Connect with us

FILM

ಕಾಲ್ತುಳಿತ ವಿವಾದದ ಬೆನ್ನಲ್ಲೇ ಪುಷ್ಪ 2 ಚಿತ್ರದ ಹಾಡಿಗೆ ಬಿತ್ತು ಕತ್ತರಿ!

Published

on

ಮಂಗಳೂರು/ಹೈದರಾಬಾದ್ : ಪುಷ್ಪ 2 ಚಿತ್ರಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಕಾಲ್ತುಳಿತ ಪ್ರಕರಣದ ನಂತರ ಇದೀಗ ಹಾಡೊಂದಕ್ಕೆ ಕತ್ತರಿ ಬಿದ್ದಿದೆ. ಚಿತ್ರದ ಸೂಪರ್ ಹಿಟ್ ಹಾಡಲ್ಲಿ ಒಂದಾದ ‘ದಮ್ಮುಂಟೆ ಪಟ್ಟುಕೋರ’(ಧಮ್ಮಿದ್ರೆ ನನ್ನನ್ನು ಹಿಡಿಯಿರಿ) ಹಾಡು ಟೀಕೆಗೆ ಗುರಿಯಾಗಿದ್ದು, ಈ ಹಾಡನ್ನು ಯೂಟ್ಯೂಬ್‌ನಿಂದ ತೆಗೆದು ಹಾಕಲಾಗಿದೆ.

ಅಲ್ಲು ಅರ್ಜುನ್ ಹಾಡಿರುವ ಈ ಹಾಡನ್ನು ಡಿ.24 ರಂದು ಬಿಡುಗಡೆ ಮಾಡಲಾಗಿತ್ತು. ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳ ಸಾಗಣೆದಾರರ ಸಿಂಡಿಕೇಟ್‌ನ ಮುಖಂಡನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್‌ನನ್ನು ಹಿಡಿಯಲು ಪೊಲೀಸ್ (ಶೇಖಾವತ್) ಬಹಳ ಪ್ರಯತ್ನ ಪಡುತ್ತಿರುತ್ತಾನೆ.

ದೃಶ್ಯವೊಂದರಲ್ಲಿ ಶೇಖಾವತ್ ಗೆ ಪುಷ್ಪ ಅಂದ್ರೆ ಅಲ್ಲು ಅರ್ಜುನ್, ದಮ್ಮಿದ್ರೆ ನನ್ನನ್ನು ಹಿಡಿಯಿರಿ ಶೇಖಾವತ್(ಫಹಾದ್ ಫಾಸಿಲ್) ಎಂದು  ಹಾಡುತ್ತಾ ಸವಾಲು ಹಾಕುತ್ತಾನೆ. ಈ ಸಾಲು ಟೀಕೆಗೊಳಗಾಗಿದ್ದು, ಪೊಲೀಸರನ್ನು ಗೇಲಿ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಇದೀಗ ಹಾಡನ್ನು ಡಿಲೀಟ್ ಮಾಡಲಾಗಿದೆ.

ಇದನ್ನೂ ಓದಿ  : ‘ವರ್ಕ್ ಫ್ರಂ ಹೋಮ್’ ಎಂದು ನಂಬಿಸಿ ಮಹಿಳೆಗೆ ಲಕ್ಷ ಲಕ್ಷ ವಂಚನೆ !!

ವಿವಾದಗಳ ನಡುವೆ ಪುಷ್ಪ 2 ಚಿತ್ರ ಭಾರೀ ಯಶಸ್ಸನ್ನು ಬಾಚಿಕೊಳ್ಳುತ್ತಿದೆ. ಡಿ.5 ರಂದು ಬಿಡುಗಡೆಗೊಂಡ ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಪುಷ್ಪ 2 ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತದಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ ಪರಿಣಾಮ ಅಲ್ಲು ಅರ್ಜುನ್‌ರನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಅವರು ಹೊರ ಬಂದಿದ್ದರು. ಈ ಬೆಳವಣಿಗೆಯ ಮಧ್ಯೆ ಇದೀಗ ಹಾಡಿಗೆ ಕತ್ತರಿ ಹಾಕಲಾಗಿದೆ.

FILM

ಶಿವಣ್ಣ ಆಸ್ಪತ್ರೆಯಲ್ಲಿರುವಾಗಲೇ ಬಂತು ನೋವಿನ ಸುದ್ದಿ; ಗೀತಾಕ್ಕ ಭಾವನಾತ್ಮಕ ಪತ್ರ !

