Friday, August 12, 2022

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 11 ಲಕ್ಷ ರೂ. ನೆರವು ನೀಡಿದ ಉದ್ಯಮಿ ಮನೀಶ್ ಮುಂದ್ರಾ

ಸುಳ್ಯ: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಬಾಲಿವುಡ್ ಚಿತ್ರ ನಿರ್ಮಾಪಕ ಹಾಗೂ ಉದ್ಯಮಿ ಮನೀಶ್ ಮುಂದ್ರಾ ಖಂಡಿಸಿ, ಮೃತರ ಕುಟುಂಬಕ್ಕೆ 11 ಲಕ್ಷ ರೂ. ನೆರವು ನೀಡಿರುವುದಾಗಿ ಪ್ರಕಟಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿ ಮನೀಶ್ ಮುಂದ್ರಾ ಮಾಹಿತಿ ನೀಡಿದ್ದಾರೆ. ಪ್ರವೀಣ್ ಕುಟುಂಬದ ಬ್ಯಾಂಕ್ ಖಾತೆಯ ಮಾಹಿತಿಯನ್ನು ಇತ್ತೀಚೆಗಷ್ಟೇ ಅವರು ಟ್ವಿಟರ್‌ನಲ್ಲಿ ಕೇಳಿಕೊಂಡಿದ್ದರು.

ಆ ಬಳಿಕ ಇದೀಗ 11 ಲಕ್ಷ ರೂಪಾಯಿ ಹಣವನ್ನು ಪ್ರವೀಣ್ ಅವರ ಪತ್ನಿ ನೂತನಾ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದಾಗಿ ಟ್ವೀಟ್​ ಮಾಡಿ ತಿಳಿಸಿದ್ದಾರೆ.

ಮನೀಶ್ ಮುಂದ್ರಾ ಅವರ 2017 ರಲ್ಲಿ ನಿರ್ಮಾಣವಾದ ಧನಕ್ ಎಂಬ ಚಿತ್ರ ಅತ್ಯುತ್ತಮ ಮಕ್ಕಳ ಚಲನಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿತ್ತು.

ಅಲ್ಲದೆ ನ್ಯೂಟನ್ ಎಂಬ ಚಿತ್ರ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದಿತ್ತು.

LEAVE A REPLY

Please enter your comment!
Please enter your name here

Hot Topics

ಸಮುದ್ರ ದಡದಲ್ಲಿ ತೇಲಿ ಬಂತು ರಾಶಿ ಮುರವ (ಗೊಬ್ರ) ಮೀನು

ಉತ್ತರ ಕನ್ನಡ: ಉತ್ತರಕನ್ನಡದ ಮಂಕಿ ಸಮುದ್ರ ದಡದಲ್ಲಿ ರಾಶಿ ಮುರವ (ಗೊಬ್ರ) ಮೀನುಗಳು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವ ದೃಶ್ಯ ಕಂಡುಬಂದಿದೆ.ಹೆಚ್ಚು ತೂಪಾನ್ ಆದಾಗ ನೀರು ಅತೀ ಹೆಚ್ಚು ಕೋಲ್ಡ್ ಆದಾಗ ಮೀನುಗಳು ಅರೆ...

ಕಟೀಲು ಕಾಲೇಜಿನ ವಿದ್ಯಾರ್ಥಿಗಳೇ ತಯಾರಿಸಿದ ರಾಷ್ಟ್ರಧ್ವಜ: ಮನೆಮನೆಗೆ ವಿತರಣೆ

ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ತಯಾರಿಸಿ ಸಿದ್ಧಪಡಿಸಿದ ರಾಷ್ಟ್ರಧ್ವಜವನ್ನು ಸರಕಾರದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಮನೆಗಳಿಗೆ ವಿತರಿಸಲು ವಿದ್ಯಾರ್ಥಿಗಳಿಗೆ ನೀಡಲಾಯಿತು.ಈ ಸಂದರ್ಭ ಕಟೀಲು ದೇಗುಲದ...

ಸಂಸದ ಡಾ. ಡಿ.ವಿ ಹೆಗ್ಗಡೆಯವರ ನೂತನ ಕಾರ್ಯಾಲಯ ಉದ್ಘಾಟನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಕ್ಷೇತ್ರದ ಧರ್ಮಾಧಿಕಾರಿಗಳು ಆಗಿರುವ ಹಾಗು ರಾಜ್ಯ ಸಭೆಯ ಸಂಸದರಾಗಿ ಆಯ್ಕೆಯಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೂತನ 'ಸಂಸದರ ಕಾರ್ಯಾಲಯ'ವು ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದ ಬಳಿ ಉದ್ಘಾಟನೆಗೊಂಡಿತು.ಸ್ಥಳೀಯ...