ಲಾಸ್ ಏಂಜಲಿಸ್: ಭಾರತದಲ್ಲಿ ಬಿರು ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈಜುಕೊಳದಲ್ಲಿ ಬಿಸಿಲಿಗೆ ಮೈವೊಡ್ಡಿ ಕುಳಿತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಮೇರಿಕಾದ ಲಾಸ್ ಏಂಜಲಿಸ್ ನಲ್ಲಿರುವ ಪ್ರಿಯಾಂಕಾ ಇನ್ ಸ್ಟಾಗ್ರಾಮ್ ನಲ್ಲಿ, ಹಳದಿ ಬಣ್ಣದ ಬಿಕಿನಿ ತೊಟ್ಟು, ಈಜುಕೊಳದಲ್ಲಿ ಉದ್ದವಾಗಿ ಕಾಲು ಚಾಚಿ ಬಿಸಿಲಿಹೆ ಮೈವೊಡ್ಡಿ
ಕುಳಿತು ಫೋಟೋಗೆ ಫೋಸ್ ನೀಡಿ, ಇನ್ ಸ್ಟಾಗ್ರಾಮ್ ವರ್ಸಸ್ ವಾಸ್ತವ ಎಂಬ ಅಡಿ ಬರಹದಡಿ ತೆಗೆಸಿಕೊಂಡಿರುವ ಕ್ಯಾಂಡಿಡ್ ಫೋಟೋ ಅಪ್ ಲೋಡ್ ಮಾಡಿದ್ದಾರೆ.
ಪ್ರಿಯಾಂಕಾ ಅವರ ಬಿಕಿನಿ ಫೋಟೋಗೆ ಪತಿ ನಿಕ್ ಜೋನಸ್ ಪ್ರತಿಕ್ರಿಯಿಸಿದ್ದು, ಸುಂದರ.. ಮದುವೆಯಾಗಿ ಇಷ್ಟು ವರ್ಷಗಳು ಕಳೆದರೂ ಪತ್ನಿಯ ಸೌಂದರ್ಯಕ್ಕೆ ಚ್ಯುತಿ ಬರುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.