ಪುತ್ತೂರು: ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ಮಧ್ಯೆ ಅಪಘಾತಕ್ಕೆ ಸಂಭವಿಸಿದಂತೆ ಗಾಯಗೊಂಡಿದ್ದ ಸಹ ಸವಾರನೂ ಇದೀಗ ಮೃತಪಟ್ಟಿದ್ದಾನೆ.
ಆರ್ಯಾಪು ಗ್ರಾಮದ ನೀರ್ಕಜೆ ನಿವಾಸಿ ಹುಸೈನಾರ್ ಪುತ್ರ ಮೊಹಮ್ಮದ್ ಆಸೀರ್ (17) ಮೃತ ದುರ್ದೈವಿ.
ಅಪಘಾತದಲ್ಲಿ ಸವಾರ ಸಿನಾನ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸಹ ಸವಾರನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.
ಘಟನೆಯ ಹಿನ್ನೆಲೆ
ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಎಸ್ ಜಿ ಕೆ ಕಾಂಪ್ಲೇಕ್ಸ್ ನ ಮುಂಭಾಗ ಅಪಘಾತ ಸಂಭವಿಸಿದೆ. ಬೊಳ್ವಾರಿನಿಂದ ದರ್ಬೆ ಅಶ್ವಿನಿ ವೃತ್ತದ ಮೂಲಕ ಮುಖ್ಯ ರಸ್ತೆಯಡೆಗೆ ಹೋಗುತ್ತಿದ್ದ ಟಿಪ್ಪರ್ ಹಾಗೂ ಅದರ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಆಕ್ಟೀವಾ ಮಧ್ಯೆ ಅಪಘಾತ ನಡೆದಿತ್ತು.
ಎದುರಿನಿಂದ ವೇಗವಾಗಿ ಬರುತ್ತಿದ್ದ ಲಾರಿಯನ್ನು ನೋಡಿ ಆಕ್ಟೀವಾ ಸವಾರ ಬ್ರೇಕ್ ಹಾಕಿದ್ದು ಈ ವೇಳೆ ಉರುಳಿ ಬಿದ್ದ ಸವಾರನ ತಲೆ ಮೇಲೆ ಲಾರಿ ಹಾದು ಹೋಗಿದೆ ಎನ್ನಲಾಗಿದೆ,
ತಲೆಯ ಮೇಲೆ ಲಾರಿ ಹಾರಿದ ಹೋದುದರಿಂ,
ಸವಾರನ ತಲೆ ಸಂಪೂರ್ಣ ನಜ್ಜುಗುಜ್ಜಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಲೆಯ ವಿವಿಧ ಭಾಗಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಯುದ್ದಕ್ಕೂ ಹರಡಿದ್ದು ದೃಶ್ಯ ನೋಡಲು ಭಯಾನಕವಾಗಿತ್ತು.