Home ಪ್ರಮುಖ ಸುದ್ದಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಪ್ರವೀಣ್ ಸೂದ್ ಗದ್ದುಗೆಗೆ

ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಪ್ರವೀಣ್ ಸೂದ್ ಗದ್ದುಗೆಗೆ

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ, ಸಿಐಡಿಯ ಡಿಜಿಪಿ ಪ್ರವೀಣ್ ಸೂದ್ ಅವರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ನಿನ್ನೆ ಆದೇಶ ಹೊರಡಿಸಿದೆ. ನೇಮಕ ಹೊರ ಬೀಳುತ್ತಿದ್ದಂತೆ ನಿರ್ಗಮಿತ ಡಿಜಿ-ಐಜಿ ನೀಲಮಣಿ ಎನ್ ರಾಜು ಅವರು ಪ್ರವೀಣ್ ಸೂದ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.

ನಿವೃತ್ತಿಗೊಂಡ ನೀಲಮಣಿ ಎನ್ ರಾಜು ಅವರಿಗೆ ನಿನ್ನೆ ಬೆಳಗ್ಗೆ ಬೀಳ್ಕೊಡುಗೆ ನೀಡಲಾಯಿತು.  ಡಿಜಿಪಿ ಸ್ಥಾನಕ್ಕೆ ಎ.ಎಂ.ಪ್ರಸಾದ್ ಹಾಗೂ ಪ್ರವೀಣ್ ಸೂದ್ ಅವರ ನಡುವೆ ಭಾರೀ ಪೈಪೋಟಿ ನಡೆದಿತ್ತು. ಹಿರಿತನದ ಆಧಾರದಲ್ಲಿ ಎ.ಎಂ.ಪ್ರಸಾದ್ ಅವರೇ ಡಿಜಿಪಿ ಹುದ್ದೆಗೆ ಆಯ್ಕೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂತಿಮವಾಗಿ ರಾಜ್ಯ ಸರ್ಕಾರ ಪ್ರವೀಣ್ ಸೂದ್ ಅವರಿಗೆ ಮಣೆ ಹಾಕಿದೆ.

1986ನೇ ಬ್ಯಾಚ್‍ನ ಅಧಿಕಾರಿಯಾಗಿರುವ ಪ್ರವೀಣ್ ಸೂದ್ ಅವರಿಗೆ ನಾಲ್ಕು ವರ್ಷಗಳ ಸೇವಾ ಅವಧಿ ಇದೆ. ಹಿಮಾಚಲ ಪ್ರದೇಶ ಮೂಲದವರಾದ ಸೂದ್ ಅವರು, ಬಿ. ಟೆಕ್ ಹಾಗೂ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1989 ಮೈಸೂರು ಎಎಸ್‍ಪಿಯಾಗಿ ವೃತ್ತಿ ಆರಂಭಿಸಿದ್ದ ಅವರು, ಬಳ್ಳಾರಿ, ರಾಯಚೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅದೇ ರೀತಿ 1999ರಲ್ಲಿ ಮಾರಿಷಸ್ ದೇಶದ ಪೊಲೀಸ್ ಸಲಹೆಗಾರರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ.

2004-07 ರಲ್ಲಿ ಮೈಸೂರು ಆಯುಕ್ತರಾಗಿ, 2008 ರಲ್ಲಿ ಬೆಂಗಳೂರು ನಗರ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. 1996 ರಲ್ಲಿ ಮುಖ್ಯಮಂತ್ರಿಗಳ ಪದಕ, 2002ರಲ್ಲಿ ಪೊಲೀಸ್ ಪದಕ, 2011 ರಲ್ಲಿ ರಾಷ್ಟ್ರಪತಿ ಪದಕ ಪಡೆದಿದ್ದಾರೆ. 2013-14 ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕರಾಗಿ, 2017 ರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ವಿಡಿಯೋಗಾಗಿ..

 

 

- Advertisment -

RECENT NEWS

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ ಬಂಟ್ವಾಳ : ಲಾಕ್ ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ...

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!? ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ...

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್ ನವದೆಹಲಿ : ಇನ್ನು ಮುಂದೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳು ಸಂಪೂರ್ಣ ಉಚಿತ. ಹೀಗೆಂತಾ ಸರ್ವೋಚ್ಚಾ ನ್ಯಾಯಾಲಯದ ಮಹತ್ವದ...

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..!

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..! ಬಂಟ್ವಾಳ : ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರ ಕೈಚಳ ಮುಂದುವರೆದಿದೆ.ಬಂಟ್ವಾಳದ ಚರ್ಚ್ ಒಂದಕ್ಕೆ ನುಗ್ಗಿದ...