Thursday, September 29, 2022

‘ಪ್ರವೀಣ್‌’ ಬೇಟೆಗೆ 6 ವೆಹಿಕಲ್‌ 10 ಹತ್ಯೆಕೋರರು..!: ಪಿನ್‌ ಟು ಪಿನ್‌ ಡಿಟೇಲ್ಸ್‌

ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ನಡೆದ 16 ದಿನಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಪ್ರಕರಣ ಸಂಬಂಧ ಒಟ್ಟು 10 ಆರೋಪಿಗಳ ಹೆಡೆಮುರಿ ಕಟ್ಟಿ ತಾರ್ಕಿಕ ಅಂತ್ಯ ಕಂಡಿದ್ದಾರೆ.

ಪ್ರಮುಖ ಆರೋಪಿಗಳಾದ ಬಶೀರ್‌, ರಿಯಾಝ್‌, ಶಿಯಾಬ್‌  

ಶಿಯಾಬ್‌(33), ರಿಯಾಝ್‌ ಅಂಕತ್ತಡ್ಕ (27), ಬಶೀರ್‌ ಏಳಿಮಲೆ (29) ಬಂಧಿತರಾಗಿದ್ದು ಇವರೆಲ್ಲರೂ ಸುಳ್ಯ ತಾಲೂಕಿನರಾಗಿದ್ದರು. ಶಿಯಾಬ್‌ ಕ್ಯಾಂಪ್ಕೊಗೆ ಕೋಕೋ ಸರಬರಾಜಿನ ವ್ಯವಹಾರ ಮಾಡುತ್ತಿದ್ದನು.

ರಿಯಾಝ್‌ ಕೋಳಿ ಲೈನ್‌ ಸೇಲ್‌ ಮಾಡುತ್ತಿದ್ದರೆ ಬಶೀರ್‌ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದನು. ಉಳಿದಂತೆ ಈ ಹಿಂದೆ ಈ ಕೃತ್ಯಕ್ಕೆ ಪರೋಕ್ಷವಾಗಿ ಸಹಕರಿಸಿದ್ದ ಶಫೀಕ್‌ ಬೆಳ್ಳಾರೆ,

ಝಾಕಿರ್‌ ಸವಣೂರು, ನೌಫಾಲ್‌ ಗೌರಿಹೊಳೆ, ಅಬೀದ್‌ ನಾವೂರು, ಅಬ್ದುಲ್‌ ಕಬೀರ್‌ ಜಟ್ಟಿಪಳ್ಳ, ಸದ್ದಾಂ ಪಳ್ಳಿಮಜಲು ಹಾಗೂ ಹ್ಯಾರಿಸ್‌ ಬೆಳ್ಳಾರೆಯನ್ನು ಈ ಹಿಂದೆ ಬಂಧಿಸಿದ್ದರು.

ಕಪ್ಪು ಬಣ್ಣದ ಸ್ಪ್ಲೆಂಡರ್‌ ಬೈಕ್‌ನಲ್ಲಿ ಬಂದಿದ್ದರು 
ಜುಲೈ.26 ರಂದು ಪೂರ್ವ ಯೋಜನೆಯಂತೆ ರಾತ್ರಿ 8.30 ರ ಸುಮಾರಿಗೆ ಮೂವರು ಆರೋಪಿಗಳು ಎರಡು ಬೈಕುಗಳಲ್ಲಿ ಬೆಳ್ಳಾರೆಗೆ ಬಂದಿದ್ದರು. ಒಂದು ಬೈಕನ್ನು ಬೆಳ್ಳಾರೆಯಲ್ಲಿರುವ ಪ್ರವೀಣ್‌ ನಡೆಸುತ್ತಿದ್ದ ಅಕ್ಷಯ ಫ್ರೆಶ್‌ ಚಿಕನ್‌ ಸೆಂಟರ್‌ ಅಂಗಡಿಯ 200 ಮೀಟರ್‌ ದೂರದಲ್ಲಿ ಬಿಟ್ಟು ಮತ್ತೊಂದು ಕಪ್ಪು ಬಣ್ಣದ ಸ್ಪ್ಲೆಂಡರ್‌ ಬೈಕ್‌ನಲ್ಲಿ ಬಂದು

