ ಪತ್ರ !
ಮಾಜಿ ಪ್ರಧಾನಿಗೆ ಪಾಕ್‌ನಲ್ಲಿ ಕಂಬನಿ..! ಶಾಲೆಗೆ ಮನಮೋಹನ್ ಸಿಂಗ್ ಹೆಸರು..!
ಮುಂಬೈ ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಸಾವು !
ಪಂಚಭೂತಗಳಲ್ಲಿ ಲೀನರಾದ ಮನಮೋಹನ…ಧೀಮಂತ ನಾಯಕನಿಗೆ ಅಂತಿಮ ನಮನ
ಬಿಗ್ ಬಾಸ್ ಸೀಸನ್ 12ಕ್ಕೆ ಸಾರಥಿ ಇವರೇ ?
ರಸ್ತೆ ಮಧ್ಯೆ ಹೊ*ತ್ತಿ ಉ*ರಿದ ಎರಡು ಲಾರಿಗಳು
Trending
- DAKSHINA KANNADA1 day ago
ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!
- FILM4 days ago
ಆ ಒಂದು ದೃಶ್ಯದಿಂದ ಪುಷ್ಪ 2 ಚಿತ್ರಕ್ಕೆ ಮತ್ತೆ ಸಂಕಷ್ಟ!
- FILM3 days ago
ಶಿವರಾಜ್ಕುಮಾರ್ಗೆ ಕ್ಯಾನ್ಸರ್ ತಗುಲಿದ್ದು ದೇಹದ ಈ ಭಾಗಕ್ಕೆ
- bangalore4 days ago
ಡಿಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಚಿನ್ನ ಖರೀದಿಸಿ ವಂಚನೆ; ನಟ ಧಮೇಂದ್ರ ವಿರುದ್ದ ಎಫ್ ಐ ಆರ್ ದಾಖಲು !