Monday, January 24, 2022

ಪಂಪ್ ಸೆಟ್ ಕಳ್ಳನಿಗೆ ಬಿತ್ತು ಧರ್ಮದೇಟು..! 

ಬೆಳಗಾವಿ: ರೈತರ ಜಮೀನುಗಳಲ್ಲಿ ಮತ್ತು ನದಿ ತೀರದಲ್ಲಿದ್ದ ಪಂಪಸೆಟ್ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಗ್ರಾಮದ ಜನರೇ ಹಿಡಿದು ಧರ್ಮದ ಏಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ರವಿ ಗೊಲ್ಲರ ಎಂದು ಗುರುತಿಸಲಾಗಿದ್ದು ಇನ್ನೋರ್ವ ಕಳ್ಳ ಪರಾರಿಯಾಗಿದ್ದಾನೆ. ಅಥಣಿ ತಾಲೂಕಿನ ದೇವರಡ್ಡೇರಹಟ್ಟಿ ಗ್ರಾಮದಲ್ಲಿ ಅಗ್ರಾಣಿ ಹಳದಲ್ಲಿ ಅಳವಡಿಸಿದ್ದ ಪಂಪಸೆಟ್ ಕಳ್ಳತನ ಮಾಡಿ ಹೊತ್ತೊಯ್ಯುವ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳನಿಗೆ ಜನರೆ ಭರ್ಜರಿ ಗೂಸಾ ನೀಡಿದ್ದಾರೆ ಮತ್ತು ಆತನಿಂದ ಒಂದು ಪಂಪಸೆಟ್ ವಶಪಡಿಸಿಕೊಂಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅಥಣಿ ಪಿಎಸ್‍ಐ ಕುಮಾರ ಹಾಡಕಾರ ಮತ್ತು ಸಿಬ್ಬಂದಿ ಕಳ್ಳನನ್ನು ವಶಕ್ಕೆ ಪಡೆದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಜಮೀನುಗಳಲ್ಲಿ ಅಳವಡಿಸಿದ್ದ ಪಂಪಸೆಟ್‍ಗಳಿಗೆ ಕನ್ನ ಹಾಕಿ ಅರ್ಧ ಬೆಲೆಗೆ ಮಾರುವ ತಂಡ ಅಥಣಿ ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಆರೋಪಗಳು ಹಲವು ದಿನಗಳಿಂದ ಕೇಳಿಬರುತ್ತಿದ್ದು, ಇಂದು ಒಬ್ಬ ವ್ಯಕ್ತಿ ಜನರ ಕೈಗೆ ಸಿಕ್ಕಿ ಬಿದ್ದಿರುವದರಿಂದ ಈ ಬಗ್ಗೆ ವಿಶೇಷ ಕಾಳಜಿವಹಿಸಿ ತನಿಖೆ ನಡೆಸಿ ನೊಂದ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ದೇವರಡ್ಡೇರಹಟ್ಟಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Hot Topics

ಕಾರ್ಕಳದಲ್ಲಿ ಕೊರೋನಾದಂತೆ ಹರಡುತ್ತಿದೆ ಕಾಲು ಬಾಯಿ ರೋಗ

ಕಾರ್ಕಳ: ಇಲ್ಲಿನ ಆಸುಪಾಸಿನಲ್ಲಿ ಪ್ರಾಣಿಗಳಲ್ಲಿ ಕಂಡುಬರುವ ಅದರಲ್ಲೂ ಜಾನುವಾರಿನಲ್ಲಿ ಸಾಂಕ್ರಾಮಿಕ ಕಾಲುಬಾಯಿ ರೋಗ ಹರಡುತ್ತಿದೆ.ಇದರಿಂದಾಗಿ ಈಗಾಗಲೇ ಹಲವು ಜಾನುವಾರು ಬಲಿಯಾಗಿದ್ದು, ಪಶು ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.ಕಾರ್ಕಳ ನಗರ, ತೆಳ್ಳಾರು, ಮಿಯಾರು,...

ಮಂಗಳೂರಿನ ಕುವರಿ ರೆಮೊನಾ ಇವೆಟ್ಟಾ ಪಿರೇರಾಗೆ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ

ಮಂಗಳೂರು: ಈ ಬಾರಿಯ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ ಮಂಗಳೂರಿನ ರೆಮೊನಾ ಇವೆಟ್ಟಾ ಪಿರೇರಾ ಅವರಿಗೆ ದೊರೆತಿದೆ.ಸಾಂಸ್ಕೃತಿಕ ರಂಗದಲ್ಲಿ ಮಾಡಿದ ಸಾಧನೆಗೆ ಈ ಗೌರವ ಲಭಿಸಿದ್ದು, ಪುರಸ್ಕಾರವು ಒಂದು ಲಕ್ಷ ಮೊತ್ತ,...

ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿ ಸುನೀಲ್‌ ಕುಮಾರ್‌-ಉಡುಪಿಗೆ ಅಂಗಾರ ನೇಮಕ

ಮಂಗಳೂರು: ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್‌ ಕುಮಾರ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ಜಿಲ್ಲೆಗಳ...