ಲಕ್ನೋ: ಉತ್ತರ ಭಾರತದಲ್ಲಿ ಮೈಕೊರೆಯುಯವ ಚಳಿ ಮಧ್ಯೆಯೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಐತಿಹಾಸಿಕ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ದೆಹಲಿ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣದಲ್ಲಿ ಉಷ್ಣಾಂಶ ನಾಲ್ಕು ಡಿಗ್ರಿಗೆ ಕುಸಿದಿದೆ.
ಮೈ ಕೊರೆಯುವ ಈ ಚಳಿಯಲ್ಲಿ ಜನ ಓಡಾಡುವುದೇ ಕಷ್ಟ. ಆದರೆ ರಾಹುಲ್ ಗಾಂಧಿ ಅವರು ಉತ್ಸಾಹದಿಂದ ಪಾದಯಾತ್ರೆ ನಡೆಸುತ್ತಿದ್ದಾರೆ.
ಅದರಲ್ಲೂ ಟೀ ಶರ್ಟ್ ಧರಿಸಿ ರಾಹುಲ್ ಗಾಂಧಿ ಹೆಜ್ಜೆ ಹಾಕುತ್ತಿರೋದು ಉತ್ತರಪ್ರದೇಶ ಸರ್ಕಾರಕ್ಕೆ ಆಶ್ಚರ್ಯ ತಂದಿದೆ. ಬರೀ ಟೀಶರ್ಟ್ ಧರಿಸಿ ಯಾತ್ರೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿರುವುದು ಸಾಕಷ್ಟು ಚರ್ಚೆಯಾಗುತ್ತಿದ್ದು ಅವರು ಧರಿಸಿರೋ ಟೀ ಶರ್ಟ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಈ ಹಿನ್ನೆಲೆಯಲ್ಲಿ ಯುಪಿ ಸರ್ಕಾರ ರಾಹುಲ್ ಗಾಂಧಿ ಟೀ ಶರ್ಟ್ ಮೇಲೆ ಸಂಶೋಧನೆಗೆ ಮುಂದಾಗಿದೆ ಎನ್ನಲಾಗಿದೆ.
ಯುಪಿ ಸರ್ಕಾರದ ಡಿಸಿಎಂ ಹಾಗೂ ಆರೋಗ್ಯ ಸಚಿವರು ಆಗಿರುವ ಬ್ರಿಜೇಶ್ ಪಾಠಕ್, ಈ ಬಗ್ಗೆ ಸಂಶೋಧನೆ ನಡೆಸಿ ವರದಿ ನೀಡಲು ವಿಜ್ಞಾನಿಗಳಿಗೆ ಸೂಚನೆ ನೀಡಿದ್ದಾರೆ ಅಂತೆ..!