International news
ಮೊದಲ ದಿನದಾಟಕ್ಕೆ ಮಳೆ ಅಡ್ಡಿ; ಆಸ್ಟ್ರೇಲಿಯಾ 28/0
Published
1 week agoon
By
NEWS DESK3ಮಂಗಳೂರು/ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯವು ಗಾಬಾ ಮೈದಾನದಲ್ಲಿ ಇಂದಿನಿಂದ ಆರಂಭವಾಗಿದೆ. ಆದರೆ ಟೆಸ್ಟ್ ನ ಮೊದಲ ದಿನ ಸಂಪೂರ್ಣವಾಗಿ ಮಳೆಗಾಹುತಿಯಾಗಿದೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆದರೆ ಮಳೆಯಿಂದಾಗಿ ದಿನದ ಬಹುತೇಕ ಆಟ ಸ್ಥಗಿತಗೊಂಡಿತು.
ಇದನ್ನೂ ಓದಿ: ನೀರಿನ ಟ್ಯಾಂಕ್ ಗೆ ನೇಣು ಬಿಗಿದು ಆ*ತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್; ಕಾರಣ ಇಲ್ಲಿದೆ !
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 13.2 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ಉಸ್ಮಾನ್ ಖ್ವಾಜಾ (19*) ಮತ್ತು ನೇಥನ್ ಮೆಕ್ ಸ್ವೀನಿ (4*) ಕ್ರೀಸಿನಲ್ಲಿದ್ದಾರೆ.
ದಿನದ ಮೊದಲ ಅವಧಿಯಲ್ಲೇ ಸುರಿದ ಸತತ ಮಳೆಯಿಂದಾಗಿ ಭೋಜನ ವಿರಾಮವನ್ನು ಬೇಗನೇ ತೆಗೆದುಕೊಳ್ಳಲಾಯಿತು. ಎರಡನೇ ಅವಧಿಯಲ್ಲೂ ಪಂದ್ಯ ನಡೆಯಲಿಲ್ಲ. ಅಂತಿಮವಾಗಿ ಟೀ ವಿರಾಮದ ಬಳಿಕ ದಿನದಾಟವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.
4 ದಿನಗಳ ಹವಾಮಾನ ಹೇಗಿರಲಿದೆ
ಗಾಬಾ ಟೆಸ್ಟ್ ನ ಮೊದಲ ದಿನದ ಆಟ ಮಳೆಯಿಂದಾಗಿ ರದ್ದಾಗಿದೆ. ಇದರ ಜೊತೆಗೆ ಬ್ರಿಸ್ಬೇನ್ ನಲ್ಲಿ ಮುಂದಿನ ನಾಲ್ಕು ದಿನವೂ ಸಹ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಟೆಸ್ಟ್ ನ ಎರಡನೇ ದಿನವೂ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯ ಸಂಭವನೀಯತೆ ಶೇ.50 ರಷ್ಟಿರಲ್ಲಿದೆ. ಮೂರನೇ ದಿನವೂ ಶೇ.70 ಮಳೆಯಾಗಲಿದ್ದು, ನಾಲ್ಕನೇ ದಿನ ಶೇ. 84ರಷ್ಟು ಮಳೆ ಹಾಗೂ ಕೊನೆಯ ದಿನ ಶೇ.56ರಷ್ಟು ಮಳೆ ಬೀಳಲಿದೆ ಎಂದು ವರದಿಯಾಗಿದೆ.
International news
ಮಹತ್ವದ ನಿರ್ಧಾರ ಕೈಗೊಂಡ ಬೈಡನ್: 4.3 ಶತಕೋಟಿ ಡಾಲರ್ ವಿದ್ಯಾರ್ಥಿ ಸಾಲ ಮನ್ನಾ
Published
4 hours agoon
22/12/2024By
NEWS DESK3ಮಂಗಳೂರು/ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ನಿವೃತ್ತಿಯಾಗುವುದಕ್ಕೂ ಮುನ್ನ ವಿದ್ಯಾರ್ಥಿ ಸಾಲವನ್ನು ಮನ್ನಾ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಇದನ್ನೂ ಓದಿ: ರಷ್ಯಾದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಬೆಚ್ಚಿಬಿದ್ದ ಕಜಾನ್ ಜನತೆ !
