Connect with us

LATEST NEWS

ರೇಷನ್ ಅಕ್ಕಿ ತೊಳೆಯುವಾಗ ಇದನ್ನು ಹಾಕಿ ನೋಡಿ, ನೀವು ಮತ್ತೆ ಬೇರೆ ಅಕ್ಕಿ ಖರೀದಿಸೋದಿಲ್ಲ

Published

on

ಪಡಿತರ ಅಕ್ಕಿಯನ್ನ ಅನೇಕರು ಬಳಸುವುದಿಲ್ಲ. ಇದನ್ನು ಹೆಚ್ಚಾಗಿ ಹಿಟ್ಟನ್ನು ರುಬ್ಬಲು ಮಾತ್ರ ಬಳಸಲಾಗುತ್ತದೆ. ಇನ್ನು ಕೆಲವರಂತೂ ಪಡಿತರ ಅಕ್ಕಿಯನ್ನ ತಿನ್ನುವುದನ್ನ ಗೌರವದ ಕೊರತೆ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಕೆಲವರು ಪಡಿತರ ಅಕ್ಕಿಯ ಪ್ರಯೋಜನಗಳನ್ನು ಅರಿತುಕೊಂಡಿದ್ದಾರೆ ಮತ್ತು ಅದನ್ನ ಬಳಸಲು ಪ್ರಾರಂಭಿಸಿದ್ದಾರೆ. ಪಡಿತರ ಅಕ್ಕಿಗೆ ಎಲ್ಲಾ ಸಮಯದಲ್ಲೂ ಮೌಲ್ಯವಿದೆ.

ಅದಕ್ಕಾಗಿಯೇ ಪಡಿತರ ಅಕ್ಕಿಯ ಕಳ್ಳಸಾಗಣೆ ಇಂದಿಗೂ ಮುಂದುವರೆದಿದೆ. ಪಡಿತರ ಅಕ್ಕಿಯನ್ನ ಕಳ್ಳಸಾಗಣೆ ಮಾಡಲಾಗುತ್ತದೆ, ಪಾಲಿಶ್ ಮಾಡಲಾಗುತ್ತದೆ ಮತ್ತು ಮಾರುಕಟ್ಟೆಗಳಲ್ಲಿ ವಿಭಿನ್ನ ರೂಪದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಜನರು ಹೊಳೆಯುವ ಅಕ್ಕಿಯನ್ನ ಖರೀದಿಸಲು ಇಷ್ಟಪಡುತ್ತಾರೆ. ಆದ್ರೆ, ಇದು ಸಂಪೂರ್ಣವಾಗಿ ತಪ್ಪು.

ಹೊಳೆಯುವ ಅಕ್ಕಿಯಲ್ಲಿ ಯಾವುದೇ ಪೋಷಕಾಂಶಗಳಿರುವುದಿಲ್ಲ. ಅದೇ ಸಮಯದಲ್ಲಿ, ಪಡಿತರ ಅಕ್ಕಿಯು ವಿವಿಧ ಪೋಷಕಾಂಶಗಳನ್ನ ಹೊಂದಿರುತ್ತದೆ. ಹೌದು, ಪಡಿತರ ಅಕ್ಕಿಯಲ್ಲಿ ಸತು ಮತ್ತು ಜೀವಸತ್ವಗಳಂತಹ ಪೋಷಕಾಂಶಗಳಿವೆ, ಇದು ಅನೇಕ ರೋಗಗಳನ್ನ ತಡೆಗಟ್ಟಲು ಸಹಾಯ ಮಾಡುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ, ಇದು ರಕ್ತಹೀನತೆಯನ್ನ ಕಡಿಮೆ ಮಾಡುತ್ತದೆ. ಇದರಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಕಡಿಮೆ ಇರುವುದರಿಂದ, ಇದು ಬೊಜ್ಜನ್ನು ಸುಲಭವಾಗಿ ಕಡಿಮೆ ಮಾಡುತ್ತದೆ.

