LATEST NEWS
ಪ್ರವೀಣ್ ನೆಟ್ಟಾರು ಕೊ*ಲೆ ಪ್ರಕರಣ: 21ನೇ ಆರೋಪಿಯನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳ ತಂಡ
Published
2 hours agoon
By
NEWS DESK3ಸುಳ್ಯ : ಬಿಜೆಪಿ ಯುವ ಮುಖಂಡ, ಬೆಳ್ಳಾರೆಯ ಪ್ರವೀನ್ ನೆಟ್ಟಾರು ಕೊ*ಲೆ ಪ್ರಕರಣದ 21ನೇ ಆರೋಪಿ ಅತೀಕ್ ಅಹಮ್ಮದ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ ಪೊಲೀಸರು ಬಂಧಿಸಿದ್ದಾರೆ.
ಪಿಎಫ್‌ಐ ನಾಯಕತ್ವದ ಅಡಿಯಲ್ಲಿ ಪ್ರವೀಣ್ ನೆಟ್ಟಾರು ಕೊ*ಲೆ ಪ್ರಕರಣದ ಮುಖ್ಯ ಸಂಚುಕೋರ ಎಂದು ಗುರುತಿಸಲಾದ ಮುಸ್ತಾಫಾ ಪೈಚಾರ್‌ಗೆ ಅತೀಕ್ ಅಹ್ಮದ್ ಆಶ್ರಯ ನೀಡಿ ಸಹಾಯ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಜನರಲ್ಲಿ ಭಯ ಮತ್ತು ಕೋಮುಗಲಭೆಗಳನ್ನು ಪ್ರಚೋದಿಸಲು ಪಿಎಫ್‌ಐ ಅಜೆಂಡಾದ ಭಾಗವಾಗಿ ಪ್ರವೀನ್ ನೆಟ್ಟಾರು ಕೊಲೆಯನ್ನು ಮುಸ್ತಾಫಾ ಯೋಜಿಸಿ ಕಾರ್ಯಗತಗೊಳಿಸಿದ್ದ. ಕೃತ್ಯದ ಬಳಿಕ ಮುಸ್ತಫಾ ಪರಾರಿ ಆಗಿದ್ದು, ಈ ವೇಳೆ ಆರೋಪಿ ಅತೀಕ್ ಆತನನ್ನು ಚೆನ್ನೈಗೆ ಕಳುಹಿಸಿರುವುದು ಸಹಿತ ಆತನಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ್ದ.
ಇದನ್ನೂ ಓದಿ: ಅರೆಬೈಲ್ ಘಾಟ್‌ನಲ್ಲಿ ತರಕಾರಿ ತುಂಬಿದ್ದ ಲಾರಿ ಪಲ್ಟಿ: 9 ಜನರ ಸಾವು
2024ರ ಮೇ ತಿಂಗಳಿನಲ್ಲಿ ಮುಸ್ತಾಫನನ್ನು ಬಂಧಿಸುವವರೆಗೂ, ಆರೋಪಿ ಅತೀಕ್ ಅಹ್ಮದ್ ಸಹಕಾರ ನೀಡಿದ್ದಾನೆ ಎಂದು ತಿಳಿದು ಬಂದಿದೆ. 2022ರ ಆಗಸ್ಟ್‌ನಲ್ಲಿ ಪ್ರವೀಣ್‌ರನ್ನು ದುಷ್ಕರ್ಮಿಗಳು ಹ*ತ್ಯೆ ಮಾಡಿದ್ದರು. ಮೊದಲಿಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು.
ಪಿಎಫ್‌ಐ ಸೇವಾ ತಂಡಗಳು ಎಂದು ಕರೆಯಲ್ಪಡುವ ರಹಸ್ಯ ತಂಡಗಳನ್ನು ರಚಿಸಿದೆ ಮತ್ತು ಉದ್ದೇಶಿತ ಹತ್ಯೆಗಳನ್ನು ನಡೆಸಲು ಶಸ್ತ್ರಾಸ್ತ್ರ ಮತ್ತು ಕಣ್ಗಾವಲು ತರಬೇತಿ ಪಡೆದಿದೆ ಎಂದು ಎನ್‌ಐಎ ತನ್ನ ತನಿಖೆಯಲ್ಲಿ ಕಂಡು ಹಿಡಿದಿತ್ತು. ಪ್ರವೀಣ್ ಕೊಲೆ ಪ್ರಕರಣದ ಉಳಿದ 6 ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಎನ್‌ಐಎ ಹೇಳಿದೆ.
