ಮಂಗಳೂರು/ಸ್ಪೇನ್ : ಟೆನಿಸ್ ದಿಗ್ಗಜ, ದಿ ಕಿಂಗ್ ಆಫ್ ಕ್ಲೇ ರಫೆಲ್ ನಡಾಲ್ ಟೆನಿಸ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ನ.19 ರಂದು ನಡೆದ ನೆದರ್‌ಲ್ಯಾಂಡ್ ವಿರುದ್ಧದ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದರು. ಇದರೊಂದಿಗೆ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ.
ನಿವೃತ್ತಿ ಘೋಷಿಸಿದ ಬಳಿಕ ಸ್ಪ್ಯಾನಿಷ್ ರಾಷ್ಟ್ರಗೀತೆಯ ಸಂದರ್ಭದಲ್ಲಿ ರಫೆಲ್ ಭಾವುಕರಾಗಿದ್ದು ಕಂಡು ಬಂತು. ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ಅಭಿಮಾನಿಗಳು ‘ರಾಫಾ, ರಾಫಾ’ ಎಂದು ಕೂಗುವ ಮೂಲಕ ತಮ್ಮ ನೆಚ್ಚಿನ ಸಾಧಕನನ್ನು ಬೀಳ್ಕೊಟ್ಟಿದ್ದಾರೆ.
2004ರಲ್ಲಿ ವೃತ್ತಿಜೀವನಕ್ಕೆ ಕಾಲಿಟ್ಟ ರಫೆಲ್ 30 ಡೇವಿಸ್ ಕಪ್ ಸಿಂಗಲ್ಸ್ ಪಂದ್ಯಗಳಲ್ಲಿ 29 ಪಂದ್ಯಗಳನ್ನು ಆಡಿದ್ದಾರೆ. 23 ವರ್ಷಗಳ ಟೆನಿಸ್ ಜೀವನದಲ್ಲಿ ನಡಾಲ್ 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ನೆದರ್‌ಲ್ಯಾಂಡ್ ನ ಬೋಟಿಕ್ ವ್ಯಾನ್ ಡೆ ಝಾಂಡ್ ಸ್ಕಲ್ ವಿರುದ್ಧದ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ1-2 ರ ಅಂತರದಲ್ಲಿ ಸೋಲುವ ಮೂಲಕ ಈ ಮೊದಲೇ ಹೇಳಿದ್ದಂತೆ ತಮ್ಮ ವೃತ್ತಿ ಬದುಕಿಗೆ ಗುಡ್ ಬಾಯ್ ಹೇಳಿದ್ದಾರೆ.
ಮಂಗಳೂರು/ಕ್ಯಾನ್ ಬೆರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಆಲ್ಬನೀಸ್ ಅವರನ್ನು ಭೇಟಿ ಮಾಡಿತು. ಈ ವೇಳೆ ಆಸೀಸ್ ಪ್ರಧಾನಿ, ಕೊಹ್ಲಿ ಅವರ ಆಟೋಗ್ರಾಫ್ ಪಡೆದುಕೊಂಡಿದ್ದು ತುಂಬಾ ಸದ್ದು ಮಾಡಿತ್ತು.
ಅಷ್ಟಕ್ಕೂ, ಆಂಥೋನಿ ಆಲ್ಬನೀಸ್ ಅವರು ಟೀಂ ಇಂಡಿಯಾ ನಾಯಕ ರೋಹಿತ್ ಅವರನ್ನು ಬಿಟ್ಟು ವಿರಾಟ್ ಕೊಹ್ಲಿ ಅವರ ಆಟೋಗ್ರಾಫ್ ಪಡೆದಿದ್ದೇಕೆ ಎಂಬುದನ್ನು ಸ್ವತಃ ಅವರೇ ರಿವಿಲ್ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆಲ್ಬನೀಸ್,’ನನ್ನ ಖಾಸಗಿ ವೈದ್ಯರು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಅವರು ಕೊಹ್ಲಿಯ ಬಗ್ಗೆ ಎಷ್ಟು ಭಾವೋದ್ರಿಕೃತರಾಗಿದ್ದಾರೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ನಾನು ಕೊಹ್ಲಿಯನ್ನು ಭೇಟಿಯಾಗುತ್ತೇನೆ ಎಂದು ಹೇಳಿದಾಗ ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಈಗಾಗೀ ಕೊಹ್ಲಿಯ ಆಟೋಗ್ರಾಫ್ ಕೊಡಿಸಲು ಅವರು ನನ್ನಲ್ಲಿ ಹೇಳಿದ್ದಾರೆ. ಎಂದು ತಿಳಿಸಿದರು.