ಆದರೆ ಪಡಿತರ ಅಕ್ಕಿಯಲ್ಲಿ ಸಾಕಷ್ಟು ಕೊಳಕು ಇರುತ್ತೆ. ಆದ್ದರಿಂದ, ಅಕ್ಕಿಯನ್ನ ಬಳಸುವಾಗ ನೀವು ಅದನ್ನು 4 ಅಥವಾ 5 ಬಾರಿ ತೊಳೆಯಬೇಕು. ಆಗ ಮಾತ್ರ ಅದರಲ್ಲಿನ ಕೊಳೆಯನ್ನ ತೆಗೆದುಹಾಕಬಹುದು. ಆದ್ರೆ, ಇನ್ನು ಮುಂದೆ ಚಿಂತಿಸಬೇಡಿ. ಅಕ್ಕಿಯಿಂದ ಪಡಿತರವನ್ನ ಸ್ವಚ್ಛಗೊಳಿಸಿ ಮತ್ತು ಒಂದು ಚಮಚ ಕಲ್ಲುಪ್ಪನ್ನು ಸೇರಿಸಲು ಪ್ರಯತ್ನಿಸಿ. ಎರಡು ಬಾರಿ ತೊಳೆದ ನಂತರ ಅದು ಹೊಳೆಯುತ್ತಲೇ ಇರುತ್ತದೆ, ಅದೇ ಸಮಯದಲ್ಲಿ ಅದರ ಪೋಷಕಾಂಶಗಳನ್ನ ಸಹ ರಕ್ಷಿಸುತ್ತದೆ. ಅಲ್ಲದೆ, ಇದನ್ನು ಮಾಡುವುದರಿಂದ, ದುರ್ವಾಸನೆಯನ್ನ ಸಹ ತೆಗೆದುಹಾಕಲಾಗುತ್ತದೆ.

kerala

ಕಡಲ್ಕೊರೆತ ತಡೆಗಾಗಿ ವಿಷ್ಣು ಸಹಸ್ರನಾಮ ಪಠಣ

Published

on

ಮಂಗಳೂರು : ಕಡಲ ಕೊರೆತ ಹಾಗೂ ಕಡಲಿನಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಲು ಕಡಲ ತೀರದಲ್ಲಿ ವಿಷ್ಣು ಸಹಸ್ರನಾಮ ಪಠಣ ಮಾಡಲಾಗಿದೆ.

ಕಾಸರಗೋಡಿನ ಕಣ್ಣೂರಿನಿಂದ ಉಡುಪಿಯ ಶಿರೂರು ವರೆಗೆ ಈ ವಿಷ್ಣು ಸಹಸ್ರನಾಮದ ಅಭಿಯಾನ ನಡೆಸಲಾಗಿದೆ. ಭಾನುವಾರ ಸಂಜೆ ನಾಲ್ಕು ಗಂಟೆಗೆ ಕಡಲ ತೀರದಲ್ಲಿ 108 ಜನರ ತಂಡವಾಗಿ ಕುಳಿತ ಸಾವಿರಾರು ಜನರು ಈ ವಿಷ್ಣು ಸಹಸ್ರನಾಮ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.

ವಿಷ್ಣು ಸಹಸ್ರನಾಮ ಸ್ತ್ರೋತ್ರ ಪಠಣ ಸಮಿತಿಯಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ವೇದ ಕೃಷಿಕ ಕೆ.ಎಸ್ ನಿತ್ಯಾನಂದ ಅವರು ಈ ವಿಷ್ಣು ಸಹಸ್ರನಾಮ ಸ್ತ್ರೋತ್ರ ಪಠಣದಿಂದ ಪ್ರಾಕೃತಿಕ ವಿಕೋಪ ತಡೆಗಟ್ಟಬಹುದು ಎಂದು ಕಂಡುಕೊಂಡಿದ್ದರು.

