Connect with us

DAKSHINA KANNADA

puttur : ಉಪ್ಪಿನಂಗಡಿಯಲ್ಲಿ ಬೈಕುಗಳ ಮುಖಾಮುಖಿ ಢಿಕ್ಕಿ – ಓರ್ವ ಸ್ಥಳದಲ್ಲೇ ಮೃತ್ಯು..!

Published

on

ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಕ್ಕೆಪದವಿನಲ್ಲಿ ನಿನ್ನೆ ಸೋಮವಾರ ಸಂಜೆ ನಡೆದಿದೆ.

ಪುತ್ತೂರು: ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಕ್ಕೆಪದವಿನಲ್ಲಿ ನಿನ್ನೆ ಸೋಮವಾರ ಸಂಜೆ ನಡೆದಿದೆ.

ಮೃತ ಯುವಕನನ್ನು ಮಡಂತ್ಯಾರು ಸಮೀಪದ ಬಂಗೇರುಕಟ್ಟೆ ನಿವಾಸಿ ಫಯಾಝ್ (22) ಎಂದು ಗುರುತಿಸಲಾಗಿದೆ.

ಫಯಾಝ್ ಕೆಲಸಕ್ಕೆ ಹೋಗಿ ಮನೆಗೆ ಹಿಂತಿರುಗುತ್ತಿದ್ದಾಗ ಈ  ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ಫಯಾಝ್ ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

DAKSHINA KANNADA

ತುಳು ಸಿನೆಮಾಗೆ ‘ಜೈ’ ಅಂದ ಸುನೀಲ್ ಶೆಟ್ಟಿ; ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ

Published

on

ಮಂಗಳೂರು : ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಎಂಬ ತುಳು ಸಿನೆಮಾದಲ್ಲಿ ನಟಿಸಲು ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಇಂದು ಮಂಗಳೂರಿಗೆ ಆಗಮಿಸಿದ್ದಾರೆ. ಸುನಿಲ್ ಶೆಟ್ಟಿ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ರೂಪೇಶ್ ಶೆಟ್ಟಿ ಅವರು ಹಾರ್ದಿಕವಾಗಿ ಸ್ವಾಗತಿಸಿದರು.

‘ಜೈ’ ಸಿನೆಮಾ ಬಿಗ್ ಬಜೆಟ್ ಸಿನೆಮಾ ಆಗಿದ್ದು, ಕರಾವಳಿಯ ಬಹುತೇಕ ಕಡೆಗಳಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಜಿಲ್ಲೆಯ ಹಲವು ಖ್ಯಾತ ನಟರು ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಜನವರಿ 15 ರಿಂದ ನಡೆಯಲಿರುವ ಸಿನೆಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಸುನಿಲ್‌ ಶೆಟ್ಟಿ ಅವರು ಭಾಗಿಯಾಗಲಿದ್ದಾರೆ. ಗಿರಿಗಿಟ್ , ಗಮ್ಜಾಲ್, ಸರ್ಕಸ್ ಚಿತ್ರದ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರ ಬಿಗ್ ಬಜೆಟ್ ಸಿನೆಮಾ ‘ಜೈ’. ಆರ್‌ ಎಸ್ ಸಿನೆಮಾಸ್ ಶೂಲಿನ್ ಫಿಲಮ್ಸ್ , ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಸಿನೆಮಾ ನಿರ್ಮಾಣವಾಗುತ್ತಿದೆ.

