Connect with us

LATEST NEWS

ಪುತ್ತೂರು: ಹಿಂದೂ ಭಜಕರ ವಿರುದ್ಧ ಪೋಸ್ಟ್ ಮಾಡಿ ತಗ್ಲಾಕೊಂಡ ಸರ್ಕಾರಿ ಅಧಿಕಾರಿ

Published

on

ಪುತ್ತೂರು: ಹಿಂದೂ ಭಜಕರ ವಿರುದ್ಧ ಅವಹೇಳನಕಾರಿ ಬರಹ ಇದೀಗ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಯ ಅಮಾನತಿಗೆ ಹಿಂದೂ ಸಂಘಟನೆಗಳ ಪಟ್ಟು ಹಿಡಿದಿವೆ. ನಾಳೆ ತನಕ ಅಧಿಕಾರಿ ಹಾಗು ಜನಪ್ರತಿನಿಧಿಗಳಿಗೆ ಗಡುವು ನೀಡಲಾಗಿದೆ. ತಪ್ಪಿದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐದು ಪೋಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಭಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ್ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ ಭಜಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಪ್ರವಾದಿ ಬಗ್ಗೆ ಪೋಸ್ಟ್ ಮಾಡಿದ ಹಿಂದೂ ಯುವಕನನ್ನು ಪೋಲೀಸರು ತಕ್ಷಣ ಬಂಧಿಸಿದ್ದಾರೆ.

ಆದರೆ ಹಿಂದೂಗಳ ಆಚರಣೆಯ ಬಗ್ಗೆ ಬರೆದ ಅಧಿಕಾರಿಯ ಮೇಲೆ ಕ್ರಮಕ್ಕೆ ಮೀನಾಮೇಷ ಎಣಿಸಲಾಗುತ್ತಿದೆ. ಅಲ್ಲದೆ ಹಿಂದೂ ಭಜಕರ ಅವಹೇಳನಕಾರಿಯಾಗಿ ಬರೆದ ಅಧಿಕಾರಿಯನ್ನು ಸಮರ್ಥಿಸುವ ಕೆಲಸ ಆಗುತ್ತಿದೆ. ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್, ಯು.ಟಿ.ಖಾದರ್ ಅಧಿವೇಶನದಲ್ಲಿ ಅಧಿಕಾರಿಯ ಪರ ಮಾತನಾಡುತ್ತಾರೆ.


ಹಿಂದೂಗಳ ಆಚರಣೆ ಬಗ್ಗೆ ಬರೆದವನ ಪರ ವಹಿಸುವ ಈ ಮುಖಂಡರು ಹಿಂದೂ ಯುವಕನ ಪರ ಯಾಕೆ ಮಾತಾಡಿಲ್ಲ? ಎಂದವರು ವಾಗ್ದಾಳಿ ನಡೆಸಿದರು.

ಅಧಿಕಾರಿಯನ್ನು ಅಮಾನತು ಮಾಡದೇ ಹೋದಲ್ಲಿ ಪ್ರತಿಭಟನೆಯನ್ನು ಹಂತ ಹಂತವಾಗಿ ಮಾಡಲಾಗುವುದು.

10 ಸಾವಿರ ಭಜಕರನ್ನು ಸೇರಿಸಿ ರಸ್ತೆ ತಡೆ ನಡೆಸಲಾಗುವುದು. ಅರಣ್ಯ ಇಲಾಖೆಯ ಎಲ್ಲಾ ಕಛೇರಿ ಮುಂದೆಯೂ ಪ್ರತಿಭಟಿಸಲಾಗುವುದು ಎಂದು ಸರಕಾರ ಮತ್ತು ಅಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿದ್ದಾರೆ.

 

FILM

ರಿಯಾಲಿಟಿ ಶೋಗಳಲ್ಲೂ ಕಾಸ್ಟಿಂಗ್ ಕೌಚ್! ಡ್ಯಾನ್ಸಿಂಗ್ ಕ್ವೀನ್ ಬಿಚ್ಚಿಟ್ಟ ಸತ್ಯವೇನು?

Published

on

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತುಗಳು ಬಹಳ ಸಮಯದಿಂದ ಕೇಳಿ ಬರುತ್ತಿದೆ. ನಟಿಯರು ನಟರ ಬಗ್ಗೆ, ನಿರ್ಮಾಪಕರು, ನಿರ್ದೇಶಕರುಗಳ ಬಗ್ಗೆ ಆರೋಪಗಳನ್ನು ಮಾಡುವ ಸುದ್ದಿಗಳು ಹರಿದಾಡುತ್ತಿರುತ್ತಿವೆ. ಇದೀಗ ರಿಯಾಲಿಟಿ ಶೋ ಸರದಿ.