ಇದನ್ನೂ ಓದಿ: ಸುಳ್ಯದ ಅರಣ್ಯದಲ್ಲಿ ಕಾಡಾನೆಯ ಕಳೇಬರ ಪತ್ತೆ

ಇದರ ಭಾಗವಾಗಿ ಈ ಹಿಂದೆ ಎರಡು ಬಾರಿ ಇದರ ಪ್ರಾಯೋಗಿಕ ಪ್ರಯೋಗ ಮಾಡಿ ಯಶಸ್ವಿಯಾಗಿತ್ತು. ಈ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದರಲ್ಲಿ ಭಾಗವಹಿಸಿ ಕರಾವಳಿಯ ಕಡಲ ತೀರದ ಸುರಕ್ಷತೆಯಲ್ಲಿ ಪಾಲ್ಗೊಳ್ಳಲು ಕಾಸರಗೋಡಿನ ಕಣ್ಣೂರಿನಿಂದ ಉಡುಪಿಯ ಶಿರೂರು ತನಕ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಸಂಜೆ ಸರಿಯಾಗಿ ನಾಲ್ಕು ಗಂಟೆಗೆ ಜನರು ಕಡಲ ಕಿನಾರೆಯಲ್ಲಿ ಸೇರಿ ಎರಡು ಗಂಟೆಗಳ ಕಾಲ ನಿರಂತರ ಎರಡು ಬಾರಿ ವಿಷ್ಣು ಸಹಸ್ರನಾಮ ಪಠಿಸುವಂತೆ ಕರೆನೀಡಲಾಗಿತ್ತು. ಮಂಗಳೂರಿನಲ್ಲಿ ಉಳ್ಳಾಲದಿಂದ ಸಸಿ ಹಿತ್ಲು ವರೆಗಿನ ಕಡಲ ಕಿನಾರೆಯಲ್ಲಿ ಹಲವೆಡೆ ಈ ಅಭಿಯಾನ ನಡೆದಿದೆ. ಚಿತ್ರಾಪುರ ಕಡಲತೀರದಲ್ಲಿ ಉಡುಪಿ ಚಿತ್ರಾಪುರ ಮಠದ ಯತಿಗಳು ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.

Continue Reading

FILM

“ಅವನು ನನ್ನ ಕ್ರಷ್” : ವಿವಾಹಿತ ನಟನ ಮೇಲೆ 19 ವರ್ಷದ ಸ್ಟಾರ್ ನಟಿ ಲವ್

Published

on

19 ವರ್ಷದ ರಶಾ ಥಡಾನಿ ಈಗ ಬಾಲಿವುಡ್‌ನಲ್ಲಿ ಸದ್ದು ಮಾಡಲು ಸಿದ್ಧರಾಗಿದ್ದಾರೆ. ಜನವರಿ 17 ರಂದು ಬಿಡುಗಡೆಯಾದ ಆಜಾದ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಈ ಚಿತ್ರ ಬಿಡುಗಡೆಯಾದಾಗಿನಿಂದ ರಾಶಾಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಈ ಚಿತ್ರದಲ್ಲಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ರಾಶಾ ತಮ್ಮ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ‘ ಮಿಸ್  ಮಾಲಿನಿ’ಗೆ ನೀಡಿದ ಸಂದರ್ಶನದಲ್ಲಿ ಅವರು ತನಗೆ ಸಂಬಂಧಿಸಿದ ಹಲವು ವಿಷಯಗಳನ್ನು ಹೇಳಿದ್ದಾರೆ.

