ಪುತ್ತೂರು : ಟಿಪ್ಪು ಒರ್ವ ದೇಶದ್ರೋಹಿ ಮತ್ತು ಹುಚ್ಚುನಾಯಿ. ಲಕ್ಷಾಂತರ ಹಿಂದೂ ಮತ್ತು ಕ್ರಿಶ್ಚಿಯನ್ ರನ್ನು ಮತಾಂತರ ಮಾಡಿದ ಮತಾಂಧನಾಗಿದ್ದು ವೀರ ಸಾವರ್ಕರ್ ಜೊತೆ ಟಿಪ್ಪು ಸುಲ್ತಾನನ್ನು ಹೋಲಿಸಬೇಡಿ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಗುಡುಗಿದ್ದಾರೆ.
ಪುತ್ತೂರು ಕಬಕದಲ್ಲಿ ಆಗಸ್ಟ್ 15 ರಂದು ನಡೆದ ಸ್ವಾತಂತ್ರ್ಯೋತ್ಸವ ರಥ ಯಾತ್ರೆಯಲ್ಲಿ ವೀರ ಸಾವರ್ಕರನ್ನು ಅವಮಾನ ಮಾಡಿದ ಪ್ರಕರಣವನ್ನು ಖಂಡಿಸಿ ಆಯೋಜಿಸಲಾಗಿದ್ದ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನಾ ರಾಲಿ ಉದ್ಧೇಶಿಸಿ ಮಾತನಾಡಿದರು.
ಸ್ವಾತಂತ್ರ್ಯ ರಥದಲ್ಲಿ ಸಾವರ್ಕರ್ ಚಿತ್ರ ಇರಬಾರದೆಂದು ಎಸ್ ಡಿ ಪಿ ಐ ಆಕ್ಷೇಪ ಎತ್ತಿದೆ ಮತ್ತು ಟಿಪ್ಪು ಸುಲ್ತಾನ್ ಚಿತ್ರ ಹಾಕಬೇಕೆಂದು ಒತ್ತಾಯಿಸಿದೆ. ಆದ್ರೆ ಟಿಪ್ಪು ಒರ್ವ ದೇಶದ್ರೋಹಿಯಾಗಿದ್ದು ವೀರ ಸಾವರ್ಕರ್ ಜೊತೆ ಟಿಪ್ಪು ಸುಲ್ತಾನನ್ನು ಹೋಲಿಸಬೇಡಿ.
ಟಿಪ್ಪು ಓರ್ವ ಹುಚ್ಚು ನಾಯಿ. ಲಕ್ಷಾಂತರ ಹಿಂದೂ ಮತ್ತು ಕ್ರಿಶ್ಚಿಯನ್ ರನ್ನು ಮತಾಂತರ ಮಾಡಿದ ಮತಾಂಧನಾಗಿದ್ದಾನೆ. ಇಂಥ ವ್ಯಕ್ತಿಯ ಚಿತ್ರವನ್ನು ಸ್ವಾತಂತ್ರ್ಯ ರಥಕ್ಕೆ ಹಾಕಲು ಒತ್ತಾಯಿಸುವುದು ಅಕ್ಷಮ್ಯ ಅಪರಾಧವಾಗಿದೆ.
ಪೋಲೀಸರು ಆರೋಪಿಗಳ ಮೇಲಿನ ಮೃದುಧೋರಣೆಯನ್ನು ನಿಲ್ಲಿಸಬೇಕು ಮತ್ತು ಇಂತಹ ಪ್ರಯತ್ನ ಮಾಡಿದ ಆರೋಪಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸಭೆಗೂ ಮುನ್ನ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಕಬಕ ಜಂಕ್ಷನ್ ವರೆಗೆ ಬೃಹತ್ ಜಾಥಾವನ್ನು ಹಿಂದೂಪರ ಸಂಘಟನೆಗಳು ಆಯೋಜಿಸಿದ್ದುವು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು.