LATEST NEWS
ರಾಯಚೂರು ಡಿಸಿ ಆಗಿದ್ದವರು…ಸನ್ಯಾಸಿ ಆಗಿದ್ದು ಹೇಗೆ ?
Published
3 hours agoon
By
NEWS DESK3ಮಂಗಳೂರು/ರಾಯಚೂರು : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. ಕೋಟಿಗಟ್ಟಲೆ ಭಕ್ತರು, ಸಂತರು, ಸನ್ಯಾಸಿಗಳು ಉತ್ಸವಕ್ಕೆ ಆಗಮಿಸುತ್ತಿದ್ದಾರೆ.
ಆದರೆ, 1993-94ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಐ.ಆರ್. ಪೆರುಮಾಳ್ ಈಗ ಸನ್ಯಾಸಿಯಾಗಿ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅವರನ್ನು ಈ ರೀತಿ ನೋಡಿದ ಜನರ ಹುಬ್ಬೇರುವಂತೆ ಮಾಡಿದ್ದಾರೆ.
ದೇಶದ 13 ಅಖಾಡಾಗಳಿಂದ ಸಾಧುಗಳು, ಯೋಗಿಗಳು, ಬಾಬಾಗಳು ಮತ್ತು ಅಘೋರಿಗಳು ಕುಂಭಮೇಳಕ್ಕೆ ಆಗಮಿಸಿದ್ದಾರೆ. ಆದರೆ, ಒಂದು ಕಾಲದಲ್ಲಿ ರಾಯಚೂರು ಡಿಸಿಯಾಗಿದ್ದ ಐ.ಆರ್.ಪೆರುಮಾಳ್ ಕಾಣಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್ ಆಗುತ್ತಿದೆ.
ಅವರು ಡಿಸಿಯಾಗಿದ್ದಾಗ ಕಚೇರಿಯಲ್ಲಿ ಕುಳಿತ ಫೋಟೊ ಹಾಗೂ ಈಗ ಗಡ್ಡ ಜಟ ಬಿಟ್ಟಿರುವ ಫೋಟೊ ಸಖತ್ ವೈರಲ್ ಆಗಿವೆ. ಜೀವನದ ಪಾರಮಾರ್ಥ ಅರಿತು ಸನ್ಯಾಸದತ್ತ ವಾಲಿರಬಹುದು ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಜನಪ್ರಿಯರಾಗುತ್ತಿದ್ದಾರೆ ರಷ್ಯಾ ಬಾಬ
ಪ್ರಯಾಗರಾಜ್‌ನಲ್ಲಿರುವ ಮಹಾ ಕುಂಭಮೇಳ ಎಲ್ಲರ ಆಕರ್ಷಣೆಯಾಗಿದೆ. ಇಲ್ಲಿ ಎಂತೆಂಥವರು ಸನ್ಯಾಸಿಗಳಾಗಿರುವುದು ಕಂಡು ಬರುತ್ತಿದೆ. ಜೀವನದ ಅಂತಿಮ ಸತ್ಯಕ್ಕೆ ಮಮನಸೋತ ಆಧ್ಯಾತ್ಮದತ್ತ ವಾಲಿದ ಎಷ್ಟೋ ಜನ ಕಂಡು ಬರುತ್ತಿದ್ದಾರೆ.
ಅವರ ಸಾಲಿನಲ್ಲಿ ರಾಯಚೂರಿನಲ್ಲಿ ಡಿಸಿಯಾಗಿದ್ದ ಪೆರುಮಾಳರು ಒಬ್ಬರು ಎಂಬುದು ಗಮನಾರ್ಹ. ಇನ್ನು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಫೆಬ್ರವರಿ 26ರವರೆಗೆ ಮುಂದುವರಿಯಲಿದೆ.
You may like
LATEST NEWS
ಮದುವೆಯಾಗುವ ಹೊಸ್ತಿಲಲ್ಲಿ ಇರುವ ಯುವ ಸಮೂಹಕ್ಕೆ ಕಿವಿಮಾತು..
