Friday, July 1, 2022

ಕೊಟ್ಟಾರ-ಕೋಡಿಕಲ್‌ ರಾಜಕಾಲುವೆ ಒತ್ತುವರಿ: ಕುಸಿಯುವ ಭೀತಿಯಲ್ಲಿ NH66

ಮಂಗಳೂರು: ಮಂಗಳೂರು ನಗರದ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ಅಪಾಯದ ಅಂಚಿನಲ್ಲಿದೆ. ನಗರದ ಕೊಟ್ಟಾರ ಚೌಕಿ-ಕೋಡಿಕಲ್‌ ಬಳಿಯ ರಾಷ್ಟ್ರೀಯ ಹೆದ್ದಾರಿಯು ರಾಜಕಾಲುವೆಗಳನ್ನು ಒತ್ತುವರಿಯಿಂದ ಅರ್ಧ ಹೆದ್ದಾರಿಯೇ ಮಾಯವಾಗಿದೆ.


ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೂಳೂರು, ಕೊಟ್ಟಾರ ಜಂಕ್ಷನ್‌, ಕೊಟ್ಟಾರ ಚೌಕಿ ಪರಿಸರದಲ್ಲಿನ ಜನತೆ, ಅಂಗಡಿ ಮಾಲಕರ ಸ್ಥಿತಿಯನ್ನಂತೂ ಹೇಳಿ ಪ್ರಯೋಜನವಿಲ್ಲ.

ಕೆಲವು ಸಮಯಗಳ ಹಿಂದೆ ಕೊಟ್ಟಾರದ ಬಳಿ ಇರುವ ಖಾಸಗಿ ಕಾಲೇಜಿನ ಮುಂಭಾಗದಲ್ಲಿ ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಾಮಗಾರಿಯನ್ನು ಮಾಡಲು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು.

ಆದರೆ ಈ ಕಾಮಗಾರಿಯ ಅವಾಂತರಗಳು ಮೊದಲ ಮಳೆಗೆ ಜಗಜ್ಜಾಹೀರವಾಗಿದೆ.


ಸುಮಾರು 32 ವರ್ಷಗಳಿಂದ ಇಲ್ಲಿ ನಾನು ಅಂಗಡಿಯನ್ನು ನಡೆಸುತ್ತಿದ್ದೇನೆ. ಕೊಟ್ಟಾರ ಚೌಕಿ ಜನತೆಗೆ ಮಳೆಗಾಲವೇ ಒಂದು ಶಾಪವಾಗಿದೆ. ಇಲ್ಲಿ ಚಿಕ್ಕಪುಟ್ಟ ಮಳೆಗೇ ನಮ್ಮ ಅಂಗಡಿ ಮುಳುಗಿ ಹೋಗುತ್ತಿದೆ.

ಮಳೆಗೆ 5 ಲಕ್ಷ ರೂಪಾಯಿಯಷ್ಟು ಸೊತ್ತುಗಳ ನಷ್ಟ ಉಂಟಾಗುತ್ತಿದೆ. ರಾಜಕಾಲುವೆ 21 ಫೀಟ್‌ ತೋಡು ಇರಬೇಕಾಗಿತ್ತು. ಆದರೆ ಈಗ 6 ಫೀಟ್ ಇದೆ. ಆದರೆ ಅದಕ್ಕೆ ಯಾರೋ ಸ್ಟೇ ತಂದಿದ್ದು, ಮತ್ತೆ ಅದನ್ನು ದುರಸ್ತಿ ಪಡಿಸಲು ಮುಂದಾಗಿಲ್ಲ.

ಸೀದಾ ಬರುವ ಕಾಲುವೆಯನ್ನು ಒಂದು ಸಂಸ್ಥೆಗೆ ಬೇಕಾಗಿ ತಿರುಗಿಸಿದ್ದು, ಅವೈಜ್ಞಾನಿಕ ಕಾಮಗಾರಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಇಲ್ಲಿನ ಅಂಗಡಿ ಮಾಲಕರು.


