ಮಂಗಳೂರು: ಕೂಳೂರು ಗೋಲ್ಡ್ಫಿಂಚ್ ಮೈದಾನಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಇವರನ್ನು ಬಿಜೆಪಿ ಸರ್ಕಾರದ ಮಂತ್ರಿಗಳು, ಶಾಸಕರು, ಅಧಿಕಾರಿಗಳು ಹೃತ್ಪೂರ್ವಕವಾಗಿ ಸ್ವಾಗತಿಸಿದರು.
ಹೆಲಿಪ್ಯಾಡ್ ಮೂಲಕ ನವ ಮಂಗಳೂರಿನ ಬಂದರಿಗೆ ತೆರಳಿದ ಮೋದಿಯವರಿಗೆ ಹಲವು ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿ ತದನಂತರ ಅವರು ಚಾಲನೆಯನ್ನು ನೀಡಿದರು.
ಇನ್ನು ಕೂಳೂರಿನ ಗೋಲ್ಡ್ ಪಿಂಚ್ ಮೈದಾನದ ವೇದಿಕೆಯಲ್ಲಿ ಆಸೀನರಾಗಿರುವ ಪ್ರಧಾನಿ ಮೋದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಶಾಸಕ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್ ರವರು ಹೃದಯಪೂರ್ವಕವಾಗಿ ಸ್ವಾಗತಿಸಿದರು.
ಪ್ರಧಾನಿಗೆ ತುಳುನಾಡಿನ ಪ್ರತೀಕವಾಗಿ ಪರಶುರಾಮನ ಪುತ್ಥಳಿ ಹಾಗೂ ಉಡುಪಿ ಕೃಷ್ಣಮಠದ ಮೂರ್ತಿಯನ್ನು ನೀಡಲಾಯಿತು.
ಇದೀಗ ಸಾರ್ವಜನಿಕ ಸಭೆ ಉದ್ಧೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.