Published
15 minutes agoon
19/01/2025ಸಾವಿರಾರು ನೀರಿಕ್ಷೆಗಳೊಂದಿಗೆ ಜನರು ದಾಂಪತ್ಯ ಜೀವನಕ್ಕೆ ಕಾಲಿಡುವುದು ಸಾಮಾನ್ಯ. ಆದರೆ ನಿರೀಕ್ಷೆಗಳೆಲ್ಲವೂ ಯಾವಾಗಲೂ ನನಸಾಗುವುದಿಲ್ಲ, ಹೂವಿನ ಜೊತೆಗೆ ಮುಳ್ಳು ಇರುವಂತೆಯೇ ಸುಖದ ಜೊತೆ ಕಷ್ಟವೂ ಇರುತ್ತದೆ. ಅವೆಲ್ಲವನ್ನು ಸರಿದೂಗಿಸಿಕೊಂಡು ಹೋದರಷ್ಟೇ ಜೀವನ ಸುಖಕರವಾಗಿರುತ್ತದೆ. ಹಾಗಂತ ಎಲ್ಲವನ್ನು ಸಹಿಸಿಕೊಂಡು ಹೋಗಲೇಬೇಕೆಂದೆನಿಲ್ಲ, ಆದರೆ ಕೆಲವು ತಾಳ್ಮೆಯಿಂದ ತೆಗೆದುಕೊಂಡ ನಿರ್ಧಾರಗಳು ನಮ್ಮ ಬದುಕನ್ನು ಹಸನಾಗಿಸಬಹುದು. ಹೀಗಿರುವಾಗ ನೂರೆಂಟು ಕನಸುಗಳನ್ನು ಹೊತ್ತು ಹೊಸದಾಗಿ ಮದುವೆಯಾದವರಿಗೆ, ಮದುವೆಯಾಗುತ್ತಿರುವವರಿಗೆ, ಮದುವೆಯಾಗಲು ತುದಿಗಾಲಲ್ಲಿ ನಿಂತಿರುವವರಿಗೆ ಕೆಲ ಕಿವಿಮಾತುಗಳು ಇಲ್ಲಿವೆ.
ಸೌಂದರ್ಯ ಹಾಗೂ ಬ್ಯಾಂಕ್ ಬ್ಯಾಲೆನ್ಸ್‌ಗಿಂತಲೂ ಹೆಚ್ಚಾಗಿ ಸಂಗಾತಿಯ ಗುಣನಡವಳಿಕೆಗಳು ಸುಮಧುರ ದಾಂಪತ್ಯಕ್ಕೆ ಬಹಳ ಮುಖ್ಯವಾಗಿರುತ್ತದೆ. ಚೆಂದ, ಬ್ಯಾಂಕ್ ಬ್ಯಾಲೆನ್ಸ್ ಎಲ್ಲವೂ ಇದ್ದು, ಅವರು ನಮ್ಮಲ್ಲಿ ಗೌರವಯುತವಾಗಿ ನಡೆಸಿಕೊಳ್ಳುವುದಿಲ್ಲವೆಂದರೆ ಎಲ್ಲವೂ ನಿಷ್ಪ್ರಯೋಜಕ.ಸರಿ ತಪ್ಪುಗಳ ಪ್ರಶ್ನೆಗಳಿಗಿಂತ ಹೊಂದಾಣಿಕೆ ಬಹಳ ಮುಖ್ಯವಾಗುತ್ತದೆ. ಯಾರು ತಪ್ಪು ಯಾರು ಸರಿ ಎಂದು ಹೋರಾಟ ಮಾಡುವವರಿಗಿಂತ ಚೆನ್ನಾಗಿ ಜೀವನ ಮಾಡುತ್ತಿರುವುದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ.ರೋಮ್ಯಾನ್ಸ್ ದಾಂಪತ್ಯದ ಭಾಗವಷ್ಟೇ ಅದೇ ಎಲ್ಲವೂ ಅಲ್ಲ, ಕೆಲವೊಂದು ರಹಸ್ಯಗಳಾಗಿದ್ದರೆಯೇ ಚಂದ. ಭಾರತದಲ್ಲಿ ಮದುವೆ ಕೇವಲ ಇಬ್ಬರು ಗಂಡು ಹೆಣ್ಣಿಗೆ ಸಂಬಂಧಿಸಿದ್ದಲ್ಲ, ಇದು ಸಂಪೂರ್ಣವಾಗಿ ಕುಟುಂಬ, ಉದ್ಯೋಗ ಜೀವನ, ಬದುಕಿನ ವಾಸ್ತವತೆ, ಸಾಮಾಜಿಕ ಸಾಂಸ್ಕೃತಿಕ ನಂಬಿಕೆಗೆ ಸಂಬಂಧಿಸಿದ ವಿಚಾರವಾಗಿದೆ.
