Thursday, February 9, 2023

ಬಜರಂಗದಳ ಕಾರ್ಯಕರ್ತ ಹರ್ಷ ಸಾವಿಗೆ ವ್ಯಕ್ತವಾಯಿತು ದ.ಕ ಜಿಲ್ಲೆಯಲ್ಲೂ ಖಂಡನೆ

ಶಿವಮೊಗ್ಗದಲ್ಲಿ ಹಿಂಸಾತ್ಮಾಕವಾಗಿ ಕೊಲೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಕ್ರೂರ ಸಾವನ್ನು ಆಗ್ರಹಿಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧೆಡೆ ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ವತಿಯಿಂದ ಅನೇಕ ರೀತಿಯಲ್ಲಿ ಪ್ರತಿಭಟನೆ ನಡೆದವು.

‘ಮತೀಯವಾದದ ಹೆಸರಿನಲ್ಲಿ ಈ ದೇಶವನ್ನು ನಾಶ ಮಾಡಬೇಕೆಂದು ಯಾರಾದರೂ ಯೋಚನೆ ಮಾಡಿದ್ದರೆ ಇನ್ನು ನಿಮ್ಮ ಯೋಚನೆ ನಡೆಯಲು ಸಾಧ್ಯವಿಲ್ಲ. ಸಂಘ ಪರಿವಾರದ ಯುವಕರು ಜಾಗೃತರಾಗಿದ್ದಾರೆ. ನಮ್ಮ ತಾಳ್ಮೆಗೂ ಮಿತಿ ಇದೆ’ ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಹೇಳಿದರು.

ಅವರು ಶಿವಮೊಗ್ಗದಲ್ಲಿ ನಡೆದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷರವರ ಹತ್ಯೆಯನ್ನು ಖಂಡಿಸಿ  ವಿಶ್ವಹಿಂದೂ ಪರಿಷತ್, ಭಜರಂಗದಳ ವಿಟ್ಲ ಪ್ರಖಂಡದ ವತಿಯಿಂದ ಇಂದು ವಿಟ್ಲದ ಖಾಸಗಿ ಬಸ್ಸುನಿಲ್ದಾಣದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.


ಭಜರಂಗದಳದ ಕಾರ್ಯಕರ್ತನಷ್ಟು ಸೇವೆಗೆ ಸಜ್ಜಾಗಿರುವ ವ್ಯಕ್ತಿ ಬೇರೆಲ್ಲೂ ಸಿಗಲಿಕ್ಕಿಲ್ಲ, ಭಜರಂಗದಳದ ಕಾರ್ಯಕರ್ತನನ್ನು ಟಾರ್ಗೆಟ್ ಮಾಡಿಕೊಂಡು ಹತ್ಯೆ ಮಾಡುವ ಕೆಲಸವನ್ನು ಮತೀಯ ಶಕ್ತಿಗಳು ಮಾಡಿವೆ. ಇಂದು ಲವ್‌ಜಿಹಾದ್, ಭಯೋತ್ಪಾದನೆಯನ್ನು ನೋಡುತ್ತಿದ್ದೇವೆ. ಮಠ ಮಂದಿರಗಳ ಮೇಲೆ ದಾಳಿ ಮಾಡಿದರು.

ಭಯೋತ್ಪಾದನೆಯ ಕರಾಳ ಛಾಯೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ತಂದು ಅಲ್ಲೂ ಜಿಹಾದ್ ಮಾಡುತ್ತೇವೆ ಎಂದು ಹಿಜಾಬ್ ಜಿಹಾದ್‌ನ್ನು ಆರಂಭ ಮಾಡಿದ್ದಾರೆ. ಹಿಂದೂ ಸಮಾಜ ಇದನ್ನು ನೋಡಿಕೊಂಡು ಸುಮ್ಮನಿರಬೇಕೇ ಎ೦ದು ಮುರಳೀ ಕೃಷ್ಣ ಪ್ರಶ್ನಿಸಿದರು. ಸಂಘಟನೆಯ ಕಾರ್ಯಕರ್ತರ ಹತ್ಯೆ ಮಾಡಿದರೆ ಸಂಘಟನೆ ನಿಲ್ಲುತ್ತದೆ ಎ೦ದು ಯೋಚನೆ ಮಾಡಬೇಡಿ.

 

ಭಜರಂಗದಳದ ಕಾರ್ಯಕರ್ತ ಎನ್ನುವ ಚಿತ್ರಣವನ್ನು ಇಟ್ಟುಕೊಂಡು ಹರ್ಷರನ್ನು ಹತ್ಯೆ ಮಾಡಿದ್ದಾರೆ. ನಿಮ್ಮ ವಿನಾಶ ಆರಂಭಗೊಂಡಿದೆ ಎಂದರ್ಥ ಎಂದು ಮುರಳೀಕೃಷ್ಣ ಹಸಂತಡ್ಕ ಎಚ್ಚರಿಸಿದರು.