4.28 ಶತಕೋಟಿ ಡಾಲರ್ ಮೊತ್ತದ ವಿದ್ಯಾರ್ಥಿ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಅಧ್ಯಕ್ಷರು ಘೋಷಿಸಿದ್ದಾರೆ. ಇದರೊಂದಿಗೆ ವಿದ್ಯಾರ್ಥಿ ಸಾಲದಿಂದ ಮುಕ್ತರಾದವರ ಸಂಖ್ಯೆ ಸುಮಾರು 5 ದಶಲಕ್ಷಕ್ಕೆ ತಲುಪಿದೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಿದೆ.
International news
ರಷ್ಯಾದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಬೆಚ್ಚಿಬಿದ್ದ ಕಜಾನ್ ಜನತೆ !
Published
23 hours agoon
21/12/2024By
NEWS DESK3ಮಂಗಳೂರು/ಕೀವ್: ಉಕ್ರೇನ್ ನ 8 ಸ್ಪೋಟಕ ಡ್ರೋನ್ ವಿಮಾನಗಳು ರಷ್ಯಾದ ಕಜನ್ ನಗರದ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದೇ ನಗರದಲ್ಲಿ ಇತ್ತೀಚೆಗೆ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆ ನಡೆದಿದ್ದು, ಭಾರತದ ಪ್ರಧಾನಿ ಸೇರಿದಂತೆ ಹಲವು ವಿಶ್ವ ನಾಯಕರು ಆಗಮಿಸಿದ್ದರು.
ಇತ್ತೀಚೆಗೆ ಉಕ್ರೇನ್ ಮೇಲೆ ಕ್ಷೀಪಣಿ ದಾಳಿ ನಡೆಸಿದ್ದ ರಷ್ಯಾಗೆ ಡ್ರೋನ್ ದಾಳಿ ಮೂಲಕ ಉಕ್ರೇನ್ ತಿರುಗೇಟು ನೀಡಿದ್ದು, ಉಕ್ರೇನ್ ದಿಢೀರ್ ಕ್ರಮಕ್ಕೆ ರಷ್ಯಾದ ಕಜಾನ್ ಜನತೆ ಬೆಚ್ಚಿ ಬಿದ್ದಿದ್ದಾರೆ.
ಘಟನೆಯಲ್ಲಿ ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಆದರೆ ಕಟ್ಟಡಗಳು ವ್ಯಾಪಕವಾಗಿ ಹಾನಿಗೊಳಗಾಗಿರುವುದಾಗಿ ವರದಿಗಳು ತಿಳಿಸಿವೆ.
ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳು ರಷ್ಯಾದ ಕಜಾನ್ ನಗರದ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗುತ್ತಿದೆ. ದಾಳಿಯಲ್ಲಿ 3 ಕಟ್ಟಡಗಳು ಹಾನಿಗೊಳಗಾಗಿದ್ದು, ಜನರನ್ನು ಅಲ್ಲಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಸ್ಥಳೀಯ ಆಡಳಿತವು ಜನರಿಗೆ ಊಟ, ಬಟ್ಟೆಗಳನ್ನು ಒದಗಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಡೋಕ್ಲಾಂನಲ್ಲಿ 22 ಗ್ರಾಮಗಳನ್ನು ನಿರ್ಮಾಣ ಮಾಡಿದ ಚೀನಾ !
ಕಜನ್ ಮಾಸ್ಕೋದಿಂದ ಪೂರ್ವಕ್ಕೆ ಸುಮಾರು 800 ಕಿಲೋಮೀಟರ್ ದೂರದಲ್ಲಿದೆ. ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಪ್ರಕಾರ, ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯ ಕಜಾನ್ ನಗರದಲ್ಲಿ ಡ್ರೋನ್ ಅನ್ನು ಉರುಳಿಸಿದ್ದು, ಕೆಲವು ಡ್ರೋನ್ ಗಳು ಅದನ್ನು ಭೇದಿಸಿ ದಾಳಿನಡೆಸಿವೆ ಎಂದು ತಿಳಿಸಿದೆ.
