ಪುತ್ತೂರು: ನಿನ್ನೆ ಕೊಲೆಯಾದ ಪ್ರವೀಣ್ ಮೃತದೇಹ ಬೆಳ್ಳಾರೆ ಪೇಟೆಗೆ ಆಗಮಿಸಿದ್ದು, ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಈ ವೇಳೆ ಸ್ಥಳದಲ್ಲಿ ಹಿಂದೂ ಕಾರ್ಯಕರ್ತರ ಆಕ್ರೋಶದ ಕಟ್ಟೆ ಓಡೆಯಿತು ‘ಬೇಕೇ ಬೇಕು ನ್ಯಾಯ ಬೇಕು’ ಎಂಬ ಒತ್ತಾಯ ಕೇಳಿಬಂದಿತು.
ಜಿಲ್ಲಾ ಉಸ್ತುವಾರಿ ಸುನೀಲ್ ಕುಮಾರ್ ಹಾಗೂ ಸಚಿವ ಅಂಗಾರ ಅವರನ್ನು ಸುತ್ತುವರೆದ ಕಾರ್ಯಕರ್ತರು ಡೋಂಗಿ ಡೋಂಗಿ ಎಂದು ಧಿಕ್ಕಾರ ಕೂಗಿದರು. ಕಾರ್ಯಕರ್ತರ ಆಕ್ರೋಶಕ್ಕೆ ಥಂಡಾ ಹೊಡೆದ ಸಚಿವರು ಕುಳಿತಲ್ಲೇ ಕೈಕಟ್ಟಿ ಮೌನಕ್ಕೆ ಶರಣಾದರು.
ಬಿಜೆಪಿ ಹಾಗೂ ಸಂಘಪರಿವಾರದ ಹಲವು ನಾಯಕರು ಕಾರ್ಯಕರ್ತರನ್ನು ಸಮಾಧಾನಿಸಿದರೂ ಕೇಳ ಕಾರ್ಯಕರ್ತರು ಕಿರುಚಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಸಹಿತ, ಸಂಸದ ನಳಿನ್ ಕುಮಾರ್ ಆದಿಯಾಗಿ ಸಚಿವರು ಕಾರ್ಯಕರ್ತರನ್ನು ಸಮಾಧಾನಿಸಲು ಯತ್ನಿಸಿದರೂ ಕೇಳದ ಕಾರ್ಯಕರ್ತರು ಬಿಜೆಪಿಗೆ ಧಿಕ್ಕಾರ ಕೂಗಿದರು.
ಪೊಲೀಸರು ಸಹ ಯಾರನ್ನು ಸಮಾಧಾನಿಸಲು ಯತ್ನಿಸಿದರೂ ಯಾರು ಕೇಳುವ ಸ್ಥಿತಿಯಲ್ಲಿಲ್ಲ.