Connect with us

LATEST NEWS

Puttur: ತೆಂಗಿನಕಾಯಿ ಕೀಳುವಾಗ ಮರದಿಂದ ಬಿದ್ದು ಮಹಿಳೆ ಕೊನೆಯುಸಿರು..!

Published

on

ತೆಂಗಿನ ಮರ ಹತ್ತಿ ಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದ ಮಹಿಳೆಯೊಬ್ಬರು ತೆಂಗಿನ ಮರದಿಂದ ಕೆಳೆಗೆ ಬಿದ್ದು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಎಂಬ ಗ್ರಾಮದಲ್ಲಿ ನಡೆದಿದೆ.

ಪುತ್ತೂರು: ತೆಂಗಿನ ಮರ ಹತ್ತಿ ಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದ ಮಹಿಳೆಯೊಬ್ಬರು ತೆಂಗಿನ ಮರದಿಂದ ಕೆಳೆಗೆ ಬಿದ್ದು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಎಂಬ ಗ್ರಾಮದಲ್ಲಿ ನಡೆದಿದೆ.

ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದ  ಸುಚಿತ್ರ (30) ಎಂಬ ಮಹಿಳೆ ಮರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.

ಪ್ರಮೋದ್ ಬೊಳ್ಳಾಜೆಯವರ ಪತ್ನಿಯಾಗಿದ್ದ ಸುಚಿತ್ರರವರು ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕಾಯಕದಲ್ಲಿ ಖ್ಯಾತಿ ಪಡೆದಿದ್ದರು.

ಸುಚಿತ್ರ ರವರ ಈ ಕಾಯಕಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿತ್ತು.

ಮೃತರು ಪತಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ..

Click to comment

Leave a Reply

Your email address will not be published. Required fields are marked *

DAKSHINA KANNADA

ಮಂಗಳೂರು : ‘ಮಹೇಶ್’ ಬಸ್ ಮಾಲೀಕ ಆತ್ಮಹತ್ಯೆ..!

Published

on

ಮಂಗಳೂರು: ಮಂಗಳೂರಿನ ಖಾಸಗಿ ಬಸ್ ನ ಮಾಲೀಕರೊಬ್ಬರು ತಾವು ಇರುವ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತರನ್ನು ಮಹೇಶ್ ಬಸ್ ಮಾಲೀಕ  ಪ್ರಕಾಶ್ ಶೇಖ ಎಂದು ಗುರುತಿಸಲಾಗಿದೆ. ಅವರು ಕದ್ರಿ ಕಂಬಳ ಸಮೀಪ ಇರುವ ಅಪಾರ್ಟ್ ಮೆಂಟ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಹೇಶ್ ಹೆಸರಿನಲ್ಲಿ ಹಲವಾರು ಸಿಟಿ ಬಸ್ ಗಳು ದಿನನಿತ್ಯ ಸಂಚರಿಸುತ್ತಿದ್ದು, ಜನಮನ್ನಣೆ ಪಡೆದಿದೆ.

ಬಸ್ ಉದ್ಯಮದ ಬಗ್ಗೆ ಭಾರೀ ಪ್ರೀತಿ ಇಟ್ಟುಕೊಂಡಿದ್ದ ಪ್ರಕಾಶ್ ಯಾಕಾಗಿ ಸಾವಿಗೆ ಶರಣಾಗಿದ್ದಾರೆ ಎನ್ನುವುದು ಆಪ್ತ ಬಳಗಕ್ಕೆ ಶಾಕ್ ನೀಡಿದೆ.  ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಬೈಕ್‌ ಅಪಘಾತ: ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಲೆ ಹರಿದ ಲಾರಿ- ಮೂವರು ಸ್ಥಳದಲ್ಲೇ ಸಾವು..!

Published

on

ಶಿವಮೊಗ್ಗ: ಬೈಕ್ ಗಳ ಮದ್ಯೆ ನಡೆದ ಅಪಘಾತದಿಂದ ರಸ್ತೆಗೆ ಬಿದ್ದ ವ್ಯಕ್ತಿಗಳ ಮೇಳೆ ಲಾರಿ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದಲ್ಲಿ ನಡೆದಿದೆ.

ಹಳೆ ಜಂಬರಗಟ್ಟ ನಿವಾಸಿ ವಿಕಾಸ್ (18), ಯಶ್ವಂತ್ (17), ಹಾಗೂ ಶಶಾಂಕ್ (17) ಮೃತ ದುರ್ದೈವಿಗಳು.

ಎರಡು ಬೈಕ್ ಗಳ ಮಧ್ಯೆ ನಡೆದ ಅಪಘಾತದಲ್ಲಿ ಸವಾರರ ರಸ್ತೆ ಮೇಲೆ ಬಿದ್ದಿದ್ದಾರೆ.

ಇದೇ ವೇಳೆ ರಭಸವಾಗಿ ಬಂದ ಲಾರಿ ಆ ವ್ಯಕ್ತಿಗಳ ಮೇಲೆ ಹರಿದಿದೆ.

ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಒಬ್ಬನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

FILM

ಮೋದಿಗೆ ರಕ್ತದಲ್ಲಿ ಪತ್ರ ಬರೆದ ಚಿತ್ರ ನಟ ಪ್ರೇಮ್..!

Published

on

ಚಿಕ್ಕಮಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಯಬಿಡುವುದನ್ನು ಖಂಡಿಸಿದ ಕನ್ನಡ ಚಿತ್ರನಟ ಪ್ರೇಮ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ​ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಕಾವೇರಿ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದ್ದು, ಚಿತ್ರನಟ ನೆನಪಿರಲಿ ಪ್ರೇಮ್ ಸಾಥ್ ನೀಡಿದ್ದಾರೆ.

‘ಕಾವೇರಿ ನಮ್ಮದು’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕಾವೇರಿ ನೀರಿನಿಂದ ರಾಜ್ಯಕ್ಕೆ ನ್ಯಾಯ ನೀಡಬೇಕೆಂದು ಪತ್ರದ ಮೂಲಕ ಪ್ರೇಮ್ ಅವರು  ಮನವಿ ಮಾಡಿದ್ದಾರೆ.

ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Continue Reading

LATEST NEWS

Trending