ಇನ್ನೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಎರಡನೇ ಪಿಂಕ್ ಬಾಲ್ ಟೆಸ್ಟ್ ಪಂದ್ಯಾವು ಶುಕ್ರವಾರದಿಂದ ಶುರುವಾಗಲಿದೆ.
ಮಂಗಳೂರು/ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಡಿಸೆಂಬರ್ 6 ರಿಂದ ಅಡಿಲೇಡ್ ನ ಓವಲ್ ಮೈದಾನದಲ್ಲಿ ಶುರುವಾಗಲಿದೆ. ಈ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಎಂಬುದು ಕುತೂಹಲ ಮೂಡಿಸಿದೆ.
‘ಪಿಂಕ್ ಬಾಲ್’ ಟೆಸ್ಟ್ ಗೆ ವರ್ಷಗಳ ಬಳಿಕ ವೇದಿಕೆ ಸಿದ್ದವಾಗಿದೆ. ಇದರ ನಡುವೆ ಪಿಂಕ್ ಬಾಲ್ ಟೆಸ್ಟ್ ಅಂದರೆ ಏನು ಎಂಬ ಪ್ರಶ್ನೆ ಮೂಡಿದೆ.
ಪಿಂಕ್ ಬಾಲ್ ಟೆಸ್ಟ್ ಅಂದರೆ ಡೇ-ನೈಟ್ ಟೆಸ್ಟ್ ಪಂದ್ಯ. ಹೊನಲು ಬೆಳಕಿನಲ್ಲಿ ಆಡಲಾಗುವ ಈ ಪಂದ್ಯದಲ್ಲಿ ಪಿಂಕ್ ಬಾಲ್ ಅನ್ನು ಬಳಸಲಾಗುತ್ತದೆ. ಹೀಗಾಗಿಯೇ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಪಿಂಕ್ ಬಾಲ್ ಟೆಸ್ಟ್ ಪಂದ್ಯ ಎಂದು ಕರೆಯುತ್ತಾರೆ.
ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿರುವ ಮುಖ್ಯ ಉದ್ದೇಶ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸುವುದು. ಇಲ್ಲಿ ಪಂದ್ಯವು ಹೊನಲು-ಬೆಳಕಿನಲ್ಲಿ ಆಯೋಜಿಸುತ್ತಿರುವುದರಿಂದ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನ ಪ್ರೇಕ್ಷಕರು ಸ್ಟೇಡಿಯಂಗೆ ಆಗಮಿಸುತ್ತಾರೆ. ಹೀಗಾಗಿಯೇ ಆಸ್ಟ್ರೇಲಿಯಾ ಪ್ರತಿ ವರ್ಷ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿದೆ.
ರಾತ್ರಿ-ಹಗಲು ಪಂದ್ಯಕ್ಕೆ ಬೇರೆ ಬಾಲ್ ಗಳನ್ನು ಬಳಸಬಹುದಲ್ವಾ, ಯಾಕೆ ಪಿಂಕ್ ಬಾಲ್ ಮಾತ್ರ ಬಳಸಬೇಕು ಎಂದು ಕೇಳಬಹುದು. ಆದರೆ ಸಾಮಾನ್ಯವಾಗಿ ಕ್ರಿಕೆಟ್ ನಲ್ಲಿ ರೆಡ್ ಅಥವಾ ವೈಟ್ ಬಾಲ್ ಅನ್ನು ಬಳಸಲಾಗುತ್ತದೆ. ಆದರೆ ಡೇ- ನೈಟ್ ಟೆಸ್ಟ್ ಪಂದ್ಯವಾದರಿಂದ ಪಿಂಕ್ ಬಾಲ್ ನಲ್ಲಿ ಆಡಲಾಗುತ್ತಿದೆ.
