ಮಂಗಳೂರು/ಬ್ರೆಜಿಲ್: ಬ್ರೆಜಿಲ್‌ನ ಪ್ರವಾಸಿ ತಾಣವಾದ ಗ್ರಾಮಡೊದಲ್ಲಿ ವಿಮಾನ ಸ್ಫೋಟಗೊಂಡು ಸುಮಾರು 10 ಜನರು ಜೀವವನ್ನು ಬಿಟ್ಟಿದ್ದು. 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದಕ್ಷಿಣ ಬ್ರೆಜಿಲ್‌ನ ಪ್ರವಾಸಿ ನಗರವಾದ ಗ್ರಾಮಡೊದ ಮಧ್ಯಭಾಗಕ್ಕೆ 10 ಜನರನ್ನ ಹೊತ್ತು ಮಿನಿ ವಿಮಾನವೊಂದು ಸಾಗುತ್ತಿತ್ತು. ಆದ್ರೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಇದ್ದಕ್ಕಿದಂತೆ ವಿಮಾನವು ಅಂಗಡಿಗಳು ಮತ್ತು ಮನೆಗಳಿಗೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ.
ಗ್ರಾಮಾಡೊದ ಬಹುಪಾಲು ಅಪಾರ್ಟ್ ಮೆಂಟ್ ನ ಅಕ್ಕಪಕ್ಕ ಮೊಬೈಲ್ ಫೋನ್ ಅಂಗಡಿಗೆ ಅಪ್ಪಳಿಸುವ ಮೊದಲು ವಿಮಾನವು ಮನೆಯ ಚಿಮಣಿಗೆ ಮತ್ತು ನಂತರ ಕಟ್ಟಡದ ಎರಡನೇ ಮಹಡಿಗೆ ಅಪ್ಪಳಿಸಿತು ಎಂದು ಬ್ರೆಜಿಲಿಯನ್ ಸಿವಿಲ್ ಡಿಫೆನ್ಸ್ ಏಜೆನ್ಸಿ ತಿಳಿಸಿದೆ.
ವಿಮಾನದಲ್ಲಿದ್ದವರೆಲ್ಲಾ ಒಂದೇ ಕುಟುಂಬದ ಸದಸ್ಯರು
ಇನ್ನು ಸ್ಥಳೀಯ ಮಾಧ್ಯಮಗಳು ನೀಡಿದ ವರದಿ ಪ್ರಕಾರ ವಿಮಾನದಲ್ಲಿದ್ದ ಎಲ್ಲರೂ ಒಂದೇ ಕುಟುಂಬದವರಾಗಿದ್ದರು ಎಂದು ತಿಳಿದು ಬಂದಿದೆ. ಸಾವೊ ಪೈಲೋ ರಾಜ್ಯದಿಂದ ರಿಯೋ ಗ್ರಾಂಡೆ ಡು ಸೊಲ್ಗೆ ಪ್ರಯಾಣ ಬೆಳೆಸಿದ್ದರು ಸೆರಾ ಎಂಬ ಗುಡ್ಡುಗಾಡು ಪ್ರದೇಶದಲ್ಲಿ ಈ ಗ್ರಾಮಾಡೊ ಎಂಬ ಪ್ರವಾಸಿ ತಾಣ ಬರುತ್ತದೆ. ಈ ಪ್ರದೇಶವನ್ನು ತಲುಪಿದಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು. ವಸತಿ ಕಟ್ಟಡ ಹಾಗೂ ಮೊಬೈಲ್ ಶಾಪ್ಗೆ ಅಪ್ಪಳಿಸಿದ ವಿಮಾನ ಸ್ಫೋಟಗೊಂಡಿದೆ.
ಗ್ರಾಮಡೊದ ವಿಶೇಷತೆ
ಗ್ರಾಮಡೊ ಸೆರ್ರಾ ಗೌಚಾ ಪರ್ವತಗಳಲ್ಲಿದೆ. ಇದು ತಂಪಾದ ಹವಾಮಾನ, ಹೈಕಿಂಗ್ ತಾಣಗಳನ್ನು ಆನಂದಿಸುವ ಬ್ರೆಜಿಲಿಯನ್ ಪ್ರವಾಸಿಗರಿಗೆ ಇಷ್ಟವಾದ ಜಾಗವಾಗಿದೆ. ಈ ಪಟ್ಟಣವು 19ನೇ ಶತಮಾನದಲ್ಲಿ ಹೆಚ್ಚಿನ ಸಂಖ್ಯೆಯ ಜರ್ಮನ್ ಮತ್ತು ಇಟಾಲಿಯನ್ ವಲಸಿಗರಿಂದ ನೆಲೆಸಲ್ಪಟ್ಟಿತು. ಇದು ಕ್ರಿಸ್ಮಸ್ ರಜಾದಿನಗಳಿಗೆ ಜನಪ್ರಿಯ ಸ್ಥಳವಾಗಿದೆ.