9/11 ಶೈಲಿಯ ದಾಳಿ
ಉಕ್ರೇನ್ ದಾಳಿಯು, ಸಪ್ಟೆಂಬರ್ 11, 2001ರಂದು ನ್ಯೂಯಾರ್ಕ್ ವಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಕ್ಕೆ ವಿಮಾನದ ಮೂಲಕ ದಾಳಿ ನಡೆಸಿದ ಘಟನೆಯನ್ನು ನೆನಪಿಸುವಂತಿದೆ.
ಸೆಪ್ಟೆಂಬರ್ 11, 2001ರಂದು ಅಮೆರಿಕಗೆ ಅಲ್ ಕೈದಾ ಉಗ್ರ ಸಂಘಟನೆ ಶಾಕ್ ಕೊಟ್ಟಿದ್ದರು. ಈ ಭೀಕರ ಉಗ್ರ ದಾಳಿಯಲ್ಲಿ 2977 ಅಮಾಯಕರು ಮೃತರಾಗಿದ್ದರು.
ಅಲ್ ಖೈದಾ ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ ಅಧಿನಾಯಕ ಒಸಾಮಾ ಬಿನ್ ಲಾಡೆನ್ ನೇತೃತ್ವದಲ್ಲಿ ಅಮೆರಿಕದ ಮೇಲೆ ಉಗ್ರ ದಾಳಿ ನಡೆಸಿತ್ತು. ನ್ಯೂಯಾರ್ಕ್ ನ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರದ ಮೇಲೆ ವಿಮಾನ ದಾಳಿ ನಡೆದಿತ್ತು. ಸೆಪ್ಟೆಂಬರ್ 11, 2001 ಈ ಘಟನೆ ನಡೆದಿದ್ದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಉಕ್ರೇನ್ ನ ಈ ದಢೀರ್ ದಾಳಿಯು 9/11ರ ಅಟ್ಯಾಕ್ ಸ್ಮರಿಸುವಂತೆ ಮಾಡಿದೆ.
International news
ಡೋಕ್ಲಾಂನಲ್ಲಿ 22 ಗ್ರಾಮಗಳನ್ನು ನಿರ್ಮಾಣ ಮಾಡಿದ ಚೀನಾ !
Published
1 day agoon
21/12/2024By
NEWS DESK3ಮಂಗಳೂರು/ನವದೆಹಲಿ: ಭಾರತದ ವಿರುದ್ಧ ಯಾವಾಗ್ಲೂ ಕುತಂತ್ರಿ ಚೀನಾ ಕತ್ತಿಮಸಿಯುತ್ತಲೇ ಇರುತ್ತೆ. ಸುಮ್ಮನೆ ಇರಲಾರದೇ ಗಡಿಯಲ್ಲಿ ಭಾರತವನ್ನು ಕೆಣಕುತ್ತೆ. ಇತ್ತೀಚೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಚೀನಾ ವಿದೇಶಾಂಗ ಸಚಿವ ವಾಂಗ್ ಯಿಯನ್ನ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದರು.
ಆದರೆ, ಭೂತಾನ್ ಭಾಗ ಎನ್ನಲಾಗುವ ಪ್ರದೇಶದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಚೀನಾ 22 ಗ್ರಾಮಗಳನ್ನು ನಿರ್ಮಾಣ ಮಾಡಿದೆ. ಉಪಗ್ರಹ ಚಿತ್ರಗಳನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ. ಭಾರತದ ಸಿಕ್ಕಿಂ ಸಮೀಪ ಈ ಗ್ರಾಮಗಳ ನಿರ್ಮಾಣವಾಗಿದ್ದು, ಕಳವಳ ವ್ಯಕ್ತವಾಗಿದೆ.
ಇದನ್ನೂ ಓದಿ: ಟ್ರಂಪ್ ಜೊತೆಗೆ ಮಾತುಕತೆಗೆ ಸಿದ್ದವಿದ್ದೇನೆ ಎಂದ ವ್ಲಾಡಿಮಿರ್ ಪುಟಿನ್ !