ಡ್ಯಾನ್ಸಿಂಗ್ ಕ್ವೀನ್ ಮನೀಶಾ ರಾಣಿ ಆರೋಪ:


ಸಿನಿ ಇಂಡಸ್ಟ್ರಿಯಲ್ಲಿದ್ದ ಕಾಸ್ಟಿಂಗ್ ಕೌಚ್‌ ಈಗ ಟಿವಿ ರಿಯಾಲಿಟಿ ಶೋಗಳಲ್ಲೂ ನಡಿತಾ ಇದೆಯಾ ? ಇಂತಹ ಒಂದು ಆರೋಪವನ್ನು ಡ್ಯಾನ್ಸಿಂಗ್ ರಿಯಾಲಿಟಿ ಶೋ ‘ಝಲಕ್ ದಿಖ್ಲಾಜಾ ‘ ಸೀಸನ್‌ 11 ಗೆದ್ದಿದ್ದ ಡ್ಯಾನ್ಸಿಂಗ್ ಕ್ವೀನ್ ಮನೀಶಾ ರಾಣಿ ಅವರು ಆರೋಪಿಸಿದ್ದಾರೆ.
ತನ್ನ ಡ್ಯಾನ್ಸ್ ಮೂವ್ಸ್ ಮತ್ತು ಎಲ್ಲರೊಂದಿಗೆ ಬೆರೆಯುವ ಸ್ವಭಾವದಿಂದ ಮನೀಶಾ ರಾಣಿ ಜನರ ಮನ ಗೆದ್ದಿದ್ದರು. ಇತ್ತೀಚೆಗೆ ಬಿಗ್‌ ಬಾಸ್ ಒಟಿಟಿ ಸೀಸನ್ 2 ನಲ್ಲೂ ಕಾಣಿಸಿಕೊಂಡಿದ್ದ ಮನೀಶಾ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಈ ವೇಳೆ ಒಂದು ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್‌ ಹೆಸರಿನಲ್ಲಿ ವ್ಯಕ್ತಿಯೊಬ್ಬ ತನ್ನನ್ನು ಮೋಸ ಮಾಡಿದ್ದಾಗಿ ಹೇಳಿದ್ದಾರೆ. ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಬರಲು ಹೇಳುತ್ತಿದ್ದ ಎಂದು ಆರೋಪಿಸಿದ್ದಾರೆ.

ಬಿಗ್‌ ಬಾಸ್ ತಂಡದ ಸದಸ್ಯನಿಂದ ಕರೆ :

ಸಂದರ್ಶನದಲ್ಲಿ ಮಾತನಾಡಿದ ಮನೀಶಾ ರಾಣಿ, “ನಾನು ಮುಂಬೈನಲ್ಲೂ ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ. ನಾನೂ ಸಂಪೂರ್ಣವಾಗಿ ಅದಕ್ಕೆ ಬಲಿಯಾಗದೇ ಇದ್ರೂ ಬಿಗ್‌ ಬಾಸ್ ತಂಡದ ಸದಸ್ಯ ಎಂದು ಹೇಳಿಕೊಂಡಿದ್ದ ವ್ಯಕ್ತಿ ನನ್ನನ್ನು ಬೇರೆ ಬೇರೆ ಕಡೆಗಳಿಗೆ ಕರೆಸಿಕೊಂಡಿದ್ದ” ಎಂದು ಹೇಳಿದ್ದಾರೆ.

“ಮನೆಗೆ ವಾಪಾಸಾಗಿದ್ದ ಸಮಯದಲ್ಲಿ ಅಡಿಷನ್ ಪ್ರಾರಂಭವಾಗಿದೆ ಎಂದು ಮುಂಬೈಗೆ ಕರೆಸಿಕೊಂಡಿದ್ದ. ಹೀಗಾಗಿ ತರಾತುರಿಯಲ್ಲಿ ನಾನು ಮುಂಬೈಗೆ ಬಂದಿದ್ದೆ. ಆದ್ರೆ ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದು ಅದಕ್ಕೆ ನಾನು ನಿರಾಕರಿಸಿದ್ದೆ. ಅದಕ್ಕೆ ಆತನಿಗೆ ನನ್ನ ಮೇಲೆ ಕೋಪ ಬಂದಿತ್ತು” ಎಂದು ಹೇಳಿದ್ದಾರೆ.