BIG BOSS
ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಿಗ್ ಬಾಸ್ ಸ್ಪರ್ಧಿ ಕೀರ್ತಿ ಮತ್ತು ಜೈತ್ರಾ ಕುಂದಾಪುರ: ಆಶೀಶ್ ಮೈಕಾಲ
Published
5 minutes agoon
22/01/2025ಬಿಗ್ ಬಾಸ್ ಕಾರ್ಯಕ್ರಮ, ಸ್ಪರ್ಧಿಗಳ ವಯಕ್ತಿಕ ಮಾಹಿತಿ ಕುರಿತು ಸಾಕಷ್ಟು ಪೋಸ್ಟ್‌ಗಳು ವೈರಲ್, ಟ್ರೋಲ್ ಆಗುತ್ತವೆ. ಅಂತೆಯೇ ಇದೀಗ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ, ಹಿಂದೂಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹಾಗೂ ಮತ್ತೊಬ್ಬ ಬಿಗ್‌ಬಾಸ್ ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿ ಮದುವೆಯಾಗುತ್ತಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದ, ಹಿಂದುತ್ವದ ಫೈಯರ್ ಬ್ರಾಂಡ್, ಮಾತಿನ ಮಲ್ಲಿ ಚೈತ್ರ ಕುಂದಾಪುರ ನಾಡಿನ ಜನಕ್ಕೆ ಚಿರಪರಿಚಿತರು. ಈ ಬೆನ್ನಲ್ಲೇ ಚೈತ್ರ ಕುಂದಾಪುರ ಮತ್ತು ಕಿರಿಕ್ ಕೀರ್ತಿಯವರು ಮದುವೆಯಾಗುತ್ತಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಆಶೀಶ್ ಮೈಕಾಲ ಎಂಬ ಫೇಸ್‌ಬುಕ್ ಬಳಕೆದಾರು ಚೈತ್ರಾ ಕುಂದಾಪುರ ಹಾಗೂ ಕಿರಿಕ್ ಕೀರ್ತಿ ಜತೆಗೆ ನಿಂತಿರುವ ಫೋಟೋ ಹಾಕಿ “BREAKING NEWS ಅತೀ ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಬಿಗ್ ಬಾಸ್ ಸ್ಪರ್ಧಿಗಳು: ಕೀರ್ತಿ ಮತ್ತು ಜೈತ್ರಾ ಕುಂದಾಪುರ” ಎಂದು ಬರೆದುಕೊಂಡಿದ್ದಾರೆ. ಆದರೆ ಇದು ಸುಳ್ಳು ಸುದ್ದಿ ಎಂಬುದು ಇದೀಗ ಸಾಬೀತಾಗಿದೆ.
ನಿಜವಾಗಿಯೂ ನಡೆದ ಘಟನೆಯಾದರೂ ಏನು ?
ಈ ವೈರಲ್ ಪೋಸ್ಟ್ ಬಗ್ಗೆ ಸಜಗ್ ತಂಡವು ತನಿಖೆ ನಡೆಸಿದ್ದು ವೈರಲ್ ಆದ ಚೈತ್ರಾ ಕುಂದಾಪುರ ಹಾಗೂ ಕಿರಿಕ್ ಕೀರ್ತಿ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿದಾಗ ಇತ್ತೀಚೆಗೆ ಕಿರಿಕ್ ಕೀರ್ತಿಯವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಫೋಟೋ ಲಭ್ಯವಾಗಿದೆ. ಆ ಬಳಿಕ ಕಿರಿಕ್ ಕೀರ್ತಿ ಅವರ ಫೇಸ್‌ಬುಕ್ ಖಾತೆಯನ್ನು ಪರಿಶೀಲನೆ ನಡೆಸಿದಾಗ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್‌ನಿಂದ ಹೊರಬಂದ ಬಳಿಕ ಸಂದರ್ಶನ ನಡೆಸಿರುವುದಾಗಿ ಕಿರಿಕ್ ಕೀರ್ತಿ ಬರೆದುಕೊಂಡಿದ್ದಾರೆ. ಆದರೆ ಇಲ್ಲಿ ಯಾವುದೇ ಮದುವೆಯ ಪ್ರಸ್ತಾಪ ಸುದ್ದಿಯೇ ಇಲ್ಲ.
