Connect with us

LATEST NEWS

ಪುತ್ತೂರು: ಸಾಲ ಮರುಪಾವತಿ ಮಾಡದ ದರ್ಬೆ ಫೋರಮ್ ಹೈಟ್ಸ್-ಸೀಜ್ ಮಾಡಲು ಬಂದ SCDCC ಬ್ಯಾಂಕಿನ ಅಧಿಕಾರಿಗಳ ತಂಡ…!

Published

on

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪುತ್ತೂರು ಮುಖ್ಯ ಶಾಖೆಯಿಂದ ದರ್ಬೆ ಫೋರಮ್ ಹೈಟ್ಸ್, ಮೇಸರ್ಸ್‌ ಸಹದ್ ರೆಂಟಲ್ ಪ್ರೈ ಲಿ ಅವರು ಪಡೆದ ಸಾಲವನ್ನು ನಾಲ್ಕೈದು ವರ್ಷದಿಂದ ಮರುಪಾವತಿಸಿಲ್ಲ ಎಂದು ಕಾನೂನಾತ್ಮಕವಾಗಿ ಕಟ್ಟಡವನ್ನು ಸೀಸ್ ಮಾಡುವ ನಿಟ್ಟಿನಲ್ಲಿ ಬ್ಯಾಂಕ್ ನಿರ್ದೇಶಕರು ಮತ್ತು ಅಧಿಕಾರಿ ವರ್ಗದವರು ಸ್ಥಳಕ್ಕೆ ಆಗಮಿಸಿದ ಸಂದರ್ಭ ಕಟ್ಟಡಕ್ಕೆ ಸಂಬಂಧಿಸಿದವರು ಮಾತಿನ ಚಕಮಕಿ ನಡೆಸಿದ ಘಟನೆ ನಿನ್ನೆ ನಡೆದಿದೆ.


ಸಹದ್ ರೆಂಟಲ್ ಪ್ರೈವೇಟ್‌ ಲಿಮಿಟೆಡ್ ಅವರು ಸಹಕಾರಿ ಬ್ಯಾಂಕ್‍ ಪುತ್ತೂರು ಮುಖ್ಯಶಾಖೆಯಿಂದ ಪಡೆದ ಸಾಲವನ್ನು ಮರುಪಾವತಿಸಿಲ್ಲ ಎಂದು 2022ರ ಅ.28ರಂದು ಕಟ್ಟಡವನ್ನು ಬಹಿರಂಗವಾಗಿ ಹರಾಜು ಮಾಡಲಾಗಿತ್ತು.

ಅದರಲ್ಲಿ ಬಿಡ್ಡುದಾರರಾಗಿ ಮಂಗಳೂರಿನ ರಿಯಲ್ ಎಸ್ಟೇಟ್ ಡೆವೆಲಪರ್ಸ್ ಅವರು 13.5 ಕೋಟಿ ರೂಪಾಯಿಗಳಿಗೆ ಸ್ಥಿರಾಸ್ಥಿಯನ್ನು ಬಿಡ್ಡುದಾರರಾಗಿ ಖರೀದಿ ಮಾಡಿದ್ದರು.

ಇದನ್ನು 2022ರ ಡಿಸೆಂಬರ್ 22ರಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಮತ್ತು ವಸೂಲಾತಿ ಅಧಿಕಾರಿಗಳ ನ್ಯಾಯಾಲಯದಲ್ಲಿ ಮಾರಾಟ ಸ್ಥಿರೀಕರಣ ಆದೇಶ ನೀಡಲಾಗಿತ್ತು. ಡಿಸೆಂಬರ್ 26ರಂದು ಪುತ್ತೂರು ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಮಂಗಳೂರಿನ ರಿಯಲ್ ಎಸ್ಟೇಟ್ ಡೆವೆಲಪರ್ಸ್ ಅವರ ಹೆಸರಿಗೆ ನೋಂದಣಿ ಮಾಡಲಾಗಿತ್ತು.