                                 ಬೆಳ್ಳಾರೆ ಪೊಲೀಸ್‌ ಠಾಣೆ

ಆಗ ತಾನೆ ಅಂಗಡಿ ಮುಚ್ಚಿ ಕೆಲಸದವನ ಜೊತೆ ಮನೆಗೆ ತೆರಳಲು ಅಣಿಯಾಗುತ್ತಿದ್ದಂತೆ ಪ್ರವೀಣ್ ಮೇಲೆ ಮಾರಕಾಸ್ತರಗಳಿಂದ ದಾಳಿ ನಡೆಸಿ 200 ಮೀಟರ್‌ ದೂರದಲ್ಲಿ ನಿಲ್ಲಿಸಿದ್ದ ಬೈಕ್‌ ಸೇರಿ ಎರಡು ಬೈಕ್ ಗಳಲ್ಲಿ ಎಸ್ಕೇಪ್ ಆಗಿದ್ದರು. ಅದರಲ್ಲಿ ಒಂದು ಬೈಕ್ ಚಿಕ್ಕಮಗಳೂರು ಮತ್ತೊಂದು ಬೈಕ್ ಪಕ್ಕದ ಕೇರಳ ಕಡೆಗೆ ತೆರಳಿ ನಾಪತ್ತೆಯಾಗಿದ್ದರು.

ಮರ್ಡರ್ ಕನ್ಫರ್ಮ್ ಆಗುತ್ತಿದ್ದಂತೆ ಎರಡು ಕಡೆ ಡೈವರ್ಟ್‌ ಆದ ಆರೋಪಿಗಳು 
ಇತ್ತ ತೀವ್ರ ರಕ್ತಸ್ರಾವದಲ್ಲಿ ಮುಳುಗಿದ್ದ ಪ್ರವೀಣನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವ ವ್ಯವಸ್ಥೆಯಾಯಿತಾದರೂ ದಾರಿ ಮಧ್ಯೆ ಪ್ರವೀಣ್ ಇಹಲೋಕ ತ್ಯಜಿಸಿದ್ದರು.

ಇತ್ತ ಪ್ರವೀಣ್ ಕೊಲೆಯಾಗಿರುವುದು ಕನ್ಫರ್ಮ್ ಆಗುತ್ತಿದ್ದಂತೆ ಕೃತ್ಯ ನಡೆಸಿದ ಇಬ್ಬರು ಆರೋಪಿಗಳು ಸುಳ್ಯ ಮೂಲಕ ನೇರವಾಗಿ ಕಾಸರಗೋಡಿನ ಬೇಕಲ್‌ ಫೋರ್ಟ್‌ ಕಡೆಗೆ ತೆರಳಿದರೆ.

ಮತ್ತೊಂದು ಬೈಕ್‌ ಮೂಲಕ ಮತ್ತೋರ್ವ ಆರೋಪಿ ಚಿಕ್ಕಮಗಳೂರು ಕಡೆಗೆ ಎಸ್ಕೇಪ್‌ ಆಗಿದ್ದನು. ಕಾಸರಗೋಡಿಗೆ ತೆರಳಿದ ಇಬ್ಬರು ಕಣ್ಣೂರು, ತ್ರಿಶೂರ್, ಮಲಪ್ಪುರಂ ಗಳಲ್ಲಿ ಸುತ್ತಾಡಿ ಅಲ್ಲಲ್ಲಿ ವಾಸ್ತವ್ಯ ಬದಲಿಸಿದ್ದಾರೆ.

ಆರೋಪಿಗಳ ಜಾಡು ಹಿಡಿದ ಕರ್ನಾಟಕ ಪೊಲೀಸರು ಕೇರಳಕ್ಕೆ ಲಗ್ಗೆ ಇಟ್ಟಿದ್ದ ಮಾಹಿತಿ ಸಿಗುತ್ತಿದ್ದಂತೆ ಅಲ್ಲಿಂದ ಆರೋಪಿಗಳು ತಮಿಳುನಾಡು ಕಡೆ ಪಲಾಯನಗೈದು ತಲೆಮರೆಸಿಕೊಂಡಿದ್ದರು.

ಇತ್ತ ಚಿಕ್ಕಮಗಳೂರು ಕಡೆ ಹೋಗಿ ನಾಪತ್ತೆಯಾದ ಆರೋಪಿ ಮಂಡ್ಯ, ಚಾಮರಾಜನಗರ ಕಡೆ ತಲೆಮರೆಸಿಕೊಂಡಿದ್ದರು.

