Connect with us

    DAKSHINA KANNADA

    ಜಮೀರ್ ಅಹಮ್ಮದ್ ಶೀಘ್ರಗುಣಮುಖರಾಗಲು ಉಳ್ಳಾಲ ಸಯ್ಯದ್ ಮದನಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

    Published

    on

    ಮಂಗಳೂರು: ಮಾಜಿ ಸಚಿವ, ಹಾಲಿ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನಲೆ ಶೀಘ್ರವಾಗಿ ಗುಣಮುಖರಾಗಿಲಿ ಎಂದು ಉಳ್ಳಾಲ ಸಯ್ಯದ್ ಮದನಿ ದರ್ಗಾದಲ್ಲಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.


    ಬಳಿಕ ಮಾತನಾಡಿದ ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಹಾಜೀ ಅಬ್ದುಲ್ ರಶೀದ್ ಮಾತನಾಡಿ ಜಾತಿ ಮತ ಬೇದವಿಲ್ಲದೆ ಎಲ್ಲರೊಂದಿಗೆ ಅನ್ಯೋನ್ಯವಾಗಿ ಯಾರೇ ಬಂದರೂ ದಾನದ ಹಸ್ತವನ್ನು ಚಾಚಿದ್ದಾರೆ. ಉಳ್ಳಾಲ ದರ್ಗಾದೊಂದಿಗೆ ಉತ್ತಮ ಸಂಬಂಧ ಹೊಂದಿದ್ದವರಾಗಿದ್ದಾರೆ, ಸಾರ್ವಜನಿಕರೊಂದಿಗೆ ಬೆರೆತು ಜನ ಸೇವೆಯನ್ನು ಮಾಡುವ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹೇಳಿದರು.

    ಉಳ್ಳಾಲ ಸಯ್ಯದ್ ಮದನು ದರ್ಗಾ ಲೆಕ್ಕಪರಿಶೋಧಕ ಯು.ಟಿ ಇಲ್ಯಾಸ್, ಉಪಾಧ್ಯಕ್ಷ ಬಾವಾ ಮೊಹಮ್ಮದ್, ಜೊತೆ ಕಾರ್ಯದರ್ಶಿ ನೌಶಾದ್, ಅರಬಿಕ್ ಟ್ರಸ್ಟ್ ಜೊತೆಕಾರ್ಯದರ್ಶಿ ಆಶೀಫ್ ಅಬ್ದುಲ್ಲ, ದರ್ಗಾ ಸದಸ್ಯರಾದ ಹಸೈನಾರ್, ಇಬ್ರಾಹಿಂ ಕಕ್ಕೆತೋಟ, ಹಮೀದ್ ಅಲೇಕಳ ಮೊದಲಾದವರು ಉಪಸ್ಥಿತರಿದ್ದರು.

    DAKSHINA KANNADA

    ಮಂಗಳೂರು : ಬ್ಯಾಡ್ಮಿಂಟನ್ ಕೋರ್ಟ್‌ನಲ್ಲೇ ಕು*ಸಿದುಬಿದ್ದು ವಿದ್ಯಾರ್ಥಿ ಸಾ*ವು

    Published

    on

    ಮಂಗಳೂರು: ಫ್ರೆಂಡ್ಸ್ ಜೊತೆ ಆಡುತ್ತಿದ್ದ ವೇಳೆ ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಸಾ*ವನ್ನಪ್ಪಿದ ಘಟನೆ ಮಂಗಳೂರಿನ ಫಳ್ನೀರ್‌ನಲ್ಲಿ ನಿನ್ನೆ (ಜ.15) ನಡೆದಿದೆ.

    ಮೂಲತಃ ಅಡ್ಡೂರಿನ ನಿವಾಸಿಯಾಗಿದ್ದು, ಪ್ರಸ್ತುತ ಅತ್ತಾವರ ಐವರಿ ಟವರ್‌ನಲ್ಲಿ ವಾಸವಿದ್ದ ಶಹೀಮ್ (20) ಮೃ*ತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

    ಇಸನದನೂ ಓದಿ : ಬಾಲಿವುಡ್‌ ನಟ ಸುದೀಪ್ ಪಾಂಡೆ ವಿಧಿವಶ

    ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದ ಶಹೀಮ್ ಗೆಳೆಯರೊಂದಿಗೆ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಏಕಾಏಕಿ ಕೋರ್ಟ್‌ನಲ್ಲೇ ಕು*ಸಿದು ಬಿ*ದ್ದಿದ್ದಾನೆ. ತಕ್ಷಣವೇ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಶಹೀಮ್ ಮೃ*ತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    Continue Reading

    DAKSHINA KANNADA

    ಕರಾವಳಿ ಉತ್ಸವ : ಸಂಗೀತ ರಸಮಂಜರಿ, ಮುಖ್ಯಮಂತ್ರಿ ಆಗಮನ

    Published

    on

    ಮಂಗಳೂರು : ಕರಾವಳಿ ಉತ್ಸವ ವಸ್ತುಪ್ರದರ್ಶನ ವೇದಿಕೆಯಲ್ಲಿ ಇಂದು (ಜ.16) ಸಂಜೆ 6 ಗಂಟೆಯಿಂದ ಸ್ಟಾರ್ ಸಿಂಗರ್ಸ್,ಮಂಗಳೂರು ತುಳು ಚಲನಚಿತ್ರ ಕಲಾವಿದರಿಂದ ‘ಸಂಗೀತ ರಸಮಂಜರಿ’ ಕಾರ್ಯಕ್ರಮ ನೆರವೇರಲಿದೆ.