ರೂಪೇಶ್ ಶೆಟ್ಟಿ ಸಿನೆಮಾಗೆ ಅ್ಯಕ್ಷನ್ ಕಟ್‌ ಹೇಳಿದ್ದು, ಕತೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ. ಕ್ಯಾಮೆರಾದಲ್ಲಿ ವಿನುತ್ ಕೆ. ಸಂಗೀತ ಲೋಯ್ ವೆಲೆಂಟಿನ್ ಸಲ್ಡಾನ್ಹಾ ಹಾಗೂ ಸಂಕಲನ ರಾಹುಲ್ ವಸಿಷ್ಠ ಅವರದ್ದಾಗಿದೆ. ಅನಿಲ್ ಶೆಟ್ಟಿ , ಸುಧಾಕರ ಶೆಟ್ಟಿ ಮುಗ್ರೋಡಿ ಮಂಜುನಾಥ ಅತ್ತಾವರ ಅವರು ಚಿತ್ರ ನಿರ್ಮಾಪಕರಾಗಿದ್ದಾರೆ. ಸುನಿಲ್ ಶೆಟ್ಟಿ ಮೊದಲ ಬಾರಿಗೆ ತುಳು ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತುಳು ನಮ್ಮ ತುಳುನಾಡಿನ ಭಾಷೆ. ತುಳು ಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡ ಬೇಕೆಂಬುದು ಬಹು ಕಾಲದ ಕನಸು. ಉತ್ತಮ ವಿಷಯದ ತುಳು ಚಿತ್ರ ಬಂದರೆ ನಟಿಸ ಬೇಕೆಂದು 2- 3 ವರ್ಷಗಳ ಹಿಂದೆ ಇಂಗಿತ ವ್ಯಕ್ತ ಪಡಿಸಿದ್ದೆ. ಇದೀಗ ಒಂದು ಅವಕಾಶ ಸಿಕ್ಕಿದೆ. ಇದು ನಾನು ಅಭಿನಯಿಸುವ ಮೊದಲ ತುಳು ಚಿತ್ರ ಎಂದರು. ತುಳುವಿನಲ್ಲಿ ಇತ್ತೀಚೆಗೆ ಉತ್ತಮ ಸಿನೆಮಾಗಳು ಬರುತ್ತಿವೆ. ಇತರ ಎಲ್ಲಾ ಭಾಷೆಗಳ ಸಿನೆಮಾಗಳಿಗೆ ಸಮಾನವಾದ ಚಿತ್ರಗಳು ತುಳುವಿನಲ್ಲಿ ಬರುತ್ತಿವೆ. ಇದು ತುಂಬಾ ಖುಷಿಯ ವಿಚಾರ ಎಂದರು.

Continue Reading

DAKSHINA KANNADA

ಟ್ಯಾಂಕರ್‌ಗಳಿಂದ ಡಿಸೇಲ್ ಕಳ್ಳತನ; ಆರೋಪಿಗಳು ಅರೆಸ್ಟ್

Published

on

ಸುರತ್ಕಲ್ : ನಿಲ್ಲಿಸಿರುವ ಟ್ಯಾಂಕರ್‌ಗಳಿಂದ ಟ್ಯಾಂಕರ್‌ಯಾರ್ಡ್‌ನಲ್ಲಿ ಡೀಸೆಲ್ ಕಳ್ಳತನ ಮಾಡುವ ಗ್ಯಾಂಗ್ ಒಂದನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕುಳಾಯಿಗುಡ್ಡೆ ನಿವಾಸಿ ಸಂತೋಷ್(42), ಕಾಟಿಪಳ್ಳ ನಿವಾಸಿ ಐರನ್ ರಿತೇಶ್ ಮಿನೇಜ್(36), ಬೆಳ್ತಂಗಡಿ ನಿವಾಸಿ ನಾರಾಯಣ್(23), ಉಡುಪಿಯ ಹೆಜಮಾಡಿ ನಿವಾಸಿ ರವಿ ಜನಾರ್ದನ ಪುತ್ರನ್ (59) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ನಾಲ್ಕು ಮಕ್ಕಳಿರಲಿ, 1 ಲಕ್ಷ ರೂ. ಪಡೆಯಿರಿ !

ಈ ಗ್ಯಾಂಗ್ ಮಂಗಳೂರಿನ ಹೊರವಲಯದ ಬಾಳ ಗ್ರಾಮದ ಬಳಿ ಇರುವ ಟ್ಯಾಂಕರ್‌ಯಾರ್ಡ್‌ನಲ್ಲಿ ನಿಲ್ಲಿಸಿರುವ ಟ್ಯಾಂಕರ್‌ಗಳಿಂದ ಡೀಸೆಲ್ ಕಳವು ಮಾಡುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಡೀಸೆಲ್ ಕಳವುಗೈದು ದಾಸ್ತಾನು ಇರಿಸಿದ್ದ ಶೆಡ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ದಾಸ್ತಾನು ಇರಿಸಿಟ್ಟಿದ್ದ 1685 ಲೀಟರ್ ಡಿಸೇಲ್ ಮತ್ತು 20 ಲೀಟರ್ ಪೆಟ್ರೋಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Continue Reading