ಆ ಬಳಿಕ ಕಟ್ಟಡವನ್ನು ಸ್ವಾಧೀನತೆ ಮಾಡುವ ನಿಟ್ಟನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನೊಂದಿಗೆ ಸ್ಥಳಕ್ಕೆ ಆಗಮಿಸಿದಾಗ ಕಟ್ಟಡಕ್ಕೆ ಸಂಬಂಧಿಸಿದವರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಇಡಿ ಕಟ್ಟಡಗಳಿಗೆ ನೋಟೀಸ್ ನೀಡಿ 7 ದಿನಗಳ ಬಿಟ್ಟು ಕೊಡುವಂತೆ ತಿಳಿಸಿದ್ದೇವೆ. ಈಗಾಗಲೇ ಬಂದ್ ಆಗಿರುವ ಕೋಣೆಗಳಿಗೆ ಬೀಗ ಹಾಕಿದ್ದೇವೆ ಎಂದು ಬ್ಯಾಂಕಿನ ಸಿಇಒ ಗೋಪಾಲಕೃಷ್ಣ ಭಟ್ ಹೇಳಿದ್ದಾರೆ.


ಈ ಸಂದರ್ಭ ಸೇಲ್ಸ್ ಆಫೀಸರ್ ಪ್ರಮೋದ್ ಕುಮಾರ್ ಜೈನ್, ಜೋವಲ್ ಪ್ರಕಾಶ್ ಡಿ’ಸೋಜ, ಹಿರಿಯ ನಿರೀಕ್ಷಕ ವಿಶ್ವನಾಥ ಶೆಟ್ಟಿ, ರಿಕವರಿ ಡೆವೆಲಪರ್ಸ್ ಆದರ್ಶ ವಿ ಪುತ್ತೂರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಪುತ್ತೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದರು.

 

LATEST NEWS

ಈ ಬೀಚ್‌ಗಳಿಗೆ ಬಟ್ಟೆ ಧರಿಸಿ ಹೋಗುವಂತಿಲ್ಲ…!

Published

on

ಮಂಗಳೂರು : ಸುಂದರವಾದ ಹಾಗೂ ಪ್ರವಾಸಿಗರನ್ನು ಸೆಳೆಯುವ ಬೀಚ್‌ಗಳು ಯಾವುದು ಅಂತ ಕೇಳಿದ್ರೆ ನಮ್ಮಲ್ಲಿ ನೆನಪಾಗೋದು ಗೋವಾದ ಬೀಚ್‌ಗಳು. ವಿದೇಶಿಯರು ಹೆಚ್ಚಾಗಿ ಬರೋ ಗೋವಾ , ಗೋಕರ್ಣ ಮೊದಲಾ ಬೀಚ್‌ ಹೋದವರಿಗೆ ಅಲ್ಲಿ ಬಿಕಿನಿಯಲ್ಲಿ ಕಾಣಿಸೋ ವಿದೇಶಿ ಮಹಿಳೆಯರು ಗಮನಸೆಳೆಯುತ್ತಾರೆ. ಆದ್ರೆ ಅಂತಹ ಬೀಚ್‌ಗಳ ಸಾಲಿನಲ್ಲಿ ಬರೋ ಕೆಲ ಬೀಚ್‌ಗಳಲ್ಲಿ ಮಹಿಳೆಯರು ಹಾಗೂ ಪುರುಷರು ಬಟ್ಟೆನೇ ಹಾಕದೆ ತಿರುಗಾಡ್ತಾರೆ. ಇಂತಹ ಬೀಚ್‌ಗಳು ಬತ್ತಲೆ ಬೀಚ್ ಅಂತಾನೇ ಫೇಮಸ್‌. ಅಂತಹ ಬೀಚ್‌ಗಳು ಯಾವುದು ಅನ್ನೋ ಡಿಟೈಲ್ ಇಲ್ಲಿದೆ.

ಸಂಪೂರ್ಣ ಬೆತ್ತಲಾಗಿ ಜನರು  ಸೆಲೆಬ್ರೇಟ್ ಮಾಡೋ ಸಾಕಷ್ಟು ಉತ್ಸವಗಳ ವಿದೇಶಗಳಲ್ಲಿ ಹಲವೆಡೆ ನಡೆಯುತ್ತದೆ. ಅದೇ ರೀತಿ ಬೀಚ್‌ಗಳಲ್ಲೂ ಬೆತ್ತಲಾಗಿ ತಿರುಗಾಡೋ ಸಂಸ್ಕೃತಿಯನ್ನು ವಿದೇಶದ ಹಲವು ದೇಶಗಳಲ್ಲಿ ನಾವು ಕಾಣಬಹುದಾಗಿದೆ. ಅಂತಹ ಬೀಚ್‌ಗಳ ಲಿಸ್ಟ್ ಇಲ್ಲಿದೆ.

