LATEST NEWS
ಅತ್ಯಾಚಾರ ಆರೋಪಿಯನ್ನು ಇನ್ನೂ ತಪ್ಪಿಸಲಿಕ್ಕೆ ಪೊಲೀಸರು ಬೆಂಬಲ ನೀಡಬೇಡಿ: ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ಆಕ್ರೋಶ
Published
3 years agoon
By
Adminಮಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ನಾಪತ್ತೆಯಾಗಿರುವ ಆರೋಪಿಯನ್ನು ಇನ್ನೂ ತಪ್ಪಿಸಲಿಕ್ಕೆ ಪೊಲೀಸರು ಬೆಂಬಲ ನೀಡಬೇಡಿ. ನ್ಯಾಯಾಲಯವೇ ಅವನದ್ದು ತಪ್ಪು ಎಂದಮೇಲೆ ಈ ಪೊಲೀಸರು ಇನ್ನೂ ಕಾಯುವುದು ಸರಿಯಲ್ಲ ಎಂದು ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಕ್ಕಾಗಿ ಸರ್ವಕಾಲೇಜು ವಿದ್ಯಾರ್ಥಿ ಸಂಘ ಮಂಗಳೂರು ನಗರ ಘಟಕ ಆಶ್ರಯದಲ್ಲಿ ಹಾಗು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಸಂತ್ರಸ್ತ ಯುವತಿ ಸಹ ಹಾಜರಿದ್ದಳು.
ನಂತರ ಮಾತನಾಡಿ, ಆರೋಪಿಯ ಜಾಮೀನು ಅರ್ಜಿ ವಜಾ ಆಗಿದೆ. ಆದ್ದರಿಂದ ಮೀನಾಮೇಷ ಎಣಿಸದೇ ಅವನನ್ನು ಬಂಧಿಸಿ. ಈಗಾಗಲೇ ಬಂಧಿತನಾಗಿರುವ ಅನಂತ ಭಟ್ಟ ಒಬ್ಬನನ್ನು ತೋರಿಸುವುದಲ್ಲ.
ಆತ ಆ ವಕೀಲನನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಾನೆ. ಪೊಲೀಸರಿಗೆ ಆರೋಪಿ ಎಲ್ಲಿ ಇರಬಹುದು ಎಂದು ಗೊತ್ತಿದ್ದೋ, ಗೊತ್ತಿಲ್ಲದ ಹಾಗೆ ಮಾಡುತ್ತಿದ್ದಿರೋ ಎಂಬುವುದು ಅರ್ಥವಾಗುತ್ತಿಲ್ಲ ಎಂದರು.
ಬೇಗ ಬಂಧಿಸಿದರೆ ಪೊಲೀಸರಿಗೂ ಕಾನೂನಿಗು ಗೌರವ. ಇನ್ನೂ ಬಂಧಿಸದಿದ್ದರೆ ನಮಗೆ ಅರ್ಥವಾಗುತ್ತದೆ.
ಈ ವಿಷಯದಲ್ಲಿ ಗೃಹಸಚಿವರು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಸಾಮಾಜಿಕ ಹೋರಾಟಗಾರ ಜೆರಾರ್ಡ್ ಟವರ್ ಮಾತನಾಡಿ, ಮಂಗಳೂರಿನ ಈಗಿನ ಪೊಲೀಸ್ ಕಮೀಷನರ್ ಮಂಗಳೂರಿಗೆ ಹೊಸದಾಗಿ ಬಂದಾಗ ತುಂಬಾ ಬದಲಾವಣೆ ತಂದಿದ್ದರು. ಆದರೆ ಈ ವಿಷಯದಲ್ಲಿ ಅವರಿಗೆ ಯಾರು ಹಸ್ತಕ್ಷೇಪ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ನಗರದಲ್ಲೇ ಹೀಗಾದರೆ ಹಳ್ಳಿಯ ಹೆಣ್ಣುಮಕ್ಕಳ ಕಥೆ ಏನಾಗಬೇಕು. ಅಗತ್ಯ ಬಿದ್ದರೆ, ಪೊಲೀಸರು ಬಂಧಿಸಿದಿದ್ದರೆ ನಾನು ಊಟ, ನೀರು ಬಿಟ್ಟು ಉಪವಾಸ ಕೂರುತ್ತೇನೆ, ಸತ್ತರೇ ಪೊಲೀಸರೇ ಹೊಣೆ ಎಂದರು.