ಮಂಗಳೂರು/ವಾಷಿಂಗ್ಟನ್ ಡಿಸಿ: ಮುಂದಿನ ತಿಂಗಳು ಅಮೆರಿಕದ ನೂತನ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಲಿದ್ದಾರೆ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಯೂರೋಪಿಯನ್ ಒಕ್ಕೂಟಕ್ಕೆ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಅಮೆರಿಕದ ಜತೆಗಿನ ಭಾರಿ ವ್ಯಾಪಾರ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೇಶಗಳಿಗೆ ಅಗತ್ಯವಾದ ಬಹುತೇಕ ತೈಲ ಮತ್ತು ಅನಿಲವನ್ನು ಅಮೆರಿಕದಿಂದ ಖರೀದಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯೂರೋಪಿಯನ್ ಒಕ್ಕೂಟದ ದೇಶಗಳು ಹೀಗೆ ಮಾಡದಿದ್ದರೆ, ಉದ್ದಕ್ಕೂ ಸುಂಕ ವಿಧಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ತಮ್ಮ ಟ್ರುಥ್ ಸೋಶಿಯಲ್ ಪ್ಲಾಟ್ಫಾರಂನಲ್ಲಿ ಈ ಎಚ್ಚರಿಕೆ ನೀಡಿರುವ ಟ್ರಂಪ್, “ಅಮೆರಿಕದ ಜತೆ ಇರುವ ವ್ಯಾಪಾರ ಅಂತರವನ್ನು ಕಿರಿದು ಮಾಡುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ನಮ್ಮಿಂದ ತೈಲ ಮತ್ತು ಅನಿಲವನ್ನು ಖರೀದಿಸುವಂತೆ ನಾನು ಯೂರೋಪಿಯನ್ ಒಕ್ಕೂಟಕ್ಕೆ ಸೂಚನೆ ನೀಡಿದ್ದೇನೆ. ಇಲ್ಲದಿದ್ದರೆ ಉದ್ದಕ್ಕೂ ಸುಂಕ ವಿಧಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
ಹಿಂದಿನ ಅವಧಿಯಲ್ಲಿ ಕೂಡಾ ಟ್ರಂಪ್, “ಅನಾದಿ ಕಾಲದಿಂದಲೂ ಅಮೆರಿಕದ ಬೆನ್ನ ಮೇಲೆ ಯೂರೋಪ್ ಸವಾರಿ ಮಾಡುತ್ತಿದೆ. ನಾವು ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ” ಎಂದು ಹೇಳಿಕೆ ನೀಡಿದ್ದರು. ಜೊತೆಗೆ ನ್ಯಾಟೊಗೆ ನೀಡುತ್ತಿರುವ ಅಮೆರಿಕದ ನೆರವನ್ನು ಸ್ಥಗಿತಗೊಳಿಸುವುದಾಗಿ ಮತ್ತು ಯೂರೋಪ್ ಕೂಡಾ ಇದಕ್ಕೆ ಕೊಡುಗೆ ನೀಡಬೇಕು ಎಚ್ಚರಿಸಿದ್ದರು.
2022ರಿಂದ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ಯೂರೋಪಿಯನ್ ಒಕ್ಕೂಟದ ಜತೆಗೆ ಅಮೆರಿಕದ ವ್ಯಾಪಾರ ಕೊರತೆ 202.5 ಶತಕೋಟಿ ಡಾಲರ್ಗಳಾಗಿವೆ. ಯೂರೋಪಿಯನ್ ಒಕ್ಕೂಟದಿಂದ ಅಮೆರಿಕ 553.3 ಶತಕೋಟಿ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದ್ದರೆ, 350.8 ಶತಕೋಟಿ ಡಾಲರ್ ಮೌಲ್ಯದ ಸರಕು ರಫ್ತು ಮಾಡಿದೆ.
ಈ ಅಸಮತೋಲನವನ್ನು ನಿವಾರಿಸಬೇಕು ಎನ್ನುವುದು ಟ್ರಂಪ್ ಬಯಕೆ. ಬೆದರಿಕೆ ಹಾಕುವ ಕಾರ್ಯತಂತ್ರದ ಬದಲು ಅಮೆರಿಕ ಮತ್ತೆ ಸರ್ವಶ್ರೇಷ್ಠ ದೇಶವಾಗಲು ನೆರವಾಗಿ ಎಂದು ಮನವೊಲಿಸುವುದು ಅಗತ್ಯ ಎಂದು ವಿಶ್ಲೇಷಿಸಲಾಗುತ್ತಿದೆ. ಸುಂಕ ಎನ್ನುವುದು ಶಬ್ದಕೋಶದಲ್ಲಿ ತಮಗೆ ಅತ್ಯಂತ ಪ್ರಿಯ ಶಬ್ದ ಎಂದು ಟ್ರಂಪ್ ಹೇಳಿದ್ದಾರೆ.
ಮಂಗಳೂರು/ಮೆಕ್ಸಿಕೊ: ತನ್ನದೇ ವಿಭಿನ್ನ ಶೈಲಿಯಲ್ಲಿ ಎಂಟ್ರಿ ಕೊಡುತ್ತಿದ್ದ ರೇಯ್ ಮಿಸ್ಟೀರಿಯೋ ಅಬ್ಬರ ನೋಡೋದೇ ಒಂದು ಆನಂದವಾಗಿತ್ತು. 66 ವರ್ಷದ ರೇ ಮಿಸ್ಟೀರಿಯೋ ಸೀನಿಯರ್ ಸಾವನ್ನಪ್ಪಿರುವ ಸುದ್ದಿ ವರದಿಯಾಗಿದೆ.
