Connect with us

    LATEST NEWS

    ಸೈಕೋ ಪತಿ: ಪತ್ನಿಗೆ ಮಾ*ದಕ ಪದಾರ್ಥ ನೀಡಿ ಪರ ಪುರುಷರಿಂದ ರೇ*ಪ್

    Published

    on

    ಮಂಗಳುರು/ಫ್ರಾನ್ಸ್ : ಮಾಜಿ ಪತ್ನಿ ಜಿಸೆಲ್ ಪೆಲ್ಲಿಕಾಟ್‌ಗೆ (70) ಮಾ*ದಕ ಪದಾರ್ಥ ನೀಡಿ ಪರ ಪುರುಷರಿಂದ ಅ*ತ್ಯಾಚಾರವೆಸಗುವಂತೆ ಮಾಡಿದ ಡೊಮಿನಿಕ್ ಪೆಲ್ಲಿಕಾಟ್‌ (72) ಗೆ ಫ್ರೆಂಚ್‌ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 10 ವರ್ಷಗಳಿಂದ ಹೆಂಡತಿಗೆ ಈ ರೀತಿ ಹಿಂ*ಸೆ ನೀಡಿರುವುದು ಸಾಬೀತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಇತರ ಪುರುಷರು ಭಾಗಿಯಾಗಿರುವುದು ತಿಳಿದುಬಂದಿದೆ.

    ಸಂತ್ರಸ್ಥೆ ಮಹಿಳೆಯು 10 ವರ್ಷಗಳಿಂದ ಅ*ತ್ಯಾಚಾರ ಸಹಿಸಿರುವುದಾಗಿ ತನ್ನ ಲಾಯರ್‌ ಆಂಟೊಯಿನ್‌ ಕ್ಯಾಮುಸ್‌ ಮೂಲಕ ಹೇಳಿಸಿದ್ದಾರೆ. ಆರೋಪಿ ಪತಿಯು ತನ್ನ ಹೆಂಡತಿಯ ಮೇಲೆ ಅ*ತ್ಯಾಚಾರ ಮಾಡಲು ಅಪರಿಚಿತರನ್ನು ನೇಮಕಕ್ಕೆ coco.fr ಎಂಬ ಹೆಸರಿನ ಸೈಟನ್ನು ಬಳಸುತ್ತಿದ್ದ ಎಂಬುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅ*ತ್ಯಾಚಾರ ಮಾಡುವುದನ್ನು ರೆಕಾರ್ಡ್‌ ಮಾಡುವುದು, ಪುರುಷರಿಗೆ ನಿಂ*ದನೀಯ ಭಾಷೆ ಬಳಸುವಂತೆ ಈತ ಪ್ರೋತ್ಸಾಹ ನೀಡುತ್ತಿದ್ದನಂತೆ. ಇದೆಲ್ಲ ಮಾಡುವ ಸಂದರ್ಭದಲ್ಲಿ ಆತ ತನ್ನ ಹೆಂಡತಿಗೆ ಮಾ*ದಕ ಪದಾರ್ಥ ನೀಡಿ ವಿಕೃತಿ ಮೆರೆಯುತ್ತಿದ್ದ. ನ್ಯಾಯಾಲಯದಲ್ಲಿ ಡೊಮಿನಿಕ್ ಮಗಳು ಕ್ಯಾರೊಲಿನ್ ಡೆರಿಯನ್ ತನ್ನ ಕೋಪವನ್ನು ವ್ಯಕ್ತಪಡಿಸಿದ್ದು, ಕೋಪದಿಂದ ತನ್ನ ತಂದೆಗೆ “ನಾಯಿ ಸ*ತ್ತ ಹಾಗೆ ಸಾ*ಯುವೆ ನೀನು” ಎಂದು ಹೇಳಿದ್ದಾಳೆ.