LATEST NEWS
Watch Video: ರಸ್ತೆಯಲ್ಲಿ ಸೂಪರ್ ಮ್ಯಾನ್‌ನಂತೆ ಬೈಕ್ ಹಾರಿಸಿದ ವ್ಯಕ್ತಿ
Published
10 minutes agoon
29/11/2024By
NEWS DESK2ಸ್ಕೂಟರ್ ಸವಾರಿ ಮಾಡುವ ವ್ಯಕ್ತಿಯೋರ್ವ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಬೀಳುವ ಭಯಾನಕ ವಿಡಿಯೋ ವೈರಲ್ ಆಗಿದೆ.
ರಸ್ತೆ ವಿಭಜಕದ ಅನಿರೀಕ್ಷಿತ ಎತ್ತರದಿಂದಾಗಿ ಸ್ಕೂಟರ್ ನೇರವಾಗಿ ಪಕ್ಕದ ಲೇನ್ ಗೆ ಹಾರಿತ್ತು. ಆ ವ್ಯಕ್ತಿ ನೇರವಾಗಿ ಟ್ರಕ್ ನ ಬಾನಟ್ ಮೇಲೆ ಬಿದ್ದಿದ್ದಾನೆ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವ್ಯಕ್ತಿ ಅಥವಾ ಘಟನೆಯ ಬಗ್ಗೆ ವಿವರಗಳು ತಿಳಿದಿಲ್ಲ. ಆದರ ವೀಡಿಯೊ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಗಮನ ಸೆಳೆದಿದೆ. ಬೈಕ್ ಸವಾರನನ್ನು ನೆಟ್ಟಿಗರೊಬ್ಬರು “ಭಾರತದಲ್ಲಿ ಜನಿಸಿದ ಜೇಮ್ಸ್ ಬಾಂಡ್” ಎಂದು ಕರೆದಿದ್ದಾರೆ.
Watch Video:
LATEST NEWS
ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್; ನಿವೃತ್ತಿ ಘೋಷಿಸಿದ ಆರ್‌ಸಿಬಿ ಮಾಜಿ ಆಟಗಾರ
Published
31 minutes agoon
29/11/2024By
NEWS DESK4ಮಂಗಳೂರು/ಮುಂಬೈ : ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ 23 ಹಾಗೂ 24 ರಂದು ನಡೆದಿದೆ. ಈ ಹರಾಜಿನಲ್ಲಿ ಅನೇಕ ಸ್ಟಾರ್ ಆಟಗಾರರಿಗೆ ಫ್ರಾಂಚೈಸಿಗಳು ಮಣೆ ಹಾಕಿಲ್ಲ. ಅವರಲ್ಲಿ ಟೀಂ ಇಂಡಿಯಾದ ವೇಗಿ ಸಿದ್ಧಾರ್ಥ್ ಕೌಲ್ ಕೂಡ ಒಬ್ಬರು. ಮೆಗಾ ಹರಾಜಿನಲ್ಲಿ ಅನ್ ಸೋಲ್ಡ್ ಆದ 3 ದಿನಗಳ ಬಳಿಕ ಸಿದ್ಧಾರ್ಥ್ ಕೌಲ್ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಭಾವನಾತ್ಮಕತ ಪೋಸ್ಟ್‌ವೊಂದನ್ನು ಅವರು ಹಂಚಿಕೊಂಡಿದ್ದಾರೆ.