‘ಝಲಕ್ ದಿಖ್ಲಾ ಜಾ’ ಕಾರ್ಯಕ್ರಮ ಮೂಲಕ ಸ್ಟಾರ್ ಪಟ್ಟ


ಮೂಲತಃ ಬಿಹಾರದ ನಿವಾಸಿ ಆಗಿರೋ ಮನೀಶಾ ರಾಣಿ ಅವರು ‘ಝಲಕ್ ದಿಖ್ಲಾಜಾ’ 11 ನೇ ಸೀಸನ್ ಗೆಲ್ಲುವ ಮೂಲಕ ಜನಮನ್ನಣೆ ಗಳಿಸಿದರು. ಮನೀಶಾ ರಾಣಿ ಈ ಪ್ರಶಸ್ತಿ ಗೆಲ್ಲುವುದಕ್ಕೂ ಮೊದಲು ಜೀವನದಲ್ಲಿ ಸಾಕಷ್ಟು ಸಂಘರ್ಷ ಅನುಭವಿಸಿದ್ದಾರೆ.
ತಾಯಿಯನ್ನು ಕಳೆದುಕೊಂಡು ತಂದೆಯ ನೆರಳಲ್ಲಿ ಬೆಳೆದ ಮನೀಶಾ ರಾಣಿ ಡ್ಯಾನ್ಸರ್ ಆಗಲು ಅಡ್ಡಿಯಾಗಿದ್ದೇ ಆಕೆಯ ತಂದೆ. ಹೀಗಾಗಿ 12 ನೇ ತರಗತಿಯಲ್ಲಿ ಮನೆ ಬಿಟ್ಟು ಕೊಲ್ಕತ್ತಾ ಸೇರಿದ ಮನಿಷಾ ಮದುವೆ ಸಮಾರಂಭದಲ್ಲಿ ಊಟ ಬಡಿಸುವ ಕೆಲಸ ಆರಂಭಿಸಿದ್ದರು. ಅಲ್ಲಿಂದ ಬಳಿಕ ಬ್ಯಾಗ್‌ರೌಂಡ್ ಡ್ಯಾನ್ಸರ್ ಆಗಿ ಕೆಲಸ ಆರಂಭಿಸಿದ ಮನೀಶಾ ಬಳಿಕ ಅದನ್ನೂ ಬಿಟ್ಟು ಟಿಕ್‌ಟಾಕ್ ಮೂಲಕ ತನ್ನ ನೃತ್ಯವನ್ನು ಜನರಿಗೆ ತೋರಿಸಲು ಆರಂಭಿಸಿದರು.

ಇದನ್ನೂ ಓದಿ : ಶೋಬಿತಾ ಜೊತೆ ಕಾಡಿನಲ್ಲಿ ಕಾಣಿಸಿಕೊಂಡ್ರ ನಾಗಚೈತನ್ಯ..! ಫ್ಯಾನ್ಸ್ ಏನಂದ್ರು..?

ಇದು ಗುಡಿಯಾ ಹಮಾರಿ ಸಭಿ ಪೆ ಭಾರಿ ತಯಾರಕರ ಗಮನಕ್ಕೆ ಬಂದು ಆಕೆಗೆ ಅವಕಾಶ ನೀಡಿದ್ರು. ಅಲ್ಲಿಂದ ಆರಂಭವಾದ ಮನೀಷಾ ರಾಣಿ ಜರ್ನಿ ಇಂದು ಆಕೆಯನ್ನು ಟಿವಿ ಲೋಕದ ಸ್ಟಾರ್ ಆಗಿ ಮಾಡಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗಿರೋ ಮನಿಷಾ 12.5 ಮಿಲಿಯನ್‌ಗಿಂತಲೂ ಹೆಚ್ಚು ಜನ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

Continue Reading

DAKSHINA KANNADA

ಕಬಕ-ಮುರ ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಶ*ವ ಪತ್ತೆ

Published

on

ಪುತ್ತೂರು: ಇಲ್ಲಿನ ಮುರ ಎಂಬಲ್ಲಿ ಕಬಕ-ಪುತ್ತೂರು ರೈಲು ಸಂಚಾರದ ರೈಲ್ವೇ ಹಳಿಯಲ್ಲಿ ವ್ಯಕ್ತಿಯೊಬ್ಬರ ಮೃ*ತದೇಹ ಪತ್ತೆಯಾಗಿರುವ ಘಟನೆ ಎ.23ರಂದು ಬೆಳಗಿನ ಜಾವ ಬೆಳಕಿಗೆ ಬಂದಿದೆ.

death

ಮೃತಪಟ್ಟ ವ್ಯಕ್ತಿಯ ದೇಹ ಹಳಿಯಿಂದ ಸ್ವಲ್ಪ ದೂರಕ್ಕೆ ಎಸೆಯಲ್ಪಟ್ಟಿದ್ದು ಕಾಲು ತುಂಡಾದ ಸ್ಥಿತಿಯಲ್ಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹ*ತ್ಯೆಯೋ? ಅಥವಾ ರೈಲು ಡಿಕ್ಕಿಯಾಗಿ ಸಂಭವಿಸಿದ ಘಟನೆಯೋ ಅನ್ನುವುದು ತನಿಖೆ ವೇಳೆ ಬೆಳಕಿಗೆ ಬರಲಿದೆ.