ಚೀನಾದ ಸೇನಾಪಡೆಗಳಿಗೆ ಸುಲಭ ಸಂಚಾರ
ಡೋಕ್ಲಾಂನಲ್ಲಿ ಗ್ರಾಮ ನಿರ್ಮಾಣವಾಗುತ್ತಿರುವುದರಿಂದ ಈ ಪ್ರಸ್ಥಭೂಮಿಯ ಅತ್ಯಂತ ದಕ್ಷಿಣಕ್ಕೆ ಚೀನಾದ ಸೇನಾಪಡೆಗಳು ಸಂಚಾರ ಮಾಡಲು ಅವಕಾಶ ದೊರೆಯುತ್ತದೆ. ಇದು ಭಾರತಕ್ಕೆ ತೀರ ಸಮೀಪವಾಗಿದ್ದು, ಇದು ಚೀನಾದ ಮಿಲಿಟರಿ ನೆಲೆಗಳಿಗೂ ಸಮೀಪದಲ್ಲಿದೆ.
ಡೋಕ್ಲಾಂ ಬಿಕ್ಕಟ್ಟು
2017ರಲ್ಲಿ ಡೋಕ್ಲಾಂನ ಈ ಪ್ರದೇಶವು ಭಾರತ ಮತ್ತು ಚೀನಾದ ಸೈನಿಕರ ನಡುವೆ 73 ದಿನಗಳ ಕಾಲದ ಬಿಕ್ಕಟ್ಟಿನ ಪ್ರದೇಶವಾಗಿತ್ತು. ಹೀಗಾಗಿ ಈ ಪ್ರಸ್ಥಭೂಮಿಯ ದಕ್ಷಿಣಕ್ಕೆ ಚೀನಾದ ಸೇನೆಗಳು ತಲುಪುವ ರಸ್ತೆ ಮಾರ್ಗಗಳ ನಿರ್ಮಾಣವನ್ನು ತಡೆಯಲು ಭಾರತ ಸರಕಾರ ಮಧ್ಯಪ್ರವೇಶಿಸಿತ್ತು.
ಇದೀಗ ಮತ್ತೆ ಡೋಕ್ಲಾಂನಲ್ಲಿ ಗ್ರಾಮಗಳ ನಿರ್ಮಾಣ ವೇಗ ಪಡೆಯುತ್ತಿದ್ದು ಉಪಗ್ರಹ ಚಿತ್ರಗಳು ಭಾರತದ ಆತಂಕಕ್ಕೆ ಕಾರಣವಾಗಿದೆ.
LATEST NEWS
ಮಹಾರಾಷ್ಟ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ ?
ಬಾಂಗ್ಲಾ ಹಿಂದೂಗಳ ಮೇಲೆ ದಾ*ಳಿ ; ಭಾರತೀಯರ ಮುಗಿಸಲು ಉ*ಗ್ರರ ಸಂಚು!
ಮಹತ್ವದ ನಿರ್ಧಾರ ಕೈಗೊಂಡ ಬೈಡನ್: 4.3 ಶತಕೋಟಿ ಡಾಲರ್ ವಿದ್ಯಾರ್ಥಿ ಸಾಲ ಮನ್ನಾ
ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಮಾಜಿ ಕ್ರಿಕೆಟರ್ ರಾಬಿನ್ ಉತ್ತಪ್ಪ ಸ್ಪಷ್ಟನೆ !
ಬಾರತೀಯ ಕಾರ್ಮಿಕರೊಂದಿಗೆ ಕುವೈತ್ನಲ್ಲಿ ಮೋದಿ ಸಂವಾದ
ತೆಲಂಗಾಣ ಸರ್ಕಾರದಿಂದ ಟಾಲಿವುಡ್ಗೆ ಭಾರೀ ದೊಡ್ಡ ಹೊಡೆತ !!
Trending
- BIG BOSS6 days ago
ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ; ವಿಚಾರಣೆಯಲ್ಲಿ ಪೊಲೀಸರಿಗೆ ಸಿಕ್ತು ಮಹತ್ವದ ಮಾಹಿತಿ
- DAKSHINA KANNADA7 days ago
ಕ್ಯಾಟ್ಕದ ನೂತನ ಅಧ್ಯಕ್ಷರಾಗಿ ಲಂಚುಲಾಲ್ ಅವಿರೋಧವಾಗಿ ಆಯ್ಕೆ
- LATEST NEWS4 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್
- DAKSHINA KANNADA7 days ago
ಉಳ್ಳಾಲ: ಜೀಪ್ ಮತ್ತು ಬೈಕ್ ಭೀ*ಕರ ಅ*ಪಘಾತ; ಹೊಟೇಲ್ ಕಾರ್ಮಿಕ ಸಾ*ವು