ಮದುವೆಯಾದ ತಕ್ಷಣ ಅದೇಕೆ ಇದೇಕೆ ಅಂತ ಪ್ರಶ್ನಿಸುತ್ತಾ ಮನೆಯವರನ್ನೆಲ್ಲಾ ಎದುರು ಹಾಕಿಕೊಳ್ಳಬಾರದು. ಯಶಸ್ವಿ ಮದುವೆಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಫಾರ್ಮುಲಾಗಳಿಲ್ಲ. ಪ್ರತಿಯೊಂದು ಜೋಡಿಯೂ ವಿಭಿನ್ನ, ಈ ಆತ್ಮ ಸಮ್ಮಿಲನಕ್ಕೆ ಏನು ಕಾರಣವಿರಬಹುದು ಎಂಬುದನ್ನು ಕೇವಲ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಬಹಳ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಚಾರ ಎಂದರೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತೋರಿಸುವಂತೆಯೇ ಮದುವೆ ಜೀವನ ಇರುವುದಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಸುಂದರ ಫೋಟೊಗಳನ್ನು ಹಾಕಿಕೊಂಡು ಎಂಜಾಯ್ ಮಾಡುತ್ತಿರುವ ಜೋಡಿಯ ಜೀವನದ ಜೊತೆ ನಮ್ಮನ್ನು ಹೊಂದಾಣಿಕೆ ಮಾಡಿಕೊಳ್ಳಬಾರದು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಶೋಕಿ ಮಾಡುವವರು ವಾಸ್ತವದಲ್ಲಿ ಇತರರಿಗಿಂತ ಬಹಳ ಕೆಟ್ಟದಾಗಿ ಹೊಡೆದಾಡಿಕೊಂಡಿರುತ್ತಾರೆ. ಜೊತೆಯಾಗಿ ಸಾಗಲು ಕಷ್ಟಪಡುತ್ತಿರುತ್ತಾರೆ. ಕಿತ್ತಾಟವನ್ನು ಯಾವ ದಂಪತಿಯೂ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಿಲ್ಲ. ಸುಖಿ ದಾಂಪತ್ಯ ಜೀವನಕ್ಕಾಗಿ ಈ ವಿಚಾರಗಳು ಸಣ್ಣ ವಿಚಾರಗಳನ್ನು ನೆನಪಿಟ್ಟು ಬಾಳುವುದು ಉತ್ತಮ.
International news
ಪೆಟ್ರೋಲ್ ಟ್ಯಾಂಕರ್ ಸ್ಪೋ*ಟ: 70 ಮಂದಿ ಸಾ*ವು
Published
35 minutes agoon
19/01/2025By
NEWS DESK3ಮಂಗಳೂರು/ಮೈದುಗುರಿ (ನೈಜೀರಿಯಾ) : ಉತ್ತರ ನೈಜೀರಿಯಾದಲ್ಲಿ ಶನಿವಾರ ಪೆಟ್ರೋಲ್ ಟ್ಯಾಂಕರ್ ಸ್ಪೋ*ಟಗೊಂಡ ಪರಿಣಾಮ ಕನಿಷ್ಠ 70 ಜನ ಮೃ*ತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ದೇಶದ ರಾಷ್ಟ್ರೀಯ ತುರ್ತು ಏಜೆನ್ಸಿ ತಿಳಿಸಿದೆ.
ವರದಿಗಳ ಪ್ರಕಾರ, ಘಟನೆಯಲ್ಲಿ 70ಕ್ಕೂ ಹೆಚ್ಚು ಮಂದಿ ಸಾ*ವಿಗೀಡಾಗಿದ್ದು, 56 ಜನ ಗಾಯಗೊಂಡಿದ್ದಾರೆ. 15ಕ್ಕೂ ಹೆಚ್ಚು ಅಂಗಡಿಗಳು ನಾಶವಾಗಿವೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ರಾಯಚೂರು ಡಿಸಿ ಆಗಿದ್ದವರು…ಸನ್ಯಾಸಿ ಆಗಿದ್ದು ಹೇಗೆ ?
ಕಳೆದ ಅಕ್ಟೋಬರ್‌ನಲ್ಲಿ ಜಿಗಾವಾ ರಾಜ್ಯದಲ್ಲಿ ಇದೇ ರೀತಿಯ ಸ್ಪೋ*ಟ ಸಂಭವಿಸಿದ್ದು, 147 ಮಂದಿ ಸಾ*ವಿಗೀಡಾಗಿದ್ದರು.
