Connect with us

    DAKSHINA KANNADA

    ಮಂಗಳೂರು : ಇಂಡಿಯನ್ ಬುಕ್ ಆಫ್ ರೆಕಾಡ್ಸ್‌ನಲ್ಲಿ ಹೆಸರು ಮಾಡಿದ್ದ ಪೂರ್ವಿ ನಿ*ಧನ

    Published

    on

    ಮಂಗಳೂರು : ನಿಮಿಷದಲ್ಲಿ ದಾಖಲೆಯ ರೈಮ್ಸ್ ಆಟವಾಡಿ ಇಂಡಿಯನ್ ಬುಕ್ ಆಫ್ ರೆಕಾಡ್ಸ್‌ನಲ್ಲಿ ಹೆಸರು ಮಾಡಿದ್ದ 7 ವರ್ಷದ ಬಾಲಕಿ ಪೂರ್ವಿ ಅ*ನಾರೋಗ್ಯದಿಂದ ಮಂಗಳೂರಿನಲ್ಲಿ ನಿ*ಧನ ಹೊಂದಿದಳು.

    ಗ್ರೀನ್ ವುಡ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಕಲಿಯುತ್ತಿದ್ದ, ಮಂಗಳೂರು ದ್ವಾರಕ ನಗರ ಕೊಟ್ಟಾರ ನಿವಾಸಿಗಳಾದ ಪುಷ್ಪರಾಜ್‌ ಎಸ್‌. ಕುಂದ‌ರ್ ವೈಶಾಲಿ ಎಲ್. ಬೆಂಗ್ರೆ ಅವರ ಪುತ್ರಿ ಪೂರ್ವಿ ಅ*ನಾರೋಗ್ಯಕ್ಕೀಡಾದಾಗ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು ಆದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾ*ವನ್ನಪ್ಪಿದ್ದಾಳೆ.

    2019ರಲ್ಲಿ 1 ನಿಮಿಷದಲ್ಲಿ ದಾಖಲೆಯ ರೈಮ್ಸ್‌ ಆಟವಾಡಿ ಇಂಡಿಯನ್‌ ಬುಕ್‌ ಆಫ್‌ ರೆಕಾಡ್ಸ್‌ನಲ್ಲಿ ಹೆಸರು ಮಾಡಿದ್ದ ಪೂರ್ವಿ ಸಣ್ಣ ಪ್ರಾಯದಲ್ಲೇ ಚುರುಕಿನಿಂದ ಕೂಡಿದ್ದು ಫುಟ್‌ಬಾಲ್, ಭರತನಾಟ್ಯದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿ ಜನರ ಪ್ರೀತಿಗೆ ಪಾತ್ರವಾಗಿದ್ದಳು. ವಿವಿಧ ಸಂಘ ಸಂಸ್ಥೆಯಿಂದ ಸಮ್ಮಾನ ಪಡೆದುಕೊಂಡಿದ್ದಳು.

    ಪೂರ್ವಿಯ ಆ*ಕಾಲಿಕ ನಿ*ಧನಕ್ಕೆ ಬೆಂಗ್ರೆ ವಿದ್ಯಾರ್ಥಿ ಸಂಘ, ಸ್ಥಳೀಯ ಸಂಘ ಸಂಸ್ಥೆಗಳು ಶೋಕ ವ್ಯಕ್ತಪಡಿಸಿದ್ದಾರೆ

    BANTWAL

    ಭೀ*ಕರ ರಸ್ತೆ ಅ*ಪಘಾತ; ಮಹಿಳೆ ಸಾ*ವು, ಮಕ್ಕಳ ಸಹಿತ 8 ಮಂದಿಗೆ ಗಾ*ಯ

    Published

    on

    ಬಂಟ್ವಾಳ: ಕಾರು ಮತ್ತು ರಿಕ್ಷಾ ನಡುವೆ ಭೀ*ಕರ ಅ*ಪಘಾತವಾಗಿದ್ದು, ಓರ್ವ ಮಹಿಳೆ ಸ್ಥಳದಲ್ಲೇ ಸಾ*ವನ್ನಪ್ಪಿ, ಮಕ್ಕಳ ಸಹಿತ 8 ಮಂದಿಗೆ ಗಾ*ಯಗಳಾಗಿರುವ ಘಟನೆ ಬಂಟ್ವಾಳದ ವಗ್ಗ ಸಮೀಪ ಬಾಂಬಿಲದಲ್ಲಿ ಇಂದು (ಡಿ.5) ಸಂಭವಿಸಿದೆ.

