ಮಂಗಳೂರು/ಕೇರಳ : ಶಿಕ್ಷಕನೊಬ್ಬ ವಿದ್ಯಾರ್ಥಿಯ ಖಾ*ಸಗಿ ಅಂಗಕ್ಕೆ ಮೆಣಸಿನ ಪುಡಿ ಹಾಕಿ, ಐರನ್ ಬಾಕ್ಸ್ ನಿಂದ ಬರೆ ಎಳೆದ ಅಪರೂಪದ ದುರ್ಘಟನೆ ಉತ್ತರ ಕೇರಳದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಮದರಸಾ ಮೂಲದ ಶಿಕ್ಷಕನು ಬಾಲಕನ ಖಾ*ಸಗಿ ಭಾ*ಗಕ್ಕೆ ಮೆಣಸಿನ ಪುಡಿ ಹಚ್ಚಿ ಬಳಿಕ . ಐರನ್ ಬಾಕ್ಸ್ ನಿಂದ ಬರೆ ಎಳೆದಿದ್ದಾನೆ ಎಂದಿದ್ದಾರೆ. ಆರೋಪಿ ಮಲಪ್ಪುರಂ ಜಿಲ್ಲೆಯ ತಾನೂರ್ ಮೂಲದ ಉಮೈರ್ ಅಶ್ರಫಿ ಎಂದು ಗುರುತಿಸಲಾಗಿದೆ.
ಈ ಘಟನೆಯ ಕುರಿತು ವಿದ್ಯಾರ್ಥಿಯು ಪೊಲೀಸರಿಗೆ ದೂರು ನೀಡಿದ್ದು, ತನಿಖೆಯ ವೇಳೆ ಅಶ್ರಫಿ ಕೇರಳ ರಾಜ್ಯದಿಂದ ಪರಾರಿಯಾಗಿರುವುದು ತಿಳಿಯಿತು. ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಅಡಗಿಕೊಂಡಿದ್ದ ಆತನಿಗಾಗಿ ಪೊಲೀಸ್ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ತಮಿಳುನಾಡಿನ ಕೊಯಮತ್ತೂರಿನಿಂದ ಅಶ್ರಫಿ ತನ್ನ ತವರು ಜಿಲ್ಲೆಗೆ ಮರಳಲಿದ್ದಾನೆ ಎಂಬ ಸುಳಿವಿನ ಮೇರೆಗೆ ಪೊಲೀಸ್ ತಂಡ ಗುರುವಾರ (ನ.7) ತಾನೂರಿನಲ್ಲಿ ಬೀಡುಬಿಟ್ಟಿದ್ದು, ಶೋಧ ಕಾರ್ಯ ನಡೆಸಿದೆ. ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಅಶ್ರಫಿಯನ್ನು ಕೊನೆಗೂ ಬಂಧಿಸಲಾಯಿತು.
ಶಿಕ್ಷಕನ ಬಂಧನದ ಬಳಿಕ, ಕನ್ನವಂ ಪೊಲೀಸರು ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ಯಾಕಾಗಿ ಹಾಗೆ ಮಾಡಿದ? ಅವನ ಉದ್ದೇಶವೇನು? ಎಂಬುವುದು ತನಿಖೆಯ ಬಳಿಕ ತಿಳಿದು ಬರಬೇಕಷ್ಟೇ. ಆತನನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಶುಕ್ರವಾರ (ನ.8) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾಸರಗೋಡು: ಸ್ತನ್ಯಪಾನ ಮಾಡುತ್ತಿದ್ದಾಗ ಹಾಲು ಗಂಟಲಲ್ಲಿ ಸಿಲುಕಿ ಹಸುಗುಸು ಉ*ಸಿರು ಚೆ*ಲ್ಲಿದ ಘಟನೆ ಗುರುವಾರ ಕುಂಬ್ಳೆಯ ಹೇರೂರು ವೆಂಕೂಮೂಲೆಯಲ್ಲಿ ನಡೆದಿದೆ.
ಸಫೀಯತ್ ನೈಫ್ ಮೃ*ತ ಶಿಶು ಎಂದು ಗುರುತಿಸಲಾಗಿದೆ.
ಮುಂಜಾನೆ 4 ಗಂಟೆ ಸರಿಸುಮಾರಿಗೆ ಮಗು ಅತ್ತಿದ್ದು, ತಾಯಿ ಹಾಲುಣಿಸಿ ಮಗುವನ್ನು ಮಲಗಿಸಿದ್ದಳು. ಬಳಿಕ ಬೆಳಗ್ಗೆ ಮಗು ಎಚ್ಚರಗೊಂಡಿರಲಿಲ್ಲ.