ಇದಕ್ಕೆ ಮುಖ್ಯ ಕಾರಣ ರಾತ್ರಿಯ ವೇಳೆ ಚೆಂಡಿನ ಸ್ಪಷ್ಟ ಗೋಚರತೆ. ಈ ಹಿಂದೆ ಡೇ-ನೈಟ್ ಟೆಸ್ಟ್ ಪಂದ್ಯಕ್ಕಾಗಿ ಯೆಲ್ಲೊ, ಪಿಂಕ್ ಮತ್ತು ಗಾಢ ಬಿಳಿ ಬಣ್ಣದ ಚೆಂಡಿನ ಪ್ರಯೋಗಗಳನ್ನು ನಡೆಸಲಾಗಿತ್ತು. ಈ ಪ್ರಯೋಗದ ವೇಳೆ ಪಿಂಕ್ ಬಾಲ್ ಗೋಚರತೆಯು ಹೆಚ್ಚಿನ ಸ್ಪಷ್ಟವಾಗಿ ಕೂಡಿದೆ ಎಂದು ಬ್ಯಾಟರ್ ಗಳು ಅಭಿಪ್ರಾಯಪಟ್ಟಿದ್ದರು. ಹೀಗಾಗಿ ಡೇ-ನೈಟ್ ಟೆಸ್ಟ್ ನಲ್ಲಿ ಪಿಂಕ್ ಬಾಲ್ ಬಳಸಲು ನಿರ್ಧರಿಸಲಾಯಿತು.
ಈ ಬಾರಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಂಪೂರ್ಣ ಸಿದ್ದತೆ ನಡೆಸುತ್ತಿದೆ. ಇದರ ನಡುವೆ ಅಭ್ಯಾಸ ಪಂದ್ಯದಲ್ಲೂ ಭಾರತ ಗೆದ್ದಿದ್ದು, ಆಸೀಸ್ ಗೆ ನಡುಕ ಹುಟ್ಟಿಸಿದೆ.
ಮಂಗಳೂರು/ಗೀಲಾಂಗ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ದುಃಖಕರ ಸಂಗತಿ ಹೊರಬಿದ್ದಿದೆ.
ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಓಪನರ್ ಇಯಾನ್ ರೆಡ್ ಪತ್ (83) ನಿಧನರಾಗಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಮಾಹಿತಿ ನೀಡಿದೆ. ಇಯಾನ್ ರೆಡ್ ಪತ್ 1960 ಮತ್ತು 1970ರ ದಶಕಗಳಲ್ಲಿ ಆಸ್ಟ್ರೇಲಿಯಾ ತಂಡದ ನಿಯಮಿತ ಭಾಗವಾಗಿದ್ದರು. ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್ ನ ಸದಸ್ಯರೂ ಆಗಿದ್ದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 2ರಂದು ನಡೆಯಲಿದೆ. ರೆಡ್ ಪತ್ ನಿಧನದಿಂದ ಆಸ್ಟ್ರೇಲಿಯಾದಲ್ಲಿ ಶೋಕ ಸಾಗರದಲ್ಲಿ ಮುಳುಗಿದೆ.
ಗೀಲಾಂಗ್ ನಿವಾಸಿಯಾಗಿರುವ ರೆಡ್ ಪತ್ 66 ಟೆಸ್ಟ್ ಪಂದ್ಯಗಳಲ್ಲಿ ಆಡಿ 43.45 ಸರಾಸರಿಯಲ್ಲಿ 4737 ರನ್ ಗಳಿಸಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 31 ಅರ್ಧ ಶತಕಗಳು ಸೇರಿವೆ. ಇವರ ಗರಿಷ್ಠ ಸ್ಕೋರ್ 171 ಆಗಿತ್ತು. ಇಯಾನ್ ರೆಡ್ ಪತ್ 1963-64ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯ ಎರಡನೇ ಪಂದ್ಯದಲ್ಲಿ MCGಯಲ್ಲಿ ತನ್ನ ಟೆಸ್ಟ್ ಪಾದಾರ್ಪಣೆ ಮಾಡಿದ್ದರು.
ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್ ಮನ್ ರೆಡ್ ಪತ್ ನಿಧನದಿಂದ ಕ್ರಿಕೆಟ್ ಜಗತ್ತು ಶೋಕದಲ್ಲಿ ಮುಳುಗಿದೆ.