    ಗಿಸೆಲ್ ಮತ್ತು ಆಕೆಯ ಮೂವರು ಮಕ್ಕಳ ಸಮ್ಮುಖದಲ್ಲಿ ಈ ಅಂತಿಮ ತೀರ್ಪು ನೀಡಲಾಯಿತು.“ನಾನು ಈ ಹೋರಾಟವನ್ನು ನನ್ನ ಕುಟುಂಬಕ್ಕಾಗಿ ಮತ್ತು ಈ ದು*ರಂತದಿಂದ ಬಾಧಿತರಾದ ಪ್ರತಿಯೊಬ್ಬರಿಗೂ ಹೋರಾಡಿದೆ” ಎಂದು ಜಿಸೆಲ್‌ ತನ್ನ ಮೂವರು ಮಕ್ಕಳು ಮತ್ತು ಮೊಮ್ಮಕ್ಕಳ ಭವಿಷ್ಯವನ್ನು ಸೂಚಿಸುತ್ತಾ ನ್ಯಾಯಾಲಯದ ಹೊರಗೆ ಹೇಳಿದರು. ಡೊಮಿನಿಕ್ ಪೆಲ್ಲಿಕಾಟ್ ಒಳಗೊಂಡ ಪ್ರಕರಣವು ಫ್ರೆಂಚ್ ನ್ಯಾಯ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಉದಾಹರಣೆಯಾಗಿದೆ. ಈ ಘಟನೆಯು ನ್ಯಾಯ, ಕುಟುಂಬ ಮತ್ತು ಸಾಮಾಜಿಕ ಮೌಲ್ಯಗಳ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಮತ್ತು ಅಪರಾಧಿಗಳಿಗೆ ಎಚ್ಚರಿಕೆಯಾಗಿದೆ. ಈ ಐತಿಹಾಸಿಕ ನಿರ್ಧಾರದ ನಂತರ ಫ್ರಾನ್ಸ್ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಗ್ಗೆ ಹಲವು ದಿನಗಳಿಂದ ಪ್ರತಿಭಟನೆಗಳೂ ನಡೆದಿದ್ದವು.

    LATEST NEWS

    ಮಹಾರಾಷ್ಟ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ ?

    Published

    on

    ಮಂಗಳೂರು/ಮುಂಬೈ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದ ಸಂಪುಟದ ಸಚಿವರಿಗೆ ಶನಿವಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

    ಗೃಹ ಖಾತೆಯ ಜೊತೆಗೆ ಇಂಧನ, ಕಾನೂನು ಮತ್ತು ನ್ಯಾಯಾಂಗ, ಸಿಬ್ಬಂದಿ ಆಡಳಿತ, ವಾರ್ತಾ ಮತ್ತು ಪ್ರಚಾರ ಇಲಾಖೆಯ ಖಾತೆಗಳನ್ನು ಸಿಎಂ ದೇವೇಂದ್ರ ಫಡ್ನವೀಸ್ ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.

    ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ನಗರಾಭಿವೃದ್ದಿ, ವಸತಿ ಮತ್ತು ಲೋಕೋಪಯೋಗಿ ಖಾತೆಗಳು ಹಂಚಿಕೆಯಾಗಿದ್ದರೆ, ಮತ್ತೋರ್ವ ಉಪ ಮುಖ್ಯಮಂತ್ರಿ ಅಜಿತ್ ಪವರ್ ಅವರಿಗೆ ಹಣಕಾಸು ಮತ್ತು ಯೋಜನೆ ಹಾಗೂ ಅಬಕಾರಿ ಖಾತೆ ಹಂಚಿಕೆಯಾಗಿವೆ.

    ಇದನ್ನೂ ಓದಿ: ತೆಲಂಗಾಣ ಸರ್ಕಾರದಿಂದ ಟಾಲಿವುಡ್‌ಗೆ ಭಾರೀ ದೊಡ್ಡ ಹೊಡೆತ !!

    ಉಳಿದಂತೆ ಉದಯ್ ಸಾಮಂತ್ ಅವರಿಗೆ ಕೈಗಾರಿಕೆ, ಪಂಕಜಾ ಮುಂಡೆ ಅವರಿಗೆ ಪರಿಸರ, ಮಾಣಿಕ್ರಾವ್ ಕೊಕಾಟೆ ಅವರಿಗೆ ಕೃಷಿ ಖಾತೆಗಳನ್ನು ನೀಡಲಾಗಿದೆ. ಧನಂಜಯ್ ಮುಂಡೆ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಅಶೋಕ್ ಅವರಿಗೆ ಬುಡಕಟ್ಟು ಅಭಿವೃದ್ದಿ, ಆಶಿಶ್ ಶೆಲಾರ್ ಅವರಿಗೆ ಐಟಿ ಮತ್ತು ಸಂಸ್ಕೃತಿ ಇಲಾಖೆಯ ಉಸ್ತುವಾರಿ ವಹಿಸಲಾಗಿದೆ.

    ಇನ್ನೂ ಬಿಜೆಪಿಯ ಚಂದ್ರಶೇಖರ್ ಬಾವಂಕುಲೆಗೆ ಕಂದಾಯ, ಶಿವಸೇನೆಯ ದಾದಾಜಿ ಭುಸೆಗೆ ಶಾಲಾ ಶಿಕ್ಷಣ ಖಾತೆ ನೀಡಲಾಗಿದೆ. ಜಲಸಂಪನ್ಮೂಲ ಖಾತೆಯನ್ನು ಬಿಜೆಪಿಯ ಇಬ್ಬರು ಸಚಿವರುಗಳಾದ ರಾಧಾಕೃಷ್ಣ ವಿಖೆ ಪಾಟೇಲ್ ಮತ್ತು ಗಿರೀಶ್ ಮಹಾಜನ್ ನಡುವೆ ಹಂಚಿಕೆ ಮಾಡಲಾಗಿದೆ.

    ಡಿಸೆಂಬರ್ 5ರಂದು ಫಡ್ನವೀಸ್, ಏಕನಾಥ ಶಿಂಧೆ, ಅಜಿತ್ ಪವರ್ ಸಿಎಂ, ಡಿಸಿಎಂಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಡಿಸೆಂಬರ್ 15 ರಂದು 39 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

     

     

    Continue Reading

    LATEST NEWS

    ಬಾಂಗ್ಲಾ ಹಿಂದೂಗಳ ಮೇಲೆ ದಾ*ಳಿ ; ಭಾರತೀಯರ ಮುಗಿಸಲು ಉ*ಗ್ರರ ಸಂಚು!

    Published

    on

    ಮಂಗಳೂರು/ಕೋಲ್ಕತಾ: ದೇಗುಲಗಳ ಮೇಲೆ, ಹಿಂದೂಗಳ ಮೇಲೆ ಅಲ್ಲಿನ ಮ*ತಾಂಧರು ದಾಳಿ ನಡೆಸುತ್ತಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದು, ಇದೀಗ ನಿಷೇಧಿತ ಉ*ಗ್ರ ಸಂಘಟನೆಯೊಂದು ಭಾರತದೊಳಗೆ ನುಗ್ಗಿ ಹಿಂದೂ ನಾಯಕರ ಹ*ತ್ಯೆ ಮತ್ತು ರಸ್ತೆ ಕಾರಿಡಾರ್‌ ಸ್ಫೋ*ಟದ ಮೂಲಕ ಆರ್ಥಿಕ ವಿನಾಶಕ್ಕೆ ಸಂಚು ರೂಪಿಸುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

    ಕಳೆದ ಕೆಲ ಹಿಂದೆ ಪಶ್ಚಿಮ ಬಂಗಾಳ, ಕೇರಳ ಮತ್ತು ಅಸ್ಸಾಂನಲ್ಲಿ ಬಾಂಗ್ಲಾದೇಶ ಮೂಲದ ಅನ್ಸರ್‌ ಅಲ್‌ ಇಸ್ಲಾಂ ಸಂಘಟನೆಗೆ ಸೇರಿದ 8 ಶಂಕಿತ ಉ*ಗ್ರರನ್ನು ಬಂಧಿಸಲಾಗಿತ್ತು. ಈಶಾನ್ಯ ರಾಜ್ಯಗಳಲ್ಲಿನ ಪ್ರಮುಖ ಹಿಂದೂ ನಾಯಕರ ಹ*ತ್ಯೆಯ ಉದ್ದೇಶವನ್ನು ಉ*ಗ್ರರು ಹೊಂದಿದ್ದಾರೆ. ಜೊತೆಗೆ ಪಶ್ಚಿಮ ಬಂಗಾಳದ ಸಿಲಿಗುರಿಗೆ ಈಶಾನ್ಯ ರಾಜ್ಯಗಳ ನಂಟು ಬೆಸೆಯುವ ‘ಚಿಕನ್‌ ನೆಕ್‌’ ಎಂದು ಕರೆಯಲಾಗುವ ಸಿಲಿಗುರಿ ಕಾರಿಡಾರ್‌ ರಸ್ತೆ ಸ್ಫೋ*ಟಗೊಳಿಸುವ ಮೂಲಕ ಇಡೀ ಪ್ರದೇಶದಲ್ಲಿ ಅ*ಸ್ಥಿರತೆ ಸೃಷ್ಟಿಸಲು ಯತ್ನಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಇದು ಈಶಾನ್ಯ ರಾಜ್ಯಗಳಿಗೆ ಭಾರತವನ್ನು ಬೆಸೆಯುವ ಏಕೈಕ ರಸ್ತೆ ಮಾರ್ಗವಾಗಿದೆ.

    ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವಧಿಯಲ್ಲಿ ನಡೆದಿದ್ದ ಬಾಂಗ್ಲಾ ಪ್ರಜೆಗಳ ಬಲವಂತದ ನಾ*ಪತ್ತೆ ಹಿಂದೆ ಭಾರತದ ಕೈವಾಡವಿದೆ ಎಂದು ಬಾಂಗ್ಲಾದ ಮಧ್ಯಂತರ ಸರ್ಕಾರ ರಚಿಸಿರುವ ಸಮಿತಿಯ ವರದಿ ಹೇಳಿದೆ. ಬಾಂಗ್ಲಾದ ಸುದ್ದಿ ಸಂಸ್ಥೆ, ಸಂಗ್ಬಾದ್ ಸಂಸ್ಥೆಯು ಬಲವಂತದ ನಾ*ಪತ್ತೆಯ ಕುರಿತಾದ ತನಿಖಾ ವರದಿಯನ್ನು ಉಲ್ಲೇಖಿಸಿ ವರದಿ ನೀಡಿದ್ದು, ‘ಬಾಂಗ್ಲಾದೇಶದ ಬಲವಂತದ ನಾ*ಪತ್ತೆ ಪ್ರಕರಣಗಳಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆ ಸಾರ್ವಜನಿಕ ದಾಖಲೆಯ ವಿಷಯವಾಗಿದೆ. ಭಾರತದಲ್ಲಿ ಇನ್ನೂ ಬಂಧಿಯಾಗಿರುವ ಯಾವುದೇ ಬಾಂಗ್ಲಾದೇಶದ ನಾಯಕರನ್ನು ಗುರುತಿಸಲು ತಮ್ಮ ಪ್ರಯತ್ನಗಳನ್ನು ವಿಸ್ತರಿಸಲು ವಿದೇಶಾಂಗ ಮತ್ತು ಗೃಹ ಸಚಿವಾಲಯಗಳಿಗೆ ಶಿಫಾರಸ್ಸು ಮಾಡುತ್ತೇವೆ. ಬಾಂಗ್ಲಾದೇಶದ ಹೊರಗೆ ಈ ಜಾಡು ಅನುಸರಿಸುವುದು ನ್ಯಾಯದ ವ್ಯಾಪ್ತಿಯನ್ನು ಮೀರುತ್ತದೆ’ ಎಂದು ತನಿಖಾ ಆಯೋಗದ ವರದಿ ಉಲ್ಲೇಖಿಸಿದೆ.

    Continue Reading

    International news

    ಮಹತ್ವದ ನಿರ್ಧಾರ ಕೈಗೊಂಡ ಬೈಡನ್: 4.3 ಶತಕೋಟಿ ಡಾಲರ್ ವಿದ್ಯಾರ್ಥಿ ಸಾಲ ಮನ್ನಾ

    Published

    on

    ಮಂಗಳೂರು/ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ನಿವೃತ್ತಿಯಾಗುವುದಕ್ಕೂ ಮುನ್ನ ವಿದ್ಯಾರ್ಥಿ ಸಾಲವನ್ನು ಮನ್ನಾ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

    ಇದನ್ನೂ ಓದಿ: ರಷ್ಯಾದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಬೆಚ್ಚಿಬಿದ್ದ ಕಜಾನ್ ಜನತೆ !

    4.28 ಶತಕೋಟಿ ಡಾಲರ್ ಮೊತ್ತದ ವಿದ್ಯಾರ್ಥಿ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಅಧ್ಯಕ್ಷರು ಘೋಷಿಸಿದ್ದಾರೆ. ಇದರೊಂದಿಗೆ ವಿದ್ಯಾರ್ಥಿ ಸಾಲದಿಂದ ಮುಕ್ತರಾದವರ ಸಂಖ್ಯೆ ಸುಮಾರು 5 ದಶಲಕ್ಷಕ್ಕೆ ತಲುಪಿದೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಿದೆ.

    Continue Reading

    LATEST NEWS

    Trending