ಕಂಗಾಲಾದ ಮನೆಯರು ಕೂಡಲೇ ಮಗುವನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರೊಳಗೆ ಕಂದಮ್ಮನ ಉ*ಸಿರು ನಿಂತಿತ್ತು. ಹಾಲು ಗಂಟಲಲ್ಲಿ ಸಿಲುಕಿರುವ ಕಾರಣ ಮಗು ಸಾ*ವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕಾಸರಗೋಡು : ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ಸೋಮವಾರ (ನ.4) ದಂದು ಬೋವಿಕಾನ – ಇರಿಯಣ್ಣಿ ಮಾರ್ಗ ಮಧ್ಯೆ ನಡೆದಿದೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುವಾಗ ಈ ಘಟನೆ ನಡೆದಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳ ವಾಹನವನ್ನು ಪುಂಡರ ತಂಡವೊಂದು ತಡೆದು ಶ್ರೀಗಳಿಗೆ ಅವಮಾನ ಮಾಡಿದೆ. ಇರಿಯಣ್ಣಿಯಿಂದಲೇ ಹಿಂಬಾಲಿಸಿದ ಬಂದ ದುಷ್ಕರ್ಮಿಗಳು ಬಾವಿಕೆರೆ ಎಂಬಲ್ಲಿ ದೊಣ್ಣೆಯಿಂದ ಕಾರಿನ ಗಾಜು ಹೊಡೆದರು ಮಾತ್ರವಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಟ್ಟಹಾಸ ಮೆರೆದಿದ್ದಾರೆ.
ಸ್ವಾಮೀಜಿ ಮೇಲಿನ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮಕ್ಕೆ ಕೇರಳ ಸರ್ಕಾರವನ್ನು ಆಗ್ರಹಿಸಲಾಗಿದೆ. ಅಲ್ಲದೆ ಎಡನೀರು ಸಂಸ್ಥಾನದ ಸ್ವಾಮೀಜಿಗಳ ವಾಹನದ ಮೇಲಾದ ಆದ ದಾಳಿ ಸಮಸ್ತ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂದು ಹಿಂದೂಪರ ಸಂಘಟನೆಗಳು ಕೆಂಡಕಾರಿವೆ.
ಘಟನಾ ಸಂದರ್ಭ ಸ್ವಾಮೀಜಿಯವರು ಕಾರು ನಿಲ್ಲಿಸದೇ ಶಾಂತರಾಗಿ ಮುಂದುವರಿದಿದ್ದು ಕಾಸರಗೋಡು ಪೋಲಿಸರು ಮಾಹಿತಿ ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು/ಕೇರಳ: ಮಳೆಯಿಂದ ತುಂಬಿದ್ದ ಬಾವಿಯೊಂದು ಕ್ಷಣಾರ್ಧದಲ್ಲೇ ಸಂಪೂರ್ಣ ಭತ್ತಿದ ಘಟನೆ ಕೇರಳದ ಎಜುಕೋನ್ ಮೂಝಿ ಪ್ರದೇಶದ ಕಲ್ಯಾಣಿಯಲ್ಲಿರುವ ಸುನಿಲ್ದತ್ ಅವರ ಮನೆಯ ಹಿತ್ತಲಿನಲ್ಲಿ ಶುಕ್ರವಾರ (ನ.01) ರಾತ್ರಿ ಎಂಟು ಗಂಟೆ ಸುಮಾರಿಗೆ ನಡೆದಿರುವುದು ವರದಿಯಾಗಿದೆ.
ಈ ವಿಚಿತ್ರ ಘಟನೆ ಕುಟುಂಬಸ್ಥರನ್ನು ಬೆಚ್ಚಿ ಬೀಳಿಸಿದೆ. ಹಿತ್ತಲಿನಲ್ಲಿದ್ದ ಬಾವಿಯಿಂದ ಯಾರೋ ಗೊಣಗುತ್ತಿರುವ ಶಬ್ದ ಕೇಳಿ ಗಾಬರಿಗೊಂಡ ಮನೆಯವರು, ಮೊದ ಮೊದಲು ಕೇಳಿಬಂದ ಶಬ್ದಕ್ಕೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಆದರೆ ಬಳಿಕ ಗಾಬರಿಗೊಂಡಿದ್ದರು.
ಘಟನೆ ವಿವರ :
ಮನೆಯ ಬಾವಿಯ ನೀರು ಬತ್ತಿ ಹೋಗಿತ್ತು. ಆದರೆ ಈ ಸಲದ ಮಳೆಗಾಲದಲ್ಲಿ ಅದು ತುಂಬಿ ತುಳುಕಿತ್ತು. ನೀರು ಬಾವಿಯ ತುತ್ತ ತುದಿಯ ತನಕ ಬಂದಿತ್ತು. ಹೀಗಿರುವಾಗ ಮನೆಯವರಿಗೆ ಬಾವಿಯಿಂದ ಯಾರೋ ಕರೆಯುವ ಮರುಗುವ ಸದ್ದು ಕೇಳಿ ಬರುತ್ತಿತ್ತು. ಆರಂಭದಲ್ಲಿ ಆ ಕಡೆ ಅಷ್ಟು ಗಮನಕೊಡದ ಮನೆಯವರು ಒಂದು ಸಲ ಹೊರಗಡೆ ಬಂದು ಬಾವಿ ಇಣುಕಿ ನೋಡಿದಾಗ ದೊಡ್ಡ ಅಘಾತ ಕಾದಿತ್ತು. ಅದೇನೆಂದರೆ ಮಳೆಯಿಂದ ತುಂಬಿ ತುಳುಕಿದ ಬಾವಿಯಲ್ಲಿ ಒಂದು ಹನಿ ನೀರಿರಲಿಲ್ಲ.