DAKSHINA KANNADA

ಮೂಡುಬಿದಿರೆ : ಗೂಡಂಗಡಿ ಕಳವು ಪ್ರಕರಣ ಭೇದಿಸಿದ ಪೊಲೀಸರು; ಮೂವರು ಅರೆಸ್ಟ್

Published

on

ಮೂಡುಬಿದಿರೆ : ಮೂಡುಬಿದಿರೆ ಹೊರವಲಯದ ಪುತ್ತಿಗೆ ಗ್ರಾಮದ ಮೂಲ್ಕಿ ಕ್ರಾಸ್‌ ಬಳಿ ಜನವರಿ 9 ರಂದು ರಾತ್ರಿ ಜಯಶ್ರೀ ಸ್ಟೋರ್ ಎಂಬ ಗೂಡಂಗಡಿಯಿಂದ ನಗದು ಮತ್ತು ಸೊತ್ತುಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೂಡುಬಿದಿರೆ ತಾಲೂಕು ನಿಡ್ಡೋಡಿ ನೀರುಡೆಯ ರೋಷನ್‌ ಕ್ವಾಡ್ರಸ್‌ (37), ಕೊಂಪದವು ನೆಲ್ಲಿತೀರ್ಥದ ನಿಶಾಂಕ್‌ ಪೂಜಾರಿ (18) ಮತ್ತು ನೀರುಡೆ 5 ಸೆಂಟ್ಸ್‌ನ ರೋಹಿತ್‌ ಮಸ್ಕರೇನ್ಹಸ್‌ (21) ಬಂಧಿತರು.

ಬಂಧಿತರಿಂದ ಕೃ*ತ್ಯಕ್ಕೆ ಬಳಸಿದ ಕಾರು, ಸ್ಕೂಟರ್‌ ಮತ್ತು 5,000 ರೂ. ನಗದು ಹಣ ಸಹಿತ ಒಟ್ಟು 3.55 ಲಕ್ಷ ರೂಪಾಯಿ ಮೌಲ್ತದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪುತ್ತಿಗೆಯ ಗೂಡಂಗಡಿಯಿಂದ ಛಾವಣಿ ಶೀಟ್‌ಗಳನ್ನು ತೆರೆದು 20,000 ರೂ. ನಗದು, 48,000 ರೂ. ಮೌಲ್ಯದ ಸಿಗರೇಟು, ಪಾನೀಯ, ತಿಂಡಿತಿನಿಸು ಮೊದಲಾದ ಸೊತ್ತುಗಳನ್ನು ಕಳವು ಮಾಡಲಾಗಿತ್ತು.

ಇದನ್ನೂ ಓದಿ : ನಾಲ್ಕು ಮಕ್ಕಳಿರಲಿ, 1 ಲಕ್ಷ ರೂ. ಪಡೆಯಿರಿ !

ಈ ಆರೋಪಿಗಳು ಈ ಹಿಂದೆ ಮೂಲ್ಕಿ, ಬಜಪೆ, ಕಾರ್ಕಳ ಮತ್ತು ವೇಣೂರು ಠಾಣೆಗಳ ವ್ಯಾಪ್ತಿಯಲ್ಲಿ ಮೂರು ವರ್ಷಗಳಿಂದ 25ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗೂಡಂಗಡಿಗಳಲ್ಲಿ ಕಳವು ಮಾಡಿರುವ ಪ್ರಕರಣಗಳಲ್ಲಿ ಪಾಲ್ಗೊಂಡವರಾಗಿದ್ದಾರೆ. ಮೂಡುಬಿದಿರೆ ಸರ್ಕಲ್‌ ಪೊಲೀಸ್‌ ಇನ್ಸ್ ಪೆಕ್ಟರ್‌ ಸಂದೇಶ್‌ ಪಿ.ಜಿ. ನಡೆಸಿದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ನವೀನ್‌, ಎಎಸ್‌ಐ ರಾಜೇಶ್‌, ಅಪರಾಧ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.

Continue Reading

LATEST NEWS

Trending

Exit mobile version