Connect with us

    DAKSHINA KANNADA

    ಮಂಗಳೂರು: ಪತ್ರಿಕಾ ದಿನಾಚರಣೆ ಹಾಗೂ ಹರ್ಮನ್ ಮೊಗ್ಲಿಂಗ್ ಸ್ಮರಣೆ

    Published

    on

    ಮಂಗಳೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಸ್ಮರಣೆ ಕಾರ್ಯಕ್ರಮ ಇಂದು ಮಂಗಳೂರು ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆಯಿತು.


    ಕನ್ನಡದ ಪ್ರಥಮ ಪತ್ರಿಕೆ ಮಂಗಳೂರ ಸಮಾಚಾರ ಪತ್ರಿಕೆಯ ಸಂಸ್ಥಾಪಕ ಸಂಪಾದಕ ರೆ.ಹೆರ್ಮನ್ ಮೋಗ್ಲಿಂಗ್ ಅವರ ಪ್ರತಿಮೆಗೆ ಮಾಜಿ ಶಾಸಕ ಜೆ.ಆರ್.ಲೊಬೋ ಅವರು ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಜೆ.ಆರ್.‌ಲೋಬೋ ಅವರು, ಕನ್ನಡದ ಪ್ರಥಮ ಪತ್ರಿಕೆ ಹುಟ್ಟು ಹಾಕಿದ ಹರ್ಮನ್ ಮೊಗ್ಲಿಂಗ್ ಅವರ ಸ್ಮರಣೆ ನಡೆಸುವುದು ಅತ್ಯಂತ ಸ್ತುತ್ಯಾರ್ಹ ಕಾರ್ಯಕ್ರಮವಾಗಿದೆ.

    ಪತ್ರಿಕಾ ಲೋಕ ಹಾಗೂ ಕನ್ನಡ ಸಾಹಿತ್ಯ, ದಾಸ ಸಾಹಿತ್ಯ ಕ್ಕೆ ಮೊಗ್ಲಿಂಗ್ ಅವರ ಕೊಡುಗೆ ಅಪಾರವಾಗಿದೆ. ಈ ವಿಚಾರವನ್ನು ನಾವು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯಕ್ರಮ ನಡೆಯಬೇಕಾಗಿದೆ ಎಂದು ತಿಳಿಸಿದರು.


    ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜು ಪ್ರಾಂಶುಪಾಲ ವಂ.ಡಾ.ಎಚ್.ಎಂ.ವಾಟ್ಸನ್ ಅವರು ಮಾತನಾಡಿ, ನಿಘಂಟು ಕರ್ತ ಕಿಟೆಲ್ ಅವರ ರೀತಿಯಲ್ಲೇ ಹರ್ಮನ್ ಮೊಗ್ಲಿಂಗ್ ಅವರ ಪ್ರತಿಮೆಯನ್ನು ಕರ್ನಾಟಕದ ಹಲವೆಡೆ ಪ್ರತಿಷ್ಠಾಪಿಸಬೇಕೆಂದು ಹೇಳಿದರು.

    ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ್ ಪತ್ರಿಕಾ ದಿನಾಚರಣೆಯ ಶುಭಕೋರಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ ಸ್ವಾಗತಿಸಿದರು.

    ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉಪಾಧ್ಯಕ್ಷ ಲಕ್ಷ್ಮಣ್ ಕುಂದರ್ ಪದಾಧಿಕಾರಿಗಳಾದ ಕೆನ್ಯೂಟ್ ಪಿಂಟೊ , ಗಿರಿಧರ್ ಶೆಟ್ಟಿ, ಹಿರಿಯ ಪತ್ರಕರ್ತ ಮೋಹನ್ ಬೋಳಂಗಡಿ, ರಿಚ್ಚಿ ಲಸ್ರಾದೋ, ಹಮೀದ್ ವಿಟ್ಲ, ಈಶ್ವರ ವಾರಣಾಶಿ, ರಮೇಶ್ ನೀರಬಿದಿರೆ, ಸುಳ್ಯ ತಾಲೂಕು ಸಮಿತಿಯ ಅಧ್ಯಕ್ಷ ಜೆ.ಕೆ. ರೈ, ಶಿವಪ್ರಸಾದ್ ಆಲೆಟ್ಟಿ, ಶಿವರಾಮ ಕಜೆಮೂಲೆ, ಶ್ರೀಧರ್ ಕಜೆಗದ್ದೆ, ರಮೇಶ ನೀರಬಿದಿರೆ, ಜಯಶ್ರೀ ಕೊಯಿಂಗೋಡಿ, ಕೀರ್ತಿ ಹೊದ್ದೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