ಇನ್ನು ಈ ಬಗ್ಗೆ ಸಜಗ್ ತಂಡವು ನೇರವಾಗಿ ಚೈತ್ರಾ ಕುಂದಾಪುರ ಅವರನ್ನು ಸಂಪರ್ಕಿಸಿದಾಗ ಇದೊಂದು ಸುಳ್ಳು ಮಾಹಿತಿ ಎಂದು ತಿಳಿದುಬಂದಿದೆ. ಸ್ವತಃ ಚೈತ್ರಾ ಕುಂದಾಪುರ ಅವರೇ ಮಾತನಾಡಿದ್ದು, “ನನ್ನ ಮದುವೆಯ ಬಗ್ಗೆ ಈ ತರ ಸಾಕಷ್ಟು ಸುಳ್ಳು ಫೋಸ್ಟ್‌ಗಳು ಹರಿದಾಡುತ್ತಿವೆ. ಈ ಹಿಂದೆ ಶೈನ್‌ಶೆಟ್ಟಿ ಅವರನ್ನು ಮದುವೆಯಾಗುತ್ತಿದ್ದೇನೆ ಎಂದು ಸುಳ್ಳು ಮಾಹಿತಿ ವೈರಲ್ ಆಗಿತ್ತು. ಈಗ ಕಿರಿಕ್ ಕೀರ್ತಿ ಅವರ ಜತೆ ಮದುವೆ ಎಂದು ಸುಳ್ಳು ಮಾಹಿತಿ ಹರಿದಾಡುತ್ತಿದೆ. ಕೀರ್ತಿ ಅವರು ನನಗೆ ಸಹೋದರನ ಸಮಾನ” ಎಂದು ಹೇಳಿದ್ದಾರೆ.
LATEST NEWS
ಡಾಲಿ ಚಾಯ್ ವಾಲಾ ಮಂಗಳೂರಿನವನಲ್ಲ, ಇಲ್ಲದಿದ್ದರೆ ಅವನ ಅಂಗಡಿ ಮೇಲೆ ಬುಲ್ಢೋಝರ್ ಹೋಗ್ತಿತ್ತು-ರಾಜ್ ಬಿ ಶೆಟ್ಟಿ
Published
17 minutes agoon
22/01/2025By
NEWS DESK3ಮಂಗಳೂರು : ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟಾ ಉದ್ಘಾಟನೆಗೆ ಡಾಲಿ ಚಾಯ್ ವಾಲಾ ಅವರನ್ನು ಅತಿಥಿಯಾಗಿ ಆಹ್ವಾನಿಸಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಆದರೆ, ಡಾಲಿ ಚಾಯ್ ವಾಲಾ ಮಂಗಳೂರಿನವನಲ್ಲ ಎಂಬುವುದು ಸಂತೋಷದ ವಿಷಯ. ಒಂದು ವೇಳೆ ಅವರು ಮಂಗಳೂರಿನವರಾಗಿದ್ದರೆ ಅವರ ಅಂಗಡಿಗಳ ಮೇಲೆ ಬುಲ್ಡೋಝರ್ ಹರಿಸಿ ಧ್ವಂಸ ಮಾಡುತ್ತಿದ್ದರು ಎಂದು ಖ್ಯಾತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊ*ಲೆ ಪ್ರಕರಣ: 21ನೇ ಆರೋಪಿಯನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳ ತಂಡ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ‘ಟೈಗರ್ ಕಾರ್ಯಾಚರಣೆ’ ನಡೆಸಿ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ಬುಲ್ಡೋಝರ್ ಹಾಯಿಸಿ ತೆರವುಗೊಳಿಸಲಾಗಿತ್ತು. ಆದರೆ, ಮಂಗಳೂರಿನ ಲಾಲ್ ಬಾಗ್ ಸ್ಟ್ರೀಟ್ ಫುಡ್ ಫೆಸ್ಟ್‌ಗೆ ಬೀದಿ ಬದಿ ಚಹಾ ಮಾರಾಟಗಾರ ಡಾಲಿ ಚಾಯ್ ವಾಲಾ ಅವರನ್ನು ಅತಿಥಿಯಾಗಿ ಆಹ್ವಾನಿಸಿರುವ ಬೆನ್ನಲ್ಲೇ ಖ್ಯಾತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ವೊಂದು ಬೀದಿ ಬದಿ ವ್ಯಾಪಾರಿಗಳ ಮೇಲೆ ನಡೆಸಿದ ದಬ್ಬಾಳಿಕೆಯನ್ನು ಮತ್ತೆ ಮುನ್ನಲೆಗೆ ತಂದಿದೆ.
ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿರುವ ರಾಜ್ ಬಿ ಶೆಟ್ಟಿ,’ಬೀದಿ ಬದಿ ವ್ಯಾಪಾರಿ ಡಾಲಿ ಚಾಯ್ ವಾಲಾ ಅವರನ್ನು ಮಂಗಳೂರಿಗೆ ಕರೆಸಿ ಸಂಭ್ರಮಿಸಲಾಯಿತು. ಇದೇ ನಗರದಲ್ಲಿ ಕೆಲವು ತಿಂಗಳುಗಳ ಹಿಂದೆ ಬುಲ್ಡೋಝರ್ ಕಾರ್ಯಾಚರಣೆಯ ಮೂಲಕ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲಾಯಿತು. ಆದರೆ, ಡಾಲಿ ಮಂಗಳೂರಿನವನಲ್ಲ ಎಂಬುವುದು ಸಂತೋಷದ ವಿಷಯ. ಒಂದು ವೇಳೆ ಅವರು ಮಂಗಳೂರಿನವರಾಗಿದ್ದರೆ ಅವರ ಅಂಗಡಿಗಳನ್ನು ಧ್ವಂಸ ಮಾಡಲಾಗುತ್ತಿತ್ತು’ ಎಂದು ಬರೆದಿದ್ದಾರೆ.
LATEST NEWS
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಇನ್ಮುಂದೆ ಹಾಯಾಗಿ ಕಳೆಬಹುದು ನಿವೃತ್ತಿ ಜೀವನ
Published
45 minutes agoon
22/01/2025ಉದ್ಯೋಗಿಗಳು ಹಾಗೂ ಕುಟುಂಬದ ಮೇಲೆ ಪರಿಣಾಮ ಬೀರುವ ಮಹತ್ವದ ವಿಷ್ಯಗಳಲ್ಲಿ ನಿವೃತ್ತಿ ವಯಸ್ಸು ಒಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಸರ್ಕಾರಿ ನೌಕರರ ನಿವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಉದ್ಯೋಗಿಗಳ ನಿವೃತ್ತಿ ವಯಸ್ಸು, ಪಿಂಚಣಿ ಸೇರಿದಂತೆ ಕೆಲ ಬದಲಾವಣೆಗಳು ಮಾಡಲಾಗತ್ತಿದೆ ಎಂಬ ಸುದ್ಧಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 2025 ರ ಮಾರ್ಚ್ 1 ರಿಂದ ಈ ಹೊಸ ನಿಯಮಗಳು ಜಾರಿಯಾಗಲಿದೆ ಎನ್ನಲಾಗುತ್ತಿದ್ದು, ಒಂದು ವೇಳೆ ಹೊಸ ಮಾರ್ಗಸೂಚಿ ಜಾರಿಗೆ ಬಂದರೆ ಏನೆಲ್ಲ ಬದಲಾವಣೆ ಆಗಲಿದೆ ಎಂಬ ವಿವರ ಇಲ್ಲಿದೆ.
