Thursday, September 29, 2022

ಉಡುಪಿ: ಅನುಮತಿಯಿಲ್ಲದೆ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ-PFIನ 11 ಕಾರ್ಯಕರ್ತರ ಮೇಲೆ ಕೇಸ್

ಉಡುಪಿ: ಉಡುಪಿಯಲ್ಲಿ ಎನ್‌ಐಎ ದಾಳಿ ಖಂಡಿಸಿ ಮುಂಚಿತವಾಗಿ ಅನುಮತಿ ಪಡೆಯದೆ ರಸ್ತೆ ತಡೆ ಮಾಡಿ ನಿನ್ನೆ ಪ್ರತಿಭಟನೆ ಮಾಡಿದ ಪಿಎಫ್‌ಐ ಸಂಘಟನೆಯ 11 ಮಂದಿ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ಸಾದೀಕ್‌ ಅಹಮ್ಮದ್‌(40), ಅಫ್ರೋಜ್‌ ಕೆ (39), ಇಲಿಯಾಸ್‌ ಸಾಹೇಬ್‌(46),ಇರ್ಷಾದ್‌(37), ಫಯಾಜ್‌ ಅಹಮ್ಮದ್‌(39), ಮಹಮ್ಮದ್‌ ಅಶ್ರಫ್‌(43), ಎ. ಹಾರೂನ್‌ ರಶೀದ್‌, ಮೊಹಮ್ಮದ್‌ ಜುರೈಜ್‌ (42), ಇಶಾಕ್‌ ಕಿದ್ವಾಯಿ (30), ಶೌಕತ್‌ಅಲಿ (31), ಮಹಮ್ಮದ್‌ ಝಹೀದ್‌ (24) ಪೊಲೀಸರು ವಶಕ್ಕೆ ಪಡೆದುಕೊಂಡ ಕಾರ್ಯಕರ್ತರು.


ಗುರುವಾರದಂದು ಉಡುಪಿಯ ಡಯಾನಾ ಸರ್ಕಲ್ ಬಳಿ ಪಿ.ಎಫ್.ಐ ಕಾರ್ಯಕರ್ತರು ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರ ವ್ಯತ್ಯಯಕ್ಕೆ ಕಾರಣವಾಗಿದ್ದರು.

ಅಲ್ಲದೆ ಗುಂಪನ್ನು ಚದುರಿಸಲು ನಗರದ ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಕಲಂ: 143, 147, 290 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

LEAVE A REPLY

Please enter your comment!
Please enter your name here

Hot Topics

‘ಪುರಾಣ ಜ್ಞಾನ ನೀಡುವ ಅದ್ಭುತವಾದ ಕಲೆ ಯಕ್ಷಗಾನ’

ಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ 29 ನೆಯ ಸರಣಿ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ CA ಗಿರಿಧರ ಕಾಮತ್ ಯಕ್ಷಗಾನ ಕಲೆಯು ಪುರಾಣ ಜ್ಞಾನ ನೀಡುವಷ್ಟು ಬೇರೆ ಯಾವ ಮಾಧ್ಯಮವೂ...

PFI ಬ್ಯಾನ್‌ಗೆ ಕೇಂದ್ರ ಕೊಟ್ಟ ಕಾರಣಗಳೇನು ಗೊತ್ತಾ…?

ಹೊಸದಿಲ್ಲಿ: ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ ಹಾಗೂ ಅದರ ಸಹ ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿ ಇಂದು ಬೆಳಿಗ್ಗೆ ಆದೇಶ ಹೊರಡಿಸಿದ ಬೆನ್ನಲ್ಲೇ ಪಿಎಫ್‌ಐ ಬ್ಯಾನ್‌ಗೆ...

ಸುಳ್ಯ: ಮಾಡರ್ನ್‌ಯುಗಕ್ಕೆ ಹೊಂದಿಕೊಂಡ ಕಾಗೆ ತನ್ನ ಗೂಡು ಹೆಣೆದಿದ್ದು ಕಬ್ಬಿಣದ ತಂತಿಯಲ್ಲಿ..!

ಸುಳ್ಯ: ಕಾಗೆಯೊಂದು ಕಬ್ಬಿಣದ ತಂತಿಗಳನ್ನೇ ಬಳಸಿ ಗೂಡು ಹೆಣೆದಿರುವ ಅದ್ಭುತ ಘಟನೆ ಸುಳ್ಯದ ಚೊಕ್ಕಾಡಿಯಲ್ಲಿ ನಡೆದಿದೆ.ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ಆವರಣದಲ್ಲಿ ಸ್ವಚ್ಚತೆ ಕಾರ್ಯ ಕೈಗೊಂಡ ವೇಳೆ ಮರವೊಂದರ ಕೊಂಬೆಯಲ್ಲಿ ಈ...