ಮಂಗಳೂರು:ಕಳೆದೆರಡು ದಿನಗಳಿಂದ ಕರಾವಳಿಯಾದ್ಯಂತ ಭಾರೀ ಮಳೆ ಹಿನ್ನೆಲೆ ಜನಜೀವನ ಅಸ್ತವ್ಯಸ್ತವಾಗಿದ್ದು, ನಗರದಾದ್ಯಂತ ಹಾಗೂ ಹೊರವಲಯದಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿತ್ತು.
ನಗರದ ಕೊಟ್ಟಾರ, ನಂತೂರ್, ಕೆಪಿಟಿ, ಅಡ್ಯಾರ್, ಪಂಪ್‌ವೆಲ್‌ನಲ್ಲಿ ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸರಿ ಸುಮಾರು ರಾತ್ರಿ 10 ಗಂಟೆ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕೊಟ್ಟಾರ ಚೌಕಿ, ಕೂಳೂರು ಬಳಿ ರಸ್ತೆಯಲ್ಲಿ ನೀರು ತುಂಬಿ ಅರ್ಧ ಕಾರುಗಳು ಮುಳುಗಿದ್ದವು. ದ್ವಿಚಕ್ರ ವಾಹನಗಳು ಸವಾರರಂತೂ ಮಳೆಯಿಂದಾಗಿ ತೀವ್ರ ಪರದಾಟ ಅನುಭವಿಸಿದರು.
ಹಂಪನಕಟ್ಟೆ, ಫಳ್ನೀರ್, ಕೆ.ಎಸ್.ರಾವ್ ರಸ್ತೆಗಳಲ್ಲೂ ವಾಹನಗಳು ಸಾಗುವುದಕ್ಕೆ ಮಳೆ ಅಡ್ಡಿಯಾಗಿ ಟ್ರಾಫಿಕ್ ಜಾಮ್ ಆಗಿತ್ತು. ಇನ್ನು ಕೆಲ ಭಾಗಗಳಲ್ಲಿ ವಿದ್ಯುತ್ ನಲ್ಲಿ ವ್ಯತ್ಯಯ ಕೂಡ ಉಂಟಾಗಿತ್ತು. ಕೆಲವು ಅಂಗಡಿ, ಮನೆಗಳಿಗೆ ನೀರು ನುಗ್ಗಿದೆ.