ಸಿದ್ಧಾರ್ಥ್ ಕೌಲ್ ಅವರು ಭಾರತ ಪರ 2018 ಮತ್ತು 2019ರ ನಡುವೆ 3 ಏಕದಿನ ಮತ್ತು 3 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಭಾರತ ಪರ ಆಡಿದ ಮೂರು ಏಕದಿನ ಪಂದ್ಯಗಳಲ್ಲಿ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ. ಆದರೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 4 ವಿಕೆಟ್ ಪಡೆದಿದ್ದಾರೆ.
ಸಿದ್ಧಾರ್ಥ್ ಕೌಲ್ ಪೋಸ್ಟ್ ಏನು ?
ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಿದ್ಧಾರ್ಥ್ ಕೌಲ್ ಈ ಬಗ್ಗೆ ಬರೆದುಕೊಂಡಿದ್ದಾರೆ. ಬಾಲ್ಯದಲ್ಲಿ ನಾನು ಪಂಜಾಬ್‌ನ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ, ನನಗೆ ಒಂದು ಕನಸು ಇತ್ತು. ನನ್ನ ದೇಶವನ್ನು ಪ್ರತಿನಿಧಿಸುವ ಕನಸು. 2018 ರಲ್ಲಿ, ದೇವರ ಕೃಪೆಯಿಂದ, ನಾನು T20i ತಂಡದಲ್ಲಿ ನನ್ನ ಭಾರತ ಕ್ಯಾಪ್ ನಂಬರ್ 75 ಮತ್ತು ODI ತಂಡದಲ್ಲಿ ಕ್ಯಾಪ್ ನಂಬರ್ 221 ಅನ್ನು ಸ್ವೀಕರಿಸಿದ್ದೇನೆ. ನನ್ನ ನಿವೃತ್ತಿಯನ್ನು ಘೋಷಿಸುವ ಸಮಯ ಈಗ ಬಂದಿದೆ. ನನ್ನ ವೃತ್ತಿಜೀವನದ ಎಲ್ಲಾ ಏರಿಳಿತಗಳ ವೇಳೆ ನಾನು ಪಡೆದ ಪ್ರೀತಿ ಮತ್ತು ಬೆಂಬಲಕ್ಕಾಗಿ ನನ್ನ ಕೃತಜ್ಞತೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನನಗಾಗಿ ಒಂದು ದಾರಿ ತೋರಿದಕ್ಕಾಗಿ ನಾನು ದೇವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅಂತ್ಯವಿಲ್ಲದ ಬೆಂಬಲಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ. ಪೋಷಕರು ಮತ್ತು ಕುಟುಂಬ ವರ್ಗ ನನಗಾಗಿ ಮಾಡಿದ ತ್ಯಾಗ, ನನ್ನ ಮೇಲಿಟ್ಟ ವಿಶ್ವಾಸಕ್ಕೆ ಧನ್ಯವಾದ.
ಇದನ್ನೂ ಓದಿ : ಬೆಂಗಳೂರಿನಲ್ಲಿ ನಡೆಯಲಿದೆ ಡಬ್ಲ್ಯುಪಿಎಲ್ ಮಿನಿ ಹರಾಜು
ಡ್ರೆಸ್ಸಿಂಗ್ ರೂಮ್ ನೆನಪುಗಳು ಮತ್ತು ನನ್ನ ತಂಡದ ಸದಸ್ಯರೊಂದಿಗಿನ ಸ್ನೇಹ… ಭಾರತವನ್ನು ಪ್ರತಿನಿಧಿಸುವ ಮತ್ತು 2008 ರ ಅಂಡರ್-19 ವಿಶ್ವಕಪ್ ಗೆಲ್ಲುವ ಮತ್ತು 2018 ರಲ್ಲಿ ನನ್ನ T20i ಮತ್ತು ODI ಕ್ಯಾಪ್‌ಗಳನ್ನು ಸ್ವೀಕರಿಸುವ ಚಿಕ್ಕ ಮಗುವಾಗಿದ್ದಾಗಿನ ಕನಸನ್ನು ಈಡೇರಿಸಿದ BCCI… ಕೋಲ್ಕತ್ತಾ ನೈಟ್ ರೈಡರ್ಸ್ , ಡೆಲ್ಲಿ ಡೇರ್‌ಡೆವಿಲ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು, IPL ಫ್ರಾಂಚೈಸಿಗಳು ನನಗೆ ಜೀವಮಾನದ ನೆನಪುಗಳು… 2007 ರಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಲು ಅವಕಾಶವನ್ನು ನೀಡಿದ್ದಕ್ಕಾಗಿ ಮತ್ತು ನನ್ನ ವೃತ್ತಿಜೀವನದುದ್ದಕ್ಕೂ ನನಗೆ ಬೆಂಬಲ ನೀಡಿದ್ದಕ್ಕಾಗಿ @pcacricketassociation ಗೆ ಧನ್ಯವಾದ.