ಈ ಹಿಂದೆ ಸ್ಥಳೀಯರೇ ಹೋರಾಟ ಸಮಿತಿ ಮಾಡಿ ಪ್ರತಿಭಟನೆಯನ್ನೂ ಮಾಡಿದ್ದೇವೆ.

ಆದರೆ ಅದಕ್ಕೆ ಅಧಿಕಾರಿಗಳು ಏನೂ ಕ್ಯಾರೇ ಅನ್ನದ ಕಾರಣ ನಿನ್ನೆಯಿಂದ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಕುಸಿದು ಬಿದ್ದಿದೆ. ಕಲ್ಲು ಮಣ್ಣು ಎಲ್ಲಾ ಚರಂಡಿ ಪಾಲಾಗಿದೆ.

ಇಲ್ಲಿನ ಜನತೆಯ ಗೋಳನ್ನು ಕೇಳಲು ಯಾರೂ ಮುಂದಾಗುತ್ತಿಲ್ಲ ಎಂದು ಇಲ್ಲಿನ ನಿವಾಸಿ ಪುರುಷೋತ್ತಮ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸ್ಥಳೀಯ ಖಾಸಗಿ ಕಾಲೇಜಿನ ಆಡಳಿತ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಟೈಲರ್ ಕನ್ನಯ್ಯ ಲಾಲ್ ಕೊಲೆಗೈದವರಿಗೆ ಮರಣದಂಡನೆ ವಿಧಿಸಿ: ಶಾಸಕ ಕಾಮತ್‌ ಆಗ್ರಹ

ಮಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಬಡ ಟೈಲರ್ ಕನ್ನಯ್ಯ ಲಾಲ್ ಹತ್ಯೆಗೈದು ಪ್ರಧಾನಮಂತ್ರಿಗಳಿಗೆ ಬೆದರಿಕೆಯೊಡ್ಡಿದ ಹಂತಕರಿಗೆ ಮರಣ ದಂಡನೆ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಕುಕೃತ್ಯ ಎಸಗುವವರಿಗೆ ಎಚ್ಚರಿಕೆಯ ಸಂದೇಶ ನೀಡಬೇಕೆಂದು ಮಂಗಳೂರು...

“ಭರತ್‌ ಶೆಟ್ರೇ ನಿಮ್ಮ ಜನರಿಗೆ ನ್ಯಾಯ ಕೊಡಲಾಗದಿದ್ದರೆ ಮನೆಗೆ ಹೋಗಿ ಅಥವಾ ವೈದ್ಯ ವೃತ್ತಿ ಮುಂದುವರೆಸಿ”

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಶಾಸಕರೇ ನಿಮಗೆ ಮತ ನೀಡಿದ ಜನರಿಗೆ ನ್ಯಾಯ ಕೊಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಅಥವಾ ವೈದ್ಯ ವೃತ್ತಿ ಮುಂದುವರೆಸಿ ಎಂದು ಮಾಜಿ ಶಾಸಕ ಮೊಯ್ದೀನ್‌...

ಉಡುಪಿ: ಬಾವಿಗೆ ಹಾರಿ ಯುವತಿ ಜೀವಾಂತ್ಯ

ಉಡುಪಿ: ಬಾವಿಗೆ ಹಾರಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಕಾಪುವಿನ ಮಡಂಬು ಇನ್ನಂಜೆಯಲ್ಲಿ ನಡೆದಿದೆ.ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿ, ಗೋಪಾಲ ಶೆಟ್ಟಿಯವರ ಪುತ್ರಿ ಶರ್ಮಿಳಾ (22) ಸಾವನ್ನಪ್ಪಿದ ಯುವತಿ.ಶರ್ಮಿಳಾರವರು ಸುಮಾರು 8 ತಿಂಗಳಿನಿಂದ...