1. ಲುಕಾಟ್ ಬೀಚ್:

ಇಲ್ಲಿ ಬಟ್ಟೆ ಧರಿಸದೇ ಪೂರ್ಣವಾಗಿ ಬೆತ್ತಲೆ ದೇಹದಿಂದ ಅಲ್ಲಿಯ ಪ್ರಕೃತಿಯನ್ನು ಜನರು ಆನಂದಿಸುತ್ತಾರೆ. ಈ  ಬೀಚ್ ಫ್ರಾನ್ಸ್‌ ದೇಶದಲ್ಲಿದ್ದು ಈ ಬೀಚ್‌ ಹೆಸರು ಲುಕಾಟ್ ಬೀಚ್. ಮೆಡಿಟರೇನಿಯನ್ ಸಮುದ್ರದ ಪಕ್ಕದಲ್ಲಿರುವ ಈ ಕಡಲತೀರದಲ್ಲಿ ನಗ್ನತೆಗೆ ಯಾವುದೇ ಮಿತಿ ಇಲ್ಲ. ಇಲ್ಲಿ ಯಾರು ಬೇಕಾದರೂ ಬೆತ್ತಲೆಯಾಗಿ ತಿರುಗಾಡಬಹುದು ಮತ್ತು ಯಾರೂ ಯಾರನ್ನೂ ಗಮನಿಸೋದಿಲ್ಲ ಅನ್ನೋದೇ ವಿಶೇಷ.

2. ವಲಾಲ್ಟಾ ಬೀಚ್:

ಕ್ರೊಯೇಷಿಯಾದ ವಲಾಲ್ಟಾ ತುಂಬಾ ಸ್ವಚ್ಛವಾದ ಕಡಲತೀರವಾಗಿದ್ದು,ಈ ಬೀಚ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಯುರೋಪಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಯುರೋಪ್ ಅಲ್ಲದೆ ಜಗತ್ತಿನ ವಿವಿಧ ದೇಶಗಳ ಪ್ರವಾಸಿಗರು ಇಲ್ಲಿಗೆ ಬಂದು ಬಟ್ಟೆ ಇಲ್ಲದೆ ಸಮುದ್ರದಲ್ಲಿ ಮೋಜು ಮಸ್ತಿ ಮಾಡುತ್ತಾರೆ.

3. ಬೆಲ್ಲೆವ್ಯೂ ಬೀಚ್:

ಡೆನ್ಮಾರ್ಕ್‌ನ ಬೆಲ್ಲೆವ್ಯೂ ಬೀಚ್ ಪ್ರಪಂಚದ ಪ್ರಸಿದ್ಧ ಬೆತ್ತಲೆ ಬೀಚ್‌ಗಳಲ್ಲಿ ಒಂದಾಗಿದೆ. ಇಲ್ಲಿ ಯಾರೂ ಹೇಗೆ ಬೇಕಾದ್ರೂ ಇರಬಹುದು. ಆದರೆ ಅನ್ಯರಿಗೆ ಯಾವುದೇ ತೊಂದರೆ ಮಾಡುವಂತಿಲ್ಲ. ಇಲ್ಲಿಯ ಕಾನೂನುಗಳನ್ನು ಉಲ್ಲಂಘನೆ ಮಾಡಿದ್ರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

4. ಕಾರ್ನಿಗ್ಲಿಯಾ ಬೀಚ್:

ಇಟಲಿಯು ಕಾರ್ನಿಗ್ಲಿಯಾ ಬೀಚ್ ಕಡಲತೀರಗಳಿಗೆ ಪ್ರಸಿದ್ಧಿಯಾಗಿದೆ. ಈ ಕಡಲತೀರವನ್ನು ತಲುಪಲು ಸುರಂಗದ ಮೂಲಕ ಹೋಗಬೇಕು. ಇಲ್ಲಿ ಅನೇಕ ಮಹಿಳೆಯರು ಟಾಪ್ ಲೆಸ್ ಆಗಿ ಸ್ನಾನ ಮಾಡುವುದನ್ನು ಕಾಣಬಹುದು.