    ಪಂಜಿಕಲ್ಲು ಬಾಂದೊಟ್ಟು ರೆಚ್ಚಾಡಿ ಹರೀಶ್‌ ಎಂಬುವವರ ಪತ್ನಿ ತಿಲಕ (40) ಮೃ*ತ ಮಹಿಳೆ.

    ಮಕ್ಕಳ ಸಹಿತ ರಿಕ್ಷಾದಲ್ಲಿದ್ದ ಎಂಟು ಮಂದಿಗೆ ಗಾ*ಯವಾಗಿದ್ದು, ಅವರನ್ನು ಯಶಸ್ವಿನಿ, ಗೀತಾ, ರೇವತಿ, ಸರಸ್ವತಿ, ವೇದಾವತಿ, ರಾಜೀವಿ ಮತ್ತು ಮಕ್ಕಳಾದ ದಿಗಂತ್‌, ದಿಶಾನಿ ಎಂದು ಗುರುತಿಸಲಾಗಿದೆ. ಗಾ*ಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮದ್ವದಲ್ಲಿ ಸಂಬಂಧಿಕರ ಮನೆಯಲ್ಲಿ ನಡೆದ ಸೀಮಂತ ಕಾರ್ಯಕ್ರಮಕ್ಕೆ ಹೋಗಿ ವಾಪಾಸು ಮನೆಗೆ ಬರುವ ಸಂದರ್ಭ ದು*ರ್ಘಟನೆ ನಡೆದಿದೆ. ಪಂಜಿಕಲ್ಲುವಿನಿಂದ ನಾರಾಯಣ ಪೂಜಾರಿಯ ರಿಕ್ಷಾವನ್ನು ಗಾಯಾಳುಗಳು ಬಾಡಿಗೆ ಮಾಡಿದ್ದು, ಕಾರ್ಯಕ್ರಮ ಮುಗಿಸಿ ಅದೇ ಗಾಡಿಯಲ್ಲಿ ಮಂಗಳೂರಿನಿಂದ ಪುಂಜಾಲಕಟ್ಟೆ ಕಡೆಗೆ ಬರುತ್ತಿದ್ದ ವೇಳೆ ರಿಟ್ಸ್‌ ಕಾರು ಮತ್ತು ಆಪೆ ರಿಕ್ಷಾ ನಡುವೆ ಅ*ಪಘಾತವಾಗಿದೆ.

    ಇನ್ನು ಘಟನೆ ತಿಳಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ ಉಳಿಪ್ಪಾಡಿಗುತ್ತು ಗಾಯಾಳುಗಳು ದಾಖಲಾಗಿರುವ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮೃತರಾದ ತಿಲಕ ಅವರ ಮೃತದೇಹ ಇರಿಸಲಾದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ಘಟನೆಯ ಕುರಿತು ಪಾಣೆಮಂಗಳೂರು ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    1700 ವರ್ಷಗಳ ಬಳಿಕ ಸಾಂಟಾ ಕ್ಲಾಸ್ ನಿಜ ಮುಖ ಅನಾವರಣ..!