Published

on

ಮಂಗಳೂರು/ಬೆಂಗಳೂರು: ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಶಿವಣ್ಣನ ಆರೋಗ್ಯದಲ್ಲಿ ಏರುಪೇರಾಗಿರುವುದು ಗೀತಾ ಶಿವರಾಜ್ ಕುಮಾರ್ ಗೆ ತಡೆಯಲಾಗದ ಸಂಕಟವನ್ನು ತಂದಿಟ್ಟಿತ್ತು. ಇದರ ನಡುವೆ ಗೀತಾ ಶಿವರಾಜ್ ಕುಮಾರ್ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಶಿವರಾಜ್ ಕುಮಾರ್ ಅವರು ಕ್ಯನ್ಸಾರ್ ಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅವರು ಸರ್ಜರಿಗೆ ಒಳಗಾಗಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿರುವುದು ಖುಷಿಯ ಸುದ್ದಿ ಆದರೆ, ಮತ್ತೊಂದು ದುಃಖದ ಸುದ್ದಿಯೂ ಸಿಕ್ಕಿದೆ. ಈ ಬಗ್ಗೆ ಗೀತಾ ಅವರು ತಮ್ಮ ದುಃಖದ ವಿಚಾರ ಒಂದನ್ನು ಹಂಚಿಕೊಂಡಿದ್ದಾರೆ. ಅದೇನಂದರೆ ಅವರು ಸಾಕಿದ ಪ್ರೀತಿಯ ಶ್ವಾನ ನಿಧನ ಹೊಂದಿದೆ. ಈ ಬಗ್ಗೆ ಗೀತಾ ಅವರು ಪೋಸ್ಟ್ ಹಾಕಿದ್ದಾರೆ.

ಇದನ್ನೂ ಓದಿ: ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ವಿಧಿವಶ

ನಮ್ಮ ಮನೆಯಲ್ಲಿ ಐದು ಜನರಿಲ್ಲ, ಆರು ಜನರಿದ್ದೇವೆ. ಪ್ರೀತಿಯ ನೀಮೋವನ್ನು ನಾವು ಮನೆಯ ಸದಸ್ಯನನ್ನಾಗಿ ಪರಿಗಣಿಸಿದ್ದೆವು. ಶಿವಣ್ಣ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುವಾಗ ನೀಮೋ ದೇವರ ಹತ್ತಿರ ಹೋಗಿದ್ದಾನೆ. ಅವನ ನಿಸ್ವಾರ್ಥ ಪ್ರೀತಿಯನ್ನು ಯಾರಿಂದಲೂ ಕೂಡ ತುಂಬಲು ಸಾಧ್ಯವಿಲ್ಲ. ನಾವು ಅಮೆರಿಕಾಗೆ ಬಂದ ಮೇಲೆ ಅವನು ಹೊರಡಬೇಕು ಎಂದು ನಿರ್ಧರಿಸಿದ್ದ ಎನಿಸುತ್ತೆ ಎಂದು ದು:ಖ ವ್ಯಕ್ತಪಡಿಸಿದ್ದಾರೆ.

ಅವನು ಹೋಗಿರುವುದನ್ನು ನಾನು ಕಣ್ಣಿಂದ ನೋಡಲಿಲ್ಲ. ನೋಡಿದ್ದರೂ ಕೂಡ ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗುವಾಗ ನಮ್ಮ ನೋವನ್ನು ಕೂಡ ಅವು ಜೊತೆಗೆ ತೆಗೆದುಕೊಂಡು ಹೋಗುತ್ತವೆಯಂತೆ. ನನ್ನ ನೀಮೋ ಶಿವಣ್ಣನಿಗೆ ಇದ್ದ ನೋವನ್ನು ಶಾಶ್ವತವಾಗಿ ತೆಗೆದುಕೊಂಡು ಹೋಗಿದ್ದಾನೆ ಎಂದಿದ್ದಾರೆ ಅವರು. ಈ ಮೂಲಕ ಶಿವರಾಜ್ ಕುಮಾರ್ ಚೇತರಿಕೆ ಕಂಡಿದ್ದಾರೆ ಎಂದಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಬರೆದಿರುವ ಸುದೀರ್ಘ ಪತ್ರದಲ್ಲಿ ನಿಮೋ ಅವರೊಂದಿಗೆ ಹೇಗಿದ್ದ. ಎಷ್ಟು ಹಚ್ಚಿಕೊಂಡಿದ್ದ ಎಂಬುದರ ನೆನಪುಗಳೊಂದಿಗೆ ಸಂಪೂರ್ಣವಾಗಿ ಅಕ್ಷರರೂಪ ಕೊಟ್ಟಿದ್ದಾರೆ.

