DAKSHINA KANNADA
ಕಾಂಗ್ರೆಸ್ ನಲ್ಲಿ ಸಿಎಂ ಪಟ್ಟಕ್ಕಾಗಿ ರೇಸ್ : ನಾನು ಓಡುವ ಕುದುರೆಯೂ ಅಲ್ಲ, ಕತ್ತೆಯೂ ಅಲ್ಲ : ಬಿ.ಕೆ.ಹರಿಪ್ರಸಾದ್
ಮಂಗಳೂರು : ಮುಡಾ ಹಗರಣದಲ್ಲಿ ನ್ಯಾಯಾಂಗ ತನಿಖೆ ಎದುರಿಸುತ್ತಿರುವ ಸಿಎಂ ಸಿದ್ಧರಾಮಯ್ಯ ಅವರ ಸ್ಥಾನಕ್ಕೆ ಕುತ್ತು ಬಂದಿದ್ದು, ರಾಜ್ಯ ರಾಜಕೀಯದಲ್ಲಿ ಸಿಎಂ ಪದತ್ಯಾಗದ ವಿಚಾರವಾಗಿ ಭಾರಿ ಚರ್ಚೆ ನಡಿತಾ ಇದೆ. ಆದ್ರೆ, ಇದೆಲ್ಲಾ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಮ್ಮ ನಾಯಕರು ಉತ್ತರ ಕೊಡ್ತಾ ಇರೋ ಕಾರಣ ಚರ್ಚೆ ಹುಟ್ಟಿಕೊಂಡಿರುವುದು ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಮುಖ್ಯಮಂತ್ರಿ ವಿಚಾರವನ್ನು ಎಐಸಿಸಿ ಕಮಿಟಿ ತೀರ್ಮಾನಿಸುತ್ತದೆ. ಆದ್ರೆ, ಸಿದ್ದರಾಮಯ್ಯ ಅವರ ಪ್ರಕರಣದ ತೀರ್ಪು ಇನ್ನೂ ಬಂದಿಲ್ಲವಾದ ಕಾರಣ ಕಾನೂನು ಹೋರಾಟದ ವೇಳೆ ಹೇಳಿಕೆ ನೀಡುವುದು ನ್ಯಾಯಾಂಗ ನಿಂದನೆ ಆಗುತ್ತದೆ. ನಮ್ಮಲ್ಲಿ 135 ಶಾಸಕರಿದ್ದಾರೆ. ಅವರೆಲ್ಲರೂ ಒನ್ ಎಮಾಂಗ್ ಈಕ್ವಲ್ ಎನ್ನುವಂತೆ ಹೇಳಿಕೆ ನೀಡ್ತಾ ಇದ್ದಾರೆ. ಹೇಳಿಕೆಯನ್ನು ನೀಡಲು ಅವರು ಸ್ವತಂತ್ರರಾಗಿದ್ದಾರೆ. ಆದ್ರೆ ನಾನು ಯಾವುದೇ ರೇಸ್‌ನಲ್ಲಿ ಇಲ್ಲ. ನಾನು ಓಡುವ ಕುದುರೆಯೂ ಅಲ್ಲ ಕತ್ತೆಯೂ ಅಲ್ಲ ಎಂದು ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಬಜ್ಪೆ : ಕ್ರಿಕೆಟ್ ಆಡುತ್ತಿರುವಾಗ ಹೃದಯಾಘಾ*ತ; ಯುವಕ ಸಾ*ವು
ಕೋ*ವಿಡ್ ಹಗರಣದ ಬಗ್ಗೆ :
ಇನ್ನು ಇದೇ ವೇಳೆ ಬಿಜೆಪಿ ಕಾಲದಲ್ಲಿ ನಡೆದಿದ್ದ ಕೋ*ವಿಡ್ ಹಗರಣದ ಮದ್ಯಂತರ ವರದಿಯ ಬಗ್ಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಹಾಲಿ ಎಂಪಿ ಸುಧಾಕರ್ ಅವರು ಆಗ ಆರೋಗ್ಯ ಮಂತ್ರಿಯಾಗಿದ್ದರು. ಕರ್ನಾಟಕದಲ್ಲಿ ಕೋವಿಡ್‌ನಿಂದ ನಾಲ್ಕು ಲಕ್ಷ ಜನ ಪ್ರಾ*ಣ ಕಳೆದುಕೊಂಡಿದ್ದಾರೆ. ವ್ಯಾಕ್ಸಿನ್ ವ್ಯವಸ್ಥೇ ಹೇಗಿತ್ತು ಅಂತ ಜನರ ನೋಡಿದ್ದಾರೆ. ವರದಿ ಏನು ಬಂದಿದೆ? ಅದರಲ್ಲಿ ಏನು ಸತ್ಯ ಇದೆ ಅಂತ ಹೊರಗೆ ಬರಲಿ ತಪ್ಪಾಗಿದ್ರೆ, ಶಿಕ್ಷೆ ಅನುಭವಿಸಲು ಮುಂದಾಗಲಿ ಎಂದು ಹೇಳಿದ್ದಾರೆ.