    Published

    on

    ಮಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬ ಬರಲಿದ್ದು, ಹಬ್ಬಕ್ಕೆ ಕಳೆ ತರಲು ಉಡುಗೊರೆ ಸಹಿತವಾಗಿ ಸಾಂಟಾ ಕ್ಲಾಸ್ ಕೂಡ ಬರಲಿದ್ದಾನೆ. ಮಕ್ಕಳಿಗೆ ತುಂಬಾ ಅಚ್ಚುಮೆಚ್ಚಿನ ಕ್ರಿಸ್ಮಸ್ ಅಜ್ಜನಾಗಿ ಕಾಣಿಸಿಕೊಳ್ಳುವ ಈ ಸಾಂಟಾ ಕ್ಲಾಸ್ ನಿಜಕ್ಕೂ ಇದ್ರಾ? ಅಥವಾ ಇದೊಂದು ಕಾಲ್ಪನಿಕ ವ್ಯಕ್ತಿಯಾ ಎಂಬ ಗೊಂದಲ ಹಲವರಲ್ಲಿ ಇರಬಹುದು. ಆದ್ರೆ ಈ ಗೊಂದಲಕ್ಕೆ ತೆರೆ ಎಳೆಯುವ ಕೆಲಸವನ್ನು ವಿಜ್ಞಾನಿಗಳು ಮಾಡಿದ್ದು, ನಿಜವಾದ ಸಾಂಟಾಕ್ಲಾಸ್ ಹೇಗಿದ್ದ ಎಂಬ ಚಿತ್ರವನ್ನು ರಚಿಸಿದ್ದಾರೆ.

    ಮೈರಾದ ಸೇಂಟ್‌ ನಿಕೋಲ್ಸನ್ ಎಂಬ ವ್ಯಕ್ತಿಯೇ ಈ ಸಾಂಟಾ ಕ್ಲಾಸ್‌ ಎಂಬುದನ್ನು ವಿಜ್ಞಾನಿಗಳು ಅನಾವರಣ ಮಾಡಿದ್ದಾರೆ. 1700 ವರ್ಷಗಳ ಬಳಿಕ ಇದೇ ಮೊದಲ ಬಾರಿ ಸಾಂಟಾ ಕ್ಲಾಸ್ ಯಾರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಕ್ರೈಸ್ತ ಸಮುದಾಯದವರಾದ ನಿಕೋಲ್ಸನ್‌ , ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಿದ್ದು, ಬಳಿಕ ಇದು ಕ್ರಿಸ್‌ಮಸ್ ಜೊತೆಗೆ ಸಂಬಂಧ ಹೊಂದಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಕಾರಣದಿಂದ ಮಕ್ಕಳು ಅವರನ್ನು ತುಂಬಾ ಇಷ್ಟ ಪಡುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.  ಮಿರರ್ ವರದಿಯ ಸೇಂಟ್ ನಿಕೋಲ್ಸನ್ ಅವರ ತಲೆ ಬುರುಡೆಯನ್ನು ವಿಧಿ ವಿಜ್ಞಾನದ ಮೂಲಕ ಅಂದಾಜಿಸಿ ಅವರ ಮುಖವನ್ನು ಚಿತ್ರಿಸಲಾಗಿದೆ. ಪ್ರಪಂಚದಾದ್ಯಂತ ಅಪಾರ ಜನಪ್ರಿಯತೆ ಹೊಂದಿರುವ ಸೇಂಟ್ ನಿಕೋಲ್ಸನ್‌ ಅವರ ಬಗ್ಗೆ ಯಾವುದೇ ನಿರ್ದಿಷ್ಟ ವಿವರಣೆ ಇಲ್ಲದೇ ಇದ್ರೂ ಜನರು ಅವರ ಅಸಲಿ ಮುಖವನ್ನು ನೋಡುವಂತೆ ವಿಜ್ಞಾನಿಗಳು ಮಾಡಿದ್ದಾರೆ ಎನ್ನಲಾಗಿದೆ.


    ಈ ವರದಿಯ ಪ್ರಕಾರ, ಅಧ್ಯಯನದ ಮುಖ್ಯಸ್ಥ ಸಿಸೆರೋ ಮೊರೆಸ್ ಅವರು ನಿಕೋಲ್ಸನ್ ಅವರ ತಲೆ ತುಂಬಾ ಬಲವಾಗಿತ್ತು ಎಂದು ತೋರಿಸುತ್ತದೆ ಎಂದಿದ್ದಾರೆ. ಈ ಮುಖವು 1823 ರಲ್ಲಿ ‘ಎ ವಿಸಿಟ್ ಫ್ರಮ್‌ ಸೇಂಟ್ ನಿಕೋಲ್ಸನ್‌’ ಎಂಬ ಕವಿತೆಯಲ್ಲಿ ಮುದ್ರಿತವಾದ ಮುಖಕ್ಕೆ ಹೊಂದಿಕೆಯಾಗುತ್ತದೆ ಎಂದಿದ್ದಾರೆ. ಈ ಕವಿತೆಯಲ್ಲಿ ದಪ್ಪ ಗಡ್ಡದ ಮುಖವು ಸಾಂಟಾ ಕ್ಲಾಸ್ ಅವರನ್ನು ನೆನಪಿಸುತ್ತದೆ.

    ಸಾಂಟಾ ಕ್ಲಾಸ್ ಬಗ್ಗೆ ಅಧ್ಯಯನ ನಡೆಸ್ತಾ ಇರುವುದು ಹೊಸದೇನು ಅಲ್ಲ. 1950 ರಲ್ಲಿ ಲುಯಿಗಿ ಮಾರ್ಟಿನೋ ಎಂಬವರು ಸೇಂಟ್ ನಿಕೋಲ್ಸನ್‌ ಅವರನ್ನು ಅಧ್ಯಯನ ಮಾಡಲು ಆರಂಭಿಸಿದ್ದರು. ಈಗ ಸಿಸೆರೋ ಮೋರಸ್ ಅವರು ಲುಯಿಗಿ ಮಾರ್ಟಿನೋ ಅವರು ಸಂಗ್ರಹಿಸಿದ ಡೇಟಾವನ್ನು ಬಳಿಸಿಕೊಂಡು 3ಡಿ ಯಲ್ಲಿ ಅವರ ತಲೆಯನ್ನು ಮರು ನಿರ್ಮಿಸಿದ್ದಾರೆ. ನಂತರ ಎಸ್ಪಾಟಿಕ್ಸ್‌ ಎಕ್ಸ್‌ಟೆನ್ಶನ್ ಸಹಾಯದಿಂದ ಮುಖದ ಬಾಹ್ಯ ರೇಖೆಯನ್ನು ರಚಿಸಿ ರೂಪ ನೀಡಿದ್ದಾರೆ.

    Continue Reading

    DAKSHINA KANNADA

    ಕಾಸರಗೋಡು: ಮರ ಕಡಿಯುತ್ತಿದ್ದ ಸಂದರ್ಭ ಮರ ಬಿದ್ದು ವ್ಯಕ್ತಿ ಸಾ*ವು

    Published

    on

    ಕಾಸರಗೋಡು: ಮರ ಕಡಿಯುತ್ತಿದ್ದ ಸಂದರ್ಭದಲ್ಲಿ ಮರ ಬಿದ್ದು ಓರ್ವ ಮೃ*ತಪಟ್ಟ ಘಟನೆ ಗುರುವಾರ ಮಧ್ಯಾಹ್ನ ಕಾಸರಗೋಡಿನ ಮಂಜೇಶ್ವರ ಸಮೀಪದ ಕಡಂಬಾರ್ ಇಡಿಯ ಎಂಬಲ್ಲಿ ನಡೆದಿದೆ. ಕಡಂಬಾರ್ ಗಾಂಧಿ ನಗರದ ಅಬ್ದುಲ್ ಸತ್ತಾರ್ (44) ಮೃ*ತಪಟ್ಟವರು.

    ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲಾಗಲಿಲ್ಲ. ಇಡಿಯದ ವ್ಯಕ್ತಿಯೋರ್ವರ ಮನೆಯ ಹಿತ್ತಿಲಿನಲ್ಲಿ ಮರ ಕಡಿಯುತ್ತಿದ್ದಾಗ ಘಟನೆ ನಡೆದಿದೆ.

    ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

    Continue Reading

    LATEST NEWS

    Trending