FILM
ಸೈಫ್ ಮೇಲೆ ಹ*ಲ್ಲೆ ಪ್ರಕರಣ; ಪ್ರಮುಖ ಆರೋಪಿ ಬಾಂಗ್ಲಾ ಪ್ರಜೆ ಅರೆಸ್ಟ್
Published
1 hour agoon
19/01/2025By
NEWS DESK4ಮಂಗಳೂರು/ಥಾಣೆ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾ*ಳಿಯ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ . ಮಹಾರಾಷ್ಟ್ರದ ಥಾಣೆಯಲ್ಲಿ ಆರೋಪಿ ಮೊಹಮ್ಮದ್ ಇಲಿಯಾಸ್ ಅಲಿಯಾಸ್ ವಿಜಯ್ ದಾಸ್ ಯಾನೆ ಬಿಜೋಯ್ ದಾಸ್‌ನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಬಾಂಗ್ಲಾದೇಶದವನಾಗಿದ್ದು, ಭಾರತಕ್ಕೆ ಬಂದ ಮೇಲೆ ತನ್ನ ಹೆಸರನ್ನು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್‌ನಿಂದ ಜಿಜೋಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದ ಎನ್ನಲಾಗಿದೆ. ಅಲ್ಲದೇ, ವಿಜಯ್ ದಾಸ್, ಬಿಜೋಯ್ ದಾಸ್ ಮತ್ತು ಮೊಹಮ್ಮದ್ ಇಲಿಯಾಸ್ ಸೇರಿದಂತೆ ಹಲವು ಇಲಿಯಾಸ್‌ಗಳನ್ನು ಆತ ಬಳಸುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಕೃ*ತ್ಯ ಎಸಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿ ಆತ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ : ಮೊಬೈಲ್‌ಗೆ ಸಿಮ್ ಹಾಕಿದಾಕ್ಷಣ ಬ್ಯಾಂಕ್ ಅಕೌಂಟ್‌ನಿಂದ ಕೋಟಿಗಟ್ಟಲೆ ಹಣ ಮಾಯ
ಕಳೆದ ಗುರುವಾರ(ಜ.16) ಬೆಳಗಿನ ಜಾವ 2 ಗಂಟೆಗೆ ನಟ ಸೈಫ್ ಅಲಿ ಖಾನ್ ನಿವಾಸಕ್ಕೆ ನುಗ್ಗಿದ್ದ ಆರೋಪಿ ನಟನ ಮೇಲೆ ಹ*ಲ್ಲೆ ನಡೆಸಿದ್ದ. ಈ ಹ*ಲ್ಲೆಯಿಂದ ಸೈಫ್ ಅವರ ಕುತ್ತಿಗೆ ಹಾಗೂ ಬೆನ್ನಿನ ಭಾಗದಲ್ಲಿ ಗಾಯಗಳಾಗಿತ್ತು. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ತಿಳಿದು ಬಂದಿದೆ.
LATEST NEWS
ಗೌತಮಿ ಬಳಿಕ ಮನೆಯಿಂದ ಹೊರಬಂದ ಸ್ಪರ್ಧಿ ಇವರೇನಾ?
ಮೊಬೈಲ್‌ಗೆ ಸಿಮ್ ಹಾಕಿದಾಕ್ಷಣ ಬ್ಯಾಂಕ್ ಅಕೌಂಟ್‌ನಿಂದ ಕೋಟಿಗಟ್ಟಲೆ ಹಣ ಮಾಯ
ಮಂಗಳೂರು ಪಾಲಿಕೆ ಆಯುಕ್ತ ಆನಂದ್ ಸಿ.ಎಲ್ ವರ್ಗಾವಣೆ
ಕುಡಿಯಬಾರದು ಎಂದು ಬುದ್ಧಿವಾದ ಹೇಳಿದಕ್ಕೆ ಅಪ್ಪನನ್ನೇ ಕೊಂ*ದ ದುಷ್ಟ ಮಗ
ಬಸ್ ಕದ್ದ ಪ್ರಕರಣಕ್ಕೆ ಟ್ವಿಸ್ಟ್; ಕಥೆ ಹಾಗಲ್ಲ ಹೀಗೆ ಎಂದ ವಿದೇಶದಲ್ಲಿರುವ ಮಾಲಕ
ಡೈರೆಕ್ಟರ್ ಜೊತೆಗೆ ಸಮಂತಾ ಸಿಕ್ರೇಟ್ ರಿಲೇಶನ್ಶಿಪ್
Trending
- BIG BOSS6 days ago
ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!
- BIG BOSS5 days ago
ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ?
- BIG BOSS5 days ago
ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?
- BIG BOSS6 days ago
ಬಿಗ್ ಬಾಸ್ ನಿಂದ ಹೊರ ಬಂದ ಚೈತ್ರಾ ಕುಂದಾಪುರ ಪಡೆದ ಸಂಭಾವನೆ ಎಷ್ಟು ಗೊತ್ತೇ?