ಕೊಚ್ಚಿನ್: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಜಗದ್ಗುರು ಶ್ರೀ ಶ್ರೀ ಆದ್ಯಶಂಕರಾಚಾರ್ಯರ ಜನ್ಮಭೂಮಿ ಕ್ಷೇತ್ರವಾದ ಕಾಲಡಿ ಕ್ಷೇತ್ರಕ್ಕೆ ಇಂದು ಭೇಟಿನೀಡಿದರು.
ಕ್ಷೇತ್ರದಲ್ಲಿನ ಮಾತೆ ಆರ್ಯಾಂಬಾನವರ ಸಮಾಧಿ, ಜಗದ್ಗುರು ಶಂಕರಾಚಾರ್ಯರ ಸನ್ನಿಧಿಗಳ ದರ್ಶನ ಪಡೆದರು.
ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಮತ್ತು ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಅನುಗ್ರಹ ಪ್ರಸಾದವನ್ನು ಮಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಡಾ.ವಿ.ಆರ್ ಗೌರಿಶಂಕರ್ ರವರು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ನೀಡಿದರು.