ಬೆಳ್ಳಾರೆಯಲ್ಲೇ ಆರು ಜಿಲ್ಲೆಗಳ ಎಸ್ಪಿ ಸಭೆ ಕರೆದಿದ್ದ ಎಡಿಜಿಪಿ
ಈ ಪ್ರಕರಣದ ತನಿಖೆಯ ಹೊಣೆ ಹೊತ್ತಿದ್ದ ಎಡಿಜಿಪಿ ಅಲೋಕ್ ಕುಮಾರ್ ಬುಧವಾರ ತುರ್ತಾಗಿ ಮಂಗಳೂರಿಗೆ ಧಾವಿಸಿ ಬಂದಿದ್ದರು.

ಮಂಗಳೂರಿಗೆ ಬಂದ ಎಡಿಜಿಪಿ ತನಿಖೆಯ ಪ್ರಗತಿ ಕುರಿತಂತೆ ಮಾಹಿತಿ ಪಡೆಯಲು ಬೆಳ್ಳಾರೆಗೆ ಧಾವಿಸಿದ್ದರು. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಮಂಡ್ಯ, ಚಾಮರಾಜನಗರ, ಉಡುಪಿ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಗಳು ಮತ್ತು ಎನ್‌ ಐಎ ಅಧಿಕಾರಿಗಳ ಜಂಟಿ ಸಭೆ ಕರೆದು ಪರಾಮರ್ಶೆ ನಡೆಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದರು.

5 ಬೈಕ್‌ ಜೊತೆ ಕಾರು ಬಳಸಿದ ಹಂತಕರು..!
ಆರೋಪಿಗಳು ಕೊಲೆಗೆ ಎರಡು ಬೈಕ್‌ ಬಳಸಿದ್ದರೆ ಕೊಲೆಯಾದ ಬಳಿಕ ಪರಾರಿಯಾಗಲು ಮೂರು ಬೈಕ್‌ ಜೊತೆಗೆ ಒಂದು ಆಲ್ಟೋ ಕಾರು ಸೇರಿ ಒಟ್ಟು ಆರು ವಾಹಗಳನ್ನು ಬಳಸಿದ್ದ ಅಂಶ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇವುಗಳಲ್ಲಿ ಕೆಲವನ್ನು ಈಗಾಗಲೇ ಜಪ್ತಿ ಮಾಡಲಾಗಿದೆ. ಜೊತೆಗೆ ಪ್ರವೀಣ್‌ ಹತ್ಯೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

16 ದಿನಗಳಲ್ಲಿ 7 ಸ್ಥಳ ಬದಲಾಯಿಸಿದ್ದ ಹಂತಕರು
ಪ್ರವೀಣ್ ಕೊಲೆ ಒಂದು ಪೂರ್ವನಿಯೋಜಿತ ಕೃತ್ಯವಾಗಿದ್ದರಿಂದ ಪ್ರವೀಣ್‌ ನೆಟ್ಟಾರುವಿನ ಚಲನ ವಲನಗಳ ಮೇಲೆ ನಿಗಾ ಇಡಲು ಪ್ರಮುಖ ಆರೋಪಿಗಳು ಶಫೀಕ್‌ ಮನೆಯಲ್ಲಿಯೇ ಉಳಿದುಕೊಂಡಿದ್ದರು.

ಜೊತೆಗೆ ಮೊದಲೇ ರೆಡಿಯಾಗಿದ್ದ ಆರೋಪಿಗಳು ಬೈಕ್‌ ಮೂಲಕ ಕೇರಳ, ಚಿಕ್ಕಮಗಳೂರು ಕಡೆಗೆ ಡೈವರ್ಟ್‌ ಆಗುತ್ತಿದ್ದಂತೆ ಅವರಿಗೆ ಹಲವು ಕಡೆಗಳಲ್ಲಿ ಆಶ್ರಯ ನೀಡಿದ್ದರು. ಕೇವಲ 16 ದಿನಗಳಲ್ಲಿ ಒಟ್ಟು 7 ಕಡೆ ಸ್ಥಳ ಬದಲಿಸಿದ್ದರು ಎಂಬ ಬಗ್ಗೆ ಅಂಶ ಕೂಡ ತನಿಖೆಯಲ್ಲಿ ಬಯಲಾಗಿದೆ.