5. ಕೇಪ್ ಡಿ ಎಗ್ಡೆ ಬೀಚ್:

ಫ್ರಾನ್ಸ್‌ನ ಕ್ಯಾಪ್ ಡಿ’ಆಗ್ಡೆ ಬೀಚ್‌ಗೆ ಬಟ್ಟೆ ಇಲ್ಲದೆ ಹೋಗಬೇಕು. ಬೆತ್ತಲೆಯಾಗಿ ಹೋಗಿ ಅಲ್ಲಿ ಸ್ನಾನ ಮಾಡಬಹುದು. ಸ್ನಾನ ಮಾಡುವಾಗ ನಿಮ್ಮ ಮೈಮೇಲೆ ಬಟ್ಟೆ ಇದ್ದರೆ ಬೀಚ್ ಗಾರ್ಡ್ ಗಳು ನಿಮ್ಮನ್ನು ತಡೆಯಬಹುದು. ಆದ್ದರಿಂದ ನೀವು ವಿವಸ್ತ್ರಗೊಳ್ಳಬೇಕು.

Continue Reading

LATEST NEWS

ಈ ಶ್ರೀನಿವಾಸನ ವಿಗ್ರಹಕ್ಕೆ ಸೂರ್ಯನ ಕಿರಣಗಳು ಬೀಳುವ ಹಾಗಿಲ್ಲ..!

Published

on

ಆಂಧ್ರಪ್ರದೇಶ: ತಿರುಪತಿ ತಿಮ್ಮಪ್ಪನಿಗೆ ಇರೋವಷ್ಟು ಭಕ್ತರು ಬಹುಶಃ ಯಾವ ದೇವರಿಗೂ ಇಲ್ಲ ಅಂತಾನೇ ಹೇಳಬಹುದು . ಇದೇ ಕಾರಣದಿಂದ ದೇಶದ ಅತ್ಯಂತ ಶ್ರೀಮಂತ ದೇವಸ್ಥಾನವಾಗಿ ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಆದ್ರೆ ಈ ದೇವಸ್ಥಾನದಲ್ಲಿರೋ ಅದೊಂದು ರಹಸ್ಯ ಮಾತ್ರ ದೇವಸ್ಥಾನಕ್ಕೆ ಬೇಟಿ ನೀಡೋ ಬಹುತೇಕ ಭಕ್ತರಿಗೆ ಗೊತ್ತಿಲ್ಲ. ಸಾಮಾನ್ಯವಾಗಿ ಭಕ್ತರು ಕಾಣುವ ಶ್ರೀನಿವಾಸ ಮಂದಸ್ಮಿತನಾಗಿದ್ದರೆ, ಗರ್ಭಗುಡಿಯಲ್ಲಿರೋ ಶ್ರೀನಿವಾಸ ಕೋಪಿಷ್ಠನಾಗಿದ್ದು, ಹುಬ್ಬುಗಳನ್ನು ಗಂಟು ಹಾಕಿಕೊಂಡಿದ್ದಾನೆ. ವರ್ಷಕ್ಕೊಂದು ಬಾರಿ ಮಾತ್ರ ಹೊರ ಬರುವ ಈತನ ಮೇಲೆ ಸೂರ್ಯ ರಶ್ಮಿ ಬಿದ್ರೆ ಜಗತ್ತಿಗೆ ಅಪಾಯ ಇದೆ ಅಂತಾರೆ.

ತಿರುಪತಿ ದೇವಸ್ಥಾನದ ಗರ್ಭಗುಡಿಯಲ್ಲಿರುವ ಈ ಉತ್ಸವ ಮೂರ್ತಿಯನ್ನು ವರ್ಷಕ್ಕೊಂದು ಬಾರಿ ಮಾತ್ರ ಆಚೆ ತರಲಾಗುತ್ತದೆ. ಸೂರ್ಯೋದಯಕ್ಕೂ ಮೊದಲೇ ಆಚೆ ತಂದು ಹಲವು ದೃವ್ಯಗಳಿಂದ ಶುದ್ದೀಕರಣ ಮಾಡಲಾಗುತ್ತದೆ. ಹಾಲು ಮೊಸರು ತುಪ್ಪ ಅರಶಿನ ಮೊದಲಾದವುಗಳಿಂದ ದೇವರ ವಿಗ್ರಹವನ್ನು ಶುದ್ಧೀಕರಣ ಮಾಡಲಾಗುತ್ತದೆ. ಕೈಕಿಷ ದ್ವಾದಶಿ ದಿನದಂದು ಈ ಪ್ರಕ್ರಿಯೆ ನಡೆಯುವುದು ವಾಡಿಕೆಯಾಗಿದ್ದು, ಸೂರ್ಯನ ಕಿರಣ ಭೂಮಿಯನ್ನು ತಲುಪುವ ಮೊದಲು ಎಲ್ಲಾ ವಿದಿವಿಧಾನಗಳು ಪೂರ್ಣಗೊಂಡು ಮೂರ್ತಿಗಳು ಮತ್ತೆ ಗರ್ಭಗುಡಿ ಸೇರುತ್ತದೆ. ವಿಶೇಷ ಅಂದ್ರೆ ಕೇವಲ ಶ್ರೀನಿವಾಸ ಮಾತ್ರವಲ್ಲದೆ ಆತನ ಅಕ್ಕಪಕ್ಕದಲ್ಲಿರುವ ಶ್ರೀದೇವಿ ಹಾಗೂ ಭೂ ದೇವಿಯ ಮುಖಭಾವ ಕೂಡಾ ಶ್ರೀನಿವಾಸನಂತೆ ಮುಖಭಾವದಂತೆ ಕೋಪದಲ್ಲಿದೆ.