    DAKSHINA KANNADA

    ಮೂಲ್ಕಿ : ಎಲೆಕ್ಟ್ರಿಕ್ ಅಟೋ ಪಲ್ಟಿ; ಮೂವರಿಗೆ ಗಾಯ

    Published

    on

    ಮೂಲ್ಕಿ : ಎಲೆಕ್ಟ್ರಿಕ್ ಅಟೋ ಪಲ್ಟಿ ಯಾಗಿ ಇಬ್ಬರು ಗಾ*ಯಗೊಂಡಿದ್ದು, ಓರ್ವ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿರುವ ಘಟನೆ ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿಯ ಕೆರೆಕಾಡು ಜಂಕ್ಷನ್ ಬಳಿ ನಡೆದಿದೆ.

    ಆಟೋ ಚಾಲಕ ಪಕ್ಷಿಕೆರೆ  ಕಾಪಿಕಾಡು ನಿವಾಸಿ ರಾಮಚಂದ್ರ ( 45) ಮತ್ತು ಪ್ರಯಾಣಿಕ ಶೇಕ್ ಸಾಹೇಬ್ (60) ಗಾಯಗೊಂಡವರು.

    ಇದನ್ನೂ ಓದಿ : ‘ಕಲ್ಟ್’ ಚಿತ್ರದ ಟೆಕ್ನಿಷಿಯನ್ ಆತ್ಮಹ*ತ್ಯೆ ಯತ್ನ; ಸಚಿವ ಜಮೀರ್ ಪುತ್ರ ಜೈದ್ ಖಾನ್ ವಿರುದ್ಧ ಗಂಭೀರ ಆರೋಪ

    ಶೇಕ್ ಸಾಹೇಬ್ ಪಕ್ಷಿಕೆರೆಯಿಂದ ಆಟೋ ಮೂಲಕ ಮೂಲ್ಕಿ ಕಡೆಗೆ ಹೋಗುತ್ತಿದ್ದಾಗ ಕೆರೆಕಾಡು ಬಳಿ ನಾಯಿ ಅಡ್ಡ ಬಂದಿದ್ದು ಅಪಘಾ*ತ ತಪ್ಪಿಸಲು ಯತ್ನಿಸಿದಾಗ ಆಟೋ ಪ*ಲ್ಟಿಯಾಗಿದೆ. ಅಪ*ಘಾತದ ರಭಸಕ್ಕೆ ಆಟೋದಲ್ಲಿದ್ದವರು ಗಾ*ಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    Continue Reading

    DAKSHINA KANNADA

    ಅ*ನ್ಯಕೋಮಿನ ಯುವಕನಿಂದ ವಿದ್ಯಾರ್ಥಿನಿಗೆ ಕಿ*ರುಕುಳ; ದೂರು ದಾಖಲಿಸಲು ಪೊಲೀಸರ ಹಿಂದೇಟು !!

    Published

    on

    ಕುಂಬಳೆ: ಬೆಳಗಿನ ಜಾವ ಮಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ತೆರಳುವ ಹಿಂದು ವಿಧ್ಯಾರ್ಥಿನಿಗೆ ಅ*ನ್ಯಕೋಮಿನ ಯುವಕನೊಬ್ಬ ಕಿ*ರುಕುಳ ನೀಡಲು ಪ್ರಯತ್ನಿಸಿದ ವೇಳೆ ಆತನನಿಂದ ತಪ್ಪಿಸಿಕೊಂಡು ಯುವತಿ ತನ್ನ ಮನೆಯವರು ಹಾಗು ಹಿಂದು ಐಕ್ಯವೇದಿ ನೇತಾರರ ಜೊತೆಗೆ ಹೋಗಿ ಕುಂಬಳೆ ಪೊಲೀಸರಿಗೆ ದೂರು ನೀಡಿದ ಘಟನೆ ಇತ್ತೀಚೆಗೆ ನಡೆದಿದೆ.

    ಕಿ*ರುಕುಳ ನೀಡಲು ಯತ್ನಿಸಿದ ಯುವಕ ತಂಗಲ್ ವೀಡ್ ಪರಿಸರದ ಕುಂಬಳೆ ಸಿ. ಎಚ್. ಸಿ ರೋಡ್ ನಿವಾಸಿ ನೌಫಲ್ ಎಂಬಾತನೆಂದು ತಿಳಿದುಬಂದಿದೆ.