3-4 ದಿನಗಳಲ್ಲಿ ಎನ್‌ಐಗೆ ಹಸ್ತಾಂತರ
ಈ ಪ್ರಕರಣ ಈಗಾಗಲೇ ಎನ್‌ಐಎಗೆ ಹಸ್ತಾಂತರಿಸಲಾಗಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ನೇತೃತ್ವದಲ್ಲಿ ಬಂಧಿಸಿದ 10 ಆರೋಪಿಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನ ಸೇರಿದಂತೆ ಎಲ್ಲಾ ಪ್ರಕ್ರಿಯೆ ಮುಗಿಸಿ 3-4 ದಿನಗಳಲ್ಲಿ ಎನ್‌ಐಎಗೆ ಹಸ್ತಾಂತರಿಸುತ್ತೇವೆ. ಮತ್ತೆ ಎನ್‌ಐಎ ಅಧಿಕಾರಿಗಳು ಈ ಪ್ರಕರಣವನ್ನು ತನಿಖೆ ನಡೆಸಲಿದ್ದಾರೆ ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಪಿಎಫ್‌ಐ ಹಾಗೂ ಎಸ್‌ಡಿಪಿಐ ಲಿಂಕ್‌
ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಈವರೆಗೆ ಬಂಧಿತರಲ್ಲಿ ಹೆಚ್ಚಿನವರಿಗೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಲಿಂಕ್‌ ಇದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಈಗಾಗಲೇ ತಿಳಿಸಿದ್ದಾರೆ. ಪಿಎಫ್‌ಐನಲ್ಲಿ ತನ್ನ ಸಂಸ್ಥೆಯ ಸದಸ್ಯರ ಹೆಸರು ನೋಂದಣಿಯ ಪ್ರಕ್ರಿಯೆ ಇಲ್ಲ. ಆದರೂ ಅವರು ಅದರಲ್ಲಿ ಸಕ್ರಿಯವಾಗಿದ್ದ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.
ಸದ್ಯ 16 ದಿನಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಯ ಪೊಲೀಸರ ಸಂಯುಕ್ತ ಕಾರ್ಯಾಚರಣೆಯಿಂದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಪುತ್ತೂರು: PFI ಪ್ರಧಾನ ಕಛೇರಿಗೆ ಬೆಳಿಗ್ಗೆಯಿಂದಲೇ ಬೀಗ-ಗುಪ್ತಸಭೆ ನಡೆಸುತ್ತಿದ್ದ ಆರೋಪ

ಪುತ್ತೂರು: ದೇಶದಾದ್ಯಂತ ಪಿಎಫ್ಐ ಹಾಗೂ ಅದರ ಬೆಂಬಲಿತ ಸಂಘಟನೆಗಳಿಗೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿರುವ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಪಿಎಫ್ಐ ನ ಪ್ರಧಾನ...

ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಎಂದಿಗೂ ಅವಕಾಶವಿಲ್ಲ-CM ಬೊಮ್ಮಾಯಿ

ಬೆಂಗಳೂರು: ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ. ಅದೂ ನರೇಂದ್ರ ಮೋದಿಯವರು ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ಇಂಥವುಗಳಿಗೆ ಎಡೆಯಿಲ್ಲ ಎಂಬ ನಿರ್ಣಯ ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು...

PFIನ್ನು ಕರ್ನಾಟಕದಲ್ಲಿ ಪೋಷಿಸಿದ್ದು ಕಾಂಗ್ರೆಸ್‌-ಸಚಿವ ಸುನಿಲ್ ವಾಗ್ದಾಳಿ

ಉಡುಪಿ: 'ಪಿಎಫ್‌ಐ ಸಂಘಟನೆಯ ಕಾರ್ಯಕರ್ತರನ್ನು ಕಾಂಗ್ರೆಸ್ ಪೋಷಿಸಿದ್ದೆ ಪಿಎಫ್ ಐ ಇಷ್ಟು ದೊಡ್ಡ ಪ್ರ‌ಮಾಣದಲ್ಲಿ ಕರ್ನಾಟಕದಲ್ಲಿ ಬೆಳೆಯಲು ಕಾರಣವಾಗಿತ್ತು. 175 ಜನರ ಮೇಲೆ ಇದ್ದ ಕೇಸ್ ಅನ್ನು ಸಿದ್ದರಾಮಯ್ಯ ಕಾಲದಲ್ಲಿ ವಾಪಾಸ್ ಪಡೆದಿತ್ತು....