ನಿಮ್ಮೆಲ್ಲರ ಬೆಂಬಲವಿಲ್ಲದಿದ್ದರೆ ನಾನು ಇಷ್ಟೊಂದು ಸಾಧನೆ ಮಾಡಲಾಗುತ್ತಿರಲಿಲ್ಲ. ಭವಿಷ್ಯವು ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ ಆದರೆ ನಾನು ಈ ಅಧ್ಯಾಯದ ಸವಿನೆನಪುಗಳೊಂದಿಗೆ ಮುಂದಿನ ಅಧ್ಯಾಯಕ್ಕೆ ಹೋಗುತ್ತೇನೆ. ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.
LATEST NEWS
ಅಪರಾಧ ಪ್ರಕರಣಗಳಿಂದ ಸುಸ್ತಾದ ಪೊಲೀಸರು; ಠಾಣೆಯಲ್ಲಿ ಹೋಮ, ಹವನ !
Published
42 minutes agoon
29/11/2024By
NEWS DESK3ಮಂಗಳೂರು/ಬೆಳಗಾವಿ: ಸಾಮಾನ್ಯವಾಗಿ ಕಳ್ಳರಿಗೆ ಯಾವಾಗಲೂ ಪೊಲೀಸರೆಂದರೆ ಭಯ ಇರುತ್ತೆ. ಆದರೆ ಇಲ್ಲಿ ಕಳ್ಳರ ಹಾವಳಿಯಿಂದ ಪೊಲೀಸರೇ ಸುಸ್ತಾಗಿದ್ದಾರೆ. ಹೀಗಾಗೀ ಪೊಲೀಸ್ ಠಾಣೆಯಲ್ಲಿ ಹೋಮ-ಹವನ ಮಾಡಲು ಮುಂದಾಗಿದ್ದಾರೆ.
ಸಾರ್ವಜನಿಕರ ಸಮಸ್ಯೆ, ಅಹಿತಕರ ಘಟನೆಗಳು, ಅಪರಾಧಗಳು, ಸುಲಿಗೆ, ದರೋಡೆ-ಕಳ್ಳತನ ನಡೆಯಬಾರದು ಎಂದು ಪೊಲೀಸರನ್ನು ನೇಮಕ ಮಾಡಿಕೊಳ್ಳುತ್ತಾರೆ. ಆದರೆ ಕಲವೊಂದು ಸಲ ಪೊಲೀಸರು ವಿಫಲರಾಗುತ್ತಾರೆ.
ಬೆಳಗಾವಿ ಪೊಲೀಸ್ ಠಾಣೆಯ ವ್ಯಾಪ್ತಿಯೊಂದರಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಪೊಲೀಸರು ಹೋಮ-ಹವನದ ಮೋರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಸಾಲು-ಸಾಲು ಪ್ರಕರಣಗಳು ಠಾಣೆಗೆ ಬರುತ್ತಿದ್ದಂತೆ ಪೊಲೀಸರು ಈ ಪೂಜೆ ಮಾಡಿಸಿದ್ದಾರೆ.
ಠಾಣೆಯ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದ ಈ ಪೂಜೆಯನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಬೆಳಗಾವಿ ನಗರದ ಶಿವ ಬಸವನಗರದಲ್ಲಿ ಇರುವ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿ ಸಾಲು ಸಾಲು ಅಪರಾಧ ಪ್ರಕರಣಗಳು ನಡೆದಿವೆ.