    ಈತ ಪ್ರಸ್ತುತ ತಂಗಳಬೀಡು ಪರಿಸರವಾಸಿ ಎಂದು ಗುರುತಿಸಲಾಗಿದ್ದು, ಈ ವಿಚಾರದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಿದ ವೇಳೆ ಪೊಲೀಸರು ಪ್ರಕರಣ ದಾಖಲಿಸದೆ ನೌಫಾಲ್ ನನ್ನು ಕೇಸಿನಿಂದ ಪಾರು ಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪ ಕೂಡ ಕೇಳಿಬಂದಿತ್ತು. ಈ ವಿಷಯವನ್ನು ಅರಿತ ಹಿಂದು ಐಕ್ಯ ವೇದಿ ನೇತಾರರು ಮತ್ತು ಮನೆಯವರು ಈ ವಿಚಾರವನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯ ಗಮನಕ್ಕೆ ತಂದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಆದೇಶದಂತೆ ಕುಂಬಳೆ ಪೊಲೀಸರು ದೂರು ದಾಖಲಿಸಿ ಕೊಂಡರು.

    *ಒಂದೊಂದು ಮತದವರಿಗೆ ಒಂದೊಂದು ಕಾನೂನು ಎಂದು ಹೇಳಲು ಕೇರಳ ರಾಜ್ಯವೆಂಬುದು ಒಂದು ಪ್ರತ್ಯೇಕ ಮತ ರಾಜ್ಯವಲ್ಲ* ಎಂದು ಹಿಂದು ಐಕ್ಯ ವೇದಿ ಕುಂಬಳೆ ಪಂಚಾಯತ್ ಸಮಿತಿಯು ಅಭಿಪ್ರಾಯವನ್ನು ಹಿಂದೂ ಐಕ್ಯವೇದಿ ಪತ್ರಿಕಾ ಪ್ರಕಟಣೆಯಲ್ಲಿ ವ್ಯಕ್ತಪಡಿಸಿದೆ. ಇಂತಹ ಕುಕೃತ್ಯಗಳನ್ನು ಮಾಡುವವರಿಗೆ ತಕ್ಕ ಶಾಸ್ತಿಯಾಗಬೇಕೆಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.

    Continue Reading

    BELTHANGADY

    ಧರ್ಮವನ್ನು ಅಂಗಿಯಂತೆ ಧರಿಸಿ ಕಳಚಬೇಡಿ : ವೀರೇಂದ್ರ ಹೆಗ್ಗಡೆ

    Published

    on

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ ಸಂಭ್ರಮ ಜರುಗುತ್ತಿದ್ದು, ಲಕ್ಷಾಂತರ ಮಂದಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಶುಕ್ರವಾರ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ 92ನೇ ವರ್ಷದ ಸರ್ವ ಧರ್ಮ ಸಮ್ಮೇಳನ ನಡೆಯಿತು. ಉದ್ಘಾಟನೆಯನ್ನು ನೆರವೇರಿಸಲು ಆಗಮಿಸಿದ್ದ ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್, ಅಧ್ಯಕ್ಷತೆಯನ್ನು ವಹಿಸಿದ್ದ ರಾಜರಾಜೇಶ್ವರಿ  ನಗರದ ಶ್ರೀ ಕೈಲಾಸ ಆಶ್ರಮದ ಶ್ರೀ ಜಯೇಂದ್ರ ಪುರಿ ಸ್ವಾಮೀಜಿ ಮತ್ತು ಕ್ಷೇತ್ರದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಸಹಿತ ಗಣ್ಯರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್‌ ದೀಪ ಬೆಳಗಿ ಉದ್ಘಾಟಿಸಿದರು. ಧರ್ಮಸ್ಥಳ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ವಿಶ್ವಮಾನ್ಯತೆ ದೊರಕಿದ ಹಿನ್ನೆಲೆಯಲ್ಲಿ ಡಾ ವೀರೇಂದ್ರ ಹೆಗ್ಗಡೆ ಅವರಿಗೆ ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.

