ಬೆಂಗಳೂರು: ಅಪ್ಪ-ಅಮ್ಮನ್ನ ನೋಡೋಕೆ ಬೇಗ ಹೋಗಿದ್ದಾನೆ. ನನ್ನ ಮನೆಯಲ್ಲಿ ನನ್ನ ಮಕ್ಕಳನ್ನು ನೋಡಿ ನೀನಿರು. ನಾನು ಅಪ್ಪ ಅಮ್ಮನ ಜೊತೆ ಹೋಗುತ್ತೇನೆ ಅಂತ ಹೋಗಿದ್ದಾನೆ ಎಂದು ರಾಘವೇಂದ್ರ ರಾಜ್‌ಕುಮಾರ್ ಅತ್ಯಂತ ಭಾವುಕರಾಗಿ ಹೇಳಿಕೆ ನೀಡಿದರು.
ಈ ಬಗ್ಗೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್ ನಾವು ಆತನ ಕೊನೆಯ ಪಯಣವನ್ನು ಅತ್ಯಂತ ಪ್ರೀತಿಯಿಂದ ಕಳುಹಿಸಿಕೊಡಬೇಕು.
ಆತನನ್ನು ನೀವೆಲ್ಲರೂ ಪ್ರೀತಿಯಿಂದ ಕನ್ನಡ ಚಿತ್ರರಂಗಕ್ಕೆ ಬರಮಾಡಿಕೊಂಡಿದ್ದೀರಿ, ಅಷ್ಟೇ ಖುಷಿಯಿಂದ ಕಳುಹಿಸಿ ಕೊಡಬೇಕು ಎಂದರು. ನಮ್ಮಿಂದ ಯಾರಿಗೂ ತೊಂದರೆಯಾಗಬಾರದು.
ಈ ವೇಳೆಯಲ್ಲಿ ನನಗೆ ಸಪೋರ್ಟ್ ಮಾಡುವ ಅವಕಾಶ ಸಿಕ್ಕಿದೆ ಯಾರಿಗೂ ತೊಂದರೆಯಾಗದಂತೆ, ಅತ್ಯಂತ ಸುರಕ್ಷತೆಯಿಂದ ಅಂತಿಮ ವಿಧಿ ವಿಧಾನ ನಡೆಸಿಕೊಡುವಂತೆ ಸಹಕರಿಸಿ ಎಂದು ಬೇಡಿಕೊಂಡರು.