ಜಿಲ್ಲಾ ಸಹಕಾರ್ಯದರ್ಶಿ ಗೋವರ್ದನ್ ಇಡ್ಯಾಳ,  ವಿಟ್ಲ ಪ್ರಖಂಡ ಸಂಯೋಜಕ ಚಂದ್ರಹಾಸ ಕನ್ಯಾನ, ಕಾರ್ಯದರ್ಶಿ ನಾಗೇಶ್ ಸಾಲೆತ್ತೂರು ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಮೂಡುಬಿದಿರೆಯಲ್ಲಿ ಪ್ರತಿಭಟನೆ:

ಶಿವಮೊಗ್ಗ ಕೋಟೆ ಪ್ರಖಂಡದ ಬಜರಂಗದಳದ ಸಹ ಸಂಚಾಲಕ್ ಹರ್ಷ ಅವರನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಬಂಧಿಸಿರುವ ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಬೇಕೆಂದು ಬಜರಂಗದಳದ ಪ್ರಾಂತೀಯ ಸಂಚಾಲಕ ಸುನಿಲ್ .ಕೆ. ಆಗ್ರಹಿಸಿದ್ದಾರೆ.

ಅವರು ಶಿವಮೊಗ್ಗದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷಾ ಕಗ್ಗೊಲೆಯನ್ನು ಖಂಡಿಸಿ ಮೂಡುಬಿದಿರೆಯಲ್ಲಿ ಕೂಡ  ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ನಿನ್ನೆ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಅಂದಿನ ಕಾಲದಲ್ಲಿ ಬಜರಂಗಿಗಳು ರಾಮನಿಗಾಗಿ ಎಲ್ಲವನ್ನು ಎದುರಿಸಿದರು. ಇವತ್ತಿನ ಬಜರಂಗಿಗಳು ದೇಶಕ್ಕಾಗಿ, ಧರ್ಮಕ್ಕಾಗಿ, ತಾಯಿ ಭಾರತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ದಿನಗಳು, ವಾರಗಳು, ತಿಂಗಳುಗಳು ಅಥವಾ ವರ್ಷಗಳು ಉರುಳಬಹುದು ಆದರೆ ಪ್ರತಿಕಾರವನ್ನು ಖಂಡಿತಾ ತೀರಿಸುತ್ತೇವೆ ಎಂದು ಎಚ್ಚರಿಸಿದರು.

ಮೂಡುಬಿದಿರೆ ವಿಹಿಂಪದ ಕಾರ್ಯಾಧ್ಯಕ್ಷ ಶ್ಯಾಮ ಹೆಗ್ಡೆ, ಬಜರಂಗದಳ ಮೂಡುಬಿದಿರೆ ತಾಲೂಕು ಸಂಚಾಲಕ ಅಭಿಲಾಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Hot Topics

ಚಾರ್ಮಾಡಿಯಲ್ಲಿ ಶಿಕಾರಿಗಳ ಗುಂಡೇಟಿಗೆ ಕಡವೆ ಬಲಿ..!

ದುಷ್ಕರ್ಮಿಗಳ ಗುಂಡೇಟಿಗೆ ಕಡವೆಯೊಂದು ಬಲಿಯಾದ ಘಟನೆ ಚಿಕ್ಕಮಗಳೂರು ಸಮೀಪದ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್‌ನ ಮಲಯಮಾರುತ ಬಳಿ ನಿನ್ನೆ ನಡೆದಿದೆ.ಬೆಳ್ತಂಗಡಿ : ದುಷ್ಕರ್ಮಿಗಳ ಗುಂಡೇಟಿಗೆ ಕಡವೆಯೊಂದು ಬಲಿಯಾದ ಘಟನೆ ಚಿಕ್ಕಮಗಳೂರು ಸಮೀಪದ ಕೊಟ್ಟಿಗೆಹಾರ...

ಹಾಸನ: ಅಪಹರಣಕ್ಕೆ ಒಳಗಾಗಿದ್ದ ಯುವಕನ ಶವ ಪತ್ತೆ, ಕೊಲೆ ಶಂಕೆ ..!

ಹಾಸನ :  ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಅಪಹರಣಕ್ಕೆ ಒಳಗಾಗಿದ್ದ ಯುವಕನ ಶವ ಪತ್ತೆಯಾದ ಘಟನೆ ಹಾಸನ ಜಿಲ್ಲೆಯ ಯೋಗೀಹಳ್ಳಿಯಲ್ಲಿ ನಡೆದಿದೆ.26 ವರ್ಷ ಪ್ರಾಯದ ಲಿಖಿತ್‌ಗೌಡ ಯಾನೆ ಬಂಗಾರಿ ಕೊಲೆಯಾದ ಯುವಕ. ಈತನನ್ನು ಕೊಲೆ...

ಭೂಕಂಪಕ್ಕೆ ನಲುಗಿದ ಟರ್ಕಿ-ಸಿರಿಯಾ: 15,000 ದಾಟಿದ ಮೃತರ ಸಂಖ್ಯೆ-ಏರುತ್ತಲೇ ಇದೆ ಸಾವಿನ ಲೆಕ್ಕ..!

ಟರ್ಕಿ: ಭೂಕಂಪದಿಂದ ನಲುಗಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಈ ವರೆಗೆ ಸಾವಿಗೀಡಾದವರ ಸಂಖ್ಯೆ 15,000ಕ್ಕೆ ಏರಿಕೆಯಾಗಿ. ಈ ಪೈಕಿ ಟರ್ಕಿಯಲ್ಲಿ ಒಂದರಲ್ಲಿಯೇ 12,391 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ 2,992 ಮಂದಿ ಸಾವನ್ನಪ್ಪಿದ್ದಾರೆ.ಈ ಅಂಕಿ...