ಸದ್ಯ ಆಕೆಯ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ನಟಿಯ ಕ್ರಷ್‌ ಬಾಲಿವುಡ್‌ನಲ್ಲಿ ಈ ಸುಂದರ ಹಂಕ್ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. 40 ವರ್ಷದ ಆ ನಟ 2023 ರಲ್ಲಿ ವಿವಾಹವಾದರು. ರಾಶಾ ಅವರ ಕ್ರಷ್‌ ನಟ ಎಂದರೇ ಅದು ಬೇರಾರೂ ಅಲ್ಲ. ಸಿದ್ಧಾರ್ಥ್ ಮಲ್ಹೋತ್ರಾ. “ನಾನು ಮಾತ್ರವಲ್ಲ, ಆಲ್‌ಮೋಸ್ಟ್‌ ಎಲ್ಲ ಹುಡಗಿಯರಿಗೂ ಈ ನಟನೆಂದರೇ ತುಂಬಾ ಇಷ್ಟ. ಸ್ಟೂಡೆಂಟ್ಆಫ್ ದ ಇಯರ್‌ನಿಂದ ಸಿದ್ಧಾರ್ಥ್ ಮತ್ತು ಆಲಿಯಾ ಅವರನ್ನು ಇಷ್ಟಪಡುತ್ತಿದ್ದೇನೆ. ಸಿದ್ದಾರ್ಥ ನನ್ನ ಕ್ರಷ್” ಎಂದು ರಾಶಾ ಹೇಳಿದ್ದಾರಳೆ. ಸದ್ಯ ಅವರ ಉತ್ತರ ಸೋಷಿಯಲ್‌ ಮಿಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇನ್ನು ನಟ ಸಿದ್ಧಾರ್ಥ್ ಮಲ್ಹೋತ್ರಾ ಕರಣ್ ಜೋಹರ್ ಅವರ ‘ ಸ್ಟೂಡೆಂಟ್ ಆಫ್ ದಿ ಇಯರ್ ‘ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.  ಅವರು ಹಲವು ವರ್ಷಗಳಿಂದ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. 2023 ರಲ್ಲಿ ನಟಿ ಕಿಯಾರಾ ಅಡ್ವಾಣಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಅವರ ಮದುವೆಯ ಸುದ್ದಿ ಅನೇಕ ಯುವತಿಯರ ಹೃದಯವನ್ನು ಒಡೆಯಿತು.

Continue Reading

BIG BOSS

ಹನುಮಂತನ ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತನೇ ಗೆಲುತ್ತಿದ್ದ- ರಜತ್

Published

on

ಬೆಂಗಳೂರು: ಬಿಗ್ ಬಾಸ್ ಕನ್ನಡ -11 ರ ಟ್ರೋಫಿಯನ್ನು ಹಳ್ಳಿಹೈದ ಹನುಮಂತು ಮುಡಿಗೇರಿಸಿಕೊಂಡಿದ್ದಾರೆ. ಅವರ ಗೆಲುವನ್ನು ಅಭಿಮಾನಿಗಳು ಅದ್ಧೂರಿಯಾಗಿಯೇ ಆಚರಿಸಿಕೊಂಡಿದ್ದಾರೆ.

ದೊಡ್ಮನೆ ಆಟಕ್ಕೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿದ್ದ ಹನುಮಂತು, ಟಾಕ್ – ಟಾಸ್ಕ್ ಎರಡರಲ್ಲೂ ಮೇಲುಗೈ ಸಾಧಿಸಿ 5 ಕೋಟಿ ವೋಟ್ಸ್ ಪಡೆದು ಬಿಗ್ ಬಾಸ್ ಕಪ್ ಎತ್ತಿಕೊಂಡಿದ್ದಾರೆ. ಅವರ ಗೆಲುವನ್ನು ದೊಡ್ಮನೆಯ ಸ್ಪರ್ಧಿಗಳು ಕೂಡ ಖುಷಿಪಟ್ಟಿದ್ದಾರೆ. ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ ರಜತ್ ಕಿಶನ್ ಅವರು ಹನುಮಂತು ಗೆಲುವಿನ ಬಗ್ಗೆ ಖುಷಿಯಿಂದಲೇ ಮಾತನಾಡಿದ್ದಾರೆ.

“ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲುತ್ತಿದ್ದ. ತೊಂದರೆ ಇಲ್ಲ. ಎಲ್ಲ ಆರಾಮವಾಗಿದ್ದೀವಿ. ಖುಷಿ ಆಗಿದ್ದೀವಿ. ಇಷ್ಟು ಸಣ್ಣ ಅವಧಿಯಲ್ಲಿ ಪ್ರೀತಿ – ಅಭಿಮಾನ ಸಿಗೋದು ತುಂಬಾ ಕಷ್ಟ. ಇದಕ್ಕೆ ಯಾವತ್ತೂ ಚಿರಋಣಿ” ಎಂದು ರಜತ್ ಹೇಳಿದ್ದಾರೆ.

Continue Reading

LATEST NEWS

Trending

Exit mobile version