ತಿರುಪತಿ ತಿಮ್ಮಪ್ಪನ ಗರ್ಭಗುಡಿಯಲ್ಲಿ ಇರುವ ಶ್ರೀನಿವಾಸನ ಈ ಉತ್ಸವ ಮೂರ್ತಿಯ ಹೆಸರು ವೆಂಟತುರೈವಾರ್. ತಿರುಪತಿಯಲ್ಲಿ ಭಕ್ತರು ಕಾಣವು ಶ್ರೀನಿವಾಸ ವಿಗ್ರಹ ಹೊರತು ಪಡಿಸಿದ್ರೆ ಇಲ್ಲಿರೋ ಅತ್ಯಂತ ಪುರಾತನ ವಿಗ್ರಹ ಇದಾಗಿದೆ. ಸರಿ ಸುಮಾರು 14 ನೇ ಶತಮಾನದ ವರೆಗೂ ಬ್ರಹ್ಮೋತ್ಸವದಲ್ಲಿ ಇದೇ ಮೂರ್ತಿಯನ್ನು ಹೊತ್ತೊಯ್ಯಲಾಗುತ್ತಿತ್ತು. ಆದ್ರೆ ಆ ಕಾಲದಲ್ಲಿ ನಡೆದಿದ್ದ ಒಂದು ಘಟನೆಯಿಂದ ಈ ವಿಗ್ರಹವನ್ನು ಬ್ರಹ್ಮೋತ್ಸವದಲ್ಲಿ ತರುವುದನ್ನು ನಿಲ್ಲಿಸಲಾಯಿತು.

14 ನೇ ಶತಮಾನದಲ್ಲಿ ನಡೆದಿದ್ದ ಬ್ರಹ್ಮೋತ್ಸವದಲ್ಲಿ ಬೆಂಕಿ ಆಕಸ್ಮಿಕ ನಡೆದಿದ್ದು, ಹಲವಾರು ಮನೆಗಳು ಸುಟ್ಟು ಬಸ್ಮವಾಗಿತ್ತಂತೆ. ಈ ವೇಳೆ ಭಕ್ತನೊಬ್ಬನಿಗೆ ಅಶರೀರವಾಣಿಯೊಂದು ಕೇಳಿಸಿದ್ದು, ಅದು ಶ್ರೀನಿವಾಸ ದೇವರದ್ದೇ ಎನ್ನಲಾಗಿದೆ. ಆ ಅಶರೀರವಾಣಿಯಲ್ಲಿ ಕೋಪದಲ್ಲಿ  ಉಗ್ರ ಸ್ವರೂಪಿಯಾಗಿ ಕಾಣಿಸುವ ಈ ಶ್ರೀನಿವಾಸ ವಿಗ್ರಹವನ್ನು ಬೆಳಕಿನ ಆಚೆಗೆ ತರದಂತೆ ಎಚ್ಚರಿಕೆ ನೀಡಲಾಗಿತ್ತಂತೆ. ಇನ್ನು ಮುಂದೆ ಸೂರ್ಯನ ಬೆಳಕು ಈ ವಿಗ್ರಹದ ಮೇಲೆ ಬಿದ್ದರೆ ಇಡೀ ಪ್ರಪಂಚಕ್ಕೆ ಬೆಂಕಿ ಹತ್ತಿಕೊಳ್ಳಬಹುದು ಎಂದು ಎಚ್ಚರಿಕೆ ನೀಡಲಾಗಿತ್ತಂತೆ. ಅಂದಿನಿಂದ ಈ ಉಗ್ರ ಸ್ವರೂಪಿ ಶ್ರೀನಿವಾಸನನ್ನು ಸೂರ್ಯನ ಬೆಳಕಿಗೆ ಆಚೆ ತರೋದು ನಿಲ್ಲಿಸಲಾಗಿದೆ. ವರ್ಷಕ್ಕೊಂದು ಬಾರಿ ಶುಚಿ ಮಾಡಲು ಹೊರತಂದ್ರೂ ಸೂರ್ಯೋದಯದ ಮೊದಲೇ ಶುಚಿಗೊಳಿಸಿ ಗರ್ಭಗುಡಿ ಸೇರಿಸಲಾಗುತ್ತದೆ.

