Connect with us

    DAKSHINA KANNADA

    ಅಲೆಮಾರಿ ಶಿಳ್ಳೆಕ್ಯಾತ ಸಮುದಾಯ ಗುಡಿಸಲಿಗೆ ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಭೇಟಿ.

    Published

    on

    ಮಂಗಳೂರು:  ತೌಕ್ತೆ ಚಂಡಮಾರುತದ ಪ್ರಭಾವದಿಂದ  ಬೀಸಿದ ವಿಪರೀತ ಬಿರುಗಾಳಿ, ಮಳೆಗೆ ಹೊಯಿಗೆ ಬಜಾರ್ ಸರಕಾರಿ ಜಮೀನಿನಲ್ಲಿ ಟೆಂಟ್ ಹಾಕಿ ಬದುಕುತ್ತಿದ್ದ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳ ಗುಡಿಸಲುಗಳು ಹಾರಿಹೋಗಿ ಗಾಳಿ, ಮಳೆಯಿಂದ ತಮ್ಮನ್ನು ತಾವು ಕಾಪಾಡಲು ಬಹಳ ಸಂಕಷ್ಟ ಅನುಭವಿಸಿದ್ದರು. ಮಾತ್ರವಲ್ಲದೆ ಕೋರೋನಾ ರೋಗದ ಈ ಕಾಲಘಟ್ಟದಲ್ಲಿ ಉಂಟಾದ ಸಮಸ್ಯೆ ಮತ್ತು ಲಾಕ್ಡೌನ್ ತಮ್ಮ ಬದುಕಿಗೆ ಮೂಲ ಆಧಾರವಾಗಿದ್ದ ಕುಲ ಕಸುಬನ್ನೇ ಕಸಿದುಕೊಂಡಿದ್ದು, ಮಾತ್ರವಲ್ಲದೆ ಕೋರೋನಾ ರೋಗದ ಈ ಕಾಲಘಟ್ಟದಲ್ಲಿ ಉಂಟಾದ ಸಮಸ್ಯೆ ಮತ್ತು ಲಾಕ್ಡೌನ್ ತಮ್ಮ ಬದುಕಿಗೆ ಮೂಲ ಆಧಾರವಾಗಿದ್ದ ಕುಲ ಕಸುಬನ್ನೇ ಕಸಿದುಕೊಂಡಿದ್ದು,ಒಂದ್ಹೊತ್ತಿನ  ಊಟಕ್ಕೂ ಪರದಾಡುವ ಸ್ಥಿತಿ‌ ನಿರ್ಮಾಣವಾಗಿದ್ದ ಈ ಸಮುದಾಯಕ್ಕೆ ಜಿಲ್ಲಾಡಳಿತ ಕೂಡಲೇ ಮದ್ಯಪ್ರವೇಶಿಸಿ ಆಹಾರ ಭದ್ರತೆ ಸಹಿತ ಪ್ರಾಕೃತಿಕ ವಿಕೋಪದ ಅಡಿಯಲ್ಲಿ ಆರ್ಥಿಕ ನೆರವು ನೀಡಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಲಾಗಿತ್ತು.

    ಈ ಬಗ್ಗೆ ಗಮನಹರಿಸಿದ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ. ರವೀಂದ್ರ ಶೆಟ್ಟಿ ಹೊಯಿಗೆ ಬಜಾರ್ ನ ಶಿಳ್ಳೆಕ್ಯಾತ ಸಮುದಾಯದ ಕ್ಯಾಂಪ್ ಗೆ ಭೇಟಿಕೊಟ್ಟು ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ.

    ಚಂಡಮಾರುತದಿಂದಾದ ಸಮಸ್ಯೆ ಮತ್ತು ಅವರ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆಯನ್ನಿತ್ತಿದ್ದಾರೆ.

    ಈ ವೇಳೆ ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿಯ ಗೌರವಾಧ್ಯಕ್ಷರು, ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ , ಅಲೆಮಾರಿ ನಿಗಮದ ಅಧಿಕಾರಿ ಸೋಮಪ್ಪ ಉಪಸ್ಥಿತರಿದ್ದರು

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಜು. 1 ರಿಂದ ಗ್ರಾಮ ಪಂಚಾಯಿತಿಯಲ್ಲೇ ಜನನ, ಮರಣ ಪ್ರಮಾಣ ಪತ್ರ ಲಭ್ಯ

    Published

    on

    ಬೆಂಗಳೂರು: ಜುಲೈ 1 ರಿಂದ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿಯೇ ಜನನ, ಮರಣ ಪ್ರಮಾಣ ಪತ್ರ ಲಭ್ಯವಿರಲಿದೆ. ರಾಜ್ಯದಲ್ಲಿ ಜುಲೈ 1ರಿಂದ ಜಾರಿಗೆ ಬರುವಂತೆ ಜನನ ಅಥವಾ ಮರಣ ಸಂಭವಿಸಿದ 30 ದಿನಗಳ ಒಳಗೆ ನೋಂದಣಿ ಮಾಡಿ ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ನೀಡಲಾಗಿದೆ.

    ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಜನನ, ಮರಣ ಘಟನೆಗಳು ಸಂಭವಿಸಿದ 30 ದಿನಗಳವರೆಗಿನ ಪ್ರಕರಣಗಳಲ್ಲಿ ನೋಂದಾಯಿಸಲು ಪಂಚಾಯಿತಿ ಕಾರ್ಯದರ್ಶಿ ಹಾಗೂ 30 ದಿನಗಳಿಂದ ಒಂದು ವರ್ಷದ ವರೆಗಿನ ಪ್ರಕರಣಗಳಲ್ಲಿ ಗ್ರಾಪಂ ಆಡಳಿತ ಅಧಿಕಾರಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಆದೇಶ ಹೊರಡಿಸಲಾಗಿದೆ.

    ಜನನ, ಮರಣ ನಡೆದ 21 ದಿನಗಳ ಒಳಗೆ ನೋಂದಣಿ ಮಾಡಿ ಉಚಿತವಾಗಿ ಒಂದು ಪ್ರಮಾಣ ಪತ್ರ ವಿತರಿಸಬೇಕು. 21 ರಿಂದ 30 ದಿನಗಳ ನಡುವೆ ನೋಂದಾಯಿಸಿದಲ್ಲಿ ಎರಡು ರೂಪಾಯಿ ಶುಲ್ಕ, 30 ದಿನಗಳಿಂದ ಒಂದು ವರ್ಷದ ವರೆಗಿನ ಪ್ರಕರಣಗಳಲ್ಲಿ 5 ರೂ. ಶುಲ್ಕ ಪಡೆದು ನೋಂದಣಿ ಮಾಡಿಸಬಹುದು. ಒಂದು ವರ್ಷದ ಬಳಿಕ ನೋಂದಣಿ ಮಾಡಿದರೆ ಪ್ರಥಮ ದರ್ಜೆ ದಂಡಾಧಿಕಾರಿ ಆದೇಶದ ಮೇರೆಗೆ 10 ರೂಪಾಯಿ ವಿಳಂಬ ಶುಲ್ಕ ಪಡೆದು ನೋಂದಣಿ ಮಾಡಿಸಬಹುದು.

    ವಿವರಗಳಿಗಾಗಿ ಇ-ಜನ್ಮ ಸಹಾಯವಾಣಿ ಸಂಖ್ಯೆ 1800 425 6578ಗೆ ಸಂಪರ್ಕಿಸಬಹುದಾಗಿದೆ.

    Continue Reading

    DAKSHINA KANNADA

    ಡಿಸಿಎಂ ಡಿಕೆ ಶಿವಕುಮಾರ್ ಕುಕ್ಕೆ ಕ್ಷೇತ್ರಕ್ಕೆ ಭೇಟಿ

    Published

    on

    ಮಂಗಳೂರು : ಕುಟುಂಬ ಸಮೇತರಾಗಿ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಮುಂಜಾನೆ ಆಗಮಿಸಿದ್ದ ಡಿ.ಕೆ.ಶಿವಕುಮಾರ್ ನೇರವಾಗಿ ಕುಕ್ಕೆಗೆ ಆಗಮಿಸಿ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    ಪತ್ನಿ ಹಾಗೂ ಮಗಳ ಜೊತೆ ಆಗಮಿಸಿದ್ದ ಡಿಕೆಶಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ್ದು, ಮಹಾ ಪೂಜೆಯಲ್ಲೂ ಭಾಗಿಯಾಗಿದ್ದಾರೆ. ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ್ದ ಡಿಸಿಎಂಗೆ ಕುಕ್ಕೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಭವ್ಯ ಸ್ವಾಗತ ನೀಡಲಾಗಿತ್ತು.

    ಇದನ್ನೂ ಓದಿ : ಅಂಗಾರಕ ಸಂಕಷ್ಟಿ ದಿನ ಗಣೇಶನಿಗೆ ಈ ರೀತಿ ಪೂಜೆ ಮಾಡಿದ್ರೆ ಸಂಕಷ್ಟಗಳೆಲ್ಲಾ ನಿವಾರಣೆ ಆಗುತ್ತದೆ..!

    ವಾದ್ಯಘೋಷ ಹಾಗೂ ಕುಂಭ ಕಳಶದೊಂದಿಗೆ ಡಿಸಿಎಂ ಅವರನ್ನು ಸ್ವಾಗತಿಸಿ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಗಿತ್ತು. ಡಿಕೆಶಿ ಕುಟುಂಬ ಹಲವಾರು ವರ್ಷಗಳಿಂದ ಕುಕ್ಕೆ ಕ್ಷೇತ್ರದಲ್ಲಿ ಸೇವೆಯನ್ನು ನೀಡುತ್ತಿದ್ದಾರೆ.

