ಬೆಂಗಳೂರು : ದ್ವಿಚಕ್ರ ವಾಹನ ಸವಾರೆಯೊಬ್ಬಳು ಗಾಡಿಯನ್ನು ಸೈಡ್‌ಗೆ ನಿಲ್ಲಿಸಿ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಓವರ್ ಸ್ಪೀಡ್ ನಲ್ಲಿ ಬಂದ ಖಾಸಗಿ ಬಸ್ ಗುದ್ದಿ, ಅರ್ಧ ಗಂಟೆ ಕಾಲ ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿಯಾಗಿರುವ ದ್ವಿಚಕ್ರ ವಾಹನ ಸವಾರೆಯಾಗಿರುವ ವಿನುತಾ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾಳೆ.
ಸ್ಕೂಟಿ ಓಡಿಸುತ್ತಿದ್ದ ವಿನುತಾ ಫೋನ್‌ನಲ್ಲಿ ಮಾತನಾಡೋಕೆ ಅಂತಾ ಗಾಡಿಯನ್ನ ಸೈಡ್‌ಗೆ ನಿಲ್ಲಿಸಿದ್ದಾರೆ.
ಅಷ್ಟರಲ್ಲಿ ಯಮರೂಪದ ಓವರ್ ಸ್ಪೀಡ್ ಬಂದ ಖಾಸಗಿ ಬಸ್ ವಿನುತಾಳ ದ್ವಿಚಕ್ರಕ್ಕೆ ಗುದ್ದಿದೆ. ಬಸ್ ಹೊಡೆದ ರಭಸಕ್ಕೆ ವಿನುತಾ ಅನತಿ ದೂರಕ್ಕೆ ಎಸೆಯಟ್ಟಿದ್ದು ಗಂಭೀರ ಗಾಯಗೊಂಡಿದ್ದಳು. ಅರ್ಧ ಗಂಟೆ ಕಾಲ ರಕ್ತದ ಮಡುವಿನಲ್ಲಿ ವಿನುತಾ ನರಳಾಡುತ್ತಿದ್ರೂ, ಜನ ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕಿದ್ರು .
ಸವಾರೆ ವಿನುತಾ ಗಾಡಿ ನಿಲ್ಲಿಸಿದಾಗ ಹೆಲ್ಮೆಟ್ ಕೂಡ ಹಾಕಿರಲಿಲ್ಲ. ಒಂದು ವೇಳೆ ಆ ಸಂದರ್ಭದಲ್ಲಿ ಹೆಲ್ಮೆಟ್ ಹಾಕಿದ್ರೆ ತಲೆಗೆ ಆಕೆ ಬಚಾವು ಆಗುವ ಸಾದ್ಯತೆಗಳಿದ್ದುವು ಎನ್ನಲಾಗಿದೆ.