Thursday, September 29, 2022

ನಾಗರಹಾವಿನೊಂದಿಗೆ ಕಾದಾಡಿದ ಶ್ವಾನಗಳ ಗುಂಪು-ಉರಗದ ರಕ್ಷಣೆ

ಗದಗ: ಗದಗದ ನರಗುಂದದಲ್ಲಿ ನಾಗರ ಹಾವು ಹಾಗೂ ಶ್ವಾನ ಗುಂಪುಗಳ ನಡುವೆ ಭಯಂಕರ ಕಾಳಗ ನಡೆದಿದೆ‌.

ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಸಂಗಮೇಶ ಕೊಳ್ಳಿಯವರ ಜನಸಂಪರ್ಕ ಕಚೇರಿ ಆವರಣದಲ್ಲಿ ನಡುರಾತ್ರಿ ಬೃಹತ್ ನಾಗರ ಹಾವು ಎಂಟ್ರಿ ಕೊಟ್ಟಿತ್ತು.

ಹಾವು ಕಂಡ ಶ್ವಾನ ಟೀಮ್ ಕಾಳಗಕ್ಕೆ ಸಜ್ಜಾಗಿವೆ. ನಾಗರ ಹಾವನ್ನು ಮಿಸುಕಾಡಲು ಬಿಟ್ಟಿಲ್ಲ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಮಧ್ಯರಾತ್ರಿ ನಾಗರಹಾವು ಗೋಡೆಯ ಪಕ್ಕದಲ್ಲಿ ಸುಳಿದಾಡುತ್ತಿತ್ತು. ಕಂಪೌಂಡ್‌ನೊಳಗೆ ಇದ್ದ ನಾಯಿಗಳ ಗುಂಪು ಈ ನಾಗರ ಹಾವನ್ನು ಕಂಡು ಜೋರಾಗಿ ಬೊಗಳಲು ಶುರು ಮಾಡಿದವು.

ಅದಾಗಲೇ ಹೊರಹೋಗಲು ತಿಳಿಯದೇ ಕಂಗಾಲಾಗಿದ್ದ ನಾಗರ ಹಾವು ಈ ನಾಯಿಗಳ ಗುಂಪನ್ನೂ ಕಂಡು ಮತ್ತಷ್ಟು ದಿಗಿಲುಗೊಂಡು ಹೆಡೆಯೆತ್ತಿ ಪ್ರತಿರೋಧ ಒಡ್ಡುವುದಕ್ಕೆ ಮುಂದಾಗಿತ್ತು.


ಅರ್ಧ ಗಂಟೆಗೂ ಹೆಚ್ಚು ಕಾಲ ಶ್ವಾನಗಳ ಗುಂಪು ಹಾವನ್ನು ತಡೆದು ನಿಲ್ಲಿಸಿದವು.

ನಾಯಿಗಳ ಗಲಾಟೆಯಿಂದ ಎಚ್ಚೆತ್ತು ಅಕ್ಕಪಕ್ಕದವರು ಎದ್ದು ಬಂದು ಗಮನಿಸಿ, ವಿಷಯವನ್ನು ಉರಗ ಪ್ರಿಯ ಬುಡ್ನೆ ಸಾಬ್ರಿಗೆ ತಿಳಿಸಿದಾಗ, ಸ್ಥಳಕ್ಕೆ ಬಂದ ಬುಡ್ನೆಸಾಬ್, ನಾಗರಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟುಬಂದಿದ್ದಾರೆ.

LEAVE A REPLY

Please enter your comment!
Please enter your name here

Hot Topics

‘ಪುರಾಣ ಜ್ಞಾನ ನೀಡುವ ಅದ್ಭುತವಾದ ಕಲೆ ಯಕ್ಷಗಾನ’

ಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ 29 ನೆಯ ಸರಣಿ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ CA ಗಿರಿಧರ ಕಾಮತ್ ಯಕ್ಷಗಾನ ಕಲೆಯು ಪುರಾಣ ಜ್ಞಾನ ನೀಡುವಷ್ಟು ಬೇರೆ ಯಾವ ಮಾಧ್ಯಮವೂ...

ಮಂಗಳೂರು: ಗೆಳೆಯನ ಸಾವಿಗೆ ಕಾರಣವಾದ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ-ಯುವಕನ ಏಕಾಂಗಿ ಪ್ರತಿಭಟನೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದೊಳಗಿನ ರಸ್ತೆಗಳಲ್ಲಿರುವ ಯಮಗಾತ್ರದ ಗುಂಡಿಗಳ ಅವ್ಯವಸ್ಥೆಯಿಂದ ತನ್ನ ಗೆಳೆಯ ಮೃತಪಟ್ಟಿದ್ದು, ಈ ಹಿನ್ನಲೆ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ಏಕಾಂಗಿ ಪ್ರತಿಭಟನೆ...

PFI ಬ್ಯಾನ್‌ಗೆ ಕೇಂದ್ರ ಕೊಟ್ಟ ಕಾರಣಗಳೇನು ಗೊತ್ತಾ…?

ಹೊಸದಿಲ್ಲಿ: ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ ಹಾಗೂ ಅದರ ಸಹ ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿ ಇಂದು ಬೆಳಿಗ್ಗೆ ಆದೇಶ ಹೊರಡಿಸಿದ ಬೆನ್ನಲ್ಲೇ ಪಿಎಫ್‌ಐ ಬ್ಯಾನ್‌ಗೆ...