Continue Reading

FILM

ನಾಳೆ ದ್ವಾರಕೀಶ್ ಅಂತ್ಯಕ್ರಿಯೆ.. ಸ್ಥಳ.. ಸಮಯ.. ಇಲ್ಲಿದೆ ಮಾಹಿತಿ

Published

on

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ​​ಇಂದು ಕತ್ತಲು ಆವರಿಸಿದೆ. ಹಿರಿಯ ನಟ ದ್ವಾರಕೀಶ್ ಇಂದು ಸಾವನ್ನಪ್ಪಿದ್ದಾರೆ. ಅನೇಕ ನಟರು ಈ ಹಿರಿಯ ನಟನ ಸಾವಿಗೆ ಕಂಬನಿ ಮಿಡಿದಿದ್ದಾರೆ.

81ನೇ ವಯಸ್ಸಿನಲ್ಲಿ ನಟ ದ್ವಾರಕೀಶ್​ ಸಾವನ್ನಪ್ಪಿದ್ದಾರೆ. ಪತ್ನಿ ಅಂಬುಜ ಸಾವನ್ನಪ್ಪಿದ ದಿನ, ತಿಂಗಳಂದೇ ದ್ವಾರಕೀಶ್​ ಕೊನೆಯುಸಿರೆಳೆದಿದ್ದಾರೆ. ಮಗನ ಬಳಿ ಕೊಂಚ ಹೊತ್ತು ಮಗಲುತ್ತೇನೆಂದು ಹೇಳಿದವರು ಇಹಲೋಕ ತ್ಯಜಿಸಿದ್ದಾರೆ.

ದ್ವಾರಕೀಶ್​ ಪಾರ್ಥಿವ ಶರೀರ ಕಾಣಲು ಅನೇಕ ಮಂದಿ ಅವರ ಮನೆಯತ್ತ ತೆರಳುತ್ತಿದ್ದಾರೆ. ಹಿರಿಯ ನಟರು ಕೂಡ ದ್ವಾರಕೀಶ್​​ ಪಾರ್ಥಿವ ಶರೀರದ ದರ್ಶನ ಪಡೆಯುತ್ತಿದ್ದಾರೆ. ಹಿರಿಯ ನಟನನ್ನು ಕಾಣಲು ಸಾರ್ವಜನಿಕರಿಗೂ ಅವಕಾಶ ಮಾಡಲಾಗಿದ್ದು, ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ದರ್ಶನ ಪಡೆಯಬಹುದಾಗಿದೆ.

ನಾಳೆ ಬೆಳಗ್ಗೆ 6 ಕ್ಕೆ ಮನೆಯಿಂದ ಹೊರಟು 7 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಲಾವಿದರು ಹಾಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತೆ. 11 ಗಂಟೆಯವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 11 ಗಂಟೆಗೆ ಚಾಮರಾಜಪೇಟೆಯ ಟಿಆರ್ ಮೀಲ್ ನತ್ತ ಪಾರ್ಥಿವ ಶರೀರ ರವಾನಿಸಲಾಗುತ್ತದೆ. ನಂತರ ಅವರ ಅಂತ್ಯಕ್ರಿಯೆ ನೆರವೇರಲಿದೆ. 1 ಗಂಟೆಯ ನಂತರ ಅಂತ್ಯಕ್ರಿಯೆಗೆ ನಿರ್ಧಾರ ಮಾಡಲಾಗುತ್ತದೆ.

Continue Reading

LATEST NEWS

Trending