ಮುಂದೆ ಓದಿ..; ಬೆಳ್ತಂಗಡಿ: ಕೆರೆಗೆ ಬಿದ್ದು ಕಾಡುಕೋಣ ಸಾವು.. ಸಾರ್ವಜನಿಕರಿಂದ ಅಂತ್ಯಸಂಸ್ಕಾರ

death

Continue Reading

BELTHANGADY

ಬೆಳ್ತಂಗಡಿ: ಕೆರೆಗೆ ಬಿದ್ದು ಕಾಡುಕೋಣ ಸಾ*ವು.. ಸಾರ್ವಜನಿಕರಿಂದ ಅಂತ್ಯಸಂಸ್ಕಾರ

Published

on

ಬೆಳ್ತಂಗಡಿ: ಇಲ್ಲಿನ ಬೆಳಾಲು ಗ್ರಾಮಕ್ಕೆ ಸಂಬಂಧಪಟ್ಟಂತೆ ಕೊಯ್ಯೂರು ರಸ್ತೆಯ ಬದ್ಯಾರು ಎಂಬಲ್ಲಿ ಹೆಚ್ ಪದ್ಮ‌ಗೌಡ ಎಂಬವರ ತೋಟದ ಕೆರೆಯಲ್ಲಿ ಬೃಹತ್ ಗಾತ್ರದ ಕಾಡುಕೋಣದ ಮೃತ*ದೇಹ ಪತ್ತೆಯಾಗಿದೆ.

bison

ಮುಂದೆ ನೋಡಿ..; ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷದಿಂದ ಉಚ್ಛಾಟನೆ..!

ಈ ಕೆರೆಗೆ ಸುತ್ತ ಕಾಂಕ್ರೀಟ್ ರಿಂಗ್ ಅಳವಡಿಸಿದ್ದು ನೀರು ಕುಡಿಯಲು ಬಂದ ಕಾಡುಕೋಣ ಮೂರ್ನಾಲ್ಕು ದಿನಗಳ ಹಿಂದೆಯೇ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ. ಹೆಚ್ಚೂ ಕಮ್ಮಿ 10 ಕ್ವಿಂಟಾಲ್ ತೂಕ ಹೊಂದಿರಬಹುದೆಂದು ಅಂದಾಜಿಸಲಾಗಿದ್ದು, ಕೊಳೆತು ವಾಸನೆ ಬೀರುತ್ತಿತ್ತು. ಶೌರ್ಯ ವಿಪತ್ತು ತಂಡಕ್ಕೆ ಬಂದ ಮಾಹಿತಿಯಂತೆ ಉಜಿರೆ- ಬೆಳಾಲು ಘಟಕದ ಸಂಯೋಜಕ ಸುಲೈಮಾನ್ ಬೆಳಾಲು, ಮುಳುಗು ಪರಿಣತ ಹರೀಶ ಕೂಡುಗೆ, ಮುಹಮ್ಮದ್ ಶರೀಫ್ ಬೆಳಾಲು, ಅವಿನಾಶ್ ಭಿಡೆ ಅರಸಿಮನಕ್ಕಿ, ರವೀಂದ್ರ ಉಜಿರೆ, ಸುರೇಂದ್ರ ಉಜಿರೆ, ಅನಿಲ್ ಚಾರ್ಮಾಡಿ, ಶೌರ್ಯ ಘಟಕದ ಮಾಸ್ಟರ್ ಪ್ರಕಾಶ್ ಧರ್ಮಸ್ಥಳ, ನಳಿನ್ ಕುಮಾರ್ ಧರ್ಮಸ್ಥಳ ಮೊದಲಾದವರು ಸಾರ್ವಜನಿಕರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಕಾಡುಕೋಣದ ಕಳೇಬರವನ್ನು ಮೇಲೆತ್ತಿದ್ದಾರೆ. ಬಳಿಕ ಪಶುವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ಪ್ರಕ್ರೀಯೆ ನಡೆಸಿದ್ದು, ತೋಟದಲ್ಲೇ ಹೊಂಡ ತೋಡಿ ಅಂತ್ಯಸಂಸ್ಕಾರ ನಡೆಸಲಾಗಿದೆ.

Continue Reading

LATEST NEWS

Trending