ನಿವೃತ್ತಿ ವಯಸ್ಸಿನಲ್ಲಿ ಬದಲಾವಣೆ : ಸದ್ಯ ನಿವೃತ್ತಿ ವಯಸ್ಸು ಕೇಂದ್ರ ಸರ್ಕಾರಿ ನೌಕರರಿಗೆ 60 ಆದ್ರೆ ರಾಜ್ಯ ಸರ್ಕಾರಿ ನೌಕರರ ವಯಸ್ಸು 58 -60 ವರ್ಷವಿದೆ. ಈ ವಯಸ್ಸನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬದಲಿಸಲಿದೆ. ಮುಂದಿನ ದಿನಗಳಲ್ಲಿ ವಯಸ್ಸು 62 ಆಗಲಿದೆ ಎಂಬ ಸುದ್ದಿ ಹರಡಿದೆ.
ಪಿಂಚಣಿ ವೃದ್ಧಿ : ನಿವೃತ್ತಿ ವಯಸ್ಸಿನ ಜೊತೆ ಸರ್ಕಾರ ಪಿಂಚಣಿಯನ್ನೂ ಹೆಚ್ಚಿಸಲಿದೆ. ಇದ್ರಿಂದ ಉದ್ಯೋಗಿಗಳ ಮುಂದಿನ ಭವಿಷ್ಯ ಉತ್ತಮವಾಗಿರಲಿದೆ.
ಗ್ರಾಚ್ಯುಟಿ ಸುಧಾರಣೆ : ಸರ್ಕಾರಿ ನೌಕರರಿಗೆ ಗ್ರಾಚ್ಯುಟಿಯಲ್ಲಿ ಮತ್ತಷ್ಟು ಸುಧಾರಣೆ ತರುವ ಸಾಧ್ಯತೆ ಇದೆ ಎಂದು ವರದಿ ಮಾಡಲಾಗಿದೆ.
ವಯಸ್ಸು ಹೆಚ್ಚಳ : ನಿವೃತ್ತಿ ವಯಸ್ಸು ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ನಿವೃತ್ತಿ ವಯಸ್ಸನ್ನು ಹೆಚ್ಚಿಸಬೇಕು ಎನ್ನುವ ವಾದ ಹಿಂದಿನಿಂದಲೂ ಕೇಳಿ ಬರ್ತಿದೆ. ಅದಕ್ಕೆ ಕಾರಣ ಜೀವಿತಾವಧಿಯಲ್ಲಿ ಹೆಚ್ಚಳ. ಹಿಂದೆ 1998ರಲ್ಲಿ ಸರಾಸರಿ ಜೀವಿತಾವಧಿ 61.4 ವರ್ಷವಿತ್ತು. ಆದ್ರೀಗ ಅದು 72.24 ವರ್ಷವಾಗಿದೆ. ಸರ್ಕಾರಕ್ಕೆ ಇನ್ನೆರಡು ವರ್ಷ ಅನುಭವಿ ಉದ್ಯೋಗಿಗಳು ಲಭ್ಯವಾಗ್ತಾರೆ ಹಾಗೂ ನಿವೃತ್ತಿ ವಯಸ್ಸು ಹೆಚ್ಚಿಸುವುದರಿಂದ ಪಿಂಚಣಿ ಎರಡು ವರ್ಷ ವಿಳಂಬವಾಗುತ್ತದೆ. ಇದ್ರಿಂದ ಸರ್ಕಾರಕ್ಕೆ ಲಾಭವಾಗುತ್ತದೆ ಎಂದು ಕೆಲವರ ವಾದವಾಗಿದೆ.
