Wednesday, May 18, 2022

ಕಡಬದ ಪ್ರವೀಣ ಎಡಪಡಿತ್ತಾಯ ಅನಂತಪದ್ಮನಾಭ ದೇವಸ್ಥಾನದ ಮುಖ್ಯ ಅರ್ಚಕರಾಗಿ ನೇಮಕ

ಕಡಬ : ಇತಿಹಾಸ ಪ್ರಸಿದ್ಧ ಕೇರಳದ ಶ್ರೀಮಂತ ದೇಗುಲ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಕಡಬ ಮೂಲದ ಪ್ರವೀಣ ಎಡಪಡಿತ್ತಾಯ ಅವರು ನೇಮಕಗೊಂಡಿದ್ದಾರೆ.

ಪ್ರವೀಣ ಎಡಪಡಿತ್ತಾಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದ ಪಿಲತಿಂಜ ನಿವಾಸಿಯಾಗಿದ್ದಾರೆ.

ವಿಶೇಷ ಎಂದರೆ ಪ್ರವಿಣ ಅವರ ಅಜ್ಜ ವೆಂಕಟರಮಣ ಎಡಪಡಿತ್ತಾಯ, ದೊಡ್ಡಪ್ಪನಾದ ನಾರಾಯಣ ಎಡಪಡಿತ್ತಾಯ ಹಾಗೂ ಚಿಕ್ಕಪ್ಪ ಗೋವಿಂದ ಎಡಪಡಿತ್ತಾಯ ಕೂಡ ಕೇರಳದ ತಿರುವನಂತಪುರಂನಲ್ಲಿರುವ ಈ ವಿಶ್ವ ಪ್ರಸಿದ್ಧ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರವೀಣ ಉತ್ತಮ ಕೃಷಿಕರಾಗಿದ್ದು, ಪೌರೋಹಿತ್ಯವನ್ನೂ ಕಲಿತಿದ್ದರು. ಇವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

ಈ ಹಿಂದಿನಿಂದಲೂ ಕೊಕ್ಕಡದ ಎಡಪಡಿತ್ತಾಯ, ಶಬರಾಯ, ಉಪ್ಪಾರ್ಣ, ಬಾಳ್ತಿಲ್ಲಾಯ, ತೋಡ್ತಿಲ್ಲಾಯ ಮನೆತನದ ಸದಸ್ಯರಿಗೆ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಹಕ್ಕು ನೀಡಲಾಗಿದೆ.

LEAVE A REPLY

Please enter your comment!
Please enter your name here

Hot Topics

ರಾಜ್ಯ ಸರ್ಕಾರ ನಮ್ಮ ಅಧಿಕಾರ ಕಸಿದುಕೊಂಡಿದೆ: ಹೈಕೋರ್ಟ್‌ ಮುಂದೆ ಚುನಾವಣಾ ಆಯೋಗ ಅಳಲು

ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ಸಾಧ್ಯವಾಗದ ರೀತಿಯಲ್ಲಿ ರಾಜ್ಯ ಸರ್ಕಾರ ನಮ್ಮ ಅಧಿಕಾರ ಕಸಿದುಕೊಂಡಿದೆ ಎಂದು ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ ಮುಂದೆ ತನ್ನ ಅಸಹಾಯಕತೆ...

ವಿಟ್ಲ: ಭಾರೀ ಮಳೆಗೆ ರಸ್ತೆಗೆ ಬಿದ್ದ ವಿದ್ಯುತ್ ಕಂಬ-ಸಂಚಾರ ಸ್ಥಗಿತ

ವಿಟ್ಲ: ಸುರಿದ ಭಾರೀ ಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾದ ಘಟನೆ ವಿಟ್ಲ- ಕಲ್ಲಡ್ಕ ರಸ್ತೆಯಲ್ಲಿ ನಡೆದಿದೆ.- ನಿನ್ನೆ ಸುರಿದ ಮಳೆಗೆ ಇಂದು ಮುಂಜಾನೆ...

ಕಾಂಗ್ರೆಸ್‌ ಪಕ್ಷಕ್ಕೆ ‘ಕೈ’ ಕೊಟ್ಟ ಹಾರ್ದಿಕ್‌ ಪಟೇಲ್‌: ಟ್ವಿಟ್ಟರ್‌ನಲ್ಲಿ ಘೋಷಣೆ

ಅಹಮದಾಬಾದ್‌: ಕಾಂಗ್ರೆಸ್‌ ಯುವ ಮುಖಂಡ ಹಾಗೂ ಗುಜರಾತ್‌ನ ಪಾಟಿದಾರ್‌ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್‌ ಪಕ್ಷಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.ಪಾಟಿದಾರ್ ಸಮುದಾಯದ ಪ್ರಭಾವಿ ನಾಯಕ ನರೇಶ್ ಪಟೇಲ್ ಅವರನ್ನು ಭೇಟಿಯಾಗಿಮಾತುಕತೆ ನಡೆಸಿದ...