DAKSHINA KANNADA
ಛೀ! ಎಂಥ ಹೇಯ ಕೃ*ತ್ಯ; ಜೀವಂತ ಸಾಕು ನಾಯಿಯನ್ನು ಕಸ ವಿಲೇವಾರಿ ವಾಹನಕ್ಕೆ ತುಂಬಿಸಿದ ಮಾಲಕ
ಮಂಗಳೂರು : ಮನೆಯಲ್ಲಿ ಪ್ರಾಣಿ, ಪಕ್ಷಿಗಳನ್ನು ಸಾಕುವುದನ್ನು ಹಲವರು ಇಷ್ಟ ಪಡುತ್ತಾರೆ. ಹೆಚ್ಚಿನವರ ಮನೆಯಲ್ಲಿ ನಾಯಿ, ಬೆಕ್ಕುಗಳನ್ನು ಸಾಕುವುದನ್ನು ಕಾಣುತ್ತೇವೆ. ತಮ್ಮ ಮಕ್ಕಳಂತೆ ಅವುಗಳನ್ನು ಮುದ್ದು ಮಾಡುತ್ತಾರೆ. ಆದ್ರೆ, ಇಲ್ಲಿ ಮಾತ್ರ ಆಗಿರೋದು ಬೇರೆ.
ಹೌದು, ಜೀವಂತ ಸಾಕು ನಾಯಿಯನ್ನು ಮನೆ ಮಾಲಕರು ಪಾಲಿಕೆಯ ಕಸ ವಿಲೇವಾರಿ ಮಾಡುವ ವಾಹನಕ್ಕೆ ಕೊಟ್ಟ ಹೇಯ ಕೃ*ತ್ಯ ಮಂಗಳೂರಿನ ಡೊಂಗರಕೇರಿಯಲ್ಲಿ ನಡೆದಿದೆ. ಕೆಲ ವರ್ಷಗಳಿಂದ ಮನೆಯಲ್ಲಿ ಸಾಕಿದ್ದ ಹೆಣ್ಣು ಶ್ವಾನವನ್ನು ನಗರದ ಕಸ ವಿಲೇವಾರಿ ಮಾಡುವ ಪಾಲಿಕೆಯ ಲಾರಿಗೆ ಹಾಕಿ ನಗರದ ಹೊರವಲಯದ ವಾಮಾಂಜೂರು ಡಂಪಿಂಗ್ ಯಾರ್ಡ್ ಬಳಿ ಬಿಡಲಾಗಿದೆ.
ಇದನ್ನೂ ಓದಿ : ಮಕ್ಕಳಿಗೆ ಹಣ್ಣು ಕೊಡುವಾಗ ಎಚ್ಚರ! ರಂಬುಟಾನ್ ಹಣ್ಣು ಗಂಟಲಲ್ಲಿ ಸಿಲುಕಿ ಬಾಲಕಿ ಸಾ*ವು
ಘಟನೆಯ ವಿಡೀಯೋ ಸಿಟಿ ಟಿವಿಯಲ್ಲಿ ದಾಖಲಾಗಿದೆ. ಜೊತೆಗೆ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಅಮಾನವೀಯ ಘಟನೆಗೆ ಪ್ರಾಣಿ ಪ್ರಿಯರು ಹಾಗೂ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
DAKSHINA KANNADA
ಪುತ್ತೂರು ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಜಾನ್ಸನ್ ಡಿ ಸೋಜ ಅಧಿಕಾರ ಸ್ವೀಕಾರ
ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣಾ ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಜಾನ್ಸನ್ ಡಿ ಸೋಜ ಅವರು ಸೆ.9ರಂದು ಅಧಿಕಾರ ಸ್ವೀಕರಿಸಿದರು.