ವಯಸ್ಸಿನ ಹೆಚ್ಚಳದ ಲಾಭ : ಒಂದ್ವೇಳೆ ಸರ್ಕಾರ ವಯಸ್ಸಿನಲ್ಲಿ ಹೆಚ್ಚಳ ಮಾಡಿದ್ರೆ ಕೆಲ ಉದ್ಯೋಗಿಗಳಿಗೆ ಲಾಭವಾದ್ರೆ ಕೆಲ ಉದ್ಯೋಗಿಗಳು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗಿಗಳಿಗೆ ದೀರ್ಘಾವಧಿಯವರೆಗೆ ಕೆಲಸ ಮಾಡಲು ಮತ್ತು ಗಳಿಸಲು ಅವಕಾಶ ಸಿಗುತ್ತದೆ. ಅನುಭವಿ ಉದ್ಯೋಗಿಗಳಿಂದ ಕೆಲಸ ಸುಲಭವಾಗುತ್ತದೆ.
ನಕಾರಾತ್ಮಕ ಪ್ರಭಾವ : ಯುವಕರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಉದ್ಯೋಗಿಗಳು ದೀರ್ಘ ಗಂಟೆಗಳ ಕಾಲ ಕೆಲಸ ಮಾಡಬೇಕಾಗಬಹುದು. ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ಪ್ರಸ್ತುತ ಸರ್ಕಾರವು ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಬಳಿ ಬಾಕಿ ಇಲ್ಲ ಎಂದು ಹೇಳಿದ್ದರು.
LATEST NEWS
ಟರ್ಕಿಯ ಸ್ಕಿ ರೆಸಾರ್ಟ್ನಲ್ಲಿ ಅಗ್ನಿ ಅವಘಡ; ಮೃತರ ಸಂಖ್ಯೆ 76ಕ್ಕೆ ಏರಿಕೆ
ಪ್ರವೀಣ್ ನೆಟ್ಟಾರು ಕೊ*ಲೆ ಪ್ರಕರಣ: 21ನೇ ಆರೋಪಿಯನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳ ತಂಡ
ಉಡುಪಿ : ಲಾಡ್ಜ್ನಲ್ಲಿ ವೇ*ಶ್ಯವಾಟಿಕೆ ನಡೆಸುತ್ತಿದ್ದ ಓರ್ವ ಅರೆಸ್ಟ್
ವೈದ್ಯಕೀಯ ಸೀಟು ಕೊಡಿಸುವುದಾಗಿ ಹೇಳಿ ವಂಚನೆ; ಮೂವರು ಆರೋಪಿಗಳ ಬಂಧನ
2025 ರ ಮಹಾಶಿವರಾತ್ರಿ ಯಾವಾಗ ಗೊತ್ತಾ ? ಏನಿದರ ವಿಶೇಷತೆ ?
ಅರೆಬೈಲ್ ಘಾಟ್‌ನಲ್ಲಿ ತರಕಾರಿ ತುಂಬಿದ್ದ ಲಾರಿ ಪಲ್ಟಿ: 9 ಜನರ ಸಾವು
Trending
- BIG BOSS2 days ago
ಬಿಗ್ ಬಾಸ್ ತೊರೆಯುವ ಬಗ್ಗೆ ಮತ್ತೊಮ್ಮೆ ಘೋಷಣೆ ಮಾಡಿದ ಕಿಚ್ಚ
- FILM2 days ago
ಕಾಂತಾರ ಚಿತ್ರತಂಡಕ್ಕೆ ಎಚ್ಚರಿಕೆ ಕೊಟ್ಟ ಗ್ರಾಮಸ್ಥರು
- DAKSHINA KANNADA19 hours ago
ತಪ್ಪಿಸಿಕೊಳ್ಳಲು ಯತ್ನಿಸಿದ ಬ್ಯಾಂಕ್ ದರೋಡೆ ಆರೋಪಿ ಕಾಲಿಗೆ ಗುಂಡು..!
- DAKSHINA KANNADA6 days ago
ತುಳು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ‘ಗೋಲ್ಡನ್ ಮೂವೀಸ್’; ಕುದ್ರೋಳಿ ಕ್ಷೇತ್ರದಲ್ಲಿ ‘ಪ್ರೊಡಕ್ಷನ್ ನಂ 1’ಗೆ ಅದ್ದೂರಿ ಚಾಲನೆ