ಇದನ್ನೂ ಓದಿ: ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿ ಕೊಟ್ಟ ಈ ಮಹಿಳೆ ಯಾರು ?
ಕಳೆದ ಎರಡು ವಾರದಿಂದ ಈ ಠಾಣೆಯಲ್ಲಿ ಕ್ರೈಂ ಪ್ರಕರಣಗಳು ದಾಖಲಾಗಿವೆ. ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ, ಫೋಟೋಗ್ರಾಫರ್ ಕಿಡ್ನಾಪ್, ಪ್ರೀತಿ ವಿಚಾರಕ್ಕೆ ಸಂಬಂಧಪಟ್ಟಂತೆ ಶೂಟೌಟ್ ಹೀಗೆ ಹಲವು ಪ್ರಕರಣಗಳು ನಡೆಯುತ್ತಿವೆ. ಹೀಗಾಗಿಯೇ ಪೊಲೀಸರು ಠಾಣೆಯಲ್ಲಿ ಹೋಮ, ಹವನ ಮಾಡಿಸಿದ್ದಾರೆ. ಮಾಳಮಾರುತಿ ಸಿಪಿಐ ಜೆಎಂ ಕಾಲಿಮಿರ್ಜಿ ನೇತೃತ್ವದಲ್ಲಿ ಪೂಜೆ ನಡೆದಿದೆ ಎಂದು ಹೇಳಲಾಗಿದೆ.
LATEST NEWS
BBK11: ಮಹಾರಾಜ ಮಂಜಣ್ಣ, ಯುವರಾಣಿ ಮೋಕ್ಷಿತಾ ದಿಢೀರ್ ಬಂಧನ!
ವಯನಾಡ್ ನೂತನ ಸಂಸದೆ ಪ್ರಿಯಾಂಕ ಗಾಂಧಿಯನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ CM ಸಿದ್ದರಾಮಯ್ಯ.!
ನವಜಾತ ಶಿಶುಗಳ ಫೋಟೊಶೂಟ್ ಮಾಡಿಸುವುದು ಎಷ್ಟು ಅಪಾಯ ನೋಡಿ..!
ಈ ಟಿಪ್ಸ್ ಪಾಲಿಸಿದ್ರೆ ಗ್ಯಾಸ್ ಒಂದು ವಾರ ಹೆಚ್ಚು ಬಳಸಬಹುದು; ಅಡುಗೆ ಮಾಡುವಾಗ ಈ ಸಣ್ಣ ಕೆಲಸಗಳನ್ನು ಮಾಡಿ
ಬೆಂಗಳೂರಿನಲ್ಲಿ ನಡೆಯಲಿದೆ ಡಬ್ಲ್ಯುಪಿಎಲ್ ಮಿನಿ ಹರಾಜು
ಮಂತ್ರಾಲಯದಲ್ಲಿ ಹುಂಡಿ ಎಣಿಕೆ: 31 ದಿನಗಳಲ್ಲಿ 3 ಕೋಟಿ 92 ಲಕ್ಷ ಕಾಣಿಕೆ ಸಂಗ್ರಹ
Trending
- BIG BOSS6 days ago
BBK11: ಕಿಚ್ಚನ ಪಂಚಾಯ್ತಿಯಲ್ಲಿ ರಜತ್ಗೆ ಫುಲ್ ಕ್ಲಾಸ್; ಹೊರ ಹೋಗೋಕೆ ಬಾಗಿಲು ಓಪನ್ ಇದೆ ಎಂದ ಬಾದ್ ಷಾ!
- BANTWAL22 hours ago
ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
- Baindooru6 days ago
3ಕ್ಕೆ 3 ಸೋಲು.. ಮನೆಯಲ್ಲಿನ TV ಒಡೆದು ಹಾಕಿದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ
- Ancient Mangaluru2 days ago
ಮಂಗಳೂರಿನ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀ*ರುಪಾಲು