    Continue Reading

    DAKSHINA KANNADA

    ಅಂಗಾರಕ ಸಂಕಷ್ಟಿ ದಿನ ಗಣೇಶನಿಗೆ ಈ ರೀತಿ ಪೂಜೆ ಮಾಡಿದ್ರೆ ಸಂಕಷ್ಟಗಳೆಲ್ಲಾ ನಿವಾರಣೆ ಆಗುತ್ತದೆ..!

    Published

    on

    ಮಂಗಳೂರು: ಮಂಗಳವಾರ ಬರುವ ಸಂಕಷ್ಟಿಯನ್ನು ಅಂಗಾರಕ ಸಂಕಷ್ಟಿ ಎಂದು ಕರೆಯಲಾಗುತ್ತದೆ. ಈ ದಿನ ಉಪವಾಸ ಮಾಡಿ ವ್ರತ ಆಚರಣೆ ಮಾಡಿದರೆ ಜೀವನದಲ್ಲಿರುವ ಸಮಸ್ಯೆಗಳೆಲ್ಲಾ ಮಾಯವಾಗುತ್ತೆ ಎನ್ನಲಾಗುತ್ತದೆ. ಈ ದಿನ ಗಣೇಶನ ಪೂಜೆ ಮಾಡುವುದು ಹೇಗೆ ಎಂಬುದು ಇಲ್ಲಿದೆ.

    ಈ ದಿನ ಚಂದ್ರ ಹಾಗೂ ಗಣೇಶನ ಆರಾಧನೆ ಮಾಡುವುದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಸಂಕಷ್ಟ ಚತುರ್ಥಿ ವ್ರತ ಚಂದ್ರ ದರ್ಶನ ಆಗದಿದ್ದರೆ ಅಪೂರ್ಣ ಎನ್ನಲಾಗುತ್ತದೆ. ಈ ಬಾರಿ ಚಂದ್ರ ರಾತ್ರಿ 10.12 ನಿಮಿಷಕ್ಕೆ ಉದಯಿಸಲಿದ್ದು, ಚಂದ್ರನ ದರ್ಶನ ಮಾಡಿ ಉಪವಾಸ ಪೂರ್ಣಗೊಳಿಸಬೇಕು. ಮಂಗಳವಾರ ಅಂದರೆ ಅಂಗಾರಕ ಸಂಕಷ್ಟಿಯ ದಿನ ಗಣೇಶನ ವ್ರತಾಚಾರಣೆ ಹಾಗೂ ಉಪವಾಸ ಮಾಡುವುದು ಇಡೀ ವರ್ಷದಲ್ಲಿ ಬರುವ ಸಂಕಷ್ಟ ಚತುರ್ಥಿ ಆಚರಣೆ ಮಾಡುವುದಕ್ಕೆ ಸಮ ಎನ್ನಲಾಗುತ್ತದೆ.

    ಅಂಗಾರಕ ಎಂದರೆ ಮಂಗಳಕರ ಎಂದು ಅರ್ಥ. ಈ ಸಂಕಷ್ಟಿ ಆಚರಣೆ ಮಾಡುವುದರಿಂದ ಜೀವನದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ ಹಾಗೂ ಇರುವ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ ನಾವು ಮಾಡಿಕೊಂಡ ಸಂಕಲ್ಪಗಳು ಸಹ ಈಡೇರುತ್ತದೆ ಎನ್ನಲಾಗುತ್ತದೆ.

    ಪೂಜೆ ಮಾಡುವುದು ಹೇಗೆ?

    ಅಂಗಾರಕ ಸಂಕಷ್ಟಿಯ ದಿನ ಕೆಂಪು ಬಟ್ಟೆ ಮೇಲೆ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಪ್ರತಿಷ್ಠಾಪನೆ ಮಾಡಬೇಕು. ನಂತರ ದೇವರಿಗೆ ಹೂವುಗಳನ್ನು ಅರ್ಪಣೆ ಮಾಡಿ. ಮಲ್ಲಿಗೆ ಹೂವಿನ ಅರ್ಪಣೆ ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ.

    ನಂತರ ಗರಿಕೆಯನ್ನು ಅರ್ಪಣೆ ಮಾಡಬೇಕು. ನೈವೇದ್ಯಕ್ಕೆ ಲಡ್ಡು ಅಥವಾ ಮೋದಕ ಇದ್ದರೆ ಬಹಳ ಉತ್ತಮ. ಈ ಎರಡು ವಸ್ತುಗಳು ಗಣೇಶನಿಗೆ ಇಷ್ಟ. ಹಾಗೆಯೇ ದೇವರಿಗೆ ತುಪ್ಪದ ದೀಪ ಹಚ್ಚಿ, ಗಣೇಶ ಸ್ತುತಿ ಪಠಿಸಿ ಆರತಿ ಮಾಡಿ. ಅಲ್ಲದೇ ಈ ದಿನ ಪೂರ್ತಿ ಉಪವಾಸ ಇದ್ದು, ರಾತ್ರಿ ಚಂದ್ರ ದರ್ಶನ ಮಾಡಿ ಆಹಾರ ಸೇವಿಸಿ.

    Continue Reading

    LATEST NEWS

    Trending