Continue Reading

BIG BOSS

ಬಿಗ್ ಬಾಸ್ ಸೀಸನ್ 12ಕ್ಕೆ ಸಾರಥಿ ಇವರೇ ?

Published

on

ಮಂಗಳೂರು/ಬೆಂಗಳೂರು: ಬಿಗ್ ಬಾಸ್ ಸೀಸನ್ 11 ಶುರುವಾಗಿ ಎರಡು ವಾರ ಕಳೆದಿತ್ತು. ಅಕ್ಟೋಬರ್ 13ರಂದು ಟ್ವೀಟ್ ಮಾಡಿದ ಕಿಚ್ಚ ಇದೇ ನನ್ನ ಕೊನೆಯ ಸೀಸನ್ ಎಂದು ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ಬಿಗ್ ಬಾಸ್ ಶೋಗೆ ಕಿಚ್ಚ ಬಂದ್ರೆನೇ ಒಂದು ಕಳೆ ಬರೋದು. ಬಿಗ್ ಬಾಸ್ ಕಿಕ್ ಹೆಚ್ಚಿಸೋದೆ ಬಾದ್ ಶಾ ಕಿಚ್ಚ ಸುದೀಪ್. ಆದರೆ ಬಿಗ್ ಬಾಸ್ ನಿರೂಪಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಭಾವುಕ ಪೋಸ್ಟ್ ಒಂದನ್ನ ಶೇರ್ ಮಾಡಿದ್ರು. ಈ ಸುದ್ದಿ ಬಿಗ್ ಬಾಸ್ ಫ್ಯಾನ್ಸ್ ಗೆ ತೀವ್ರ ಬೇಸರ ಉಂಟು ಮಾಡಿತ್ತು. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಹೊಸ ಸುದ್ದಿಯೊಂದು ಹೊರಬಂದಿದೆ.

ಇದನ್ನೂ ಓದಿ: ಎಂಟು ಮಂದಿ ನಾಮಿನೇಟ್; ಈ ವಾರ ಮನೆಯಿಂದ ಹೊರ ಬರೋದು ಇವರೇ ?

ಸಂದರ್ಶನವೊಂದರಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿರೋ ಕಿಚ್ಚ, ಶೂಟಿಂಗ್ ಹಾಗೂ ಶೋನ ಮಾಡೋದು ತುಂಬಾ ಸ್ಟ್ರೇಸ್ ಆಗ್ತಿದೆ. ಸಾಕು ಅನ್ನಿಸಿದ ತಕ್ಷಣ ಟ್ವೀಟ್ ಮಾಡಿದೆ. ಬೆಳಿಗ್ಗೆ ಮತ್ತೇ ಮೂಡ್ ಚೆಂಜ್ ಆಗಬಾರದು ಅಂತ ರಾತ್ರಿನೇ ಅನೌನ್ಸ್ ಮಾಡಿದೆ. ಆದ್ರೆ ಕಲರ್ಸ್ ಕನ್ನಡ ಇನ್ನೂ ಅದನ್ನ ಒಪ್ಪಿಕೊಂಡಿಲ್ಲ. ನೋಡೋಣ, ನನಗೆ ಬರ್ಬೇಕು ಅನ್ಸಿದ್ರೇ ಟ್ವೀಟ್ ಮಾಡ್ತೀನಿ, ಹಿಂಜರಿಯಲ್ಲ. ಖಂಡಿತ ಮತ್ತೇ ಬರ್ತಿನಿ ಎಂದು ಉತ್ತರಿಸಿದ್ದಾರೆ ಕಿಚ್ಚ ಸುದೀಪ್.

ಈ ಮಾತುಗಳಿಂದ ಸುದೀಪ್ ಮತ್ತೆ ಬಿಗ್ ಬಾಸ್ ಶೋ ನಡೆಸಿಕೊಡಬಹುದು ಎಂಬ ನೀರಿಕ್ಷೆ ಬಿಗ್ ಬಾಸ್ ಆಭಿಮಾನಿಗಳಿಗೆ ಮೂಡಿದೆ. ಕಲರ್ಸ್ ಕನ್ನಡ ಚಾನೆಲ್ ಕನ್ವಿನ್ಸ್ ಮಾಡಿದರೆ ಕಿಚ್ಚ ಶೋಗೆ ಮರಳುವ ಸಾಧ್ಯತೆ ಇದೆ.