ಚಿಕ್ಕಮಗಳೂರು ಹೋಮ್‌ಸ್ಟೇಗಳಿಗೆ ಅರಣ್ಯ ಇಲಾಖೆಯಿಂದ ನೋಟೀಸ್..!
ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಅಲ್ಲಿಂದ ವರ್ಗಾವಣೆಗೊಂಡು ಪುತ್ತೂರು ನಗರ ಪೊಲೀಸ್ ಠಾಣಾ ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದರು. ಇವರು ಈ ಹಿಂದೆ ಕಾರವಾರ, ಭಟ್ಕಳ, ಚಿಕ್ಕಮಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಸೆವೆ ಸಲ್ಲಿಸಿದ್ದರು.
BELTHANGADY
ಓವರ್‌ಟೆಕ್ ಭರದಲ್ಲಿ ಎರಡು ಕಾರು, ಲಾರಿ ಮಧ್ಯೆ ಅಪಘಾ*ತ; ಓರ್ವ ಸ್ಥಳದಲ್ಲೇ ಮೃ*ತ್ಯು
ಸಕಲೇಶಪುರ: ಎರಡು ಕಾರುಗಳು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್ ವ್ಯಾಪ್ತಿಯ ಕೆಂಪುಹೊಳೆ ಬಳಿ ಸಂಭವಿಸಿದೆ.
ಹಾಸನ ತಾಲೂಕಿನ ಕಟ್ಟಾಯ ಸಮೀಪದ ನಾಯಕರಹಳ್ಳಿ ಚಂದ್ರೇಗೌಡ(50 ವ) ಮೃತಪಟ್ಟವರು. ಕಾರಿನಲ್ಲಿದ್ದ ಶೈಲಾ ಹಾಗೂ ಕಿರಣ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಓವರ್‌ಟೇಕ್ ಭರದಲ್ಲಿ ಕಾರುಗಳ ಮಧ್ಯೆ ಭೀ*ಕರ ಅಫಘಾ*ತ; 6 ಮಂದಿ ದುರ್ಮರ*ಣ
ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರುಗಳು ಒಂದನ್ನೊಂದು ಓವರ್‌ಟೆಕ್ ಮಾಡುವ ಭರದಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸರಕು ತುಂಬಿದ ಲಾರಿಗೆ ಕೆಂಪುಹೊಳೆ ತಿರುವಿನಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿ ಪ್ರಪಾತಕ್ಕೆ ಬೀಳುವುದು ಕೂದಲೆಳೆಯಲ್ಲಿ ತಪ್ಪಿಹೋಗಿದೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣಾ ಪೊಲೀಶರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತದಿಂದ ಗಾಯಗೊಂಡವರನ್ನು ಸಕಲೇಶಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕತ್ಸೆಗಾಗಿ ಹಾಸನಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
- LATEST NEWS6 days ago
ಪೇಟಿಎಂ ಮೂಲಕ ಲಕ್ಷ ಹಣ ವರ್ಗಾವಣೆ..! ಆರೋಪಿಯ ಬಂಧನ
- LATEST NEWS1 day ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- DAKSHINA KANNADA5 days ago
ದ.ಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪಟ್ಟಿ ಪ್ರಕಟ; 21 ಶಿಕ್ಷಕರಿಗೆ ಪ್ರಶಸ್ತಿ
- FILM5 days ago
ಅಮ್ಮನಾದ ಮಿಲನಾ ನಾಗರಾಜ್; ಸಂತಸ ಹಂಚಿಕೊಂಡ ನಟ ಡಾರ್ಲಿಂಗ್ ಕೃಷ್ಣ