ಮಳೆ ಸುರಿಯುತ್ತಿದ್ದ ಕಾರಣ ಮನೆಯ ಸದಸ್ಯರು ಮನೆಯೊಳಗೆ ಇದ್ದರು. ಆರಂಭದಲ್ಲಿ ಹೊರಗಿನಿಂದ ಯಾರೋ ಕೂಗುವ ಸದ್ದು ಕೇಳಿ ಬಂದಿದೆ. ತಕ್ಷಣವೇ ಅನುಮಾನಗೊಂಡ ಮನೆಯವರು, ಹೊರಗೆ ಹೋಗಿ ನೋಡಿದರೆ ಏನೂ ಪತ್ತೆಯಾಗಿಲ್ಲ. ಶಬ್ದ ಹೆಚ್ಚಾದಾಗ ಬಾವಿಯ ಒಳಗಿನಿಂದ ಕೇಳಿಬರುತ್ತಿದ್ದನ್ನು ಗಮನಿಸಿದ್ದಾರೆ. ಈ ವೇಳೆ ಮಳೆ ನೀರಿನಿಂದ ತುಂಬಿದ್ದ ಬಾವಿಯಲ್ಲಿ ಹನಿ ನೀರು ಇಲ್ಲದೆ ಇರುವುದನ್ನು ಕಂಡು ಎಲ್ಲರೂ ಒಂದು ನಿಮಿಷ ಭಾರೀ ಅಚ್ಚರಿಗೆ ಒಳಗಾಗಿದ್ದಾರೆ.
ಬೆಚ್ಚಿ ಬಿದ್ದ ಕುಟುಂಬಸ್ಥರು, ಮಳೆ ನೀರಿನಿಂದ ತುಂಬಿದ್ದ ಬಾವಿಯಲ್ಲಿ ನೀರು ಇಲ್ಲದೆ ಇರುವುದು ಹೇಗೆ? ಇದಕ್ಕೆ ಕಾರಣವೇನು? ಅಸಲಿಗೆ ನೀರು ಖಾಲಿಯಾಗಿದ್ದೇಗೆ ಹಾಗೂ ಶಬ್ದ ಬರುತ್ತಿರುವುದು ಎಲ್ಲಿಂದ ಎಂಬ ಹತ್ತಾರು ಪ್ರಶ್ನೆಗಳಿಂದ ತಲೆಕಡಿಸಿಕೊಂಡಿದ್ದರು. ಈ ಘಟನೆ ಬಗ್ಗೆ ಮಾತನಾಡಿದ ರಜನಿ, ‘ನಾನು ಸೌಂಡ್ ಕೇಳ್ತಿದ್ದಂತೆ ಹೊರಗೆ ಓಡಿ ಬಂದೆ. ಆಗ ಬಾವಿಯ ತಳವು ಕಾಣಿಸುತ್ತಿತ್ತು. ಅಲ್ಲಿ ನೀರು ಇರಲಿಲ್ಲ, ಶಬ್ದದ ಹಿಂದಿರುವ ಕಾರಣವು ಕಂಡುಬರಲಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಲವಿಜ್ಞಾನಿ ಪರಿಶೀಲನೆ :
ಈ ಘಟನೆ ಬೆನ್ನಲ್ಲೇ ಭಯಗೊಂಡು ಅಂತರ್ಜಲ ಇಲಾಖೆಯ ಜಲವಿಜ್ಞಾನಿ ಎಸ್. ಅನುಜಾ ನೇತೃತ್ವದ ತಜ್ಞರ ತಂಡಕ್ಕೆ ಕರೆ ಮಾಡಿದ ವಾರ್ಡಂಗಂ ರಂಜಿನಿ ಅಜಯನ್, ತಕ್ಷಣವೇ ತಮ್ಮ ಮನೆಯ ಬಾವಿಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಘಟನೆಯನ್ನು ವಿವರಿಸಿದ್ದಾರೆ. ರಂಜಿನಿ ಅವರ ದೂರವಾಣಿ ಕರೆಯ ಮೇರೆಗೆ ಸ್ಥಳಕ್ಕೆ ಆಗಮಿಸಿ ಬಾವಿಯನ್ನು ಪರಿಶೀಲಿಸಿದ ಅನುಜಾ ತಂಡ, ರಚನಾತ್ಮಕ ದೋಷ ಉಂಟಾಗಿರುವ ಸುಳಿಯಲ್ಲಿ ನೀರು ಹರಿದಿದ್ದರಿಂದ ಬಾವಿಯ ಕೆಳಭಾಗದಲ್ಲಿ ಕೆಸರು ಉಂಟಾಗಿದೆ ಎಂಬುದು ಪ್ರಾಥಮಿಕ ತೀರ್ಮಾನವಾಗಿದೆ ಎಂದು ತಿಳಿಸಿದ್ದಾರೆ.