Wednesday, May 31, 2023

puttur : ಉಪ್ಪಿನಂಗಡಿಯಲ್ಲಿ ಬೈಕುಗಳ ಮುಖಾಮುಖಿ ಢಿಕ್ಕಿ – ಓರ್ವ ಸ್ಥಳದಲ್ಲೇ ಮೃತ್ಯು..!

ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಕ್ಕೆಪದವಿನಲ್ಲಿ ನಿನ್ನೆ ಸೋಮವಾರ ಸಂಜೆ ನಡೆದಿದೆ.

ಪುತ್ತೂರು: ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಕಕ್ಕೆಪದವಿನಲ್ಲಿ ನಿನ್ನೆ ಸೋಮವಾರ ಸಂಜೆ ನಡೆದಿದೆ.

ಮೃತ ಯುವಕನನ್ನು ಮಡಂತ್ಯಾರು ಸಮೀಪದ ಬಂಗೇರುಕಟ್ಟೆ ನಿವಾಸಿ ಫಯಾಝ್ (22) ಎಂದು ಗುರುತಿಸಲಾಗಿದೆ.

ಫಯಾಝ್ ಕೆಲಸಕ್ಕೆ ಹೋಗಿ ಮನೆಗೆ ಹಿಂತಿರುಗುತ್ತಿದ್ದಾಗ ಈ  ಅಪಘಾತ ಸಂಭವಿಸಿದೆ.

ಅಪಘಾತದ ರಭಸಕ್ಕೆ ಫಯಾಝ್ ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics