ನಾಳೆ ಬಹು ನಿರೀಕ್ಷಿತ ಪಂಪ್ ವೆಲ್ ಫ್ಲೈ ಓವರ್ ಲೋಕಾರ್ಪಣೆ
Published
5 years agoon
By
Adminನಾಳೆ ಬಹು ನಿರೀಕ್ಷಿತ ಪಂಪ್ ವೆಲ್ ಫ್ಲೈ ಓವರ್ ಲೋಕಾರ್ಪಣೆ
ಮಂಗಳೂರು : ದಶಕದ ಬಳಿಕ ಮಂಗಳೂರಿನ ಪಂಪ್‌ವೆಲ್ ಫ್ಲೈ ಓವರ್ ಕಾಮಗಾರಿ ಸಂಪೂರ್ಣಗೊಂಡಿದೆ. ನಾಳೆ ನೂತನ ಮೇಲ್ಸೇತುವೆ ಲೋಕಾರ್ಪಣೆಗೊಳ್ಳಲಿದೆ.ಕರಾವಳಿಯಲ್ಲಿ ಅತಿಹೆಚ್ಚು ಬಾರಿ ಟ್ರೋಲ್ಗೊಳಗಾಗಿದ್ದ ಈ ಪಂಪ್ವೆಲ್ ಮೇಲ್ಸೇತುವೆ ಬರೋಬ್ಬರಿ 10 ವರ್ಷಗಳ ನಂತರ ಸಂಚಾರಕ್ಕೆ ಮುಕ್ತವಾಗುತ್ತಿದೆ.
10 ವರ್ಷಗಳ ಹಿಂದೆ ಮಂಗಳೂರು ಕೇರಳವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಈ ಭಾಗದಲ್ಲಿ ಈ ಮೇಲ್ಸೇತುವೆ ಕಾಮಗಾರಿ ಆರಂಭವಾಗಿತ್ತು. 2010ರಿಂದ ಇದುವರೆಗೂ ಆರೇಳು ಬಾರಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಗಡುವು ವಿಸ್ತರಣೆಯಾಗಿತ್ತು. ಇದೀಗ ನಾಳೆ ಈ ಮೇಲ್ಸೇತುವೆ ಉದ್ಘಾಟನೆಯಾಗಲಿದೆ. 600 ಮೀ. ಉದ್ದದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಡಾಂಬರೀಕರಣವೂ ಮುಗಿದಿದೆ.
.2010ರಲ್ಲಿ ಆರಂಭವಾಗಿದ್ದ ಈ ಮೇಲ್ಸೇತುವೆಯ ಕಾಮಗಾರಿ ಗುತ್ತಿಗೆ ಕಂಪೆನಿ ನವಯುಗದಿಂದ 2013ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, 10 ವರ್ಷವಾದರೂ ಪೂರ್ಣಗೊಳ್ಳದೆ ಆರೇಳು ಡೆಡ್ ಲೈನ್ಗಳನ್ನು ಕಂಡಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಪಂಪ್ವೆಲ್ ಬಳಿ ನಿರ್ಮಾಣವಾಗಿರುವ ಈ ಮೇಲ್ಸೇತುವೆ ಬಗ್ಗೆ ಹುಟ್ಟಿಕೊಂಡಿರುವ ಟ್ರೋಲ್ಗಳಿಗೆ ಲೆಕ್ಕವಿರಲಿಲ್ಲ. ಈ ಮೇಲ್ಸೇತುವೆಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಸಾಕಷ್ಟು ಟೀಕೆಗಳನ್ನು ಎದುರಿಸ ಬೇಕಾಯಿತು.
ಇನ್ನು ಕೊನೆಯ ಹಂತದಲ್ಲಿರುವ ಪಂಪ್ವೆಲ್ ಮೇಲ್ಸೇತುವೆಯ ವೀಕ್ಷಣೆ ಸಂಸದ ನಳಿನ್ ಕುಮಾರ್ ಕಟೀಲ್ ನಿನ್ನೆ ಸಂಜೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಂಪ್ ವೆಲ್ ಮೇಲ್ಸೇತುವೆಯ ಕಾಮಗಾರಿಯನ್ನು ವೀಕ್ಷಿಸಿದ ಸಂಸದರು, ಕಾಮಗಾರಿ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನು ಫ್ಲೈ ಓವರ್ ವೀಕ್ಷಣೆಯ ಸಂದರ್ಭ ಶಾಸಕ ವೇದವ್ಯಾಸ್ ಕಾಮತ್, ನಗರ ಪಾಲಿಕೆ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು, ಸಂತೋಷ್ ಕುಮಾರ್ ರೈ ಬೋಳಿಯಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವಿಡಿಯೋಗಾಗಿ..
You may like
LATEST NEWS
ಎಂಸಿಸಿ ಬ್ಯಾಂಕ್ ಆತ್ಮಹತ್ಯೆ ಪ್ರಕರಣ: ಮೃತ ಮನೋಹರ್ ಪಿರೇರಾ ನಿವಾಸಕ್ಕೆ ಯು. ಟಿ. ಖಾದರ್ ಭೇಟಿ
Published
44 seconds agoon
29/12/2024By
NEWS DESK2ಮಂಗಳೂರು: ಉಳಾಯಿಬೆಟ್ಟು ಗ್ರಾಮದ, ಕುಟಿನ್ಹ ಪದವು, ಫೆರ್ಮಾಯ್ ಚರ್ಚ್ ಬಳಿಯ ನಿವಾಸಿ ಮನೋಹರ್ ಪಿರೇರಾ (47 ವರ್ಷ) ರವರು ಡಿಸೆಂಬರ್ 17 ರಂದು ಆತ್ಮ ಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಕಾರಣ ಎಂದು ಹೇಳಿ ತಮ್ಮ ಕೊನೆಯ ವಾಟ್ಸಾಪ್ ವಿಡಿಯೋ ಮಾಡಿ ಹಲವು ವಾಟ್ಸಪ್ಪ್ ಗ್ರೂಪ್ ಗಳಲ್ಲಿ ಹಂಚಿ ಆತ್ಮಹತ್ಯೆಮಾಡಿ ಕೊಂಡಿದ್ದರು.
ತನ್ನ ಸಾಲವನ್ನು ಮರುಪಾವತಿಸಲು ನೀಡಿದ ಹಣವನ್ನು ಸಾಲಕ್ಕೆ ಜಮೆ ಮಾಡದೆ 9 ಲಕ್ಷ ರೂಪಾಯಿ ಯನ್ನು ಅನಿಲ್ ಲೋಬೊ ತಿಂದಿದ್ದಾನೆ ಎಂದು ವಿವರಿಸಿದ್ದರು.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ FIR ದಾಖಲಾಗಿದ್ದು ದಿನಾಂಕ 18-12-2024 ರಂದು ಭಾತೀಯ ನ್ಯಾಯ ಸಂಹಿತೆ ಸೆಕ್ಷನ್ 108 ಅಡಿಯಲ್ಲಿ ಅನಿಲ್ ಲೋಬೊ ನನ್ನು ಬಂದಿಸಲಾಗಿತ್ತು.
ಮನೋಹರ್ ಪಿರೇರಾ ಕುಟುಂಬಕ್ಕೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿ ಪರಿಸರದ ನೂರಾರು ಮಂದಿಯ ಸಹಿಯನ್ನೊಳಗೊಂಡ ಮನವಿಯನ್ನು ರಾಜ್ಯದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಮುಖ್ಯಮಂತ್ರಿಗಳು, ಗ್ರಹಸಚಿವರು, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ರವರಿಗೆ ನೀಡಲಾಗಿತ್ತು. ಮನವಿಗೆ ಸ್ಪಂದಿಸಿದ ವಿಧಾನ ಸಭಾಧ್ಯಕ್ಷ ಯು. ಟಿ ಖಾದರ್ ರವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾoತ್ವನ ಹೇಳಿದ್ದಾರೆ. ನಿಷ್ಪಕ್ಷ ತನಿಖೆಗೆ ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿರುತ್ತಾರೆ.
ಎಂಸಿ ಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊನಿಂದ ತೊಂದರೆಗೊಳಗಾ ದ ಇತರ ಗ್ರಾಹಕರು ಸ್ಥಳದಲ್ಲಿ ಹಾಜರಿದ್ದು ತಮ್ಮ ಅಳಲನ್ನು ಯು. ಟಿ. ಖಾದರ್ ಬಳಿ ತೋಡಿಕೊಂಡರು. ಈ ವೇಳೆ ಹಾಜರಿದ್ದ ಸ್ಥಳೀಯರು ವಿಧಾನ ಸಭಾಧ್ಯಕ್ಷ ಯು. ಟಿ ಖಾದರ್ ರವರ ಬಳಿ ದಿವಂಗತ ಮನೋಹರ್ ರವರ ಬದುಕಿನ ಕಷ್ಟಗಳನ್ನು ವಿವರಿಸಿದರು ಹಾಗೂ ಅವರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು.
International news
ಕಝಕಿಸ್ತಾನ ವಿಮಾನ ದುರಂತ: ಅಝರ್ ಬೈಜಾನ್ ಅಧ್ಯಕ್ಷರಿಗೆ ಕ್ಷಮೆಯಾಚಿಸಿದ ಪುಟಿನ್
Published
8 minutes agoon
29/12/2024By
NEWS DESK3ಮಂಗಳೂರು/ಮಾಸ್ಕೋ: ಬಾಕುವಿನಿಂದ ಗ್ರೋಝ್ನಿಗೆ ತೆರಳುತ್ತಿದ್ದ 60 ಕ್ಕೂ ಅಧಿಕ ಪ್ರಯಾಣಿಕರಿದ್ದ ಅಝರ್ ಬೈಜಾನ್ ಏರ್ ಲೈನ್ಸ್ ಗೆ ಸೇರಿದ ವಿಮಾನವು ಕಝಾಕಿಸ್ತಾನದ ಅಕ್ಟೌದಲ್ಲಿ ಪತನಗೊಂಡಿತ್ತು.
ಕಝಾಕಿಸ್ತಾನದಲ್ಲಿ ಸಂಭವಿಸಿದ ವಿಮಾನ ದುರಂತ ಸಂದರ್ಭದಲ್ಲಿ ಉಕ್ರೇನ್ ಡ್ರೋನ್ ಗಳ ವಿರುದ್ದ ರಷ್ಯಾದ ವಾಯುಸೇನೆ ಕಾರ್ಯಾಚರಣೆ ನಡೆಸುತ್ತಿತ್ತು. ದಕ್ಷಿಣ ರಷ್ಯಾದಿಂದ ಡ್ರೋನ್ ಗಳನ್ನು ಹಾರಿಸಿದ ಬಳಿಕ ಕಝಕಿಸ್ತಾನ್ ನ ಅಕ್ಟೌ ನಗರದ ಬಳಿ ಅಜರ್ಬೈಜಾನ್ ನ J2-8243 ವಿಮಾನ ಪತನಗೊಂಡಿತು. 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ 38 ಮಂದಿ ಸಾ*ವನ್ನಪ್ಪಿದ್ದು, ಉಳಿದು 29 ಮಂದಿ ಗಾಯಗೊಂಡಿದ್ದರು.
ಇದೀಗ ಈ ದುರಂತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ಷಮೆ ಕೋರಿದ್ದಾರೆ. ಅಝರ್ ಬೈಜಾನ್ ಅಧ್ಯಕ್ಷ ಇಲ್ ಹ್ಯಾಮ್ ಅಲಿಯೆವ್ ಅವರಿಗೆ ಶನಿವಾರ ಕರೆ ಮಾಡಿದ ಪುಟಿನ್ ಕ್ಷಮೆ ಯಾಚಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕಜಕಿಸ್ತಾನದಲ್ಲಿ ಭೀಕರ ವಿಮಾನ ಅಪಘಾತ; ಕನಿಷ್ಠ 67 ಮಂದಿ ಸಾ*ವು !
ದುರಂತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳುವಂತೆ ಹಾರೈಸುತ್ತೇನೆ ಎಂದು ಕ್ರೆಮ್ಲಿನ್ ವರದಿ ಮಾಡಿದೆ.
ಇದರೊಂದಿಗೆ ಅಝರ್ ಬೈಜಾನ್ ನ ವಿಮಾನವನ್ನು ರಷ್ಯನ್ ಪಡೆಗಳು ಹೊಡೆದುದುರುಳಿಸಿರುವುದನ್ನು ಪುಟಿನ್ ಅವರು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆಯೆಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ.
ರಷ್ಯಾದ ವಾಯುರಕ್ಷಣಾ ವ್ಯವಸ್ಥೆಯು ಅಝರ್ ಬೈಜಾನ್ ವಿಮಾನದ ಪತನಕ್ಕೆ ಕಾರಣವಾಗಿದೆಯೆಂದು ವೈಮಾನಿಕ ತಜ್ಞರು ಹೇಳಿದ್ದಾರೆ.
ಕಝಕಿಸ್ತಾನದ ಗ್ರೋಝ್ನಿಯಲ್ಲಿ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದರಿಂದ ರಷ್ಯಾದ ವಾಯುರಕ್ಷಣಾ ವ್ಯವಸ್ಥೆಗಳು ಪ್ರತಿದಾಳಿ ನಡೆಸಿರುವುದಾಗಿ ರಷ್ಯಾವು ಶನಿವಾರ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ. ಆದರೆ ಇದು ವಿಮಾನದ ಪತನಕ್ಕೆ ಕಾರಣವಾಗಿದೆಯೆಂದು ಹೇಳಿಕೊಂಡಿರಲಿಲ್ಲ.
LATEST NEWS
ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ವಾಚ್ ಇದು; ಇದರ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ..!
Published
38 minutes agoon
29/12/2024By
NEWS DESK2ಸಮಯ ಅನ್ನೋದು ಬೆಲೆ ಕಟ್ಟಲಾಗದ್ದು. ಆದ್ರೆ ಅದೇ ಸಮಯವನ್ನು ತಿಳಿಸುವ ವಾಚ್ಗೆ ಲಕ್ಷ ಲಕ್ಷ ಕೋಟಿ ಕೋಟಿ ಬೆಲೆಯಿದೆ. ಅಂಬಾನಿಯ ಅಂಟಿಲಿಯಾ ಬಂಗಲೆಯಲ್ಲಿರುವ ಕಾರ್ಗಳ ಮೌಲ್ಯದ ವಾಚ್ಗಳು ಕೂಡ ಬಜಾರ್ನಲ್ಲಿ ಬಂದಿವೆ.ವಾಚ್ಗಳು ಈಗ ಕೇವಲ ಟೈಮ್ಪೀಸ್ ಆಗಿ ಉಳಿದಕೊಂಡಿಲ್ಲ. ಐಷಾರಾಮಿತನದ ಗುರುತಾಗಿ ಉಳಿದಕೊಂಡಿವೆ. ಹೀಗಾಗಿಯೇ ಎಲಾನ್ ಮಸ್ಕ್, ಮಾರ್ಕ್ ಜುಕರ್ ಬರ್ಗ್ ಇವರು ಸಂದರ್ಶನದಲ್ಲಿ, ವಿಡಿಯೋದಲ್ಲಿ ಕಾಣಿಸಿಕೊಂಡಾಗ ಅವರು ಒಂದು ವೇಳೆ ವಾಚ್ ಧರಿಸಿದ್ದರೆ ಆ ವಾಚ್ನ ಬ್ರ್ಯಾಂಡ್ ಯಾವುದು, ಅದರ ಬೆಲೆ ಎಷ್ಟು ಇವೆಲ್ಲ ಮಾತುಗಳು ಮುನ್ನೆಲೆಗೆ ಬರುತ್ತವೆ. ಈಗ ಅದೇ ರೀತಿ ವಿಶ್ವದ ಅತ್ಯಂತ ದುಬಾರಿ ವಾಚ್ನ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗಳು ಆಗುತ್ತಿವೆ.
ಸುಪ್ರೀಮ್ ಲಕ್ಸುರಿ ಗುರುತಾಗಿ, ಐಷಾರಾಮಿತನದ ಕಟ್ಟ ಕಡೆಯ ಎತ್ತರವಾಗಿ ಗುರುತಿಸಿಕೊಂಡಿದೆ ಹ್ಯಾಲುಸಿನೇಷನ್ ಎಂಬ ಈ ಡೈಮಂಡ್ ವಾಚ್. ಈ ವಾಚ್ನ ಬೆಲೆ ಕೇಳಿದ್ರೆ ಎಂತವರ ತಲೆಯೂ ಕೂಡ ಒಮ್ಮೆ ಗಿರ್ ಅನ್ನದೇ ಇರಲ್ಲ. ಈ ವಾಚ್ನ ಬೆಲೆ ಬರೋಬ್ಬರಿ 500 ಮಿಲಿಯನ್ ಡಾಲರ್, ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 466 ಕೋಟಿ ರೂಪಾಯಿ ಎಂದರೆ ನೀವು ನಂಬಲೇಬೇಕು.
ಇದನ್ನು ಅಪ್ಪಟ ವಜ್ರಗಳ ಹರುಳಿನಿಂದಲೇ ತಯಾರಿಸಲಾಗಿದೆ. ಲಾರೆನ್ಸ್ ಗ್ರಾಫ್ ಎಂಬ ಉದ್ಯಮಿ 2014ರಲ್ಲಿ ಈ ಒಂದು ಬಾಸಲ್ವರ್ಲ್ಡ್ಗೆ ಕಾಲಿಟ್ಟಿದ್ದರು. ವಿಶೇಷವಾದದ್ದು ಹಾಗೆ ಅಷ್ಟೇ ಐಶಾರಾಮಿ ಹಾಗೂ ಆಕರ್ಷಕ ವಾಚ್ ಸಿದ್ಧಪಡಿಸುವ ಗುರಿ ಅವರದ್ದಿತ್ತು. ಹೀಗಾಗಿ ಹಲವು ಬಣ್ಣದ ವಜ್ರಗಳಿಂದ ಕೂಡಿದ 110 ಕ್ಯಾರೆಟ್ನ ಈ ವಾಚ್ನ್ನು ಸಿದ್ಧಪಡಿಸಿದ್ದಾರೆ. ಈ ಹ್ಯಾಲುಸಿನೇಷನ್ ವಾಚ್ ಜಗತ್ತಿನಲ್ಲಿ ಅತ್ಯಂತ ವಿರಳವಾದ ಹಾಗೂ ದುಬಾರಿಯಾದ ವಾಚ್ನ ಪಟ್ಟಿಯಲ್ಲಿದೆ. ಹಲವು ಬಣ್ಣಗಳಲ್ಲಿ ಬರುವ ಈ ವಾಚ್ ತಿಳಿ ಗುಲಾಬಿ, ನೀಲಿ, ಹಸಿರು, ಆರೆಂಜ್ ಹಾಗೂ ಹಳದಿ ಬಣ್ಣಗಳಲ್ಲಿ ಈ ವಾಚ್ಗಳನ್ನು ಸಿದ್ಧಪಡಿಸಲಾಗಿದೆ.
ಇನ್ನು ಅನೇಕ ವಿನ್ಯಾಸಗಳಲ್ಲಿಯೂ ಕೂಡ ಈ ವಾಚ್ ಲಭ್ಯವಿದೆ. ಹೃದಯದ ವಿನ್ಯಾಸ, ಪೇರಳೆ ವಿನ್ಯಾಸ ಹೀಗೆ ಒಟ್ಟು ನಾಲ್ಕು ವಿನ್ಯಾಸಗಳಲ್ಲಿ ಇದು ಲಭ್ಯವಿದೆ. ಯುನಿಕ್ ಆಗಿರುವ ಶೇಪ್ ಹಾಗೂ ಕಲರ್ನಲ್ಲಿ ಲಭ್ಯವಿದ್ದು. ನಮ್ಮ ನಿಮ್ಮಂತವರ ಕೈಗೆ ನಿಲುಕದ ಎತ್ತರದಲ್ಲಿ ಇದೆ.
LATEST NEWS
ವಾಟರ್ ಹೀಟರ್ ನಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ
ಅರಂತೋಡು: ಭತ್ತದ ಲೋಡ್ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ
ವಿಷಕಾರಿ ಅನಿಲ ಸೇವಿಸಿ ನಾಲ್ವರು ಕಾರ್ಮಿಕರು ಸಾ*ವು
ಡಿ.28ರಂದು ಕರ್ನಾಟಕದಲ್ಲಿ ದಾಖಲೆಯ ಮದ್ಯ ಮಾರಾಟ
ಹುಬ್ಬಳ್ಳಿ ಸಿಲಿಂಡರ್ ಸ್ಪೋ*ಟ ಪ್ರಕರಣ: 6 ಮಂದಿ ಅಯ್ಯಪ್ಪ ಮಾಲಾಧಾರಿಗಳ ಸಾ*ವು
ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ಇವರೇ ನೋಡಿ..!
Trending
- DAKSHINA KANNADA2 days ago
ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!
- FILM5 days ago
ಆ ಒಂದು ದೃಶ್ಯದಿಂದ ಪುಷ್ಪ 2 ಚಿತ್ರಕ್ಕೆ ಮತ್ತೆ ಸಂಕಷ್ಟ!
- FILM4 days ago
ಶಿವರಾಜ್ಕುಮಾರ್ಗೆ ಕ್ಯಾನ್ಸರ್ ತಗುಲಿದ್ದು ದೇಹದ ಈ ಭಾಗಕ್ಕೆ
- bangalore5 days ago
ಡಿಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಚಿನ್ನ ಖರೀದಿಸಿ ವಂಚನೆ; ನಟ ಧಮೇಂದ್ರ ವಿರುದ್ದ ಎಫ್ ಐ ಆರ್ ದಾಖಲು !