Continue Reading

FILM

‘ಮುದ್ದುಲಕ್ಷ್ಮಿ‌’ ನಟ ಚರಿತ್ ಮೇಲೆ ಲೈಂ*ಗಿಕ ದೌ*ರ್ಜನ್ಯ ಆ*ರೋಪ

Published

on

ಮಂಗಳೂರು/ಬೆಂಗಳೂರು: ಕನ್ನಡದ ‘ಮುದ್ದುಲಕ್ಷ್ಮಿ‌’ ಸೇರಿದಂತೆ ಹಲವು ಸೀರಿಯಲ್​ನಲ್ಲಿ ನಟಿಸಿದ ನಟ ಚರಿತ್ ಬಾಳಪ್ಪ ಪರಿಚಯವಿದ್ದ ಗೆಳತಿಯ ಮೇಲೆ ಲೈಂ*ಗಿಕ ದೌ*ರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು ಆರ್​ಆರ್ ನಗರ ಠಾಣೆಯ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ತೆಲುಗಿನಲ್ಲೂ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ.

ಚರಿತ್ ಪ್ರೀತಿಸುತ್ತೇನೆ ಎಂದು ಹೇಳಿ ದೈ*ಹಿಕ ಸಂ*ಪರ್ಕಕ್ಕೆ ಒತ್ತಾಯ ಮಾಡಿದ್ದಾರೆ ಎಂದು ಗೆಳತಿ ಆರೋಪ ಮಾಡಿದ್ದಾಳೆ. ಯುವತಿ ವಾಸ ಮಾಡುತ್ತಿದ್ದ ಮನೆಗೆ ಸಹಚರರ ಜೊತೆ ನುಗ್ಗಿದ ಚರಿತ್ ಕಿ*ರುಕುಳ ನೀಡಿದ್ದು ಮಾತ್ರವಲ್ಲದೇ ಯುವತಿ ಬಳಿ ಹಣಕ್ಕೂ ಬೇಡಿಕೆ ಇಟ್ಟಿರುವ ಆರೋಪ ಇದೆ. ಹಣ ಕೊಡದಿದ್ದರೆ ಆಕೆಯ ಖಾ*ಸಗಿ ಫೋಟೋ, ವಿ*ಡಿಯೋ ಹರಿಬಿಡುವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಚರಿತ್ ವಿರುದ್ಧ ಲೈಂ*ಗಿಕ ದೌ*ರ್ಜನ್ಯ, ಹ*ಲ್ಲೆ, ಕೊ*ಲೆ ಬೆ*ದರಿಕೆ ಆರೋಪಗಳು ಕೇಳಿಬಂದಿವೆ. ಯುವತಿ ನೀಡಿದ ದೂರಿನ ಅನ್ವಯ ಆರೋಪಿ ಚರಿತ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಚರಿತ್ ಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಕೂಡ ಪಡೆದಿದ್ದಾರೆ. ಡಿವೋರ್ಸ್​ ನಂತರವೂ ಅವರು ಮಾಜಿ ಪತ್ನಿಯ ಜೊತೆ ಕಿರಿಕ್ ಮಾಡಿಕೊಂಡಿದ್ದರು. 2017ರಲ್ಲಿ ನಟಿ ಮಂಜು ಜೊತೆ ವಿವಾಹ ಆಗಿತ್ತು. 2022ರ ಬಳಿಕ ಅವರ ಸಂಸಾರದಲ್ಲಿ ಬಿರುಕು ಮೂಡಿತ್ತು. ನಂತರ ಅವರಿಬ್ಬರು ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು. ಕೋರ್ಟ್ ಆಜ್ಞೆಯಂತೆ ಡೈವರ್ಸ್ ಪರಿಹಾರ ಹಣಕ್ಕೆ ನೋಟಿಸ್ ಕಳಿಸಿದ್ದಕ್ಕೆ ಮಾಜಿ ಪತ್ನಿಗೆ ಬೆದರಿಕೆ ಹಾಕಿದ್ದಾರೆ ಎಂದು ಚರಿತ್ ಬಾಳಪ್ಪ ವಿರುದ್ಧ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿತ್ತು.

Continue Reading

LATEST NEWS

Trending

Exit mobile version