    ಮುಖ್ಯಮಂತ್ರಿ ಪ್ರವಾಸ :

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 17 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ನಾಳೆ ಬೆಳಗ್ಗೆ 11:30 – ಮಂಗಳೂರು ವಿಮಾನ ನಿಲ್ದಾಣ ಆಗಂಇಸಲಿದ್ದಾರೆ. ನಂತರ ಮೇರಿಹಿಲ್ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಮಂಗಳೂರು ಪ್ರಾದೇಶಿಕ ಕಚೇರಿ ಕಟ್ಟಡ ಶಿಲಾನ್ಯಾಸ ಭೇಟಿ ನೀಡಲಿದ್ದು, ಮಧ್ಯಾಹ್ನ 12:15 – ಪುರಭವನದಲ್ಲಿ ಬಹುಸಂಸ್ಕೃತಿ ಉತ್ಸವ – ಕರ್ನಾಟಕ ಸುವರ್ಣ ಸಂಭ್ರಮ 50 ಉದ್ಘಾಟನೆ ಮಾಡಲಿದ್ದಾರೆ.

     

    ಇದನ್ನೂ ಓದಿ : ನಾಗಾಸಾಧುಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯಾಂಶಗಳು : ಭಾಗ – 2

     

    ಸಂಜೆ 5 ಗಂಟೆಗೆ ಮಂಗಳಾ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರೀಡಾಕೂಟ 2025 ಉದ್ಘಾಟನೆ ಮಾಡಿ, ರಾತ್ರಿ 8 ಗಂಟೆಗೆ ವಿಮಾನದ ಮೂಲಕ ಮುಖ್ಯಮಂತ್ರಿಗಳು ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

    Continue Reading

    DAKSHINA KANNADA

    ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೆಚ್ಚು ಲಾಭ ಆಮಿಷ; ಇಬ್ಬರು ಆರೋಪಿಗಳ ಸೆರೆ

    Published

    on

    ಮಂಗಳೂರು : ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೆಚ್ಚು ಲಾಭ ಬರುತ್ತದೆ ಎಂಬ ಆಮಿಷ ಒಡ್ಡಿ ಸೈಬರ್ ಮೂಲಕ ವಂಚಿಸಿದ ಪ್ರಕರಣವೊಂದನ್ನು ಮಂಗಳೂರು ಸೆನ್‌ ಕ್ರೈಮ್‌ ಪೊಲೀಸರು ಬೇಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಕೇರಳದ ಕಣ್ಣೂರಿನ ಪತಾಯಕುನ್ನು ಉಮ್ಮರ್ ವಲಿಯ ಪರಂಬತ್ (41) ಮತ್ತು ರಿಯಾಝ್ ಎಂ.ವಿ. (45) ಬಂಧಿತ ಆರೋಪಿಗಳು ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಪಡೆಯ ಬಹುದು ಎಂಬ ವಾಟ್ಸ್‌ಆ್ಯಪ್ ಸಂದೇಶವನ್ನು ಗಮನಿಸಿದ ಮಂಗಳೂರಿನ ವ್ಯಕ್ತಿಯೊಬ್ಬರು ಹಂತ ಹಂತವಾಗಿ 77,96,322.08 ರೂ.ವನ್ನು ಪಾವತಿಸಿದ್ದರು.

    ಆದರೆ ಆರೋಪಿಗಳು ಲಾಭಾಂಶ ನೀಡದೆ ವಂಚಿಸಿದ್ದರು. ಈ ಬಗ್ಗೆ ಹಣ ಕಳೆದುಕೊಂಡ ವ್ಯಕ್ತಿ ಮಂಗಳೂರು ಸೆನ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರಿಗೆ ಕಾರು ಢಿಕ್ಕಿ; ಸವಾರ ದುರ್ಮರಣ

    ವ್ಯಕ್ತಿಯಿಂದ ಪಾವತಿಯಾಗಿದ್ದ ಹಣದ ವಿವರಕ್ಕೆ ಸಂಬಂಧಿಸಿ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಗೆ 26,27,114.4 ರೂಪಾಯಿ ವರ್ಗಾವಣೆಯಾಗಿರುವುದು ಹಾಗೂ ಬಳಿಕ ಈ ಖಾತೆಯಿಂದ ಉಮರ್ ವಲಿಯ ಪರಂಬತ್ ಎಂಬಾತನ ಬ್ಯಾಂಕ್ ಖಾತೆಗೆ 6 ಲಕ್ಷ ರೂ. ಪಾವತಿಯಾಗಿರುವುದು ಕಂಡು ಬಂತು.

    ತನಿಖೆ ಕೈಗೊಂಡಾಗ ರಿಯಾಝ್ ಎಂ.ವಿ. ಎಂಬಾತನು ಹಣವನ್ನು ವರ್ಗಾವಣೆ ಮಾಡಿಸಿದ್ದ. ಹೀಗೆ ಈ ಪ್ರಕರಣದಲ್ಲಿ ಭಾಗಿಯಾದ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆನ್ ಪೊಲೀಸ್‌ ಠಾಣಾಧಿಕಾರಿಯೂ ಆಗಿರುವ ಎಸಿಪಿ ರವೀಶ್ ನಾಯಕ್, ಇನ್ಸ್ ಪೆಕ್ಟರ್‌ ಸತೀಶ್ ಎಂ.ಪಿ., ಸಬ್ ಇನ್ಸ್ ಪೆಕ್ಟರ್‌ ಗುರಪ್ಪಕಾಂತಿ ನೇತೃತ್ವದ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು

    Continue Reading

    LATEST NEWS

    Trending