Thursday, September 29, 2022

ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಥೋರಾಟ್‌ಗೆ 2022ರ ರಾಷ್ಟ್ರಪತಿ ಪದಕ ಘೋಷಣೆ

ಬಂಟ್ವಾಳ: ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ 2022 ರ ರಾಷ್ಟ್ರಪತಿ ಪದಕವನ್ನು ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಥೋರಾಟ್ ಅವರಿಗೆ ನೀಡಲಾಗಿದೆ.


ಸೆಂಟ್ರಲ್ ಕ್ರೈಂ ಬ್ರಾಂಚ್ ನ ಸಂಘಟಿತ ಅಪರಾಧ ದಳ ಬೆಂಗಳೂರಿನಲ್ಲಿ ಸುಮಾರು 6 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿದ ಇವರು ಅನೇಕ ಪ್ರಕರಣಗಳನ್ನು ಬೇಧಿಸುವ ಮೂಲಕ ಇಲಾಖೆಯ ಕರ್ತವ್ಯ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಜೊತೆಗೆ ಇಂಟರನಲ್ ಸೆಕ್ಯುರಿಟಿ ಡಿವಿಷನ್‌ ವಿಂಗ್‌ನಲ್ಲಿ ಕೂಡ ಇವರು ಸೇವೆ ಸಲ್ಲಿಸಿದ್ದಾರೆ.
ಈ ಸಂದರ್ಭ ಮಾಡಿದ ಉನ್ನತ ಸೇವೆಗಾಗಿ ಇವರಿಗೆ 2022 ರ ರಾಷ್ಟ್ರಪತಿ ಪದಕವನ್ನು ನೀಡಲಾಗುತ್ತಿದೆ. ಪದಕವನ್ನು ಬೆಂಗಳೂರಿನಲ್ಲಿ ಅಥವಾ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ. ದಿನ ನಿಗದಿ ಇನ್ನಷ್ಟೇ ಆಗಬೇಕಾಗಿದೆ. ಇವರು ಪ್ರಸ್ತುತ ಬಂಟ್ವಾಳ ಸಬ್‌ ಡಿವಿಜನ್ ನಲ್ಲಿ ಡಿ.ವೈ.ಎಸ್.ಪಿ.ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಎಂದಿಗೂ ಅವಕಾಶವಿಲ್ಲ-CM ಬೊಮ್ಮಾಯಿ

ಬೆಂಗಳೂರು: ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ. ಅದೂ ನರೇಂದ್ರ ಮೋದಿಯವರು ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ಇಂಥವುಗಳಿಗೆ ಎಡೆಯಿಲ್ಲ ಎಂಬ ನಿರ್ಣಯ ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು...

ತ್ರಿಶೂಲ ವಿತರಣೆ ಮಾಡಿ ಗಲಭೆಗೆ ಕುಮ್ಮಕ್ಕು ನೀಡುವ ಭಜರಂಗದಳ ಮಾಡುತ್ತಿರುವುದು ಸರಿಯೇ..?

ಮಂಗಳೂರು: ಇಲ್ಲಿ ಗಲಭೆಗೆ ಕಾರಣವಾಗುತ್ತಿರುವುದು ಕೇವಲ ಈ ಒಂದು ಸಂಘಟನೆ ಮಾತ್ರವೇ...? ಭಜರಂಗದಳದವರು ತ್ರಿಶೂಲ ವಿತರಣೆ ಮಾಡಿ ಗಲಭೆಗೆ ಕುಮ್ಮಕ್ಕು ನೀಡಿಲ್ಲವೇ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ ಅಶ್ರಫ್‌ ಪ್ರಶ್ನಿಸಿದ್ದಾರೆ.ಕೇಂದ್ರ ಗೃಹ...

ಉಡುಪಿ: ಗಿರಿಜಾ ಹೆಲ್ತ್‌ಕೇರ್ & ಸರ್ಜಿಕಲ್ಸ್‌ನಲ್ಲಿ ‘ಫಾರ್ಮಾಸಿಸ್ಟ್‌ ಡೇ’ ಆಚರಣೆ

ಉಡುಪಿ: ಗಿರಿಜಾ ಹೆಲ್ತ್‌ಕೇರ್ ಆ್ಯಂಡ್ ಸರ್ಜಿಕಲ್ಸ್‌ನಲ್ಲಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್‌ ವತಿಯಿಂದ ಫಾರ್ಮಾಸಿಸ್ಟ್‌ ದಿನವನ್ನು ಉಡುಪಿಯಲ್ಲಿ ಆಚರಿಸಲಾಯಿತು.ಉಡುಪಿಯ ಸೀನಿಯರ್ ಸಿಟಿ ಲೀಗನ್ ಸಹಕಾರದೊಂದಿಗೆ ಉಡುಪಿ ಭಾಗದ ಕೆಲ ಹಿರಿಯ ಫಾರ್ಮಸಿಸ್ಟ್ ಗಳನ್ನು...