Friday, August 12, 2022

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಹಂತಕರಿಗೆ ಆಶ್ರಯ ನೀಡಿದ ವ್ಯಕ್ತಿ ವಶಕ್ಕೆ

ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಹಂತಕರೊಂದಿಗೆ ನೇರ ಸಂಪರ್ಕದಲ್ಲಿದ್ದ ಎನ್ನಲಾದ ಕೇರಳದ ವ್ಯಕ್ತಿಯನ್ನು ದಕ್ಷಿಣ ಕನ್ನಡ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.


20 ವರ್ಷಗಳ ಹಿಂದೆ ಬೆಳ್ಳಾರೆಯ ತಿಂಗಳಾಡಿ ಎಂಬಲ್ಲಿಂದ ಬಂದು ಸೋಂಕಾಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಮೂರು ವರ್ಷಗಳ ಹಿಂದೆ ಮಾಲೀಕ ಹಾಗೂ ಕಾರ್ಮಿಕನ ನಡುವೆ ತಕರಾರು ನಡೆದು, ವ್ಯಕ್ತಿಯನ್ನು ಕೆಲಸದಿಂದ ತೆಗೆಯಲಾಗಿತ್ತು.

ಪ್ರಸ್ತುತ ವಶಕ್ಕೆ ಪಡೆದ ವ್ಯಕ್ತಿಯ ಮನೆಯಲ್ಲಿ ಹತ್ಯೆಯ ಪ್ರಮುಖ ಆರೋಪಿ ಎರಡು ದಿನಗಳ ಕಾಲ ವಾಸವಿದ್ದ ಎನ್ನಲಾಗುತ್ತಿದೆ.
ಪ್ರಮುಖ ಆರೋಪಿಗೆ ಆಶ್ರಯ ನೀಡಿದ್ದ ವ್ಯಕ್ತಿ ತಾನು ಸಿಲುಕಿ ಬೀಳದೇ ಇರಲು, ಬೇರೆಯವರ ಫೋನ್‌ನಿಂದ ಹಂತಕನೊಂದಿಗೆ ಮಾತನಾಡಿದ್ದಾನೆ. ನಂತರ ಫೋನ್ ನಂಬರ್ ಸಿಗದ ರೀತಿಯಲ್ಲಿ ಕಾಲ್ ಚಾಟ್ ಡಿಲೀಟ್ ಮಾಡಿದ್ದಾನೆ.

ಪೊಲೀಸರಿಗೆ ಈ ಸುಳಿವು ಸಿಕ್ಕಿದ್ದು, ಆ ವ್ಯಕ್ತಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ ಪೊಲೀಸರು ಅಲ್ಲಿಯೇ ಆತನನ್ನು ವಶಕ್ಕೆ ಪಡೆದರು ಎಂದು ಮೂಲಗಳು ತಿಳಿಸಿವೆ. ವಶಕ್ಕೆ ಪಡೆದ ಬಗ್ಗೆ ಪೊಲೀಸರು ಅಧಿಕೃತವಾಗಿ ತಿಳಿಸಿಲ್ಲ.

LEAVE A REPLY

Please enter your comment!
Please enter your name here

Hot Topics

ಸಮುದ್ರ ದಡದಲ್ಲಿ ತೇಲಿ ಬಂತು ರಾಶಿ ಮುರವ (ಗೊಬ್ರ) ಮೀನು

ಉತ್ತರ ಕನ್ನಡ: ಉತ್ತರಕನ್ನಡದ ಮಂಕಿ ಸಮುದ್ರ ದಡದಲ್ಲಿ ರಾಶಿ ಮುರವ (ಗೊಬ್ರ) ಮೀನುಗಳು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವ ದೃಶ್ಯ ಕಂಡುಬಂದಿದೆ.ಹೆಚ್ಚು ತೂಪಾನ್ ಆದಾಗ ನೀರು ಅತೀ ಹೆಚ್ಚು ಕೋಲ್ಡ್ ಆದಾಗ ಮೀನುಗಳು ಅರೆ...

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಹಿಟ್‌ ಆ್ಯಂಡ್‌ ರನ್‌: ಓರ್ವ ಸ್ಪಾಟ್‌ ಡೆತ್‌, ಮತ್ತೋರ್ವನಿಗೆ ಗಾಯ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಬದಿ ಹುಲ್ಲು ಕಟಾವು ಮಾಡುತ್ತಿದ್ದ ಕಾರ್ಮಿಕರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾದ ಘಟನೆ ಮಂಗಳೂರು ನಗರದ ಜೆಪ್ಪಿನಮೊಗರುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು...

ಮಂಗಳೂರಿನಲ್ಲಿರುವ ರಸ್ತೆ ಹೊಂಡ ಗುಂಡಿಗಳ ವಿರುದ್ಧ patholeseazaadi ಅಭಿಯಾನ

ಮಂಗಳೂರು: ನಗರದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ಕಳೆದ ಆ.5 ರಂದು ರಸ್ತೆ ಗುಂಡಿ ತಪ್ಪಿಸಲು ಹೋಗಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತಿಶ್ (20) ಮೃತಪಟ್ಟ ನಂತರ ರಾಷ್ಟ್ರೀಯ ಹೆದ್ದಾರಿ ಸಹಿತ ಮಂಗಳೂರು ನಗರದಲ್ಲಿರುವ...