WWE ಸ್ಟಾರ್ ಗಳ ಸಾವಿನ ಸುದ್ದಿ ಬಗ್ಗೆ ಆಗಾಗ ಸುಳ್ಳು ಸುದ್ದಿ ಕೇಳಿ ಬರುತ್ತಲೇ ಇರುತ್ತದೆ. ಆದರೆ ಈ ಬಾರಿ ರೇ ಮಿಸ್ಟೀರಿಯೋ ಅಭಿಮಾನಿಗಳು ಇದು ಕೂಡ ಸುಳ್ಳಾಗಲಿ ಎಂದು ಬಯಸಿದ್ದರು. ಆದರೆ ಈ ಬಾರಿ ಮಿಸ್ಟೀರಿಯೋ ಕುಟುಂಬಸ್ಥರು ಈ ಶಾಕಿಂಗ್ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ರೇಯ್ ಮಿಸ್ಟೀರಿಯೋ, 1990ರ ಮಕ್ಕಳ ಹಾಟ್ ಫೇವರೆಟ್ WWE ಸ್ಟಾರ್. ರೇಯ್ ಮಿಸ್ಟೀರಿಯೋ ಫೈಟಿಂಗ್ ಹಾಗೂ ಪಲ್ಟಿ ಹೊಡೆಯೋ ಸ್ಟೈಲ್ ಅಷ್ಟು ರೋಮಾಂಚನಕಾರಿ.
ಸಾಮಾನ್ಯವಾಗಿ WWEನಲ್ಲಿ ದಢೂತಿ ದೇಹ. 6 ಅಡಿಗಿಂತ ಎತ್ತರದ ಕುಸ್ತಿಪಟುಗಳು ಅಖಾಡಕ್ಕೆ ಇಳಿಯುತ್ತಾರೆ. ಆದರೆ ಮಿಸ್ಟೀರಿಯೋ ಸೀನಿಯರ್ WWE ಸೂಪರ್ ಸ್ಟಾರ್‌ಗಳ ಮಧ್ಯೆ ಕುಳ್ಳನಂತೆ ಕಾಣುತ್ತಿದ್ದರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ ಹಾಗೇ ಮಿಸ್ಟೀರಿಯೋ ಸೀನಿಯರ್ ಅನ್ನ ಸೋಲಿಸೋದು ಅಷ್ಟು ಸುಲಭವಲ್ಲ.
ರೇಯ್ ಮಿಸ್ಟೀರಿಯೋ ಆಡಿದ ಒಂದೊಂದು ಮ್ಯಾಚ್‌ಗಳು ರೋಚಕ ಫಲಿತಾಂಶಗಳನ್ನೇ ಕೊಡುತ್ತಿದ್ದವು. ರೇಯ್ ಮಿಸ್ಟೀರಿಯೋ ಫೈಟಿಂಗ್ ಸ್ಟೈಲ್ ಹಾಗೂ ರೋಚಕ ಟ್ವಿಸ್ಟ್‌ಗಳು ನೋಡುಗರನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದ್ದವು.
ಕುಸ್ತಿ ಪ್ರಪಂಚದ ಮೇಲೆ ರೇ ಮಿಸ್ಟೀರಿಯೋ ಸೀನಿಯರ್ ಅವರ ಪ್ರಭಾವವು ಮುಂದಿನ ಪೀಳಿಗೆಯೂ ಕೂಡ ನೆನಪಿಸುವಂತೆ ಮಾಡುತ್ತದೆ. ಅವರ ವಿಶಿಷ್ಟ ಶೈಲಿಯ ಫೈಟಿಂಗ್ ಗಳು, ರಿಂಗ್ ನಲ್ಲಿ ಆಡುವ ರೀತಿ, ಪಲ್ಟಿ ಹೊಡೆಯೋ ಸ್ಟೈಲ್ ಅಭಿಮಾನಿಗಳನ್ನು ರೋಮಾಂಚನಗೊಳಿಸುತ್ತಿತ್ತು. ಆದರೆ ಇವರ ನಿಧನ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಅತೀವ ದುಃಖ ಉಂಟುಮಾಡಿದೆ.
4.28 ಶತಕೋಟಿ ಡಾಲರ್ ಮೊತ್ತದ ವಿದ್ಯಾರ್ಥಿ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಅಧ್ಯಕ್ಷರು ಘೋಷಿಸಿದ್ದಾರೆ. ಇದರೊಂದಿಗೆ ವಿದ್ಯಾರ್ಥಿ ಸಾಲದಿಂದ ಮುಕ್ತರಾದವರ ಸಂಖ್ಯೆ ಸುಮಾರು 5 ದಶಲಕ್ಷಕ್ಕೆ ತಲುಪಿದೆ ಎಂದು ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಿದೆ.