ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿ ಹೊಲಸು ಮಾಡುವ ಅನಾಗರಿಕ ವರ್ತನೆ ಬಗ್ಗೆ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಜಾಗೃತಿ ಮೂಡಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಉಗುಳುವಿಕೆ ತಡೆ’ ಅಭಿಯಾನ ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಶೈಕ್ಷಣಿಕ ವರ್ಷದ ಆರಂಭದಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಉಗುಳುವಿಕೆ ತಡೆ’ ಅಭಿಯಾನ ನಡೆಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ಮೇ ಮೂರನೇ ವಾರದಿಂದ ಜೂನ್ ಎರಡನೇ ವಾರದವರೆಗೆ ಮಕ್ಕಳಿಗೆ, ಕಂಡಲ್ಲಿ ಉಗುಳುವುದರಿಂದ ಆಗುವ ದುಷ್ಪರಿಣಾಮ, ರೋಗ–ರುಜಿನಗಳು ಹರಡುವ ಬಗೆ ಮೊದಲಾದ ವಿಷಯಗಳನ್ನು ಶಿಕ್ಷಕರು ಮನವರಿಕೆ ಮಾಡುತ್ತಾರೆ. ಎರಡನೇ ಹಂತದಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಅಸೈನ್‌ಮೆಂಟ್ ನೀಡಲಾಗುತ್ತದೆ.
ಇದನ್ನು ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಪರಿಗಣಿಸಿ, ಮಕ್ಕಳಿಗೆ ಆಂತರಿಕ ಮೌಲ್ಯಮಾಪನದಲ್ಲಿ ಅಂಕ ನೀಡಲಾಗುತ್ತದೆ. ಮೂರನೇ ಹಂತದಲ್ಲಿ ಪಾಲಕರಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಡಿಡಿಪಿಐ ಸುಧಾಕರ್ ಕೆ. ತಿಳಿಸಿದರು.