    ಡಾ ವೀರೇಂದ್ರ ಹೆಗ್ಗಡೆ ಅವರು ಸ್ವಾಗತಿಸಿದರು. ತನ್ನ ಅಜ್ಜ ಮಂಜಯ್ಯ ಹೆಗ್ಗಡೆ ಅವರು ಆರಂಭಿಸಿದ ಈ ಸಮ್ಮೇಳನವನ್ನು ತಂದೆ ರತ್ನವರ್ಮ ಹೆಗ್ಗಡೆ ಮುನ್ನಡೆಸಿದ್ದು, ಇದೀಗ 91 ವರ್ಷಗಳು ಸಂದು ಹೋದವು ಎಂದರು. ಈ ವೇದಿಕೆಯಲ್ಲಿ ಹಲವು ಮಂದಿ ಹಿರಿಯ ವಿದ್ವಾಂಸರು, ಮಾನವೀಯ, ಆದರ್ಶದ ಹಾದಿಯನ್ನು ನಾವು ಮುನ್ನಡೆಯಬೇಕೆಂದು ಹಿತವಚನ ನಿಡಿದರು. ಜನವರಿ 1ರಿಂದ ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಉಚಿತವಾಗಿ ಸಿಗಲಿದೆ. ವರ್ಷಕ್ಕೆ 10,000 ಬಡ ರೋಗಿಗಳಿಗೆ ನೆರವಾಗಲಿದೆ ಎಂದರು.

     

    ಗೃಹ ಮಂತ್ರಿ ಜಿ ಪರಮೇಶ್ವರ, ಸ್ವಾಮೀಜಿ ಮತ್ತು ಅತಿಥಿಗಳಿಗೆ ಹೆಗ್ಗಡೆ ಗೌರವಾಭಿನಂದನೆ ಸಲ್ಲಿಸಿದರು. ಡಾ ಪರಮೇಶ್ವರ ಮಾತನಾಡಿ, ಸರಕಾರಗಳು ಮಾಡದಿರುವ ಕೆಲಸಗಳನ್ನು ಇಂದು ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆ ಮಾಡಿದ್ದಾರೆ. ಸರ್ವಧರ್ಮದ ಸಂದೇಶ ಇಂದಿನ ದಿನ ಬಹಳ ಅಗತ್ಯವಿದೆ. ದೇಶಕ್ಕೆ ಸಂವಿಧಾನ ಬರುವ ಮುಂಚೆಯೇ ಧರ್ಮಸ್ಥಳದಲ್ಲಿ ಸರ್ವಧರ್ಮ ಸಂದೇಶ ಸಾರುವ ಕಾರ್ಯ ನಡೆಯುತ್ತಿದೆ ಎಂದರು.

    ಶ್ರೀ ಕೈಲಾಸ ಆಶ್ರಮದ ಶ್ರೀ ಜಯೇಂದ್ರ ಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಇಡೀ ಜಗತ್ತೇ ಪರಮೇಶ್ವರ ಮಯ. ಈ ಜ್ಞಾನ ಇರುವವರು ಸಮಾನತೆ ಅನುಸರಿಸುತ್ತಾರೆ. ಇಲ್ಲದದವರು ದ್ವೇಷ ಸಾಧಿಸುತ್ತಾರೆ. ಸಹಬಾಳ್ವೆ ದೂರ ಮಾಡುವ ಯಾವುದಾದರೂ ಮತವಿದ್ದರೆ ಅದಕ್ಕೆ ಭೂಮಿಯಲ್ಲಿರುವಅಧಿಕಾರವೇ ಇಲ್ಲ. ಅಂತಹ ಮತವನ್ನು ಪರಿಷ್ಕರಿಸಬೇಕು ಎಂದರು.

    ಸಂಶೋಧಕ ಡಾ ಜಿ ಬಿ ಹರೀಶ್‌, ಮಾಜಿ ಪ್ರಾಂಶುಪಾಲ ಡಾ ಜೋಸೆಫ್‌ ಎನ್ ಎಂ, ವಿಜಯಪುರದ ಮೆಹತಾಬಾ ಇಬ್ರಾಹಿಂ ಸಾಬ ಕಾಗವಾಡ ಉಪನ್ಯಾಸ ನೀಡಿದರು. ಡಿ ಸುರೇಂದ್ರ ಕುಮಾರ್, ಡಿ. ಹರ್ಷೇoದ್ರ ಕುಮಾರ್, ಹೇಮಾವತಿ ವೀ. ಹೆಗ್ಗಡೆ, ಶ್ರದ್ದಾ ಅಮಿತ್, ಸುಪ್ರಿಯಾ ಹರ್ಷೇoದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸುನೀಲ್ ಪಂಡಿತ್ ಮೊದಲಾದವರಿದ್ದರು. ರುಡ್ ಸೆಟ್ ನಿರ್ದೇಶಕ ಅಜಯ್ ವಂದಿಸಿದರು. ಪ್ರಾಧ್ಯಾಪಕ ಡಾ ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು.

    Continue Reading

    LATEST NEWS

    Trending